For Quick Alerts
  ALLOW NOTIFICATIONS  
  For Daily Alerts

  ಪ್ರಥಮ್ ಇಮ್ಯೂನಿಟಿ ಪಡೆಯಲು 'ಬಿಗ್ ಬಾಸ್' ನೀಡಿದ ವಿಚಿತ್ರ ಸವಾಲು

  By Harshitha
  |

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಎಂಟನೇ ವಾರ 'ದಂಡನಾಯಕ'ನಾಗಿ 'ಒಳ್ಳೆ ಹುಡುಗ' ಪ್ರಥಮ್ ಅಧಿಕಾರ ವಹಿಸಿಕೊಂಡ ನಂತರ ಎಲ್ಲರ ಎತ್ತರ ಮತ್ತು ತೂಕ ಚೆಕ್ ಮಾಡಲಾಗಿತ್ತು. ಅದರ ಹಿಂದಿನ ಮರ್ಮ ಈಗ ಬಹಿರಂಗವಾಗಿದೆ.

  ಸತತ ಎಂಟನೇ ಬಾರಿ ಡೇಂಜರ್ ಝೋನ್ ನಲ್ಲಿ ಇರುವ ಪ್ರಥಮ್ ಮುಂದಿನ ವಾರ ಇಮ್ಯೂನಿಟಿ ಪಡೆಯಬೇಕು ಅಂದ್ರೆ 'ಬಿಗ್ ಬಾಸ್' ನೀಡುವ ಎಲ್ಲಾ ಸವಾಲುಗಳನ್ನು ಪ್ರಥಮ್ ಯಶಸ್ವಿಯಾಗಿ ಮುಗಿಸಬೇಕು. ಅದರ ಅನ್ವಯ 'ಬಿಗ್ ಬಾಸ್' ನಿನ್ನೆ ಮೊದಲ ಸವಾಲನ್ನು ನೀಡಿದರು.

  ಸವಾಲು ಏನು?

  ಸವಾಲು ಏನು?

  ನ್ಯಾಯಪಾಲಕಿ ಹಾಗೂ ಕಮಾಂಡೋಗಳನ್ನ ಹೊರತು ಪಡಿಸಿ ಮನೆ ಸದಸ್ಯರ ಒಟ್ಟು ತೂಕ 385.8 ಕೆಜಿ ಇದೆ. ಮೂರು ದಿನಗಳಲ್ಲಿ ಮನೆ ಸದಸ್ಯರ ಒಟ್ಟು ತೂಕ 383.2 ಕೆಜಿಗಳಿಗೆ ಇಳಿಸುವ ಜವಾಬ್ದಾರಿ ಈಗ ಪ್ರಥಮ್ ಹೆಗಲ ಮೇಲಿದೆ. ['ದಂಡನಾಯಕ' ಪ್ರಥಮ್: ಈ ವಾರ ಪೂರಾ 'ದಂಡಂ ದಶಗುಣಂ']

  ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ.!

  ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ.!

  'ಬಿಗ್ ಬಾಸ್' ನೀಡಿರುವ 'ತೂಕ ಇಳಿಸುವ' ಸವಾಲನ್ನು ಪ್ರಥಮ್ ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ. ಅಪ್ಪಿ-ತಪ್ಪಿ ಯಾರ ಬಳಿ ಆದರೂ ಬಾಯಿ ಬಿಟ್ಟರೆ, ಇಮ್ಯೂನಿಟಿ ಕಥೆ ಮುಗಿದ ಹಾಗೆ. [ಪ್ರಥಮ್ ಈಗ 'ಸರ್ವಾಧಿಕಾರಿ': 'ಬಿಗ್ ಬಾಸ್' ಮನೆ ಸದಸ್ಯರಿಗೆ ಉರಿ ಉರಿ]

  ತಿಂಡಿ-ಊಟಕ್ಕೆ 'ಆರ್ಡರ್ ಪಾಸ್' ಮಾಡಿದ 'ಲಾರ್ಡ್'

  ತಿಂಡಿ-ಊಟಕ್ಕೆ 'ಆರ್ಡರ್ ಪಾಸ್' ಮಾಡಿದ 'ಲಾರ್ಡ್'

  10 ಜನರ ಬದಲು 5 ಜನಕ್ಕೆ ಆಗುವಷ್ಟು ಮಾತ್ರ ಉಪ್ಪಿಟ್ಟು ತಯಾರು ಮಾಡುವಂತೆ ಅಡುಗೆ ಡಿಪಾರ್ಟ್ಮೆಂಟ್ ರವರಿಗೆ 'ಲಾರ್ಡ್ ಪ್ರಥಮ್ ಸರ್' ಆಜ್ಞೆ ಮಾಡಿದರು. ಅಲ್ಲಿಗೆ, ಹೊಟ್ಟೆ ಭರ್ತಿ ಆಗುವಷ್ಟು ಯಾರೂ ತಿಂಡಿ ತಿನ್ನೋಕೆ ಆಗಲಿಲ್ಲ. [ಪ್ರಥಮ್ ಗೆ 'ಸರ್ವಾಧಿಕಾರ': 'ಬಿಗ್ ಬಾಸ್'ನ ಹೊಗಳಿ ಅಟ್ಟಕ್ಕೆ ಏರಿಸಿದ ವೀಕ್ಷಕರು.!]

  ಬೆಂಡೆತ್ತಿ ಬ್ರೇಕ್ ಹಾಕ್ಬಿಟ್ರು.!

  ಬೆಂಡೆತ್ತಿ ಬ್ರೇಕ್ ಹಾಕ್ಬಿಟ್ರು.!

  ಸೇನೆಗೆ ಸೇರಿಸಿಕೊಳ್ಳಲು ದೈಹಿಕ ಸಾಮರ್ಥ್ಯ ಪರೀಕ್ಷೆ ಮಾಡುವ ನೆಪದಲ್ಲಿ ಎಲ್ಲಾ ಸದಸ್ಯರಿಗೂ 'ಲಾರ್ಡ್ ಪ್ರಥಮ್ ಸರ್' ಬೆಂಡೆತ್ತಿ ಬ್ರೇಕ್ ಹಾಕಿದರು.

  ಕಿಲೋಮೀಟರ್ ಗಟ್ಟಲೆ ನಡೆಸಿದರು.!

  ಕಿಲೋಮೀಟರ್ ಗಟ್ಟಲೆ ನಡೆಸಿದರು.!

  ಸಾಲದು ಅಂತ ಕೆಲವರನ್ನ ಥ್ರೆಡ್ ಮಿಲ್ ಮೇಲೆ ಕಿಲೋಮೀಟರ್ ಗಟ್ಟಲೆ ನಡೆಯುವಂತೆ 'ಲಾರ್ಡ್ ಪ್ರಥಮ್ ಸರ್' ಆದೇಶ ಹೊರಡಿಸಿದರು.

  ರಾತ್ರಿ ಊಟಕ್ಕೂ ಕತ್ರಿ.!

  ರಾತ್ರಿ ಊಟಕ್ಕೂ ಕತ್ರಿ.!

  ಇಲ್ಲಿಯವರೆಗೂ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದವರು ಈಗ 'ಲಾರ್ಡ್ ಪ್ರಥಮ್ ಸರ್' ಆಳ್ವಿಕೆಯಲ್ಲಿ ಒಂದು ಚಪಾತಿ ಮಾತ್ರ ಸೇವಿಸಿ ಮಲಗುವಂತಾಯ್ತು.

  ಮೊಟ್ಟೆ ಕೂಡ ಇಲ್ಲ.!

  ಮೊಟ್ಟೆ ಕೂಡ ಇಲ್ಲ.!

  ''20 ಗಂಟೆ ಚಳಿಯಲ್ಲಿ ಊಟ ಬಿಟ್ಟು ಇರುವವರಿಗೆ ಹೋಲಿಸಿದರೆ ಎರಡು ದಿನ ಮೊಟ್ಟೆ ಇಲ್ಲದೆ ಎಲ್ಲರೂ ತಡೆದುಕೊಳ್ಳಬಹುದು. ಗುರುವಾರದ ವರೆಗೆ ಯಾರಿಗೂ ಮೊಟ್ಟೆ ಇಲ್ಲ'' ಎಂಬ ಆರ್ಡರ್ ಕೂಡ ಪಾಸ್ ಆಗಿದೆ. ಟಾಸ್ಕ್ ಮುಗಿಯುವವರೆಗೆ ಯಾರ್ಯಾರ ತೂಕ ಇಳಿದಿರುತ್ತದೋ.. 'ಬಿಗ್ ಬಾಸ್' ಬಲ್ಲ.!

  English summary
  Bigg Boss Kannada 4, Week 8 : 'Dictator' Pratham received first challenge for his immunity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X