»   » ಮಾಳವಿಕಾರನ್ನ ಔಟ್ ಮಾಡಲು 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಪ್ಲಾನ್?

ಮಾಳವಿಕಾರನ್ನ ಔಟ್ ಮಾಡಲು 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಪ್ಲಾನ್?

Posted By:
Subscribe to Filmibeat Kannada

ಕಿರುತೆರೆ ಹಾಗೂ ಬೆಳ್ಳಿತೆರೆ ವೀಕ್ಷಕರು 'ಕಂಡಿರುವ ಮುಖ'ಗಳಿಗಿಂತ 'ಕಾಣದೇ ಇರುವ ಮುಖ'ಗಳೇ ಈ ಬಾರಿಯ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಹೆಚ್ಚು ಕಾಣುತ್ತಿವೆ.

'ಬಿಗ್ ಬಾಸ್' ಮನೆ ಗೃಹ ಪ್ರವೇಶ ಮಾಡಿರುವವರ ಪೈಕಿ ಕ್ರಿಕೆಟರ್ ದೊಡ್ಡ ಗಣೇಶ್, ನಟಿ ಮಾಳವಿಕಾ ಅವಿನಾಶ್, ನಟಿ ರೇಖಾ, ನಟ ಮೋಹನ್, ನಿರ್ದೇಶಕ ಓಂ ಪ್ರಕಾಶ್ ರಾವ್ ಕನ್ನಡ ಜನತೆಗೆ ಚಿರಪರಿಚಿತ. ಇವರಲ್ಲಿ ಈಗಾಗಲೇ ದೊಡ್ಡ ಗಣೇಶ್ ಔಟ್ ಆಗಿದ್ದು ಆಗಿದೆ. ಹಿರಿಯರ ಪೈಕಿ 'ಆರ್ಡರ್ ಮಾಡುವ' ನಟಿ ಮಾಳವಿಕಾ ಅವಿನಾಶ್ ಕೂಡ ಹೊರಬಿದ್ದರೆ ಕಾಂಪಿಟೇಷನ್ ಸುಲಭ ಆಗ್ಬಹುದು ಎಂಬ ಮಾಸ್ಟರ್ ಪ್ಲಾನ್ 'ಬಿಗ್ ಬಾಸ್' ಸ್ಪರ್ಧಿಗಳ ತಲೆಯಲ್ಲಿ ಇದ್ದ ಹಾಗಿದೆ. ಈ ಬಗ್ಗೆ ನಿರಂಜನ್ ದೇಶಪಾಂಡೆ ಕ್ಲೂ ಕೂಡ ಕೊಟ್ಟಿದ್ದಾರೆ. [ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ ಗ್ಯಾಂಗ್.!]

ನಟಿ ಮಾಳವಿಕಾ ಅವಿನಾಶ್ ಜೊತೆ ಮಾತನಾಡುವಾಗ ನಿರಂಜನ್ ದೇಶಪಾಂಡೆ ಬಿಟ್ಟು ಕೊಟ್ಟ ಗುಟ್ಟು ಹಾಗೂ ಶಾಲಿನಿ, ಶೀತಲ್ ಶೆಟ್ಟಿ ಜೊತೆ ಮಾಳವಿಕಾ ನಡೆಸಿದ ಸಂಭಾಷಣೆ ವಿವರ ಇಲ್ಲಿದೆ ಓದಿರಿ....

ಮೂರೇ ವಾರದಲ್ಲಿ ಮನೆಗೆ ಹೋದರೆ ಹೇಗೆ?

ಮಾಳವಿಕಾ ಅವಿನಾಶ್ - ''ಪೂರ್ತಿ ಮಾನ ಮರ್ಯಾದೆ ಕಳೆದುಬಿಟ್ಟರಲ್ಲಾ? ಮೂರು ವಾರದಲ್ಲಿ ನಾನು ಮನೆಗೆ ಹೋದ್ರೆ, ಯಾರು ನನ್ನನ್ನ ಲೈಫ್ ನಲ್ಲಿ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ?''

ನಿರಂಜನ್ ದೇಶಪಾಂಡೆ - ''ನೀವೇ ಹೋಗ್ತೀರಾ ಅಂತ ಹೇಗೆ ಹೇಳುತ್ತೀರಾ?''

ಮಾಳವಿಕಾ ಅವಿನಾಶ್ - ಇನ್ಯಾರು ಹೋಗುತ್ತಾರೆ? ಲಾಯಕ್ಕೇ ಇಲ್ಲ ಅಂತ ಮೂರೇ ವಾರದಲ್ಲಿ ಡಿಕ್ಲೇರ್ ಮಾಡಿಬಿಟ್ಟರಲ್ಲ?''

['ಬಿಗ್ ಬಾಸ್ ಕನ್ನಡ-4': ಅರ್ಧಕರ್ಧ ಮನೆ ಸದಸ್ಯರು ಈ ವಾರ ಡೇಂಜರ್ ಝೋನಲ್ಲಿ.!]

ಕೀರ್ತಿ ಜೊತೆ ಹೋಲಿಕೆ ಯಾಕೆ?

ನಿರಂಜನ್ ದೇಶಪಾಂಡೆ - ''ಕೀರ್ತಿ ಕೂಡ ನಾಮಿನೇಟ್ ಆಗಿದ್ದಾನಲ್ಲಾ?''

ಮಾಳವಿಕಾ ಅವಿನಾಶ್ - ''ಕೀರ್ತಿ ಮತ್ತು ನಾನು ಒಂದೇ ಅಂತೀಯಾ?''

['ಬಿಗ್ ಬಾಸ್ ಕನ್ನಡ-4': ಅಚ್ಚರಿ ಮೂಡಿಸಿದ ಈ ವಾರದ ನಾಮಿನೇಷನ್.!]

ಸ್ಟ್ರಾಂಗ್ ಆಗಿ ಇದ್ದವರು ನಾಮಿನೇಟ್ ಆಗ್ತಾರೆ?

ನಿರಂಜನ್ ದೇಶಪಾಂಡೆ - ''ನಾಮಿನೇಷನ್ ಅಂತ ಬಂದಾಗ ಇಂಕಿ, ಪಿಂಕಿ, ಪಾಂಕಿ ಅದು''

ಮಾಳವಿಕಾ ಅವಿನಾಶ್ - ''ಯಾವ ಇಂಕಿ, ಪಿಂಕಿ, ಪಾಂಕಿ? ಕಥೆ ಹೇಳಬೇಡಿ''

ನಿರಂಜನ್ ದೇಶಪಾಂಡೆ - ''ಯಾರು ಸ್ಟ್ರಾಂಗ್ ಇದ್ದಾರೆ, ಅವರನ್ನೇ ನಾಮಿನೇಟ್ ಮಾಡಬಹುದಲ್ಲವೇ?''

'ಬಿಗ್ ಬಾಸ್' ಮನೆ ಸದಸ್ಯರ ಮಾಸ್ಟರ್ ಪ್ಲಾನ್?

ನಿರಂಜನ್ ಬಿಟ್ಟುಕೊಟ್ಟಿರುವ ಗುಟ್ಟಿನ ಮಾತನ್ನ ಕೇಳಿದ್ರೆ, 'ಬಿಗ್ ಬಾಸ್' ಮನೆ ಸದಸ್ಯರು ಮಾಸ್ಟರ್ ಪ್ಲಾನ್ ಮಾಡಿರುವ ಹಾಗಿದೆ.

ಶೀತಲ್ ಶೆಟ್ಟಿಗೆ ಮಾಳವಿಕಾ ಕ್ಲಾಸ್

ನಾಮಿನೇಷನ್ ಪ್ರಕ್ರಿಯೆ ಇನ್ನೂ ನಡೆಯುತ್ತಿರುವಾಗಲೇ 'ಹೊಟ್ಟೆ ಕಿಚ್ಚಿನ ಮೊಟ್ಟೆ' ಕುರಿತು ಶೀತಲ್ ಶೆಟ್ಟಿಗೆ ಮಾಳವಿಕಾ ಅವಿನಾಶ್ ಕ್ಲಾಸ್ ತೆಗೆದುಕೊಂಡರು.

ಮಾಳವಿಕಾ ಅವಿನಾಶ್-ಶೀತಲ್ ಶೆಟ್ಟಿ ನಡುವಿನ ಸಂಭಾಷಣೆ

ಮಾಳವಿಕಾ ಅವಿನಾಶ್ - ''ಒಂದೇ ಒಂದು ಕ್ಷಣ ಕೂಡ ಹಾಗೆ ಅನಿಸಲಿಲ್ವಾ?''

ಶೀತಲ್ ಶೆಟ್ಟಿ - ''ಹೊಟ್ಟೆ ಕಿಚ್ಚಿನ ಮೊಟ್ಟೆ ಅಂತಲ್ಲ. ಆದ್ರೆ, ಇವತ್ತು ಕ್ಯಾಪ್ಟನ್ ಆಯ್ಕೆ ವಿಚಾರದಲ್ಲಿ ನನಗೆ ಅನಿಸಿದ್ದನ್ನ ಹೇಳಿದೆ''

ಮಾಳವಿಕಾ ಅವಿನಾಶ್ - ''ಜೀವನದಲ್ಲಿ ನೀವೆಲ್ಲ ನೋಡಿರುವುದಕ್ಕಿಂತ ಹೆಚ್ಚಿಗೆ ನಾನು ನೋಡಿದ್ದೇನೆ. ತುಂಬಾ ಏರಿಳಿತ ನೋಡಿದ್ದೇನೆ. ಈ ಕ್ಯಾಪ್ಟನ್ ವಿಚಾರದಿಂದ ನನ್ನನ್ನ ಜಡ್ಜ್ ಮಾಡುವುದು ತುಂಬಾ ಅನ್ಯಾಯ''

ಶೀತಲ್ ಶೆಟ್ಟಿ - ''ಹೌದು ತಪ್ಪು''

ಮಾಳವಿಕಾ ಅವಿನಾಶ್ - ''ನಿನ್ನ ಮನಸ್ಸನ್ನ ನಾನು ಬದಲಾಯಿಸಲು ಸಾಧ್ಯ ಇಲ್ಲ. ಹಾಗಾದ್ರೆ, 15 ದಿನದಲ್ಲಿ ನೀನು ನನ್ನ ಮನಸ್ಸನ್ನ ಖಂಡಿತ ಅರ್ಥ ಮಾಡಿಕೊಂಡಿಲ್ಲ. ಇಷ್ಟು ಚೀಪ್ ಆಗಿ calculate ಮಾಡಿಬಿಟ್ಟೆ ಶೀತಲ್.?''

ಶಾಲಿನಿ-ಮಾಳವಿಕಾ ಅವಿನಾಶ್ ಜೊತೆಗಿನ ಸಂಭಾಷಣೆ

ಶಾಲಿನಿ - ''ಅವಳು (ಶೀತಲ್ ಶೆಟ್ಟಿ) ಹೊಟ್ಟೆ ಕಿಚ್ಚು ಅಂದಿದ್ದಕ್ಕೂ, ನಾನು ಅವಳಿಗೆ 'ನೇರ' ಅಂದಿದ್ದಕ್ಕೂ ಸಂಬಂಧ ಇಲ್ಲ''

ಮಾಳವಿಕಾ ಅವಿನಾಶ್ - ''ಎಲ್ಲವೂ ಇಂಟರ್ ಕನೆಕ್ಟೆಡ್. ಎಲ್ಲವೂ ಒಂದೇ ಸಮಯಕ್ಕೆ ಬಂದಿದ್ದು''

ಕ್ಯಾಪ್ಟೆನ್ಸಿಗಾಗಿ ಕಾವ್ಯ ಬೇಡಿಕೊಂಡಿದ್ದರಂತೆ.!

ಶಾಲಿನಿ - ''ಕಾವ್ಯಗೆ ಕ್ಯಾಪ್ಟೆನ್ಸಿ ಕೊಡಿಸಿದ್ದು ಅವಳು (ಕಾವ್ಯ) ಬೇಡಿಕೊಂಡಿದ್ದಕ್ಕೆ. ನಾವಾಗಿ ನಾವೇ ಮಾಡಲಿಲ್ಲ''

ಮಾಳವಿಕಾ ಅವಿನಾಶ್ - ''ನನಗೆ ಹೊಟ್ಟೆ ಉರಿ ಇಲ್ಲ. ಯಾವುದೋ ಕಿತ್ತು ಹೋದ ಕ್ಯಾಪ್ಟೆನ್ಸಿಗೆ ಇಷ್ಟೊಂದು ಮಾಡಬೇಕಾ? ಈ ತರಹ ದೊಡ್ಡ ದೊಡ್ಡ ಮಾತುಗಳನ್ನ ಆಡಿಬಿಟ್ಟರೆ ಹೇಗೆ? ಬಾಯಿಗೆ ಬಂದ ಹಾಗೆ ಆಡುವ ಮಾತುಗಳೆಲ್ಲ ನೇರ ಮಾತುಗಳಾ? ವಿವೇಚನೆ ಬೇಡ್ವಾ? ಒಬ್ಬರಿಗೊಬ್ಬರು ಬೆನ್ನು ತಟ್ಟಿಕೊಳ್ಳುವುದಕ್ಕೆ ಇನ್ನೊಬ್ಬರ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದುಬಿಡುವುದಾ?''

ಡಬಲ್ ಗೇಮ್ ನಡೆಯುತ್ತಿದೆ?

''ನಾನು ಇಷ್ಟ ಪಟ್ಟು ಕ್ಯಾಪ್ಟನ್ ಆಗಿಲ್ಲ. ಬೇರೆ ವಿಧಿ ಇಲ್ಲದೆ ಆಗಿರುವುದು'' ಅಂತ ಒಂದ್ಕಡೆ ಕಾವ್ಯ ಹೇಳಿದರೆ, ಇನ್ನೊಂದ್ಕಡೆ ''ಕಾವ್ಯ ಬೇಡಿಕೊಂಡಿದ್ದಕ್ಕೆ ಕ್ಯಾಪ್ಟನ್ ಮಾಡಿದ್ದು'' ಅಂತ ಶಾಲಿನಿ ಹೇಳುತ್ತಾರೆ. ಇದನ್ನೆಲ್ಲ ನೋಡಿದ್ರೆ, 'ಬಿಗ್ ಬಾಸ್' ಮನೆಯಲ್ಲಿ ಡಬಲ್ ಗೇಮ್ ನಡೆಯುತ್ತಿದೆ ಅಂತ ಅನಿಸಲ್ವಾ?

ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ....

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಈ ವಾರ ನಟಿ ಮಾಳವಿಕಾ ಅವಿನಾಶ್ ಹೊರ ಹೋಗಬೇಕಾ? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 4, Day 16 : Niranjan Deshpande revealed that 'Strong Players will be nominated' while he was in conversation with Malavika Avinash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada