»   » 'ಫ್ಲರ್ಟ್' ಮಾಡೋದು ಹೇಗಂತ ಅಯ್ಯಪ್ಪ ಅವರನ್ನ ಕೇಳಿ!

'ಫ್ಲರ್ಟ್' ಮಾಡೋದು ಹೇಗಂತ ಅಯ್ಯಪ್ಪ ಅವರನ್ನ ಕೇಳಿ!

Posted By:
Subscribe to Filmibeat Kannada

ಕನ್ನಡದ ಬಿಗ್ ಬಾಸ್ ಮನೆಯಲ್ಲಿ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆದಾಗ, ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರೊಡನೆ ಇಡೀ ವಾರದ ಬೆಳವಣಿಗೆ ಹಾಗೂ ಟಾಸ್ಕ್ ಗಳ ಬಗ್ಗೆ ಕೆಲಕಾಲ ಹರಟಿದರು.

ಸ್ಪರ್ಧಿಗಳನ್ನು ಮಾತನಾಡಿಸುತ್ತಿರುವ, ಸಂದರ್ಭದಲ್ಲಿ ಕಿಚ್ಚ ಅವರು ಚಂದನ್ ಹಾಗೂ ಅಯ್ಯಪ್ಪ ನಡುವೆ ನಡೆದ ಸಂಭಾಷಣೆಯನ್ನು ಎಲ್ಲರೆದುರು ಹಂಚಿಕೊಂಡು ಸ್ವಲ್ಪ ಹೊತ್ತು ಮಸ್ತಿ ಮಾಡಿದರು. ಈ ಸಂದರ್ಭದಲ್ಲಿ ಕಿಚ್ಚ ಅವರು ನಟಿ ಶ್ರುತಿ ಅವರಿಗೆ ಸ್ವಲ್ಪ ಹೊತ್ತು ಕಿವಿ ಮುಚ್ಚಿಕೊಳ್ಳಲು ಹೇಳಿದರು.

BBK3 Kichcha Sudeep ask Chandan and Aiyappa how to Flirt

"ನೀವು ನಟಿ ಸನ್ನಿ ಲಿಯೋನ್ ಜೊತೆ ಮೂರು ದಿನ ಶೂಟಿಂಗ್ ಮಾಡಿದ್ರಲ್ವಾ, ಆ ಮೂರು ದಿನದಲ್ಲಿ ಏನೂ ನಡೆದಿಲ್ವಾ?, ನೀವು ಒಂದೇ ಒಂದು ಮಾತು ಕೂಡ ಆಡಿಲ್ವಾ?, ಬರೀ ಸೆಲ್ಫಿ ಮಾತ್ರ ತೆಗೆಸಿಕೊಂಡ್ರ, ನೀವು ಫ್ಲರ್ಟ್ ಮಾಡಿಲ್ವಾ"?, ಅಂತ ಅಯ್ಯಪ್ಪ ಅವರು ಚಂದನ್ ಜೊತೆ ನಡೆಸಿದ ಸಂಭಾಷಣೆಯನ್ನು ಹಂಚಿಕೊಂಡು, ಚಂದನ್ ಜಾಗದಲ್ಲಿ ಅಯ್ಯಪ್ಪ ಏನಾದ್ರೂ ಇದ್ದಿದ್ದರೇ ಕಥೆನೇ ಬೇರೆ ಇತ್ತು ಅಂತ ಸುದೀಪ್ ಅವರು ಜೋಕ್ ಮಾಡುವ ಮೂಲಕ ವಾರದ ಕಥೆಯಲ್ಲಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.[ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಜಯಶ್ರೀ: ಫೇಸ್ ಬುಕ್ಕಿನಲ್ಲಿ ಮಿಶ್ರ ರಂಗು!]

ಅಂದಹಾಗೆ ಕ್ರಿಕೆಟರ್ ಅಯ್ಯಪ್ಪ ಅವರಿಗೆ ಕಿಚ್ಚ ಸುದೀಪ್ ಅವರು ಫ್ಲರ್ಟ್ ಮಾಡುವುದು ಹೇಗೆ? ಸ್ವಲ್ಪ ನಮಗೂ ಹೇಳಿಕೊಡಿ ಎಂದು ಕೇಳಿದರು. ಜೊತೆಗೆ ಪೂಜಾ ಗಾಂಧಿ ಹಾಗೂ ಅಯ್ಯಪ್ಪ ಅವರನ್ನು ಕೂರಿಸಿಕೊಂಡು ಫ್ಲರ್ಟ್ ಮಾಡೋದು ಅಂದ್ರೇನು? ಫ್ಲರ್ಟ್ ಮಾಡೋದು ಹೇಗೆ ಒಂದು ಡೆಮೋ ತೋರಿಸಿ ಅಂದ್ರು.

ಕ್ರಿಕೆಟರ್ ಅಯ್ಯಪ್ಪ ಅವರ ಪ್ರಕಾರ ಫ್ಲರ್ಟ್ ಮಾಡೋದು ಅಂದ್ರೆ, ಹಾಯ್, ಹಲೋ, ಹೌ ಆರ್ ಯೂ, ಹೇಗಿದೆ ಬೆಂಗಳೂರು, ಹೇಗೆ ನಡೀತಾ ಇದೆ ನಿಮ್ಮ ವರ್ಕ್, ಇದು ಫ್ಲರ್ಟ್ ಮಾಡೋ ಸ್ಟೈಲ್ ಅಂತೆ!. ಜೊತೆಗೆ ಪೂಜಾ ಗಾಂಧಿ ಹಾಗೂ ಅಯ್ಯಪ್ಪ ನಡುವೆ ಭಾಷೆಯ ಬಗ್ಗೆ ಸ್ವಲ್ಪ ಹೊತ್ತು ಚರ್ಚೆ ಶುರು ಆಯಿತು. ಅಲ್ಲದೇ ಅಯ್ಯಪ್ಪ ಅವರು ಸ್ಟೈಲ್ ಆಗಿ ಇಂಗ್ಲೀಷ್ ನಲ್ಲಿ ಮಾತನಾಡಲು ಶುರು ಹಚ್ಚಿಕೊಂಡಾಗ, ಪೂಜಾ ಅವರು ಸಡನ್ ಆಗಿ ಕನ್ನಡ ಬರಲ್ವಾ ಅಂದು ಬಿಡಬೇಕೇ?,[ಬಿಗ್ ಬಾಸ್: ಡ್ಯಾನ್ಸರ್ ಜಯಶ್ರೀ ಎಕ್ಸಿಟ್ ಗೆ ಕಾರಣವೇನು?]

ಒಟ್ನಲ್ಲಿ ಇವರಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ನೋಡಿದ ಸುದೀಪ್ ಅವರು ಮಳೆ ಹುಡುಗಿ ಪೂಜಾ ಗಾಂಧಿ ಜೊತೆ ಅಯ್ಯಪ್ಪ ಅವರು ಮಾಡಿದ್ದು, ಫ್ಲರ್ಟ್ ಥರ ಇರ್ಲಿಲ್ಲಾ ಬದ್ಲಾಗಿ ಅದು ಜಗಳ ಆಡಿದಂಗೆ ಇತ್ತು ಅಂತ ಅಭಿಪ್ರಾಯಪಟ್ಟರು. ಅಲ್ಲದೇ 'ಮಚ್ಚ ಡೌವ್ ಹೋಡಿಯೋದು ಹೇಗಂತ ಹೇಳ್ಕೋಡು, ಮಚ್ಚಾ ಕಾಳ್ ಹಾಕೋದು ಹೇಗಂತ ಹೇಳ್ಕೋಡೋ' ಅಂತ ಕಿಚ್ಚ ಅವರು ಹಾಡು ಹಾಡುವ ಮೂಲಕ ಅಯ್ಯಪ್ಪ ಅವರ ಫ್ಲರ್ಟ್ ಮಾಡುವ ಕಾರ್ಯಕ್ರಮಕ್ಕೆ ಉತ್ತೇಜನ ನೀಡಿದರು.

English summary
Kichcha Sudeep asked Chandan and Aiyappa about how to Flirt and explain it to the audience. Reluctant to accept the challenge Aiyappa finally begin chatting with Pooja Gandhi.. Here are the highlights of Weekend with Kichcha Sudeep on Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada