»   » 'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಇದ್ದ 'ಆ' 45 ನಿಮಿಷಗಳು....

'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಇದ್ದ 'ಆ' 45 ನಿಮಿಷಗಳು....

Posted By:
Subscribe to Filmibeat Kannada

ಹುಚ್ಚ ವೆಂಕಟ್ ಹೀಗೆ ಅಂತ ಗೊತ್ತಿದ್ದರೂ, 'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಲು ಕಲರ್ಸ್ ಕನ್ನಡ ವಾಹಿನಿ ಚಾನ್ಸ್ ಕೊಡ್ತು. ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳದೇ, ರಿಯಾಲಿಟಿ ಶೋನಲ್ಲಿ ಹಲ್ಲೆ ಮಾಡಿ ಹುಚ್ಚ ವೆಂಕಟ್ 'ಕು'ಖ್ಯಾತಿ ಪಡೆದ್ದಿದ್ದರು.

'ಆಗಿದ್ದು ಆಗಿ ಹೋಯ್ತು, ಸೆಕೆಂಡ್ ಚಾನ್ಸ್ ನೀಡೋಣ' ಅಂತ ಕಲರ್ಸ್ ಕನ್ನಡ ವಾಹಿನಿ ಮತ್ತೊಮ್ಮೆ ಹುಚ್ಚ ವೆಂಕಟ್ ಗೆ 'ವಿಶೇಷ ಅತಿಥಿ' ಆಗಲು ಆಹ್ವಾನ ನೀಡಿದರು. ಮೂರು ಗಂಟೆಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿರಲು ಹುಚ್ಚ ವೆಂಕಟ್ ಗೆ ಅವಕಾಶ ಸಿಕ್ತು. ['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

ಗಾರ್ಡ್ ಗಳ ಸಮೇತ 'ಬಿಗ್ ಬಾಸ್' ಮನೆ ಪ್ರವೇಶ ಮಾಡಿದ ಹುಚ್ಚ ವೆಂಕಟ್, ಪ್ರಥಮ್ ಮೇಲೆ ಹಲ್ಲೆ ಮಾಡುವ ಮುನ್ನ 45 ನಿಮಿಷಗಳ ಕಾಲ ಏನೇನು ಮಾಡಿದರು ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ. ಓದಿರಿ....

ಸಮಯ ಆಗ ಸಂಜೆ 6 ಗಂಟೆ

''ಕಾವೇರಿ ನಿನ್ನ ಮಡಿಲಲ್ಲಿ ಮಲಗುವೆ ನಾನಮ್ಮ...'' ಗಾನ ಬಜಾಯಿಸುತ್ತಿದ್ದಂತೆ 'ಬಿಗ್‌ ಬಾಸ್' ಮನೆ ಪ್ರವೇಶ ಮಾಡಿದರು 'ಟಿ.ಆರ್.ಪಿ ಕಿಂಗ್' ಹುಚ್ಚ ವೆಂಕಟ್. [ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!]

ಯಾರೂ ಪ್ರತಿಕ್ರಿಯೆ ನೀಡಲಿಲ್ಲ.!

ಗಾರ್ಡ್ ಗಳ ಸಮೇತ ಹುಚ್ಚ ವೆಂಕಟ್ ಬಂದಿದ್ದು ಅನೇಕರಿಗೆ ಶಾಕ್ ಆಗಿದ್ದರೂ, ಅದನ್ನ ಯಾರೂ ತೋರಿಸಿಕೊಳ್ಳಲಿಲ್ಲ (ಟಾಸ್ಕ್ ಅನುಸಾರ). ಹುಚ್ಚ ವೆಂಕಟ್ ಮಾತನಾಡಿಸಲು ಪ್ರಯತ್ನ ಪಟ್ಟರೂ, ಎಲ್ಲರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದರು. ['ಬಿಗ್ ಬಾಸ್' ಮನೆಯಿಂದ ಬಂದ 'ಬ್ಲಾಸ್ಟಿಂಗ್' ನ್ಯೂಸ್: ಇದು ನಿಜವೇ.?]

'ಬಿಗ್ ಬಾಸ್'ಗೆ ಥ್ಯಾಂಕ್ಸ್ ಎಂದ ಹುಚ್ಚ ವೆಂಕಟ್

''ಮತ್ತೆ ನಿಮ್ಮ ಹುಚ್ಚ ವೆಂಕಟ್ ನ ನೋಡ್ತಾ ಇದ್ದೀರಾ. ಹುಚ್ಚ ವೆಂಕಟ್ ಫ್ಲಾಪ್ ಆಗಲ್ಲ. ನಿಮಗೆ ಗೊತ್ತೋ, ಗೊತ್ತಿಲ್ವೋ...ನನಗೆ ಗೊತ್ತಿಲ್ಲ. ನನ್ನ ಹತ್ತಿರ ದುಡ್ಡು ಇರ್ಲಿಲ್ಲ. ಆ ಟೈಮ್ ನಲ್ಲಿ ನನ್ನ ಕೈಹಿಡಿದ್ರಿ. ಒಳ್ಳೆ ಪೇಮೆಂಟ್ ಕೊಟ್ರಿ. ಆ ಪೇಮೆಂಟ್ ನಲ್ಲಿ ನಮ್ಮಪ್ಪನಿಗೆ ಮೂವತ್ತು ಸಾವಿರ ರೂಪಾಯಿ ಕೊಟ್ಟೆ. ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡಿದೆ. ಥ್ಯಾಂಕ್ಯು ಬಿಗ್ ಬಾಸ್'' ಅಂತ ಕ್ಯಾಮರಾ ಮುಂದೆ ನಿಂತು ಹುಚ್ಚ ವೆಂಕಟ್ ಹೇಳಿದರು. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಕಾರುಣ್ಯಗೆ ಕ್ಲಾಸ್

''ನನ್ನ ಪಿಕ್ಚರ್ ನಲ್ಲಿ ಆಕ್ಟ್ ಮಾಡ್ತೀರಾ. ಟ್ಯಾಲೆಂಟ್ ಇದೆ ನಿಮಗೆ. ಡ್ರೆಸ್ ನೀಟಾಗಿ ಹಾಕಿದರೆ, ನಿಮ್ಮನ್ನೂ ಗೌರವಿಸುತ್ತಾರೆ... ನಿಮ್ಮ ಟ್ಯಾಲೆಂಟ್ ನೂ ಗೌರವಿಸುತ್ತಾರೆ. ಇನ್ಮೇಲೆ ಡ್ರೆಸ್ ನೀಟ್ ಆಗಿ ಹಾಕಬೇಕು. ಇಟ್ಸ್ ಆನ್ ಆರ್ಡರ್ ಬೈ ಹುಚ್ಚ ವೆಂಕಟ್. ಮಕ್ಕಳು ಕೂಡ ಈ ಕಾರ್ಯಕ್ರಮವನ್ನು ನೋಡ್ತಾರೆ. ನೀವು ಮಕ್ಕಳನ್ನು ಕೆಡಿಸುತ್ತಿದ್ದೀರಾ'' ಅಂತ ನಟಿ ಕಾರುಣ್ಯ ರಾಮ್ ಗೆ ಹುಚ್ಚ ವೆಂಕಟ್ ಕ್ಲಾಸ್ ತೆಗೆದುಕೊಂಡರು.

ಮಾಳವಿಕಾ ಅವಿನಾಶ್ ಕಾಲಿಗೆ ಬಿದ್ದ ಹುಚ್ಚ ವೆಂಕಟ್

'ಟೀ' ಕೊಡಿ ಅಂತ ಶಾಲಿನಿಗೆ ಹುಚ್ಚ ವೆಂಕಟ್ ಕೇಳಿದರು. ಅವರು ಕೊಡದೇ ಇದ್ದಾಗ, ಮಾಳವಿಕಾ ಅವಿನಾಶ್ ಬಳಿ ಬಂದು, ''ಮಾಳವಿಕಾ ಅಮ್ಮ..ನೀವು ಎಲ್ಲರಿಗೂ ಅಮ್ಮ. ನಮಗೂ ಅಮ್ಮ. ಒಂದು ಗ್ಲಾಸ್ ಟೀ ಕೊಡಿ. ಕಾಲಿಗೆ ಬೀಳಬೇಕಾ? ಸರಿ ಬೀಳುತ್ತೇನೆ'' ಅಂತ ಕಾಲಿಗೆ ಬಿದ್ದರು. ''ಇದಾದ ಮೇಲೂ ಟೀ ಕೊಡಲ್ವಾ? ಮನುಷತ್ವ ಇಲ್ವಾ? ಜನ ನೋಡ್ತಾರೆ ಇದನ್ನ. ಹುಚ್ಚ ವೆಂಕಟ್ ಕಾಲಿಗೆ ಬಿದ್ದರೂ ಒಂದು ಗ್ಲಾಸ್ ಟೀ ಕೊಡಲಿಲ್ಲ'' ಅಂತ ಹುಚ್ಚ ವೆಂಕಟ್ ಕಾಮೆಂಟ್ ಮಾಡಿದರು.

ಪ್ರಥಮ್ ಗೆ ಕಿಂಡಲ್

''ಏನೋ ಹಿಂಗೆ ಕಟ್ಟಿಂಗ್ ಮಾಡ್ಕೊಂಡಿದ್ದೀಯಾ. ನಮ್ಮ ಮನೆ ಮುಂದೆ ನಾಯಿ ಇದೆ. ಅದ್ಹೆಂಗ್ ಕಟ್ ಮಾಡಿದೆ ಗೊತ್ತಾ? ಅದು ನಿನಗಿಂತ ಚೆನ್ನಾಗಿ ಮಾಡಿದೆ'' ಅಂತ ಪ್ರಥಮ್ ಹೇರ್ ಸ್ಟೈಲ್ ಬಗ್ಗೆ ಕೂಡ ಹುಚ್ಚ ವೆಂಕಟ್ ಕಾಮೆಂಟ್ ಮಾಡಿದರು.

ಕೂರ್ಗಿ ಲವ್ ಸ್ಟೋರಿ

''ನಾನೂ ಕೂರ್ಗಿ ಹುಡುಗಿಯನ್ನ ಲವ್ ಮಾಡಿದ್ದೆ. ಪ್ರೀತ್ಸೋದ್ ತಪ್ಪಲ್ಲ ಕಣೋ.. ನಾನು ಪ್ರೀತ್ಸಿದ್ದೀನಿ'' ಅಂತ ಭುವನ್ ಪೊನ್ನಣ್ಣ ಬಳಿ ಹೇಳ್ತಿದ್ರು.

ನಿರಂಜನ್ ಜೊತೆ ಹುಚ್ಚ ವೆಂಕಟ್

''ಮೀಸೆ ಇದ್ದರೂ ಚೆನ್ನಾಗಿ ಕಾಣಿಸ್ತೀಯಾ, ಮೀಸೆ ಇಲ್ಲದೇ ಇದ್ದರೂ ಚೆನ್ನಾಗಿ ಕಾಣಿಸ್ತೀಯಾ'' ಅಂತ ನಿರಂಜನ್ ಗೆ ಹುಚ್ಚ ವೆಂಕಟ್ ಹೇಳಿದರು.

ಸಂಜನಾಗೂ ಪಾಠ

''ಬಟ್ಟೆ ಈ ತರಹ ಹಾಕೊಳ್ಬಾರ್ದು. ಮಕ್ಕಳು ಎಷ್ಟು ಜನ ಹಾಳಾಗುತ್ತಾರೆ? ಬಟ್ಟೆ ಹೋಗಿ ಚೇಂಜ್ ಮಾಡಿಕೊಂಡು ಬಾ'' ಅಂತ ಸಂಜನಾಗೆ ಹುಚ್ಚ ವೆಂಕಟ್ ಹೇಳಿದರು.

ಡೆವಿಲ್ ಶೀತಲ್

''ಡೆವಿಲ್ ಈಸ್ ಬ್ಯಾಕ್. ತಾವು ಡೆವಿಲ್? ನನಗೆ ಇಷ್ಟು ದಿನ ಗೊತ್ತಿರ್ಲಿಲ್ಲ. ಆದರೆ ನಿಜ ಒಪ್ಪಿಕೊಂಡುಬಿಟ್ರಲ್ಲಾ, ಸೂಪರ್'' ಅಂತ ಶೀತಲ್ ಶೆಟ್ಟಿ ಕಾಲೆಳೆಯುತ್ತಿದ್ದರು ಹುಚ್ಚ ವೆಂಕಟ್

ಆಮೇಲೆ ಪ್ರಥಮ್ ಎಪಿಸೋಡ್

ಇಷ್ಟೆಲ್ಲಾ ಆದ ಮೇಲೆ ಪ್ರಥಮ್ ಪಕ್ಕ ಬಂದು ಕೂತ ಹುಚ್ಚ ವೆಂಕಟ್ 'ಪಂಚ್' ಕೊಟ್ಟು ಹೊರನಡೆದರು. ಹೆಚ್ಚಿನ ಮಾಹಿತಿ ಇಲ್ಲಿದೆ.... [ಅಷ್ಟಕ್ಕೂ, ಸಡನ್ನಾಗಿ ಹುಚ್ಚ ವೆಂಕಟ್ ಗೆ ಪಿತ್ತ ನೆತ್ತಿಗೇರಿದ್ದು ಯಾಕೆ.?]

English summary
Bigg Boss Kannada 4, Week 6 : Day 37 - Youtube Star Huccha Venkat made guest entry and assaulted Kannada Director Huccha Venkat. Here is the detailed report on Huccha Venkat's 45 minutes stay in the house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada