»   » ಮಯೂರ ಬೇಕರಿ ಗೌಡ್ರು ಕೋಟ್ಯಾಧಿಪತಿಯಲ್ಲೆಷ್ಟು ಗೆದ್ರು?

ಮಯೂರ ಬೇಕರಿ ಗೌಡ್ರು ಕೋಟ್ಯಾಧಿಪತಿಯಲ್ಲೆಷ್ಟು ಗೆದ್ರು?

Posted By:
Subscribe to Filmibeat Kannada

ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ಬೃಹತ್ ರಿಯಾಲಿಟಿ ಶೋ 'ಕನ್ನಡದ ಕೋಟ್ಯಾಧಿಪತಿ' ಸೀಸನ್ ಎರಡರಲ್ಲೂ ಜನಪ್ರಿಯತೆಯ ದಾರಿಯಲ್ಲಿ ಭರ್ಜರಿಯಾಗಿ ಮುನ್ನಡೆಯುತ್ತಿದೆ.

ಬದುಕನ್ನು ಬದಲಾಯಿಸಿಕೊಳ್ಳಲು ಪದವಿಗಳು ಮುಖ್ಯವಲ್ಲ ಸಾಮಾನ್ಯ ಜ್ಞಾನವಿದ್ದರೂ ಸಾಕು 'ಲಕ್ಷಾಧಿಪತಿ'ಯಾಗಬಹುದು ಎನ್ನುವುದನ್ನು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಿರೂಪಿಸುವಲ್ಲಿ ಸಾಗುತ್ತಿದೆ.

ವಿಷಯಕ್ಕೆ ಬರುವುದಾದರೆ, ಮಂಡ್ಯ ಮೂಲದ ನಿಂಗೇಗೌಡ ಬದುಕು ಕಟ್ಟಿಕೊಳ್ಳಲು ಹೋರಾಟ ನಡೆಸುತ್ತಲೇ ಬಂದವರು. ಮದುವೆ ವಿಷಯದಲ್ಲಿ ಮನೆಯವರ ಬೇಸರಕ್ಕೆ ತುತ್ತಾಗಿ, ಮನೆಬಿಟ್ಟು ಬೆಂಗಳೂರಿಗೆ ಬಂದ ನಿಂಗೇಗೌಡರು ಮಯೂರ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು.

ಬಹುಶಃ ಮಯೂರ (ಡಾ.ರಾಜ್ ಅಭಿನಯದ ಯಶಸ್ವೀ ಚಿತ್ರದ ಹೆಸರು ಮಯೂರ) ಎನ್ನುವ ಹೆಸರೇ ನಿಂಗೇಗೌಡರನ್ನು ಅಪ್ಪು ಮುಂದೆ ಕೋಟ್ಯಾಧಿಪತಿ ಹಾಟ್ ಸೀಟ್‍ನಲ್ಲಿ ಕೂರುವಂತೇ ಮಾಡಿತೋ ಏನೋ? ನಿಂಗೇಗೌಡರ ಕಣ್ಣಲ್ಲಿ ನಿಗಿನಿಗಿ ನಗು. ಗೆಲುವು ಸ್ವತಃ ಆತನನ್ನೇ ನೋಡಿ ಹೆಮ್ಮೆ ಪಡುತ್ತಿತ್ತು. ತಾನು ಹಾಟ್ ಸೀಟಿಗೆ ಬರುತ್ತೇನೆ ಎಂದು ಸ್ವತಃ ಅವರಿಗೇ ಗೊತ್ತಿತ್ತೋ ಇಲ್ಲವೋ...

ನಿಂಗೇಗೌಡರು ಗೆದ್ದಿದ್ದು ಎಷ್ಟು ಲಕ್ಷ? ಮುಂದೆ ಓದಿ..

ಬೇಕರಿ ಹುಡುಗ ಕೋಟ್ಯಾಧಿಪತಿಯಲ್ಲಿ ಲಕ್ಷ ಗೆದ್ದ

ನಿಂಗೇಗೌಡರು ಹಾಟ್‍ ಸೀಟಿನಲ್ಲಿ ಕೂತು ಪ್ರತೀ ಕ್ಷಣವನ್ನೂ ಎಂಜಾಯ್ ಮಾಡುತ್ತಾ, ಪುನೀತ್ ಜೊತೆ ಕೂತು ನಿರರ್ಗಳವಾಗಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಾಗುತ್ತಾರೆ. ಸಾಮಾನ್ಯರಲ್ಲಿ ಸಾಮಾನ್ಯ ನಂತಿದ್ದ ಬೇಕರಿ ಹುಡುಗ ಬರುವ ಸೋಮವಾರದಿಂದ (ಏ 8) ಒಂದರ್ಥದಲ್ಲಿ ಸ್ಟಾರ್ ಆಗಿಬಿಡುತ್ತಾರೆ.

ಬೇಕರಿ ಹುಡುಗ ಕೋಟ್ಯಾಧಿಪತಿಯಲ್ಲಿ ಲಕ್ಷ ಗೆದ್ದ

ಗೆದ್ದ ದುಡ್ಡಲ್ಲಿ ಸ್ವಂತ ಬೇಕರಿ ಪ್ರಾರಂಭಿಸುವ ಮಹದುದ್ದೇಶದಿಂದ ಕಾರ್ಯಕ್ರಮಕ್ಕೆ ಬಂದ ನಿಂಗೇಗೌಡ ಪ್ರಶ್ನೆಗಳಿಗೆ ಚಾಣಾಕ್ಷತನದಿಂದ ಉತ್ತರಿಸುತ್ತಾ ಒಂದೊಂದೆ ಮಜಲನ್ನು ದಾಟಿ ಮುನ್ನಡೆಯುತ್ತಾರೆ, ಮಧ್ಯೆ ಮಧ್ಯೆ ಪುನೀತಿಗೆ ಪ್ರಶ್ನೆ ಕೇಳಿ, ಸಂದೇಹ ಪರಿಹರಿಸಿ ಕೊಳ್ಳುತ್ತಾರೆ. ಪುನೀತ್ ಜೊತೆ ಸ್ಟೆಪ್ ಹಾಕುತ್ತಾರೆ.

ಬೇಕರಿ ಹುಡುಗ ಕೋಟ್ಯಾಧಿಪತಿಯಲ್ಲಿ ಲಕ್ಷ ಗೆದ್ದ

ರೋಚಕತೆಯಿಂದ ಸಾಗುವ ಈ ಕಾರ್ಯಕ್ರಮದ ಒಂದು ಕೋಟಿಯ ಪ್ರಶ್ನೆಗೆ ಮುನ್ನ ಲಿಂಗೇಗೌಡ ಕಾರ್ಯಕ್ರಮದಿಂದ ಕ್ವಿಟ್ ಮಾಡುತ್ತಾರೆ. ಲಿಂಗೇಗೌಡರ ಸಾಮಾನ್ಯ ಜ್ಞಾನಕ್ಕೆ ಕೋಟ್ಯಾಧಿಪತಿಯ ಸಾರಥಿ ಪುನೀತ್ ರಾಜ್‍ಕುಮಾರ್ ಒಮ್ಮೆಲೇ ಬೆಚ್ಚಿಬಿದ್ದು ನಗೆಯನ್ನು ಚೆಲ್ಲುತ್ತಾರೆ.

ಬೇಕರಿ ಹುಡುಗ ಕೋಟ್ಯಾಧಿಪತಿಯಲ್ಲಿ ಲಕ್ಷ ಗೆದ್ದ

ನಿಮ್ಮ ಕನಸೂ ಮುಂದೊಂದು ದಿನ ನನಸಾಗಬಹುದು. ಪದವಿ ಪಡೆದು, ಹಗಲು ರಾತ್ರಿ ಪುಸ್ತಕದ ಮುಂದೆ ಕೂರುವುದರ ಬದಲು ಹೆಚ್ಚು ಹೆಚ್ಚು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರೆಡೆಗೆ ಗಮನ ಹರಿಸುವುದರಿಂದ ಖಂಡಿತ ಯಶಸ್ಸು ನಮ್ಮನ್ನೇ ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ಬೇಕರಿ ಬಾಯ್ ನಿಂಗೇಗೌಡರು ಒಂದು ಉತ್ತಮ ಉದಾಹರಣೆ ಎನ್ನುತ್ತಾರೆ ಪುನೀತ್ ರಾಜಕುಮಾರ್.

ಬೇಕರಿ ಹುಡುಗ ಕೋಟ್ಯಾಧಿಪತಿಯಲ್ಲಿ ಲಕ್ಷ ಗೆದ್ದ

ಐವತ್ತು ಲಕ್ಷದ ಪ್ರಶ್ನೆಗೆ ಕರಾರುವಕ್ಕಾದ ಉತ್ತರ ತಿಳಿಯದೇ ಇದ್ದಿದ್ದರಿಂದ ನಿಂಗೇಗೌಡ ಕ್ವಿಟ್ ಮಾಡಿ ಇಪ್ಪತ್ತೈದು ಲಕ್ಷ ಗೆದ್ದುಕೊಳ್ಳುತ್ತಾರೆ. ಈ ಕಾರ್ಯಕ್ರಮ ಗುರುವಾರ (ಏ 4) ಮತ್ತು ಸೋಮವಾರ (ಏ 8) ಪ್ರಸಾರವಾಗಲಿದೆ. ಪ್ರಭುದೇವ ಕಾರ್ಯಕ್ರಮ ಮುಗಿದ ನಂತರ ಈ ಕಾರ್ಯಕ್ರಮ ಆರಂಭವಾಗಲಿದೆ.

English summary
Ninge Gowda, backery boy from Mandya wins Twenty Five Lac rupees in Kannadada Kotyadhipati reality show. This programme will be aired on Thursday (Apr 4) and Monday (Apr 8).
Please Wait while comments are loading...