For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟ್ ಗಳದ್ದೇ ಆಟ

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಶಿಲ್ಪಾ ಅಗ್ನಿಹೋತ್ರಿ ಮನೆಯಿಂದ ಹೊರ ಹಾಕಿ ಟ್ವಿಸ್ಟ್ ನೀಡಿದಂತೆ ಈ ವಾರದ ಎಮಿಲಿನೇಷನ್ ನಲ್ಲೂ ಟ್ವಿಸ್ಟ್ ನೀಡಲಾಯಿತು. ಎಲಿಮಿನೇಟ್ ಆದ ರೂಪದರ್ಶಿ ಆಸಿಫ್ ಮನೆಯಿಂದ ಹೊರ ನಡೆದರೂ ಬಿಗ್ ಬಾಸ್ ಮನೆ ಆವರಣದಲ್ಲೇ ಬೀಡು ಬಿಡುವಂತೆ ಸೂಚಿಸಿ ಬಿಗ್ ಬಾಸ್ ಪ್ರೇಕ್ಷಕರನ್ನು ಅಚ್ಚರಿಗೆ ದೂಡಿದರು.

  ಪತ್ನಿ ಶಿಲ್ಪಾ ಮನೆಯಿಂದ ಹೊರ ಬಿದ್ದ ಮೇಲೆ ನಾಯಕ ಅಪೂರ್ವ ಅಗ್ನಿಹೋತ್ರಿ ಸಪ್ಪಗಾಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಮನೆಯಲ್ಲಿರುವ ಸ್ಪರ್ಧಿಗಳನ್ನು ಸಂಭಾಳಿಸುವುದು ಹೇಗೆ ಎಂಬ ಚಿಂತೆಗೊಳಗಾಗಿದ್ದಾರೆ. ಈ ಬಗ್ಗೆ ಸಲ್ಮಾನ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದರು.

  ತನೀಶಾ ಹಾಗೂ ಗೌಹರ್ ನಡುವಿನ ಜಗಳ, ತನೀಶಾ ಹಾಗೂ ಕುಶಾಲ್ ನಡುವಿನ ಕಿತ್ತಾಟ, ಕುಶಾಲ್ ಮನೆಯಿಂದ ಹೊರಕ್ಕೆ ಹಾರಿದ ಪ್ರಸಂಗ. ಅರ್ಮಾನ್ ಹಾಗೂ ತನೀಶಾ ನಡುವಿನ ಆಪ್ತತೆ, ಪ್ರತ್ಯೂಷಾ ದ್ವಂದ್ವತೆ, ಕಾಮ್ಯಾ ಎಚ್ಚರಿಕೆ ಆಟ ಎಲ್ಲವನ್ನು ಒಂದೊಂದಾಗಿ ಸಲ್ಮಾನ್ ಖಾನ್ ವಿಚಾರಣೆಗೆ ತೆಗೆದುಕೊಂಡರು.

  ಇದರ ಜತೆಗೆ ಸಲ್ಮಾನ್ ಖಾನ್ ಕೂಡಾ ಪ್ರಿಯಾಂಕಾ ಛೋಪ್ರಾ ಜತೆ ಕ್ರಿಶ್ 3 ಚಿತ್ರಕ್ಕೆ ಪ್ರಚಾರ ನೀಡಿದ್ದಲ್ಲದೆ ಬಿಗ್ ಬಾಸ್ ಶೋ ಗೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ.

  ಎಮಿಲಿನೇಷನ್

  ಎಮಿಲಿನೇಷನ್

  ಅರ್ಮಾನ್ ಕೊಹ್ಲಿ, ಆಸೀಫ್ ಅಜೀಂ, ಪ್ರತ್ಯೂಷಾ ಬ್ಯಾನರ್ಜಿ, ತನೀಶಾ ಮುಖರ್ಜಿ ಹಾಗೂ ವಿವೇಕ್ ಮಿಶ್ರಾ ನಾಮಿನೇಟೆಡ್ ಆಗಿದ್ದರು.

  ಈ ಪೈಕಿ ವಿವೇಕ್ ಮಿಶ್ರಾ ಮನೆಯಿಂದ ಹೊರ ಬೀಳುವುದು ಖಾತ್ರಿಯಾಗಿತ್ತು. ಉಳಿದವರಲ್ಲಿ ಆಸೀಫ್ ಅಜೀಂ ಹೊರಕ್ಕೆ ಕಳಿಸುವುದರ ಬಗ್ಗೆ ಯಾರಿಗೂ ನಿರೀಕ್ಷೆಯಿರಲಿಲ್ಲ.

  ಇಬ್ಬರ ಎಲಿಮಿನೇಷನ್

  ಇಬ್ಬರ ಎಲಿಮಿನೇಷನ್

  ಬಿಗ್ ಬಾಸ್ ನಲ್ಲಿ ಬಾಕ್ಸ್ ಟಾಸ್ಕ್ ನಂತರ ಈ ವಾರ ಎರಡು ಸ್ಪರ್ಧಿಗಳು ಮನೆ ಬಿಟ್ಟು ಹೋಗುತ್ತಾರೆ ಎಂದು ಬಿಗ್ ಬಾಸ್ ಈಗಾಗಲೇ ಘೋಷಿಸಿದ್ದರು ಒಬ್ಬ ಸ್ಪರ್ಧಿ ಪ್ರೇಕ್ಷಕರಿಂದ ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ನಡೆಯುವುದು ಮಾಮೂಲಿನ ಸಂಗತಿಯಾದರೆ ಇನ್ನೊಬ್ಬ ಸ್ಪರ್ಧಿ ಅಚ್ಚರಿಯ ವೋಟೌಟ್ ಗೆ ಒಳಪಡುತ್ತಿದ್ದಾರೆ ಎನ್ನಲಾಗಿತ್ತು.

  ಅದರಂತೆ, ಕಳೆದ ವಾರ ಯೋಗ ಗುರು ವಿವೇಕ್ ಮನೆಯಿಂದ ಹೊರ ಕಳಿಸಲಾಯಿತು ನಂತರ ಆಸೀಫ್ ಅವರ ಸರದಿ ಬಂದಿತು. ಆದರೆ.. ಸೀಕ್ರೇಟ್ ರೂಮಿನಲ್ಲಿ ಇಬ್ಬರು ಸ್ಪರ್ಧಿಗಳು ಇರುವುದರ ಜತೆಗೆ ಆಸೀಫ್ ಕೂಡಾ ಬಿಗ್ ಬಾಸ್ ಮನೆಗೆ ಮರು ಪ್ರವೇಶ ಪಡೆಯುವ ಮೂಲಕ ಬಿಗ್ ಬಾಸ್ ಬಿಗ್ ಟ್ವಿಸ್ಟ್ ನೀಡಿದ್ದಾರೆ.

  ಆಸೀಫ್ ಬಗ್ಗೆ ಮನೆ ಮಂದಿ

  ಆಸೀಫ್ ಬಗ್ಗೆ ಮನೆ ಮಂದಿ

  ಬಿಗ್ ಬಾಸ್ ಮನೆಯಲ್ಲಿರುವ ಇತರೆ ಸ್ಪರ್ಧಿಗಳ ಪೈಕಿ ಯಾರೊಬ್ಬರು ಹೆವೆನ್(ನಾಯಿ) ಬಿಟ್ಟು ಆಸೀಫ್ ಪರ ನಿಲ್ಲಲು ತಯಾರಿಲ್ಲ. ಆಸೀಫ್ 'ಮೈಗಳ್ಳ' ಎಂದೇ ಎಲ್ಲರೂ ಪರಿಗಣಿಸಿದ್ದಾರೆ. ಜಿಮ್ ನಲ್ಲೇ ಕಾಲ ಕಳೆಯಲು ಕೆಲವರ ಜತೆ ಮಾತ ಹರಟೆ ಹೊಡೆಯಲು ಲಾಯಕ್ ಎಂದು ಭಾವಿಸಿದ್ದಾರೆ. ಹೀಗಾಗಿ ಎಲಿಮಿನೇಷನ್ ಆದರೂ ಯಾರಿಗೂ ಅಂಥ ನೋವಾಗಿಲ್ಲ

  ಅಚ್ಚರಿ ಎಂಟ್ರಿ, ಅಚ್ಚರಿ ಎಮಿಲಿನೇಷನ್

  ಅಚ್ಚರಿ ಎಂಟ್ರಿ, ಅಚ್ಚರಿ ಎಮಿಲಿನೇಷನ್

  ಮಧ್ಯರಾತ್ರಿ ಅಚ್ಚರಿಯ ಎಂಟ್ರಿ ಕೊಟ್ಟಿದ್ದ ದೂರದೇಶದ ಸೂಪರ್ ಮಾಡೆಲ್ ಆಸೀಫ್ ಮನೆಯಲ್ಲಿ ಆರಂಭದಿಂದಲೂ ಸ್ವಲ್ಪ ಸೈಲಂಟ್ ಆಗಿರಲು ಕಾರಣ ಹಿಂದಿ ಭಾಷೆ ಸಮಸ್ಯೆ. ಎಲ್ಲಿ ರೀತಿಯಲ್ಲಿ ಆಸೀಫ್ ಗೂ ಅಷ್ಟಾಗಿ ಹಿಂದಿ ಬರುವುದಿಲ್ಲ. ಹೀಗಾಗಿ ಎಲ್ಲರೊಡನೆ ಬೆರೆಯಲು ಸ್ವಲ್ಪ ಹೆಚ್ಚು ಸಮಯ ವ್ಯಯಿಸಬೇಕಾಯಿತು. ಇದು ಇತರೆ ಸ್ಪರ್ಧಿಗಳಿಂದ ದೂರಾಗಿ ಉಳಿಯಲು ಕಾರಣವೂ ಆಯಿತು

  ಟಾಸ್ಕ್ ಗಳಲ್ಲಿ ಓಕೆ

  ಟಾಸ್ಕ್ ಗಳಲ್ಲಿ ಓಕೆ

  ಬಿಗ್ ಬಾಸ್ ನೀಡಿದ ಟಾಸ್ಕ್ ಗಳಲ್ಲಿ ಆಸೀಫ್ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾನೆ. ಅಪೂರ್ವ, ಸಂಗ್ರಾಮ್ ಗೆ ಹೇರ್ ಕಟ್ ಮಾಡುವುದು, ಬಾಕ್ಸ್ ಆಟ, ಮೆಡಲ್ ಇಟ್ಟುಕೊಳ್ಳುವುದು ಮುಂತಾದ ಕಾರ್ಯಗಳಲ್ಲಿ ಆಸೀಫ್ ದೃಢತೆ ತೋರಿದ್ದಾನೆ. ಆದರೆ, ಇದು ಆತನನ್ನು ಇತರೆ ಸ್ಪರ್ಧಿಗಳ ಜತೆ ಬೆರೆಯುವಂತೆ ಮಾಡಲಿಲ್ಲ ಎಂಬುದು ಅಚ್ಚರಿಯ ಸಂಗತಿ

   ಆಸಿಫ್ ಎಂಟ್ರಿ ಯಾವಾಗ

  ಆಸಿಫ್ ಎಂಟ್ರಿ ಯಾವಾಗ

  ಆಸಿಫ್ ರೀ ಎಂಟ್ರಿ ಹಾಗೂ ಸೀಕ್ರೆಟ್ ರೂಮಿನಲ್ಲಿರುವ ಇತರೆ ಇಬ್ಬರು ಸ್ಪರ್ಧಿಗಳ ಬಗ್ಗೆ ಬಿಗ್ ಬಾಸ್ ಮನೆ ಮಂದಿಗೆ ಯಾವುದೇ ಸುಳಿವು ನೀಡಿಲ್ಲ. ಪ್ರೇಕ್ಷಕರಿಗೂ ಈ ಬಗ್ಗೆ ಸುಳಿವು ಸಿಕ್ಕಿಲ್ಲ.

  ಈ ನಡುವೆ ಸಲ್ಮಾನ್ ಖಾನ್ ತಮ್ಮ ಶನಿವಾರದ ಶೋನಲ್ಲಿ ಹೃತಿಕ ರೋಷನ್ ಅವರನ್ನು ಅಣಕಿಸಿದ್ದು ಬಿಟ್ಟರೆ ಮತ್ತೇನು ವಿಶೇಷ ಇರಲಿಲ್ಲ. ಸಲ್ಲೂ ಮುಂದಿನ ಬಿಗ್ ಬಾಸ್ ನಡೆಸಿಕೊಡುವುದಿಲ್ಲಂತೆ ಎಂಬ ಸುದ್ದಿಯೊಂದು ಹರಡಿರುವುದನ್ನು ಮರೆಯುವಂತಿಲ್ಲ.

  English summary
  Bigg Boss 7 latest eliminations will see Asif Azim, the supermodel, getting eliminated from the house. But the twist in tale says he will be kept in a secret room after eliminations, but will enter the house soon after. Here is last week episode's highlights

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X