For Quick Alerts
  ALLOW NOTIFICATIONS  
  For Daily Alerts

  ಬಾಲಕೃಷ್ಣಗೆ ಹೆಚ್ಚಿದ ಡಿಮ್ಯಾಂಡ್, ಆದರೆ ಸಿನಿಮಾಗಳಲ್ಲಿ ಅಲ್ಲ!

  |

  ನಂದಮೂರಿ ಬಾಲಕೃಷ್ಣ ತೆಲುಗಿನ ಸ್ಟಾರ್ ನಟರಲ್ಲೊಬ್ಬರು. ಅವರ ಸಿನಿಮಾಗಳಿಂದ ವಿಮರ್ಶಕರೂ ದೂರವೇ ಉಳಿಯುತ್ತಾರಾದರೂ ಬಾಲಕೃಷ್ಣ ಸಿನಿಮಾಗಳಿಗೆ, ಹಾಗೂ ಅವರಿಗೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗವಿದೆ.

  ಸಿನಿಮಾ ಹಾಗೂ ರಾಜಕೀಯಕ್ಕಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ಬಾಲಕೃಷ್ಣ ಇತ್ತೀಚೆಗೆ ಕಿರುತೆರೆಗೆ ಕಾಲಿಟ್ಟರು. ಆದರೆ ಅಲ್ಲಿಯೂ ಸೂಪರ್-ಡೂಪರ್ ಹಿಟ್ ಆಗಿಬಿಟ್ಟಿದ್ದಾರೆ. ಇದೇ ಕಾರಣದಿಂದಾಗಿ ಬಾಲಕೃಷ್ಣಗೆ ಸಾಲು-ಸಾಲು ಕಿರುತೆರೆ ಅವಕಾಶಗಳು ಅರಸಿ ಬರುತ್ತಿವೆ.

  ಆಹಾ ಒಟಿಟಿ ಮೂಲಕ ಬಾಲಕೃಷ್ಣ ಕಿರುತೆರೆಗೆ ಕಾಲಿಟ್ಟು ವರ್ಷವಾಗಿದೆ. ಅವರು ನಡೆಸಿಕೊಡುವ 'ಅನ್‌ಸ್ಟಾಪೆಬಲ್' ಭರ್ಜರಿ ಯಶಸ್ಸು ಗಳಿಸಿಕೊಂಡಿದೆ. ತಮ್ಮದೇ ಆದ ರಗಡ್ ಹಾಗೂ ಮಾಸ್ ಸ್ಟೈಲ್‌ನಲ್ಲಿ ಬಾಲಕೃಷ್ಣ ಆ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನ ಯಶಸ್ಸಿನ ಬಳಿಕ ಇದೀಗ ಜನಪ್ರಿಯ ರಿಯಾಲಿಟಿ ಶೋ ಒಂದರಿಂದ ಬಾಲಕೃಷ್ಣಗೆ ಭಾರಿ ದೊಡ್ಡ ಆಫರ್‌ ಬಂದಿದೆ.

  ಬಿಗ್‌ಬಾಸ್‌ಗೆ ಹೊಸ ನಿರೂಪಕ

  ಬಿಗ್‌ಬಾಸ್‌ಗೆ ಹೊಸ ನಿರೂಪಕ

  ತೆಲುಗು ಬಿಗ್‌ಬಾಸ್‌ ಶೋ ಅನ್ನು ನಿರೂಪಿಸುವ ಅವಕಾಶ ಬಾಲಕೃಷ್ಣಗೆ ಒದಗಿಬಂದಿದೆ. ತೆಲುಗು ಬಿಗ್‌ಬಾಸ್ ಈ ವರೆಗೆ ಆರು ಸೀಸನ್‌ಗಳಾಗಿವೆ. ಮೊದಲ ಸೀಸನ್ ಅನ್ನು ಜೂ ಎನ್‌ಟಿಆರ್, ಎರಡನೇ ಸೀಸನ್ ಅನ್ನು ನಟ ನಾನಿ ಹೋಸ್ಟ್ ಮಾಡಿದ್ದರು. ಆ ಬಳಿಕದ ನಾಲ್ಕು ಸೀಸನ್‌ಗಳನ್ನು ನಟ ನಾಗಾರ್ಜುನ ನಿರೂಪಣೆ ಮಾಡಿದ್ದರು. ನಾಗಾರ್ಜುನ ನಿರೂಪಣೆ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಈಗ ಅವರನ್ನು ಬದಲಾಯಿಸಲು ಯೋಜಿಸಿದ್ದಾರೆ ಬಿಗ್‌ಬಾಸ್ ಆಯೋಜಕರು.

  ಗುಡ್‌ ಬೈ ಹೇಳಿದ ನಟ ನಾಗಾರ್ಜುನ

  ಗುಡ್‌ ಬೈ ಹೇಳಿದ ನಟ ನಾಗಾರ್ಜುನ

  ತೆಲುಗು ಬಿಗ್‌ಬಾಸ್ ಆರನೇ ಸೀಸನ್ ಎರಡು ದಿನಗಳ ಹಿಂದಷ್ಟೆ ಮುಕ್ತಾಯವಾಗಿದ್ದು, ಈ ಸೀಸನ್‌ಗೆ ಕಳಪೆ ಟಿಆರ್‌ಪಿ ಬಂದಿದೆ. ಹಾಗಾಗಿ ನಾಗಾರ್ಜುನ ಅವರನ್ನು ಬದಲಾಯಿಸಲು ನಿಶ್ಚಯಿಸಲಾಗಿದೆ. ಅದಕ್ಕೆ ಪೂರಕವೆಂಬಂತೆ, ಬಿಗ್‌ಬಾಸ್‌ ಫಿನಾಲೆಯಲ್ಲಿ ನಾಗಾರ್ಜುನರ ಜರ್ನಿಯ ವಿಡಿಯೋ ಪ್ರದರ್ಶಿಸಲಾಗಿದೆ. ಪ್ರತಿ ಬಾರಿ ಮುಂದಿನ ಬಾರಿ ಸಿಗೋಣ ಎಂದು ಹೇಳಿ ಕಾರ್ಯಕ್ರಮ ಮುಗಿಸುತ್ತಿದ್ದ ನಾಗಾರ್ಜುನ, ಫಿನಾಲೆಯ ದಿನ ಇಲ್ಲಿಗೆ ಮುಕ್ತಾಯ, ಗುಡ್ ಬೈ ಎಂದು ಹೇಳಿ ಕಾರ್ಯಕ್ರಮ ಮುಗಿಸಿದ್ದಾರೆ. ಇದು ನಾಗಾರ್ಜುನ ಅವರು ಶೋ ಬಿಡುತ್ತಿರುವುದೇ ಕಾರಣ ಎನ್ನಲಾಗುತ್ತಿದೆ.

  ಸೂಪರ್ ಹಿಟ್ ಆಗಿರುವ ಅನ್‌ಸ್ಟಾಪೆಬಲ್!

  ಸೂಪರ್ ಹಿಟ್ ಆಗಿರುವ ಅನ್‌ಸ್ಟಾಪೆಬಲ್!

  ಇನ್ನು ಬಾಲಕೃಷ್ಣ ಅವರು ಅನ್‌ಸ್ಟಾಪೆಬಲ್ ಶೋ ನಡೆಸಿಕೊಡುತ್ತಿರುವ ರೀತಿ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಬಿಡು-ಬೀಸು ಮಾತು, ಫಿಲ್ಟರ್ ಇಲ್ಲದೆ ಮಾತನಾಡುವ ರೀತಿ ಹಲವರಿಗೆ ಇಷ್ಟವಾಗಿದೆ. ಗಾಂಭೀರ್ಯದ ಮುಖವಾಡ ಧರಿಸದೆ ಆಪ್ತವಾಗಿಯೇ ತೀರ ಖಾಸಗಿ ಪ್ರಶ್ನೆಗಳನ್ನು ಸಹ ಸುಲಭವಾಗಿ ಕೇಳಿ ಉತ್ತರ ಪಡೆವ ರೀತಿ ವೀಕ್ಷಕರಿಗೆ ಡೇರಿಂಗ್ ಎನಿಸಿದೆ. ಬಾಲಕೃಷ್ಣರ ನಿರೂಪಣಾ ಶೈಲಿ ಬಿಗ್‌ಬಾಸ್‌ ರಿಯಾಲಿಟಿ ಶೋಗೆ ಬಹಳ ಹೊಂದಿಕೆ ಆಗುತ್ತದೆ. ಹಾಗಾಗಿ ಬಾಲಕೃಷ್ಣ ಅವರನ್ನು ಬಿಗ್‌ಬಾಸ್ ನಿರೂಪಣೆ ಮಾಡುವಂತೆ ಕೇಳಲಾಗಿದೆ.

  ಯಶಸ್ವಿಯಾಗಲಿದೆಯೇ ಶೋ?

  ಯಶಸ್ವಿಯಾಗಲಿದೆಯೇ ಶೋ?

  ಬಿಗ್‌ಬಾಸ್ ಶೋ ನಿರೂಪಣೆ ಮಾಡಲು ನಟ ಬಾಲಕೃಷ್ಣಗೆ ಭಾರಿ ಮೊತ್ತದ ಸಂಭಾವನೆ ಆಫರ್ ಮಾಡಲಾಗಿದೆಯಂತೆ. ಅಲ್ಲದೆ ಶೋನ ನಿರೂಪಣಾ ವಿಧಾನ, ಚಿತ್ರೀಕರಣ ವಿಧಾನದಲ್ಲಿಯೂ ಬದಲಾವಣೆ ಮಾಡಲು ಚಿಂತಿಸಲಾಗಿದೆಯಂತೆ. ಅನ್‌ಸ್ಟಾಪೆಬಲ್ ಮೂಲಕ ಈಗಾಗಲೇ ಭಾರಿ ಸಂಖ್ಯೆಯ ಜನರನ್ನು ಸೆಳೆದಿರುವ ಬಾಲಕೃಷ್ಣ, ಬಿಗ್‌ಬಾಸ್‌ಗೆ ಹೋದರೆ ಇನ್ನೂ ಹೆಚ್ಚಿನ ಜನರನ್ನು ಸೆಳೆಯುವುದು ಗ್ಯಾರೆಂಟಿ ಎನ್ನಲಾಗುತ್ತಿದೆ.

  English summary
  Nandamuri Balakrishna may replace Akkineni Nagarjuna in Bigg Boss Telugu season 07. presently Balakrishna hosting Unstoppable talk show for OTT platform Aha.
  Wednesday, December 21, 2022, 10:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X