For Quick Alerts
  ALLOW NOTIFICATIONS  
  For Daily Alerts

  ಪ್ಯಾಟೆ ಹುಡ್ಗೀರ್ ಜೊತೆ 'ಬಹದ್ದೂರ್' ಗಂಡು ಧ್ರುವ

  By Rajendra
  |

  ನಮ್ ಸಿಲಿಕಾನ್ ಸಿಟಿ ಹೆಣ್ಮಕ್ಕಳು ಹಳ್ಳಿಗೆ ಹೋಗುತ್ತಿರುವುದೇ ಒಂದು ಸಂಭ್ರಮ. ಈ ವಿಶೇಷಕ್ಕೆ ಸಾಕ್ಷಿಯಾದವರು 'ಬಹದ್ದೂರ್' ಚಿತ್ರದ ನಾಯಕ ಧ್ರುವ ಸರ್ಜಾ. ಪ್ಯಾಟೆ ಹುಡ್ಗೀರನ್ನು ಹಳ್ಳಿಗೆ ಬರಮಾಡಿಕೊಳ್ಳೋದಕ್ಕೆ ಧ್ರುವ ಸ್ಟೆಪ್ ಹಾಕಿವುದರೊಂದಿಗೆ ಅವರ ಜನ್ಮದಿನವನ್ನು ಆಚರಿಸಿಕೊಳ್ಳುವರು.

  ಈ ಕಾರ್ಯಕ್ರಮದ ಆರಂಭದ ದಿನವೇ ಧ್ರುವ ಸರ್ಜಾನ ಹುಟ್ಟುಹಬ್ಬ ಇರುವುದು ಕಾಕತಾಳೀಯ ಕೂಡಾ. ಧ್ರುವ ಸರ್ಜಾ ಅಭಿನಯದ 'ಬಹದ್ದೂರ್' ಚಿತ್ರದ ಟ್ರೈಲರನ್ನು ಪ್ರಸ್ತುತಪಡಿಸಿ ಚಿತ್ರ ಕುರಿತು ಕೆಲವೊಂದಿಷ್ಟು ಮಾತುಗಳನ್ನಾಡಿದ್ದಾರೆ. [ಸುವರ್ಣ ರಿಯಾಲಿಟಿ ಶೋ ನಿರೂಪಕರಾಗಿ ಸಂತೋಷ್]

  ಸದಾ ಸಿಟಿ ಲೈಫುಗೆ ಹೊಂದಿಕೊಂಡು ಹೋಗುತ್ತಿರುವ ಈ ಸಮಯದಲ್ಲಿ ಪ್ಯಾಟೆಯಿಂದ ಹಳ್ಳಿಗೆ ಹೋಗುತ್ತಿರುವ ಈ ಹುಡ್ಗೀರು ತುಂಬಾ ಅದೃಷ್ಟವಂತರು. ಮಮ್ಮಿ ಎಂದೆ ಸಂಬೋಧಿಸುವವರಿಗೆ ಅವ್ವ ಈಗ ಇವರಿಗೆ ಸಾಮಾನ್ಯ.

  ಪ್ಯಾಟೆ ಹುಡ್ಗೀರ್ ಜೊತೆ ಸ್ಟೆಪ್ ಹಾಕಲಿರುವ ಪರುಲ್

  ಪ್ಯಾಟೆ ಹುಡ್ಗೀರ್ ಜೊತೆ ಸ್ಟೆಪ್ ಹಾಕಲಿರುವ ಪರುಲ್

  'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮದ ಆರಂಭದ ದಿನ ಅಕ್ಟೋಬರ್ 6 ರಂದು ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಆಗಮಿಸುತ್ತಾರೆ. ಮತ್ತೊಬ್ಬ ಸೆಲೆಬ್ರಿಟಿ ವಾಸ್ತುಪ್ರಕಾರ ಚಲನಚಿತ್ರದ ನಾಯಕಿ ಪರೂಲ್ ಯಾದವ್ ಕಾರ್ಯಕ್ರಮದ ಮಂಗಳವಾರದ ಸಂಚಿಕೆಯಲ್ಲಿ ಆಗಮಿಸಿ ಸ್ಟೆಪ್ ಹಾಕಲಿದ್ದಾರೆ.

  ಪ್ಯಾಟೆ ಹುಡ್ಗೀರ್ ಜೊತೆ ವಾಸ್ತುಪ್ರಕಾರ ಅನುಭವಗಳು

  ಪ್ಯಾಟೆ ಹುಡ್ಗೀರ್ ಜೊತೆ ವಾಸ್ತುಪ್ರಕಾರ ಅನುಭವಗಳು

  ಈ ಸಂದರ್ಭದಲ್ಲಿ 'ವಾಸ್ತುಪ್ರಕಾರ' ಸಿನಿಮಾ ಬಗ್ಗೆ ಅನುಭವಗಳನ್ನು ಹಂಚಿಕೊಂಡು ಹಾಗೂ ಚಿತ್ರದ ಕೆಲ ತುಣುಕುಗಳನ್ನು ಬಿತ್ತರಿಸುವರು. ಸುವರ್ಣ ವಾಹಿನಿಯಿಂದ ಕಿರುತೆರೆಗೆ ಪರಿಚಯಿಸಲ್ಪಟ್ಟ ಕಾರ್ಯಕ್ರಮ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಇದರ ಮೊದಲ ಎರಡು ಆವೃತ್ತಿಗಳು ಯಶಸ್ವಿಗೊಂಡಿದ್ದು ಇದು ಕಾರ್ಯಕ್ರಮದ ಮೂರನೇ ಆವೃತ್ತಿಯಾಗಿದೆ.

  ನಿಸರ್ಗದ ಮಡಿಲಲ್ಲಿ ರಿಯಾಲಿಟಿ ಶೋ

  ನಿಸರ್ಗದ ಮಡಿಲಲ್ಲಿ ರಿಯಾಲಿಟಿ ಶೋ

  ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳೆಂದರೆ ಬೃಹತ್ತಾದ ಸೆಟ್ ಗಳು, ದೊಡ್ಡ ದೊಡ್ಡ ಬಂಗಲೆಗಳಿಗೆ ಪ್ರಮುಖ ಸ್ಥಾನವಿರುತ್ತದೆ ಆದರೆ ಈ ಕಾರ್ಯಕ್ರಮ ನಿಸರ್ಗ ಹಾಗೂ ಹಳ್ಳಿಯ ಸುತ್ತಮುತ್ತಲಿನ ಸುಂದರ ದೃಶ್ಯಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮವಾಗಿದೆ.

  ನಿರೂಪಕರಾಗಿ ಬಿಗ್ ಬಾಸ್ ಸಂತೋಷ್

  ನಿರೂಪಕರಾಗಿ ಬಿಗ್ ಬಾಸ್ ಸಂತೋಷ್

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಇದೇ ಅಕ್ಟೋಬರ್ 6 ರಿಂದ ಪ್ರಾರಂಭವಾಗುತ್ತದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನೂರು ಜನ್ಮಕೂ, ಅಭಿರಾಮ ಚಲನಚಿತ್ರದ ನಾಯಕ ನಟ, ಬಿಗ್ ಬಾಸ್ ಸೀಸನ್ -2 ಕಾರ್ಯಕ್ರಮದ ಸ್ಪರ್ಧಿ ಸಂತೋಷ ಅವರು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮದ 3 ನೇ ಆವೃತ್ತಿಯ ನಿರೂಪಕರು.

  ಮೇಲುಕೋಟೆ ಹತ್ತಿರವಿರುವ ರಾಯಸಮುದ್ರ

  ಮೇಲುಕೋಟೆ ಹತ್ತಿರವಿರುವ ರಾಯಸಮುದ್ರ

  18 ರಿಂದ 24 ವರ್ಷದ ಹತ್ತು ಹುಡುಗಿಯರನ್ನು ಸೂಕ್ತ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿದೆ. ಈ 10 ಜನ ಹುಡುಗಿಯರು ಮೇಲುಕೋಟೆ ಹತ್ತಿರವಿರುವ ರಾಯಸಮುದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದು ಸಾಕಷ್ಟು ಟಾಸ್ಕ್ ಮತ್ತು ತಿರುವುಗಳನ್ನು ಎದುರಿಸಲಿದ್ದಾರೆ.

  English summary
  "Pyate Hudgeer Halli Lifu season 3" programe opening event celebrations will air on Suvarna channel on 6th Ocotober at 8 pm. Film actors Dhruva Sarja and Parul Yadav are the celbrity guests of the opening event. This is a unique format show where girls from city have to live in a village for over 3 months. Anchoring by Bigg Boss contestant Santhosh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X