For Quick Alerts
  ALLOW NOTIFICATIONS  
  For Daily Alerts

  ಅಷ್ಟಕ್ಕೂ, ಸಡನ್ನಾಗಿ ಹುಚ್ಚ ವೆಂಕಟ್ ಗೆ ಪಿತ್ತ ನೆತ್ತಿಗೇರಿದ್ದು ಯಾಕೆ.?

  By Harshitha
  |

  'ಬಿಗ್ ಬಾಸ್' ಮನೆಯೊಳಗೆ ಎಂಟ್ರಿ ಕೊಟ್ಟಾಗ, ಹುಚ್ಚ ವೆಂಕಟ್ ಕೂಲ್ ಆಗೇ ಇದ್ದರು. ಎಲ್ಲರ ಜೊತೆ ಆರಾಮಾಗಿ ಮಾತನಾಡುತ್ತಿದ್ದರು. ಯಾರೂ 'ಟೀ' ಕೊಡ್ತಿಲ್ಲ ಅಂತ ಗೊಣಗುತ್ತಲೇ ಎಲ್ಲರ ಕಾಲೆಳೆಯುತ್ತಿದ್ದರು.

  ಹೀಗಿದ್ದ ಹುಚ್ಚ ವೆಂಕಟ್ ಗೆ ಸಡನ್ನಾಗಿ ಪಿತ್ತ ನೆತ್ತಿಗೇರಿದ್ದು ಯಾಕೆ.? ಪ್ರಥಮ್ ಏನಾದರೂ ಪ್ರವೋಕ್ ಮಾಡಿದ್ರಾ.? ಎಂಬ ಅನುಮಾನ ಅನೇಕರಿಗೆ ಕಾಡುವುದು ಸಹಜ. ['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 37ನೇ ದಿನ ಪ್ರಥಮ್ ಹಾಗೂ ಹುಚ್ಚ ವೆಂಕಟ್ ನಡುವೆ ನಡೆದ ಸಂಭಾಷಣೆಯ ವಿವರ ಇಲ್ಲಿದೆ ಓದಿರಿ....

  ಟಾಸ್ಕ್ ಬಗ್ಗೆ ನೆನಪಿರಲಿ.!

  ಟಾಸ್ಕ್ ಬಗ್ಗೆ ನೆನಪಿರಲಿ.!

  'ಬಿಗ್ ಬಾಸ್' ನೀಡಿದ್ದ 'ಅತ್ತಿತ್ತ ತಿರುಗಿ ನೋಡದಿರು' ಟಾಸ್ಕ್ ಅನ್ವಯ, ಮನೆಯೊಳಗೆ ಯಾರೇ ಬಂದರೂ, ಸದಸ್ಯರು ಏಕಾಗ್ರತೆ ಕಳೆದುಕೊಳ್ಳುವಂತಿಲ್ಲ. ಅವರವರ ದೈನಿಂದಿನ ಚಟುವಟಿಕೆಯಲ್ಲಿ ಭಾಗಿಯಾಗಿರಬೇಕೇ ವಿನಃ ಅತಿಥಿಗಳ ಬಳಿ ಮಾತನಾಡುವಂತಿರಲಿಲ್ಲ ಹಾಗೂ ಪ್ರತಿಕ್ರಿಯೆ ಕೂಡ ಕೊಡುವಂತಿರಲಿಲ್ಲ. [ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!]

  6 ಗಂಟೆಗೆ ದೊಡ್ಮನೆಯೊಳಗೆ ಕಾಲಿಟ್ಟ ಹುಚ್ಚ ವೆಂಕಟ್.!

  6 ಗಂಟೆಗೆ ದೊಡ್ಮನೆಯೊಳಗೆ ಕಾಲಿಟ್ಟ ಹುಚ್ಚ ವೆಂಕಟ್.!

  6 ಗಂಟೆಗೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಹುಚ್ಚ ವೆಂಕಟ್, 6.45 ರ ಸುಮಾರಿಗೆ ಪ್ರಥಮ್ ಪಕ್ಕ ಬಂದು ಕುಳಿತರು. ['ಬಿಗ್ ಬಾಸ್' ಮನೆಯಿಂದ ಬಂದ 'ಬ್ಲಾಸ್ಟಿಂಗ್' ನ್ಯೂಸ್: ಇದು ನಿಜವೇ.?]

  ಹುಚ್ಚ ವೆಂಕಟ್ ಕೇಳಿದ್ದೇನು.?

  ಹುಚ್ಚ ವೆಂಕಟ್ ಕೇಳಿದ್ದೇನು.?

  ''ಹೆಣ್ಮಕ್ಕಳಿಗೆಲ್ಲಾ ಆವಾಜ್ ಹಾಕ್ತೀಯಲ್ಲಾ. ನೀನು ಒಬ್ಬ ಗಂಡಸೇನೋ.?'' ಅಂತ ಹೇಳ್ಕೊಂಡು ಪ್ರಥಮ್ ಪಕ್ಕ ಹುಚ್ಚ ವೆಂಕಟ್ ಬಂದು ಕುಳಿತರು. ಆಗ ''ಕನ್ನಡ ರಾಜ್ಯೋತ್ಸವ ಅಂದ್ರೇನು.?'' ಅಂತ ಪ್ರಥಮ್ ಗೆ ಪ್ರಶ್ನೆ ಮಾಡಿದರು. [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

  ಗುಡುಗಿದ ಹುಚ್ಚ ವೆಂಕಟ್

  ಗುಡುಗಿದ ಹುಚ್ಚ ವೆಂಕಟ್

  ''ಹೆಣ್ಮಕ್ಕಳ ಸ್ಕರ್ಟ್ ಹಾಕಿಕೊಳ್ಳುವುದು ಕನ್ನಡ ರಾಜ್ಯೋತ್ಸವನಾ?'' ಅಂತ ಹುಚ್ಚ ವೆಂಕಟ್ ಕಿರುಚಿದರು. ಅದಕ್ಕೆ ಪ್ರಥಮ್ ಪ್ರತಿಕ್ರಿಯೆ ನೀಡದೇ ಇದ್ದಾಗ, ''ನಡುಗಿಲ್ವಾ? ಒಳಗೆ ಭಯ ಆಯ್ತಲ್ವಾ?'' ಎಂದರು ಹುಚ್ಚ ವೆಂಕಟ್. ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

  ಕಿಂಡಲ್ ಮಾಡಿದ ಪ್ರಥಮ್

  ಕಿಂಡಲ್ ಮಾಡಿದ ಪ್ರಥಮ್

  ನೇರವಾಗಿ ಹುಚ್ಚ ವೆಂಕಟ್ ಗೆ ಪ್ರತಿಕ್ರಿಯೆ ನೀಡದ ಪ್ರಥಮ್, ''ನಗುವುದೋ, ಅಳುವುದೋ ನೀವೇ ಹೇಳಿ. ಇರುವುದೋ, ಬಿಡುವುದೋ ಈ ಮನೆಯಲ್ಲಿ'' ಅಂತ ಶೀತಲ್ ಶೆಟ್ಟಿ ಮುಂದೆ ಹಾಡು ಹಾಡಲು ಶುರು ಮಾಡಿದರು. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಹುಚ್ಚ ವೆಂಕಟ್ ರೆಸ್ಪಾನ್ಸ್

  ಹುಚ್ಚ ವೆಂಕಟ್ ರೆಸ್ಪಾನ್ಸ್

  ಪ್ರಥಮ್ ಹಾಡಿದ ಹಾಡಿಗೆ, ''ನಾನು ಬಂದ ಮೇಲೆ ಸಾಯುವುದೇ ಅವನು. ಇನ್ನೇನು.?'' ಅಂತ ಹುಚ್ಚ ವೆಂಕಟ್ ಹೇಳಿದರು.

  ಪ್ರಥಮ್ ಏರುಧ್ವನಿ

  ಪ್ರಥಮ್ ಏರುಧ್ವನಿ

  ಹುಚ್ಚ ವೆಂಕಟ್ ಪ್ರತಿಕ್ರಿಯೆಗೆ, ''ಈ ಜನರ ನಡುವೆ ನಾನು ಹೇಗೆ ಬಾಳಲಿ'' ಅಂತ ಏರುಧ್ವನಿಯಲ್ಲಿ ಹೇಳಿ ''ನಗುವುದೋ, ಅಳುವುದೋ ಈ ಊರಿನಲ್ಲಿ....'' ಹಾಡನ್ನ ಮುಂದುವರಿಸಿದರು.

  ಏನು ಕುಟ್ಟಬೇಕು.?

  ಏನು ಕುಟ್ಟಬೇಕು.?

  ಪ್ರಥಮ್ ಗೆ ಶಾಲಿನಿ ಕುಟ್ಟುವ ಕೆಲಸ ಕೊಟ್ಟಿದ್ದರು. ಹೀಗಾಗಿ, ''ಮತ್ತೆ ಸೆಕೆಂಡ್ ರೌಂಡ್ ಕುಟ್ತಾಯಿದ್ದೀನಮ್ಮಾ'' ಅಂತ ಪ್ರಥಮ್ ಹೇಳಿದರು. ಆಗ, ''ಕುಟ್ಟಿರೋದು ಇಷ್ಟೇ ಆಗಬೇಕು. ಇದಕ್ಕಿಂತ ನುಣ್ಣಗೆ ಮಾಡಬೇಡ. ಹಿಟ್ ಆಗುತ್ತೆ ಅದು'' ಅಂತ ಶಾಲಿನಿ ಹೇಳಿದರು. ಅದಕ್ಕೆ ''ಮತ್ತೆ, ಏನ್ ತಮಾಷೆನಾ ನಾವು ಅಂದ್ರೆ...ಕುಟ್ಟಿ ಉಡೀಸ್ ಮಾಡ್ಬಿಡ್ತೀನಿ'' ಅಂತ ಪ್ರಥಮ್ ಹೇಳಿದಕ್ಕೆ ''ಕುಟ್ಟೋ ಈಗ..ಕುಟ್ಟೋ ಏನ್ ಕುಟ್ತೀಯಾ'' ಅಂತ್ಹೇಳಿ ಕುಟ್ಟಾಣಿಯನ್ನ ಹುಚ್ಚ ವೆಂಕಟ್ ತೆಗೆದುಕೊಂಡರು.

  'ಕುಟ್ಟಿದ' ಹುಚ್ಚ ವೆಂಕಟ್

  'ಕುಟ್ಟಿದ' ಹುಚ್ಚ ವೆಂಕಟ್

  ''ಕುಟ್ಟೋಲೋ'' ಅಂತ ಶಾಲಿನಿ ಹೇಳಿದಕ್ಕೆ, ''ಎಲ್ಲಿ ಕುಟ್ಟಲಿ ತಾಯಿ? ಅದೇನು ಕುಟ್ಟಬೇಕು ಹೇಳು ಅತ್ಲಾಗೆ ಕುಟ್ಟಾಕ್ಬುಡ್ತೀನಿ'' ಅಂತ ಪ್ರಥಮ್ ಹೇಳ್ತಿದ್ದ ಹಾಗೆ ಹುಚ್ಚ ವೆಂಕಟ್ ಪ್ರಥಮ್ ಮೇಲೆ ಹಲ್ಲೆ ಮಾಡಿದರು.

  ಹೆಣ್ಮಕ್ಕಳಿಗೆ ಆವಾಜ್.!

  ಹೆಣ್ಮಕ್ಕಳಿಗೆ ಆವಾಜ್.!

  ''ಕುಟ್ತಿಯೇನೋ...ಹೆಣ್ಮಕ್ಕಳಿಗೆ ಆವಾಜ್ ಹಾಕ್ತಿಯೇನೋ..'' ಅಂತ ಪ್ರಥಮ್ ಮೇಲೆ ಹಲ್ಲೆ ಮಾಡಿದ ಬಳಿಕ ಹುಚ್ಚ ವೆಂಕಟ್ ಅರಚುತ್ತಿದ್ದರು.

  ಪ್ರಥಮ್ ಗೆ ಏನೂ ಆಗಿಲ್ಲ

  ಪ್ರಥಮ್ ಗೆ ಏನೂ ಆಗಿಲ್ಲ

  ''ನನಗೆ ಏನೂ ಆಗಿಲ್ಲ. ಏನೂ ಸಮಸ್ಯೆ ಇಲ್ಲ. ವೈದ್ಯರ ಅವಶ್ಯಕತೆ ಇಲ್ಲ'' ಅಂತ ಘಟನೆ ಬಳಿಕ ಪ್ರಥಮ್ 'ಬಿಗ್ ಬಾಸ್' ಗೆ ಕ್ಲಾರಿಟಿ ಕೊಟ್ಟರು.

  English summary
  Bigg Boss Kannada 4, Week 6 : Day 37 - Youtube Star Huccha Venkat made guest entry and assaulted Kannada Director Huccha Venkat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X