»   » 'ಮಜಾ ಟಾಕೀಸ್' ಮನೆಗೆ ಬಂದ ಬಾಹುಬಲಿ-ಕಟ್ಟಪ್ಪ!

'ಮಜಾ ಟಾಕೀಸ್' ಮನೆಗೆ ಬಂದ ಬಾಹುಬಲಿ-ಕಟ್ಟಪ್ಪ!

Posted By:
Subscribe to Filmibeat Kannada

ವೀಕೆಂಡ್ ಬಂತೆಂದರೆ ಕನ್ನಡಿಗರಿಗೆ ಹೆಚ್ಚಾಗಿ ನೆನಪಾಗುವುದು ಒಂದು ಸಿನಿಮಾ ಥಿಯೇಟರ್‌ಗಳು, ಇನ್ನೊಂದು 'ಮಜಾ ಟಾಕೀಸ್'. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನಿರೂಪಣೆಯ ಈ ಕಾರ್ಯಕ್ರಮವನ್ನು ಕಿರುತೆರೆ ಪ್ರೇಕ್ಷಕರು ಮಿಸ್ ಮಾಡದೇ ನೋಡಲು ಇಷ್ಟಪಡುತ್ತಾರೆ.

ಅಂದಹಾಗೆ 'ಮಜಾ ಟಾಕೀಸ್' ಮನೆಯಲ್ಲಿ ಪ್ರತಿ ಬಾರಿಯೂ ಏನಾದರೂ ಒಂದು ವಿಶೇಷತೆ, ಯಾರಾದರೂ ಸ್ಪೆಷಲ್ ಗೆಸ್ಟ್ ಇದ್ದೇ ಇರುತ್ತಾರೆ. ಅಂತೆಯೇ ಇಂದು(ಆಗಸ್ಟ್ 5) ಪ್ರಸಾರವಾಗುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಎಲ್ಲರೂ ತೆಲುಗಿನ ಸೂಫರ್‌ ಹಿಟ್ ಸಿನಿಮಾ 'ಬಾಹುಬಲಿ' ಚಿತ್ರದ ಅಮರೇಂದ್ರ ಬಾಹುಬಲಿ ಮತ್ತು ಕಟ್ಟಪ್ಪರನ್ನು ನೋಡಬಹುದಾಗಿದೆ.

Baahubali and Kattappa appeared in 'Majaa Talkies'

ಏನು...? ಕಟ್ಟಪ್ಪ ಮತ್ತು ಬಾಹುಬಲಿ ನಿಜವಾಗ್ಲು ಬಂದಿದ್ದಾರಾ... ಎಂದು ಕುತೂಹಲಗೊಳ್ಳುವುದು ಬೇಡ. ಯಾಕಂದ್ರೆ ಕುರಿ ಪ್ರತಾಪ್ ಮತ್ತು ಮಂಡ್ಯ ರಮೇಶ್ ರವರು ಇಂದಿನ ಎಪಿಸೋಡ್‌ ನಲ್ಲಿ ಕಟ್ಟಪ್ಪ ಮತ್ತು ಬಾಹುಬಲಿಯಾಗಿ ಕಾಣಿಸಿಕೊಂಡಿದ್ದು, ಮಾತು ಮಾತಿಗೂ ನಗುವಷ್ಟು ಮನರಂಜನೆ ನೀಡಲಿದ್ದಾರೆ.

ವಿಶೇಷ ಅತಿಥಿಗಳಾಗಿ ಕಾರ್ಯಕ್ರಮಕ್ಕೆ 'ರಾಜ್‌ ವಿಷ್ಣು' ಚಿತ್ರತಂಡದ ನಿರ್ದೇಶಕರು, ಶರಣ್, ಚಿಕ್ಕಣ್ಣ ಮತ್ತು 'ಭಜರಂಗಿ' ಲೋಕಿ ರವರು ಆಗಮಿಸಿದ್ದಾರೆ. ಮಿಸ್ಟರ್ ಕುರಿ ಮತ್ತು ಮುದ್ದೇಶನ ಜೊತೆಗೆ ಇಬ್ಬರು ಕಾಮಿಡಿ ಸ್ಟಾರ್‌ಗಳು ಇಂದಿನ 'ಮಜಾ ಟಾಕೀಸ್' ಮನೆಯಲ್ಲಿ ಕಾಣಿಸಿಕೊಂಡಿರುವುದರಿಂದ ಕಿರುತೆರೆ ಪ್ರೇಕ್ಷಕರಿಗೆ ನಗುವಿನ ಹಬ್ಬ ಗ್ಯಾರಂಟಿ. ಈ ಕಾರ್ಯಕ್ರಮ ನೋಡಲು ಇಂದು ರಾತ್ರಿ 8 ಕ್ಕೆ ಕಲರ್ಸ್ ಕನ್ನಡ ವಾಹಿನಿಯನ್ನು ಮಿಸ್ ಮಾಡದೆ ಟ್ಯೂನ್‌ ಮಾಡಿ. 'ಮಜಾ ಟಾಕೀಸ್' ಮನೆಯಲ್ಲಿ ಹೈಹೀಲ್ಡ್ಸ್‌ ಬಾಹುಬಲಿ ಮತ್ತು ಕಟ್ಟಪ್ಪ ಕಾಣಿಸಿಕೊಂಡಿರುವ ವಿಡಿಯೋ ಟೀಸರ್ ನೋಡಲು ಕ್ಲಿಕ್ ಮಾಡಿ

English summary
'Majaa Talkie' actors Kuri Pratap and Mandya Ramesh are appeared as Baahubali and Kattappa in Augutst 5th Episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada