»   » ಪ್ರಥಮ್ ಬಗ್ಗೆ ಶೀತಲ್, ಶಾಲಿನಿ, ರೇಖಾ ಉದುರಿಸಿದ ಮಾತಿನ ಮುತ್ತುಗಳಿವು

ಪ್ರಥಮ್ ಬಗ್ಗೆ ಶೀತಲ್, ಶಾಲಿನಿ, ರೇಖಾ ಉದುರಿಸಿದ ಮಾತಿನ ಮುತ್ತುಗಳಿವು

Posted By:
Subscribe to Filmibeat Kannada

ಕಳೆದ ಕೆಲ ದಿನಗಳ ಹಿಂದೆ ಪ್ರಥಮ್ ಬಗ್ಗೆ ಇಂತಹ ಅಭಿಪ್ರಾಯ ಕೇಳಿ ಬಂದಿರಲಿಲ್ಲ. ಯಾಕಂದ್ರೆ, ಪ್ರಥಮ್ ಕಂಡ್ರೆ 'ಬಿಗ್ ಬಾಸ್' ಮನೆಯ ಎಲ್ಲ ಸ್ಪರ್ಧಿಗಳು ಉರಿದು ಬೀಳ್ತಿದ್ರು.

'ಬಿಗ್ ಬಾಸ್' ಕಾರ್ಯಕ್ರಮದಿಂದ ಪ್ರಥಮ್ ಔಟ್ ಆಗಬೇಕು ಅಂತ ಪ್ರತಿ ಬಾರಿ ಎಲ್ಲರೂ ನಾಮಿನೇಟ್ ಮಾಡ್ತಿದ್ರು. ಅಷ್ಟಿಲ್ದೇ ಸತತ ಎಂಟು ಬಾರಿ ನಾಮಿನೇಟ್ ಆಗಿ ಪ್ರಥಮ್ ಇತಿಹಾಸ ಸೃಷ್ಟಿಸಲು ಸಾಧ್ಯವಾಗ್ತಿತ್ತಾ.?[ಅವರಿಗೆ ಆಗಲ್ಲ, ಇವರು ಹೋಗಲ್ಲ.. ಈ ವಾರವೂ ಪ್ರಥಮ್ ಮಿಸ್ ಇಲ್ಲ.!]

ಆದ್ರೆ ಈಗ ಪ್ರಥಮ್ ಬಗ್ಗೆ ಎಲ್ಲರ ಅಭಿಪ್ರಾಯ ಬದಲಾಗಿದೆ. 'ಇತರರಿಗೆ ಹೋಲಿಸಿದರೆ ಪ್ರಥಮ್ ಸಾವಿರ ಪಾಲು ಮೇಲು' ಅಂತ ಸ್ವತಃ 'ಬಿಗ್ ಬಾಸ್' ಸ್ಪರ್ಧಿಗಳ ಬಾಯಲ್ಲೇ ಕೇಳಿ ಬರುತ್ತಿದೆ. ಎಂಟನೇ ಅದ್ಭುತ ಅಂದ್ರೆ ಇದೇ ಅಲ್ವೇ.?!

ಪ್ರಥಮ್ ಬಗ್ಗೆ ಗುಣಗಾನ

'ಬಿಗ್ ಬಾಸ್' ಮನೆಯಲ್ಲಿ 78ನೇ ದಿನ ಪ್ರಥಮ್ ಬಗ್ಗೆ ನಟಿ ಶಾಲಿನಿ, ರೇಖಾ, ಶೀತಲ್ ಶೆಟ್ಟಿ ಹಾಗೂ ಕೀರ್ತಿ ಗುಣಗಾನ ಮಾಡಿದ್ದಾರೆ.[ಪ್ರಥಮ್ 'ಔಟ್'.. ಸುದೀಪ್ ಚಮಕ್.. ಶಾಲಿನಿ-ಕೀರ್ತಿ ಗಪ್-ಚುಪ್]

ಪ್ರಥಮ್ ನ ನಾಮಿನೇಟ್ ಮಾಡದ ಶಾಲಿನಿ

'ಬಿಗ್ ಬಾಸ್' ಮನೆಯ 12ನೇ ವಾರ ಶಾಲಿನಿ ಕ್ಯಾಪ್ಟನ್ ಆದರು. ಪ್ರಥಮ್ ರವರನ್ನ ಶಾಲಿನಿ ನಾಮಿನೇಟ್ ಮಾಡಬಹುದಿತ್ತು. ಆದ್ರೆ, ಮಾಡ್ಲಿಲ್ಲ. ಯಾಕೆ ಅಂದ್ರೆ....

ಪ್ರಥಮ್ ಒಳ್ಳೆಯ ಪ್ಲೇಯರ್

ಶೀತಲ್ ಶೆಟ್ಟಿ: ''ಪ್ರಥಮ್ ಮಾತ್ರ ಗ್ರೇಟ್ ಎಸ್ಕೇಪ್''

ಶಾಲಿನಿ: ''ನಾನು ಅವನನ್ನೇ ನಾಮಿನೇಟ್ ಮಾಡ್ತೀನಿ ಅಂತ ಎಲ್ಲರೂ ಅಂದುಕೊಂಡಿದ್ದರೇನೋ. ಆದ್ರೆ ನಾನು ಮಾಡ್ಲಿಲ್ಲ''

ಶೀತಲ್: ''ಏನೇ ಆದರೂ ಅವನು ಒಳ್ಳೆಯ ಪ್ಲೇಯರ್''

[ಕಮಾಂಡೋ ಶಾಲಿನಿಗೆ 'ಲಾರ್ಡ್' ಪ್ರಥಮ್ ಕೊಟ್ಟ ಕಠೋರ ಶಿಕ್ಷೆ]

ಪ್ರಥಮ್ ಅರ್ಹ

ಶಾಲಿನಿ : ''ನಾನು ಅಲ್ಲಿ ನಿಂತಾಗ ಅದನ್ನೇ ಯೋಚನೆ ಮಾಡ್ತಿದ್ದೆ. ನಾವು ಯಾವಾಗಲೂ ಅವನನ್ನ ಬೆಂಕಿಗೆ ಹಾಕ್ತೀವಿ. ಜನ ಅವನನ್ನ ಬೆಂಕಿಯಿಂದ ಆಚೆಗೆ ತರ್ತಿದ್ದಾರೆ. ಒಂದ್ಸಲ ಆದರೂ ನಾವು ಅವನನ್ನ ಬೆಂಕಿಗೆ ಹಾಕದೇ ಇರಬೇಕು''

ಕೀರ್ತಿ : ''ಈ ವಾರ ಅವನು ಡಿಸರ್ವಿಂಗ್''

['ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಗೆ ಉಳಿಗಾಲ ಇಲ್ಲ.!]

ನಾಮಿನೇಟ್ ಮಾಡಲು ಇಷ್ಟ ಆಗ್ಲಿಲ್ಲ

ಶಾಲಿನಿ : ''ಒಂದು ವಾರ ಅವನಿಗೆ ಇಮ್ಯೂನಿಟಿ ಸಿಕ್ತು. ಇನ್ನೊಂದು ವಾರ ಅವನು ಕ್ಯಾಪ್ಟನ್. ಅದು ಎರಡು ಅವನಿಗೆ 'ಬಿಗ್ ಬಾಸ್' ಕೊಟ್ಟಿದ್ದು. ನಮ್ಮಿಂದ ಅವನು ಸೇಫ್ ಆಗಿರಲಿಲ್ಲ. ಈ ವಾರ ಕೂಡ ಮತ್ತೆ ಅವನನ್ನ ನಾಮಿನೇಟ್ ಮಾಡೋಕೆ ನನಗೆ ಇಷ್ಟ ಆಗಲಿಲ್ಲ''

ಇತರರಿಗಿಂತ ಪ್ರಥಮ್ ಬೆಟರ್

ಶಾಲಿನಿ : ''ಶೀತಲ್ ಪ್ರಕಾರ ಎಷ್ಟೋ ವಿಷಯಗಳಲ್ಲಿ ಪ್ರಥಮ್ ಸರಿ. ಆದ್ರೆ, ಅದೇ ವಿಷಯಗಳಲ್ಲಿ ಪ್ರಥಮ್ ನನಗೆ ತಪ್ಪು ಅನಿಸುತ್ತಾನೆ''

ಶೀತಲ್ : ''ನನಗೆ ಪ್ರಥಮ್ ಕಂಪ್ಲೀಟ್ ಸರಿ ಅನಿಸದೇ ಇದ್ದರೂ ಇಲ್ಲಿರುವ ಹಲವಾರು ಜನರಿಗಿಂತಲೂ ಅವನು ತುಂಬಾ ಬೆಟರ್. ಯಾಕಂದ್ರೆ, ಪ್ರಥಮ್ ಅಟ್ ಲೀಸ್ಟ್ ಜಡ್ಜ್ ಮೆಂಟ್ ಗೆ ಸಿಗುವ ಹುಡುಗ''

ಭುವನ್ ಹಾಗೆ ಅಲ್ಲ

ಶಾಲಿನಿ : ''ಮೊದಲ ಮೂರು ವಾರಗಳಲ್ಲಿ ಇದ್ದ ಪ್ರಥಮ್ ಈಗಿಲ್ಲ. ಅವನಿಗೆ ಏನೇ ಅಂದರೂ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಮುಂಚೆ ಪ್ರತಿಭಟನೆ ಮಾಡೋನು. ಈಗ ಮಾಡಲ್ಲ. ಅದೇ ಭುವನ್ ಹಾಗಲ್ಲ. ಈಗ ಅವನು ಏನನ್ನೂ ತೆಗೆದುಕೊಳ್ಳಲು ರೆಡಿ ಇಲ್ಲ''

ನನ್ನ ಸಪೋರ್ಟ್ ಯಾವಾಗ್ಲೂ ಪ್ರಥಮ್ ಗೆ

ರೇಖಾ: ''ನಾನು ಯಾವಾಗಲೂ ಪ್ರಥಮ್ ಗೆ ಸಪೋರ್ಟ್ ಮಾಡಿದ್ದೇನೆ. ಎಷ್ಟೊಂದು ವಿಷಯಗಳಲ್ಲಿ. ಅವನು ತುಂಬಾ ಬೋಲ್ಡ್ ಇದ್ದಾನೆ''

ನಾವು ಹೇಳಲು ಆಗದೇ ಇರೋದನ್ನ ಅವನು ಹೇಳಿದ

ಶೀತಲ್ : ''ಮೊನ್ನೆ ಹೆಂಗೆ ಹೇಳಿದ ಅವನು. ಸಖತ್ತಾಗಿ ಇತ್ತು ಅದು. ''ಮಾಳವಿಕಾ ಹೆಸರನ್ನ ಬಿಟ್ಟುಬಿಟ್ರಿ'' ಅಂತ ಡೈರೆಕ್ಟ್ ಆಗಿ ಸುದೀಪ್ ಬಳಿ ಹೇಳಿದ. ನನಗೆ ಆಗ ಎಷ್ಟು ನಗು ಬರ್ತಿತ್ತು ಅಂದ್ರೆ, ನಮ್ಮೆಲ್ಲರ ಮನಸ್ಸಿನಲ್ಲಿ ಅದು ಇತ್ತು. ಆದ್ರೆ ಅದನ್ನ ಯಾರೂ ಹೇಳ್ತಿಲ್ಲ. ಅವನು ಹೇಳಿಬಿಟ್ಟ. ಐ ಜಸ್ಟ್ ಲವ್ ದಿಸ್ ಗಯ್''

English summary
BBK4, Week 12: Actress Shalini, Sheethal Shetty, Rekha and Keerthi praises Pratham.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada