For Quick Alerts
ALLOW NOTIFICATIONS  
For Daily Alerts

  BBK4: ಪ್ರಥಮ್ ಮೇಲೆ ಮನೆಯವರ ಕಂಪ್ಲೈಂಟ್, ಕ್ಲಾಸ್ ತೆಗೆದುಕೊಂಡ ಕಿಚ್ಚ

  By Suneetha
  |

  ಎಂದಿನಂತೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಅವರು ಒಂದು ವಾರದ ಬೆಳವಣಿಗೆಗಳ ಚರ್ಚೆಗೆ ಮುಂದಾದರು. ಒಬ್ಬೊಬ್ಬರ ಬಳಿಯೂ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಮತ್ತು ಅವರ ಅಭಿಪ್ರಾಯಗಳನ್ನು ಕೇಳಲಾರಂಭಿಸಿದರು.

  ಪಂಚಾಯತಿ ಕಟ್ಟೆಯ ಮುಂದೆ ಕುಳಿತಿದ್ದ ಒಬ್ಬೊಬ್ಬರ ಬಳಿಯೂ ಕಿಚ್ಚ ಸುದೀಪ್ ಮಾತು-ಕತೆ ಆರಂಭಿಸಿದರು. ಈ ಬಾರಿ ಮೊದಲನೇಯದಾಗಿ ನಿರೂಪಕಿ ಶೀತಲ್ ಶೆಟ್ಟಿಯಿಂದ ಚರ್ಚೆ ಆರಂಭಿಸಿದರು.['ಕಿರಿಕ್ ತಂಗಳಿಟ್ಟು' ಪ್ರಥಮ್ ಗೆ ದೊಡ್ಡ ಗಣೇಶ್ ಕೊಟ್ಟ ಭಯಂಕರ ಶಿಕ್ಷೆ]

  ಒಟ್ನಲ್ಲಿ ಇಡೀ ಮನೆಯ ಸದಸ್ಯರೆಲ್ಲಾ ಸೇರಿ ಪ್ರಥಮ್ ಅವರ ಮೇಲೆ ದೂರುಗಳ ಸುರಿಮಳೆಯನ್ನೇ ಸುರಿಸಿದರು. ಎಲ್ಲವನ್ನೂ ಶಾಂತಚಿತ್ತರಾಗಿ ಸುದೀಪ್ ಅವರು ಕೇಳಲು ತಯಾರಾದರು. ಪ್ರಥಮ್ ಬಗ್ಗೆ ಯಾರು ಏನಂದ್ರು?, ನೋಡಲು ಮುಂದೆ ಓದಿ...

  ಶೀತಲ್ ಶೆಟ್ಟಿ

  'ಇಲ್ಲಿ ಪ್ರಥಮ್ ತಪ್ಪು ಅಥವಾ ಸರಿ ಅಂತ ನಾನು ಹೇಳ್ತಾ ಇಲ್ಲ. ಆದ್ರೆ ಆವತ್ತು ಕಬಡ್ಡಿ ಟಾಸ್ಕ್ ನಲ್ಲಿ ಎಲ್ಲರೂ ಕಬ್ಬಡ್ಡಿ ಆಡಿ ಸುಸ್ತಾಗಿದ್ದರು. ರಾತ್ರಿ ಹೊತ್ತು ಮಲಗೋ ಟೈಮ್ ನಲ್ಲಿ ಮತ್ತೇನೋ ಮಾತಾಡಿ, ರಾಡಿ ಎಬ್ಬಿಸೋದು ನನಗೆ ಸರಿ ಅನಿಸಲಿಲ್ಲ. ಎಲ್ಲರೂ ರೆಸ್ಟ್ ಮಾಡುವ ಸಮಯದಲ್ಲಿ ಪ್ರಥಮ್ ಮಾಡಿದ್ದು ನನಗೆ ಇಷ್ಟ ಆಗಲಿಲ್ಲ'. -ಶೀತಲ್ [ಬಿಗ್ ಬಾಸ್ 4: ಬರ್ತ್ ಡೇ ಬಾಯ್ ನಿರಂಜನ್ ದೇಶಪಾಂಡೆ ಕಾಲೆಳೆದ ಕಿಚ್ಚ]

  ಕಾವ್ಯ ಶಾಸ್ತ್ರಿ

  'ಏನೇನೋ ಕೆಟ್ಟ-ಕೆಟ್ಟದಾಗಿ ಮಾತಾಡೋದು, ನೀವು ಹೊಲಸು ತಿಂತೀರಿ ಅನ್ನೋದು, ಮಾತೆತ್ತಿದರೆ ಪ್ರತಿಭಟನೆ ಅಂತ ಹೇಳೋದು. ಮತ್ತೆ ಪದೇ-ಪದೇ ಗುಂಪುಗಾರಿಕೆ ಮಾಡ್ತಾ ಇದ್ದೀರಿ ಅಂತ ಹೇಳೋದು ಇದೆಲ್ಲಾ ನನಗೆ ಸರಿ ಅನ್ಸಿಲ್ಲ. ಅದಕ್ಕೆ ನಾನು ಪ್ರಥಮ್ ವಿರುದ್ಧ ಧ್ವನಿ ಎತ್ತಿದೆ'. -ಕಾವ್ಯ ಶಾಸ್ತ್ರಿ.['ಬಿಗ್ ಬಾಸ್' ಮನೆಯಿಂದ ಕ್ರಿಕೆಟರ್ ದೊಡ್ಡ ಗಣೇಶ್ ಔಟ್.?]

  ಸಂಜನಾ ಚಿದಾನಂದ್

  'ಪ್ರಥಮ್ ಜೊತೆ ನನಗೆ ವೈಯಕ್ತಿಕವಾಗಿ ಯಾವುದೇ ಜಗಳ ನಡೆದಿಲ್ಲ, ಆದರೆ ಸ್ವಲ್ಪ ದಿನಗಳಿಂದ ನಾನು ಎಲ್ಲರಿಗೂ ಟಾರ್ಗೆಟ್ ಆಗ್ತಾ ಇದ್ದಿನೋ ಏನೋ ಅಂತ ಅನಿಸುತ್ತಿತ್ತು. ಜೊತೆಗೆ ಬೇಜಾರು ಕೂಡ ಆಗ್ತಾ ಇತ್ತು. ಆಮೇಲೆ ಎಲ್ಲರೂ ನನಗೆ ಬೇಕಂತಲೇ ಪನಿಶ್ಮೆಂಟ್ ಕೊಡ್ತಾರೆ ಅಂತ ಅನಿಸ್ತಾ ಇತ್ತು. ಆಮೇಲೆ ನಾನು ಸರಿ ಹೋಗ್ತಾ ಇದ್ದೆ'.-ಸಂಜನಾ

  ನಿರಂಜನ್ ದೇಶಪಾಂಡೆ

  'ಇಲ್ಲಿ ನಡಿಯುತ್ತಿರೋ ಎಲ್ಲಾ ಟಾಸ್ಕ್ ಗಳು ನಮಗೆ ಜೀವನದ ಪಾಠ ಅಂತ ಅನಿಸ್ತಾ ಇದೆ. ಅದಕ್ಕೆ ನಾನು ತುಂಬಾ ಧನ್ಯವಾದ ಹೇಳುತ್ತೇನೆ. ಆದರೆ ನನಗೆ ಮನಸ್ಸಿಗೆ ಸ್ವಲ್ಪ ಕಿರಿಕಿರಿ ಆಗ್ತಾ ಇದೆ ಅಷ್ಟೇ. ನಾನೀಗ ನೇರವಾಗಿ ಪ್ರಥಮ್ ಬಗ್ಗೆನೇ ಹೇಳ್ತೀನಿ. ನನ್ನ ಅವನ ನಡುವೆ ನಡೆಯುವುದು ನಮ್ಮಿಬ್ಬರ ಮಧ್ಯೆ ಮಾತ್ರ ನಡೆಯೋ ಜಗಳ. ಅದು ಹಾಗೆ ಇರ್ಲಿ ಅಂತ ಅವರಿಗೆ ನಾನು ಯಾವಾಗಲೂ ಹೇಳ್ತೀನಿ. ಆಮೇಲೆ ತಡೆಯೋಕ್ಕಾಗದೇ ಹದ್ದು ಮೀರಿ ಮಾತುಗಳು ಬಾಯಿಂದ ಹೊರಗೆ ಬಂತು ಅಂದಾಗ ನಾನೇ ಹೋಗಿ ಸಾರಿ ಕೂಡ ಕೇಳಿದ್ದೀನಿ'.-ನಿರಂಜನ್

  ಕಾರುಣ್ಯ ರಾಮ್

  'ನಾನು ಇಲ್ಲಿಗೆ ಬಂದ ಮೇಲಿಂದ ತುಂಬಾ ಕೆಲಸಗಳನ್ನು ಕಲಿತುಕೊಂಡಿದ್ದೇನೆ. ಆದ್ರಿಂದ ನನಗೆ ತುಂಬಾ ಹೆಮ್ಮೆ ಇದೆ ಮತ್ತು ನಾನು ಕೂಡ ಮಾಡಬಹುದು ಅಂತ ಕಾನ್ಫಿಡೆಂಟ್ ಇದೆ. ಆದ್ರೆ ಇಲ್ಲಿ ನನಗೆ ತಪ್ಪು ಅಂತ ಅನಿಸಿದ್ದನ್ನು ಶಟ್ ಅಪ್ ಹೇಳಿದಾಗ, ಗೆಟ್ ಲಾಸ್ಟ್ ಯಾವಳೇ ನೀನು ಅನ್ನೋ ಮಾತುಗಳು ಬಂತು ಅದು ನನಗೆ ತುಂಬಾ ಬೇಸರ ಆಯ್ತು. ನಾನು ಎಲ್ಲರಿಗೂ ಗೌರವ ಕೊಟ್ಟು ಮಾತಾಡ್ತೀನಿ. ಅದು ಬಿಟ್ರೆ ಏನೂ ಇಲ್ಲ'.-ಕಾರುಣ್ಯ

  ಶಾಲಿನಿ

  'ಇಲ್ಲಿ ಸ್ಫೋರ್ಟ್ಸ್ ಗೆ, ವ್ಯಕ್ತಿಗೆ, ವ್ಯಕ್ತಿತ್ವಕ್ಕೆ, ಊಟಕ್ಕೆ ಅವರ ಪರ್ಸನಲ್ ವಿಚಾರದ ಬಗ್ಗೆ, ಅವರ ನಗುವಿನ ಬಗ್ಗೆ ಯಾವುದರ ಬಗ್ಗೆನೂ ಕಿಂಚಿತ್ತೂ ಗೌರವ ಇಲ್ಲದೇ ನಡ್ಕೊಳ್ತಾನೆ ಪ್ರಥಮ್. ಅವನ ನಡತೆ ಹೀಗೇನಾ?, ಅಥವಾ ನಾಟಕ ಮಾಡ್ತಾ ಇದ್ದಾನಾ?, ಅವನಿಗೆ ಯಾವುದರ ಬಗ್ಗೆನೂ ಗೌರವ ಇಲ್ಲ. ನಾವು ಬೇಸರದಿಂದ ಮಾತಾಡ್ತಾ ಇದ್ರೆ ಅವನು ನಗ್ತಾ ನಿಂತಿರ್ತಾನೆ. ಅದು ಯಾಕೆ ಹಾಗೆ ಅಂತ ನನಗೆ ಅರ್ಥ ಆಗ್ತಾ ಇಲ್ಲ. ಅದು ಬಿಟ್ರೆ ನಾನಿಲ್ಲ ತುಂಬಾ ಎಂಜಾಯ್ ಮಾಡ್ತಾ ಇದ್ದೀನಿ'.-ಶಾಲಿನಿ

  ಕೀರ್ತಿ

  'ನಾನು ನನ್ನ ಲೈಫಲ್ಲಿ ಮಾಡದ ಕೆಲವು ಕೆಲಸಗಳನ್ನು ನಾನಿಲ್ಲಿ ಮಾಡಿದೆ. ಪಾತ್ರೆ ತೊಳೆಯೋದು, ಚಪಾತಿ ಕಾಯಿಸೋದು, ಅಡಿಗೆ ಮಾಡೋದು ಇತ್ಯಾದಿ. ನನ್ನ ಕೈಯಲ್ಲೂ ಮಾಡಬಹುದು ಅಂತ ನನಗೆ ಅನಿಸ್ತು. ಫ್ರಥಮ್ ವಿಚಾರಕ್ಕೆ ಬಂದ್ರೆ, ಎಲ್ಲರನ್ನೂ ಮೂರ್ಖರನ್ನಾಗಿಸೋದು ಅದು ನನಗೆ ಬಹಳ ಬೇಸರ ಇದೆ. ಹೆಣ್ಣು ಮಕ್ಕಳಿಗೆ ಹೋಗಲೇ ಬಾರಲೇ ಅನ್ನೋದು, ಗಣೇಶ್ ಅವರಂತಹ ಸಾಧಕರಿಗೆ ನೀನ್ಯಾವನೋ ಕೇಳೋಕೆ ಅನ್ನೋದು ಇದೆಲ್ಲವನ್ನು ನಾನು ಸಹಿಸದೇ ವಾರ್ನ್ ಮಾಡಿದ್ದೀನಿ. ಗುರುವಾರದ ತನಕ ಎಲ್ಲವೂ ಚೆನ್ನಾಗೇ ಇತ್ತು. ಯಾವಾಗ ಪ್ರಥಮ್ ಗಿಬ್ರೀಷ್ ಭಾಷೆಯಿಂದ ಹೊರಗೆ ಬಂದ್ರೋ ಆವಾಗಿನಿಂದ ನಡೆದಿದ್ದು ಎಲ್ಲವೂ ಎಡವಟ್ಟುಗಳೇ'.-ಕೀರ್ತಿ

  ಓಂ ಪ್ರಕಾಶ್ ರಾವ್

  'ನನಗೆ ಇಲ್ಲಿ ಬಂದು ತುಂಬಾ ಸಂತೋಷ ಆಗಿದೆ. ಆದ್ರೆ ನನಗೆ ಇಲ್ಲಿ ಯಾರಿಂದನೂ ಏನೂ ತೊಂದರೆ ಆಗಿಲ್ಲ ಸರ್'. -ಓಂ ಪ್ರಕಾಶ್ ರಾವ್

  ಭುವನ್

  'ನಾನು ಇಲ್ಲಿ ತುಂಬಾ ಖುಷಿಯಾಗಿದ್ದೀನಿ. ನನಗೆ ಯಾವುದೇ ಕಹಿ ಘಟನೆ ನಡೆದಿಲ್ಲ. ಒಳ್ಳೆ ಊಟ, ಎಸಿ ಮನೆ. ಪ್ರಥಮ್ ನನ್ನ ವೈಯಕ್ತಿಕ ತಂಟೆಗೆ ಬಂದಿಲ್ಲ'. -ಭುವನ್

  ಮಾಳವಿಕಾ

  'ನನ್ನ ವೈಯಕ್ತಿಕ ವಿಚಾರದಲ್ಲಿ ನಾನು ತುಂಬಾ ಖುಷಿಯಾಗಿದ್ದೇನೆ. ಬೇರೆ ವಿಚಾರಕ್ಕೆ ಬಂದಾಗ ಎಲ್ಲರೂ ಹೇಳಿದ್ರು. ಅದೇ ಹೆಣ್ಣು ಮಕ್ಕಳ ವಿಚಾರದಲ್ಲಿ ಅವರು ಮಾಡ್ತಾ ಇರೋದು ಸರಿ ಇಲ್ಲ. ಹಾಗೆ ಮಾಡಬಾರದು. ಎಲ್ಲರೂ ಗೌರವಾನ್ವಿತ ಕುಟುಂಬದಿಂದ ಬಂದಿರುತ್ತಾರೆ. ಕೆಲವರಿಗೆ ಮಕ್ಕಳಿದ್ದಾರೆ. ಅದ್ರಿಂದ ಈ ವಿಚಾರವನ್ನು ಎಲ್ಲರೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು'.-ಮಾಳವಿಕಾ ಅವಿನಾಶ್

  ರೇಖಾ

  'ನಾನು ಈ ಮನೆಯಲ್ಲಿ ತುಂಬಾ ಖುಷಿಯಾಗಿದ್ದೇನೆ. ತುಂಬಾ ನಕ್ಕಿದ್ದೇನೆ. ಆದ್ರೆ ನಾನು ಈ ವಾರದಲ್ಲಿ ಕ್ಯಾಪ್ಟನ್ ಆಗಿರೋದು ನನಗೆ ಸಮಾಧಾನ ಇಲ್ಲ. ಪ್ರಥಮ್ ಅವರು ರೂಲ್ಸ್ ಬ್ರೇಕ್ ಮಾಡಿದ್ದನ್ನು ನಾನು ಪ್ರಶ್ನೆ ಮಾಡಿದಾಗ ನನಗೆ ಜೋರು ಮಾಡಿದ್ದು ನನಗೆ ಇಷ್ಟ ಆಗಿಲ್ಲ'.-ರೇಖಾ

  ಚೈತ್ರಾ

  'ನೇರವಾಗಿ ಪ್ರಥಮ್ ವಿಚಾರಕ್ಕೆ ಬಂದಾಗ ಅವರ ಮತ್ತು ನನ್ನ ನಡುವೆ ಮಾತು-ಕತೆ ಅಷ್ಟಕಷ್ಟೇ ಇದೆ. ಆದ್ರೆ ಆವತ್ತು ಅವರು ಅಂದಿದ್ದು ಮಾತ್ರ ತುಂಬಾ ಬೇಸರ ಆಗಿದೆ. ನಾವೇ ಮಾಡಿದ ಅಡುಗೆಯನ್ನು ತಿಂದು ಹಾಗೆ ಮಾತಾಡೋದು ನನಗೆ ಇಷ್ಟ ಆಗಿಲ್ಲ'.-ಚೈತ್ರಾ

  ಮೋಹನ್

  'ಇಲ್ಲಿ ನಡಿಯೋ ಪ್ರತಿಯೊಂದು ವಿಚಾರವನ್ನು ಯಾವುದೋ ರಾಜಕೀಯ ವಿಚಾರಕ್ಕೆ ತೆಗೆದುಕೊಂಡು ಹೋಗಿ ಲಿಂಕ್ ಮಾಡೋದು ನನಗೆ ಇಷ್ಟ ಆಗ್ತಿಲ್ಲಾ. ನನಗೆ ಮೂರೇ ಚಿಂತೆ, ಜಯಲಲಿತಾ ಅವರಿಗೆ ಏನಾಯ್ತೋ, ಬಾರ್ಡರ್ ನಲ್ಲಿ ಏನಾಗ್ತಿದೆಯೋ ಅಂತ ಹೀಗೆಲ್ಲಾ ಪ್ರಥಮ್ ಮಾತಾಡೋದು ನನಗೆ ಇಷ್ಟ ಆಗ್ತಿಲ್ಲ. ಈ ವೇದಿಕೆ ದುರ್ಬಳಕೆ ಆಗಬಾರದು ಅನ್ನೋದೇ ನನ್ನ ಇಷ್ಟ. ಅದು ಬಿಟ್ರೆ ನಾನಿಲ್ಲಿ ತುಂಬಾ ಖುಷಿಯಾಗಿದ್ದೇನೆ'. -ಮೋಹನ್

  ದೊಡ್ಡ ಗಣೇಶ್

  'ಆವತ್ತು ಕಬ್ಬಡ್ಡಿ ಟಾಸ್ಕ್ ದಿನ ನಡೆದ ಘಟನೆ ನನಗೆ ಇಷ್ಟ ಆಗಿಲ್ಲ. ಎಲ್ಲರೂ ಇಲ್ಲಿ ಬಂದಿದ್ದು ಒಳ್ಳೆ ಕೆಲಸ ಮಾಡೋದಿಕ್ಕೆ. ಈ ವೇದಿಕೆಯನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಅನ್ನೋದೇ ನನ್ನ ಆಸೆ'.-ದೊಡ್ಡ ಗಣೇಶ್

  ಪ್ರಥಮ್

  'ಇಲ್ಲಿ ಇರುವವರ ಬಗ್ಗೆ ನನಗೆ ಕೆಲವೊಂದು ವಿಚಾರದಲ್ಲಿ ಅಸಮಾಧಾನ ಇದೆ. ಮಾಳವಿಕಾ ಮೇಡಂ ಬಗ್ಗೆ ಬೇಸರ ಇದೆ. ಅವರು ನನಗೆ ಚಿಕ್ಕಮ್ಮ ಇದ್ದ ಹಾಗೆ ಅವರನ್ನು ನಾನು ತುಂಬಾ ಗೌರವಿಸ್ತೀನಿ. ನಾನು ಯಾವ ಹೆಣ್ಣುಮಕ್ಕಳನ್ನು ಏಕವಚನದಲ್ಲಿ ಮಾತಾಡಿಸಿಲ್ಲ. ಕಾರುಣ್ಯ ವಿಚಾರದಲ್ಲಿ ನನ್ನ ತಪ್ಪಿಲ್ಲ. ನನ್ನ ತಪ್ಪಿದ್ರೆ ನಾನು ಎಲ್ಲರ ಮುಂದೆ ಕ್ಷಮೆ ಕೇಳಲು ರೆಡಿ. ನಿರಂಜನ್ ಮತ್ತು ನನ್ನ ನಡುವೆ ವೈಯಕ್ತಿಕ ವಿಚಾರದ ಬಗ್ಗೆ ಮಾತು-ಕತೆ ಆಯ್ತು ನಿಜ. ಮೊದಲು ಅವರೇ ಮಾತಾಡಿದ್ರು ನಂತರ ನಾನು ಮಾತಾಡಿದೆ ಅಷ್ಟೆ. ಈ ತರ ಪ್ರಥಮ್ ಅವರು ಮನೆಯ ಎಲ್ಲಾ ಸದಸ್ಯರ ಮೇಲೆ ಮನಸ್ಸಿಗೆ ತೋಚಿದಂತೆ ದೂರು ಹೇಳಿದರು.

  ಸುದೀಪ್ ಏನಂತಾರೆ?

  ಎಲ್ಲರಿಗೂ ಇರೋ ಈಗೋ, ಅಹಂಕಾರ ಎಲ್ಲವನ್ನೂ ಪಕ್ಕಕ್ಕಿಟ್ಟು ಮಾತಾಡಿ ಅಂತ ಹೇಳಿದ ಸುದೀಪ್ ಅವರು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಹತ್ತಿರ ಅಭಿಪ್ರಾಯ ಕೇಳುತ್ತಾರೆ. ಅದಕ್ಕೆ ಓಂ ಪ್ರಕಾಶ್ ಅವರು, 'ಇಲ್ಲಿ ಎಲ್ಲರಿಗೂ ಕರೆದು ಬುದ್ಧಿ ಹೇಳೋಕೆ ಆಗಲ್ಲ, ಎಲ್ಲರಿಗೂ ಅವರದೇ ಆದ ಸ್ವಂತಿಕೆ ಇದೆ. ಈ ವೇದಿಕೆ ಆಟ ಆಡೋಕೆ ಇದೆ ಹೊರತು, ಹೋರಾಟ ಮಾಡೋಕೆ ಅಲ್ಲ. ಪ್ರಥಮ್ ಅವರು ಕೆಲವೊಂದು ಬಾರಿ ಭಾವನೆಗಳನ್ನು ಕೆರಳಿಸಿ ಮಾತಾಡುತ್ತಾರೆ. ಆಮೇಲೆ ನಾವು ಇನ್ನೊಬ್ಬರಿಗೆ ಬುದ್ದಿ ಹೇಳೋ ಮೊದಲು ನಾವು ಸರಿ ಇರಬೇಕು. ಜೊತೆಗೆ ಹೆಣ್ಣುಮಕ್ಕಳ ಬಗ್ಗೆ ಏನೇನೋ ಮಾತಾಡಿದಾಗ ನಾನೂ ಇದ್ದೆ. ಹೆಣ್ಣುಮಕ್ಕಳಿಗೆ ಗೌರವ ಇಲ್ಲದ ಜಾಗದಲ್ಲಿ ನಾನು ಇರಲ್ಲ.

  ಮೋಹನ್ ಸಲಹೆ

  'ನಾವು ಪ್ರಥಮ್ ಮಾಡಿದ ತಪ್ಪುಗಳನ್ನು ಎತ್ತಿ ಹಿಡಿದ್ವಿ. ಆದರೆ ತಪ್ಪುಗಳಿಗೆ ಕೆಲವರ ಪ್ರಚೋದನೆ ಆಗಿದೆ ಅಂತ ನನ್ನ ಭಾವನೆ, ಪರ್ಸನಲ್ ಆಗಿ ಮಾಡಿದ್ದು ನನಗೆ ಗೊತ್ತು ನಾನು ನೋಡಿದ್ದೇನೆ, ಅದರೆ ಅದನ್ನು ಬೆರಳು ತೋರಿಸಿ ಮಾತಾಡೋಕೆ ನನಗೆ ಇಷ್ಟ ಇಲ್ಲ. ಇನ್ನು ನನಗೂ ಕೆಲವು ಸ್ಟೇಟ್ ಮೆಂಟ್ ಗಳು ಕಿವಿಗೆ ಬೀಳ್ತಾ ಇರುತ್ತೆ. ಇದಕ್ಕೆಲ್ಲಾ ನಾವು ರಿಯಾಕ್ಟ್ ಮಾಡೋಕೆ ಹೋಗಬಾರದು. ಇನ್ನೊಂದು ಪ್ರಥಮ್ ಅವರು ತಮ್ಮ ವ್ಯಕ್ತಿತ್ವವನ್ನು ಪಾಲಿಷ್ ಮಾಡಿಕೊಳ್ಳಬೇಕು'.

  ನಿರಂಜನ್ ಮಾಡ್ತಿರೋ ತಪ್ಪೇನು

  ನಿರಂಜನ್ ಕೆಲವೊಂದು ಸಂದರ್ಭದಲ್ಲಿ ಆಡಿದ ಮಾತುಗಳು ಸರಿ ಇರಲಿಲ್ಲ. ಅವರ ಬಾಯಿಂದ ಬೇಡದ ಮಾತುಗಳು ಬಂದಿದ್ದವು. ಇದು ತಪ್ಪೂಂತಾ ಖುದ್ದು ಅವರಿಗೆ ಅನಿಸಿದೆ, ಅದನ್ನು ಸುದೀಪ್ ಅವರ ಮುಂದೆ ಒಪ್ಪಿಕೊಂಡಿದ್ದಾರೆ.

  ಮಾಳವಿಕಾ ತಪ್ಪೇನು

  'ಯಾವುದೇ ಸಂದರ್ಭದಲ್ಲಿ ಅತಿರೇಕಕ್ಕೆ ಹೋಗಿಲ್ಲ. ನನ್ನ ಕೆಲವೊಂದು ಮಾತುಗಳಿಂದ ತಪ್ಪಾದ್ರೆ ಕ್ಷಮೆ ಇರಲಿ. ಪ್ರಥಮ್ ವಿಚಾರದಲ್ಲಿ ಕೆಲವೊಂದನ್ನು ನಾನು ಸರಿಪಡಿಸಲು ಹೋಗಿಲ್ಲ, ಮೂಗು ತೂರಿಸಿಲ್ಲ, ಅದು ತಪ್ಪಿರಬಹುದೇನೋ'. -ಮಾಳವಿಕಾ

  ಪ್ರಥಮ್ ಗೆ ಸುದೀಪ್ ಪಾಠ

  ಕೆಲವರ ಸಲಹೆ ಕೇಳಿದ ನಂತರ ಸುದೀಪ್ ಅವರು ಪ್ರಥಮ್ ಅವರಿಗೆ ಕೆಲಹೊತ್ತು ಕ್ಲಾಸ್ ತೆಗೆದುಕೊಂಡರು. ಕಾರುಣ್ಯ ಮತ್ತು ಪ್ರಥಮ್ ನಡುವೆ ಏರ್ಪಟಿದ್ದ ಕಂದಕವನ್ನು ಸುದೀಪ್ ಅವರು ಬುದ್ದಿಮಾತು ಹೇಳುವ ಮೂಲಕ ನಿವಾರಿಸಿದರು. ತದನಂತರ ಓಂ ಪ್ರಕಾಶ್ ರಾವ್ ಅವರ ನೇತೃತ್ವದಲ್ಲಿ ಪ್ರಥಮ್, ಕೀರ್ತಿ, ನಿರಂಜನ್ ಅವರನ್ನು ಸ್ನೇಹದ ಅಪ್ಪುಗೆ ನೀಡುವಂತೆ ಮಾಡಿದರು.

  English summary
  Once again, the focal point of this week's 'Varada Kathe', is Pratham and his histrionics. After listening to each housemate's point of view, Sudeep advises Pratham to Choose his words wisely, especially when he is angry.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more