»   » 'ಒನ್‌ ಇಂಡಿಯಾ' FB Poll ಪ್ರಕಾರ 'ಬಿಗ್‌ ಬಾಸ್ ಕನ್ನಡ-4' ವಿನ್ನರ್ ಇವರೇ!

'ಒನ್‌ ಇಂಡಿಯಾ' FB Poll ಪ್ರಕಾರ 'ಬಿಗ್‌ ಬಾಸ್ ಕನ್ನಡ-4' ವಿನ್ನರ್ ಇವರೇ!

By: ಒನ್ ಇಂಡಿಯಾ ಪ್ರತಿನಿಧಿ
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ವಿನ್ನರ್ ಯಾರಾಗಬೇಕು ? ಎಂದು 'ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ನಲ್ಲಿ ಆಯೋಜಿಸಿದ್ದ ಲೈವ್ ವೋಟಿಂಗ್ ಪೋಲ್ ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಫಲಿತಾಂಶ ಪ್ರಕಟ ಮಾಡುವ ಸಮಯ ಬಂದಿದೆ.

ನಿನ್ನೆ (ಜನವರಿ 27) 'ಒನ್ ಇಂಡಿಯಾ/ಫಿಲ್ಮ್ ಬೀಟ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ನಡೆಸಿದ್ದ ಪೋಲ್ ನಲ್ಲಿ ಕೆಲವು ತಾಂತ್ರಿಕ ದೋಷ ಕಂಡುಬಂದಿದ್ದು, ಅದಕ್ಕೆ ಸ್ಪಷ್ಟನೆ ಕೂಡ ನೀಡಲಾಗಿದೆ. ಇದೀಗ, ನಿನ್ನೆ ನಡೆದ ಪೋಲ್ ನ ಸಂಪೂರ್ಣ ಅಂಕಿ ಅಂಶಗಳನ್ನ ನಿಮ್ಮ ಮುಂದೆ ಇಡಲಿದ್ದೇವೆ. ಅದರ ಜೊತೆಗೆ ಇಂದು ನಡೆಸಿದ ಪೋಲ್ ನ ಅನ್ವಯ ಅಂತಿಮ ಫಲಿತಾಂಶ ಪ್ರಕಟ ಮಾಡಲಿದ್ದೇವೆ.[#BBK4 FB POLL : ಗೊಂದಲಕ್ಕೆ ನಮ್ಮ ಸ್ಪಷ್ಟನೆ]

'ಬಿಗ್ ಬಾಸ್' ಫಿನಾಲೆಗೆ ಹೆಜ್ಜೆ ಇಟ್ಟಿರುವ ಮೋಹನ್, ಮಾಳವಿಕಾ, ಪ್ರಥಮ್, ರೇಖಾ ಮತ್ತು ಕೀರ್ತಿ ಅವರ ಮಧ್ಯೆ ನಿನ್ನೆ (ಜನವರಿ 27) ಚುನಾವಣೆ ನಡೆಸಲಾಗಿತ್ತು. ಇವರ ಪೈಕಿ ಅತಿ ಹೆಚ್ಚು ಮತ ಸಿಕ್ಕಿದ್ದು ಒಬ್ಬರಿಗೆ.! ಮುಂದೆ ಓದಿ...

22 ಲಕ್ಷ ಜನರಿಗೆ ರೀಚ್ ಆಗಿದೆ.!

ನಿನ್ನೆ ನಡೆದ FB POLL ಬರೋಬ್ಬರಿ 22 ಲಕ್ಷ (22,21,717) ಜನರಿಗೆ ರೀಚ್ ಆಗಿದೆ.! ತಾಂತ್ರಿಕ ದೋಷದಿಂದ ಒಟ್ಟು ಅಂಕಿ ಅಂಶಗಳು ಹೋಮ್ ಪೇಜ್ ನಲ್ಲಿ ಕಾಣಿಸಿಲ್ಲ. ಆದ್ರೆ, ಒಟ್ಟು 20,50,054 ಮತಗಳು ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಪೇಸ್ ಬುಕ್ ಪೋಲ್ ಗೆ ಚಲಾವಣೆ ಆಗಿದೆ. [ಇವರೆಲ್ಲ 'ಬಿಗ್ ಬಾಸ್' ಯಾಕೆ ಗೆಲ್ಲಬೇಕು.? ಅರ್ಹತೆ ಏನಿದೆ.?]

ಯಾರಿಗೆ ಎಷ್ಟು ಮತ?

ಒಟ್ಟು ಮತಗಳಲ್ಲಿ ಯಾರಿಗೆ ಎಷ್ಟು ಮತಗಳು ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಕೀರ್ತಿ: 6,01,742
ರೇಖಾ: 2,52,907
ಪ್ರಥಮ್: 9,86,018
ಮೋಹನ್: 30,107
ಮಾಳವಿಕಾ: 5,890

'ಪ್ರಥಮ್'ಗೆ ಹೆಚ್ಚು ಮತ!

ನಿನ್ನೆ ಅಯೋಜಿಸಿದ್ದ FB POLLನಲ್ಲಿ ಕೀರ್ತಿ ಅವರು ಹೆಚ್ಚು ಮತ ಪಡೆದಿದ್ದಾರೆ ಎಂಬ ಗೊಂದಲ ಉಂಟಾಗಿತ್ತು. ಆದ್ರೆ, ಪೋಲ್ ಸಾಫ್ಟ್ ವೇರ್ ನಲ್ಲಿ ಕೆಲವು ತಾಂತ್ರಿಕ ದೋಷ ಕಂಡು ಬಂದ ಕಾರಣ, ಸಂಪೂರ್ಣ ಅಂಕಿ ಅಂಶಗಳು ಸಿಕ್ಕಿರಲಿಲ್ಲ. ಇದೀಗ, ಪೂರ್ತಿ ಸಿಕ್ಕಿದ್ದು ಕೀರ್ತಿ ಅವರಿಗಿಂತ ಪ್ರಥಮ್ ಹೆಚ್ಚು ಮತ ಪಡೆದುಕೊಂಡಿದ್ದಾರೆ.['ಬಿಗ್ ಬಾಸ್' ಗೆಲ್ಲುವ ಅರ್ಹತೆ ಯಾರಿಗಿದೆ.? ಓದುಗರೇ.. ನೀವೇ ಮತ ಹಾಕಿ, ಗೆಲ್ಲಿಸಿ..!]

ಎರಡನೇ ಹಂತದ FB POLL!

ನಿನ್ನೆ ಐದು ಜನರ ಪೈಕಿ FB POLL ಅಯೋಜಿಸಲಾಗಿತ್ತು. ಅದರಲ್ಲಿ ಹೆಚ್ಚು ಮತ ಪಡೆದ ಮೂವರನ್ನ ಆಯ್ಕೆ ಮಾಡಿ, ಇಂದು ಪುನಃ ಎರಡನೇ ಹಂತದಲ್ಲಿ FB POLL ಹಮ್ಮಿಕೊಳ್ಳಲಾಗಿತ್ತು.

ಪ್ರಥಮ್, ಕೀರ್ತಿ, ರೇಖಾ ಮಧ್ಯೆ FB POLL!

ನಿನ್ನೆ ಅತಿ ಹೆಚ್ಚು ಮತ ಪಡೆದ ಪ್ರಥಮ್, ಕೀರ್ತಿ, ರೇಖಾ ಮಧ್ಯೆ ಇಂದು (ಜನವರಿ 28) ಎರಡನೇ ಹಂತದ FB POLL ಅಯೋಜಿಸಲಾಗಿತ್ತು. ಸುಮಾರು 2 ಗಂಟೆಗಳ ಕಾಲ ಇಂದು ವೋಟ್ ಮಾಡಲು ಕಾಲಾವಕಾಶ ನೀಡಲಾಗಿತ್ತು.

ಒಟ್ಟು 2 ಲಕ್ಷ ಜನರಿಗೆ ರೀಚ್ ಆಯ್ತು.!

ಪ್ರಥಮ್, ಕೀರ್ತಿ, ರೇಖಾ ಈ ಮೂವರ ಪೈಕಿ 'ಬಿಗ್ ಬಾಸ್' ಯಾರು ಗೆಲ್ಲಬೇಕು ಎಂಬ ಲೈವ್ FB POLL 2 ಲಕ್ಷ (2,00,753) ಜನರಿಗೆ ರೀಚ್ ಆಗಿದೆ.

ಈ ಮೂವರಲ್ಲಿ ಗೆದ್ದಿದ್ದು ಯಾರು?

ಈ ಮೂವರಲ್ಲಿ ಯಾರು ಯಾರಿಗೆ ಎಷ್ಟು ಮತ ಸಿಕ್ಕಿದೆ ಎಂಬ ವಿವರ ಇಲ್ಲಿದೆ ನೋಡಿ.

ಪ್ರಥಮ್: 43,484
ಕೀರ್ತಿ: 20,682
ರೇಖಾ; 13,667

ನಮ್ಮ FB POLL ಪ್ರಕಾರ 'ಬಿಗ್ ಬಾಸ್' ವಿನ್ನರ್?

ಇಲ್ಲಿಯವರೆಗೂ ಎರಡು ಹಂತದಲ್ಲಿ FB POLL ಅಯೋಜನೆ ಮಾಡಿದ್ದು, ಅಂತಿಮ ಅಂಕಿ ಅಂಶಗಳ ಪ್ರಕಾರ, ಅತಿ ಹೆಚ್ಚು ಮತ ಪಡೆದವರು ಒನ್ ಅಂಡ್ ಒನ್ಲಿ 'ಒಳ್ಳೆ ಹುಡುಗ' ಪ್ರಥಮ್.! ಇದು 'ಒನ್ ಇಂಡಿಯಾ/ಫಿಲ್ಮ್ ಬೀಟ್ ಕನ್ನಡ' FB POLL ನಲ್ಲಿ ಹೊರಬಿದ್ದ ಅಂತಿಮ ಫಲಿತಾಂಶ.

'ಬಿಗ್ ಬಾಸ್ ಕನ್ನಡ 4' ವಿನ್ನರ್ ಯಾರು?

'ಒನ್ ಇಂಡಿಯಾ/ಫಿಲ್ಮ್ ಬೀಟ್ ಕನ್ನಡ' ಅಯೋಜಿಸಿದ ಪೂರ್ವ ಸಮೀಕ್ಷೆ ಪ್ರಕಾರ, 'ಬಿಗ್ ಬಾಸ್ ಕನ್ನಡ-4' ವಿನ್ನರ್ 'ಒಳ್ಳೆ ಹುಡುಗ' ಪ್ರಥಮ್. ಆದ್ರೆ, ಇಂದು ಮತ್ತು ನಾಳೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ 4' ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದೆ. ಪ್ರಥಮ್, ಮಾಳವಿಕಾ, ಕೀರ್ತಿ, ರೇಖಾ ಹಾಗೂ ಮೋಹನ್... ಐವರಲ್ಲಿ ನಿಜವಾದ 'ಬಿಗ್ ಬಾಸ್' ವಿನ್ನರ್ ಯಾರಾಗಬಹುದು ಎಂದು ತಿಳಿದುಕೊಳ್ಳಲು ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿ ನೋಡಿ..

English summary
Bigg Boss Kannada 4 Facebook Poll from Oneindia Kannada/ Filmibeat Kannada team. Here is the Final Resulte of FB POLL.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada