»   » 'ಬಿಗ್ ಬಾಸ್' ಮನೆಯಲ್ಲಿ ದೆವ್ವ: ಬೆಚ್ಚಿಬಿದ್ದ ಕಾರುಣ್ಯ.! ಹೊಸ ಗಿಮಿಕ್ ಶುರು.?

'ಬಿಗ್ ಬಾಸ್' ಮನೆಯಲ್ಲಿ ದೆವ್ವ: ಬೆಚ್ಚಿಬಿದ್ದ ಕಾರುಣ್ಯ.! ಹೊಸ ಗಿಮಿಕ್ ಶುರು.?

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ದೆವ್ವ....ನಿನ್ನೆ (ಭಾನುವಾರ, ನವೆಂಬರ್ 6) ಬೆಳಗ್ಗೆಯಿಂದ ಕನ್ನಡದ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಸೆನ್ಸೇಷನಲ್ ಆಗಿರುವ ಸುದ್ದಿ ಅಂದ್ರೆ ಇದೇ.!

ಹೌದು, ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಇರುವ ಕನ್ನಡದ 'ಬಿಗ್ ಬಾಸ್' ಮನೆಯಲ್ಲಿ ಅಗೋಚರ ಶಕ್ತಿಯೊಂದರ ದರ್ಶನವಾಗಿದ್ಯಂತೆ. 'ದೆವ್ವ' ಕಂಡ ನಟಿ ಕಾರುಣ್ಯ ರಾಮ್ ಮತ್ತು ಸಂಜನಾ ಬೆಚ್ಚಿಬಿದ್ದಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಒಂದು ವಿಡಿಯೋ ಕೂಡ ಬಿಡುಗಡೆ ಆಗಿದೆ.

'ಬಿಗ್ ಬಾಸ್' ಮನೆಯ ಬಾತ್ ರೂಮ್ ನಲ್ಲಿ ದೆವ್ವ.?!

ಸದಾ ಕನ್ನಡಿ ಮುಂದೆಯೇ ಇರುವ ನಟಿ ಕಾರುಣ್ಯ ರಾಮ್ ಹಾಗೂ ನಟಿ ಸಂಜನಾ ರವರಿಗೆ ಬಾತ್ ರೂಮ್ ನಲ್ಲಿ ಅದೇ ಕನ್ನಡಿಯಲ್ಲಿ 'ದೆವ್ವ'ದ ದರ್ಶನವಾಗಿದ್ಯಂತೆ. [BBK4: ಯಾವ್ದು ಆಗ್ಬಾರ್ದು ಅಂದುಕೊಂಡ್ರೋ, ಈ ವಾರ ಅದೇ ಆಗ್ತಿದೆ.!]

ಚೀರಾಡಿದ ನಟಿ ಸಂಜನಾ-ಕಾರುಣ್ಯ

ಬಾತ್ ರೂಮ್ ನಲ್ಲಿರುವ ಕನ್ನಡಿಯಲ್ಲಿ ಏನನ್ನೋ ನೋಡಿ, ಬೆಚ್ಚಿಬಿದ್ದು ನಟಿ ಕಾರುಣ್ಯ ರಾಮ್ ಹಾಗೂ ನಟಿ ಸಂಜನಾ ಚೀರಾಡಿದ್ದಾರೆ. [ಇದು ನಿಜವೋ...ಸುಳ್ಳೋ...'ಬಿಗ್ ಬಾಸ್' ನೀವೇ ಹೇಳಿ, ಡೌಟ್ ಕ್ಲಿಯರ್ ಮಾಡಿ.!]

ಓಡಿ ಬಂದ ಇತರೆ ಸ್ಪರ್ಧಿಗಳು

ಸಂಜನಾ ಮತ್ತು ಕಾರುಣ್ಯ ಕಿರುಚಾಟ ಕೇಳಿದ ಕೂಡಲೆ ನಿರ್ದೇಶಕ ಓಂ ಪ್ರಕಾಶ್ ರಾವ್, ನಟಿ ರೇಖಾ, ಕೀರ್ತಿ, ಭುವನ್ ಸೇರಿದಂತೆ 'ಬಿಗ್ ಬಾಸ್' ಮನೆಯ ಇತರೆ ಸದಸ್ಯರು ಓಡಿ ಬಂದರು. ಆದ್ರೆ, ಅವರಿಗೆಲ್ಲ 'ದೆವ್ವ'ದ ದರ್ಶನವಾಗಲಿಲ್ಲ.

ಕಾರುಣ್ಯ ರಾಮ್ ಕೊಟ್ಟ ವಿವರಣೆ...

ವಿಚಿತ್ರ ಘಟನೆ ನಡೆದ ಬಳಿಕ ಭಯ ಭೀತರಾಗಿದ್ದ ನಟಿ ಕಾರುಣ್ಯ ರಾಮ್ ಕೊಟ್ಟ ವಿವರಣೆ ಹೀಗಿತ್ತು - ''ಯಾರೋ ಒಬ್ಬರು ಬ್ಲಡ್...ಮುಖ ತುಂಬಾ...ನಾನು ನಿಜವಾಗಲೂ ನೋಡ್ದೆ''

ಆಂಜಿನೇಯನ ಮೇಲೆ ಆಣೆ ಮಾಡಿದ ಕಾರುಣ್ಯ ರಾಮ್

'ಆಂಜಿನೇಯನ ಮೇಲೆ ಆಣೆ. ನಾನು ನಿಜವಾಗಲೂ ನೋಡ್ದೆ' ಅಂತ ನಟಿ ಕಾರುಣ್ಯ ರಾಮ್ ಹೇಳಿರುವ ಮಾತು 'ಬಿಗ್ ಬಾಸ್' ಮನೆ ಸದಸ್ಯರಲ್ಲಿ ಆತಂಕ ಮೂಡಿಸಿದೆ.

ಇದನ್ನ ನಂಬಬಹುದೇ.?

ದೆವ್ವ ಅಥವಾ ಅತೃಪ್ತ ಆತ್ಮದ ಅಸ್ತಿತ್ವದ ಕುರಿತು ಅನೇಕ ವಾದಗಳಿವೆ. ದೆವ್ವ ಇದೆಯೋ, ಇಲ್ವೋ ಎಂಬ ಚರ್ಚೆ ಈಗ ಬೇಡ. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಅಗೋಚರ ಶಕ್ತಿ ಇದೆಯಾ.? ಇದನ್ನ ನಂಬಬಹುದೇ.? ಎಂಬ ಬಿಸಿಬಿಸಿ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ಎಲ್ಲಾ ಟಿ.ಆರ್.ಪಿ ಗಾಗಿ.!

'ಬಿಗ್ ಬಾಸ್' ಮನೆಯಲ್ಲಿ ನಡೆದಿರುವ ಈ ವಿಚಿತ್ರ ಘಟನೆ ಜಸ್ಟ್ ಫಾರ್ ಟಿ.ಆರ್.ಪಿ ಎನ್ನುತ್ತಿದ್ದಾರೆ ಕೆಲವರು. ಅದಕ್ಕೆ ಕಾರಣ ಏನು ಗೊತ್ತಾ.?

ಕಾರಣ ಸಂಜನಾ.?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಿಡಿಯೋನ ಸೂಕ್ಷವಾಗಿ ಗಮನಿಸಿದರೆ, ಘಟನೆ ನಡೆಯುವ ಮೊದಲೇ ವಾಶ್ ಬೇಸಿನ್ ಮುಟ್ಟಲು ಸಂಜನಾ ಹಿಂದು ಮುಂದು ನೋಡುತ್ತಾರೆ. ಹಾಗೆ, ಘಟನೆ ಬಗ್ಗೆ ಕಾರುಣ್ಯ ರಾಮ್ ವಿವರಣೆ ನೀಡುವಾಗ ಹಿಂದೆ ನಿಂತು ನಗುವ ಸಂಜನಾ ಮುಖ ಕ್ಯಾಮರಾ ಕಂಗಳಲ್ಲಿ ಸೆರೆಯಾಗಿದೆ. ಇದನ್ನ ನೋಡಿರುವ ಕೆಲವರು 'ಇದೆಲ್ಲಾ ಟಿ.ಆರ್.ಪಿಗಾಗಿ' ಅಂತ ಸಾಮಾಜಿಕ ಜಾಲತಾಣಗಳಲ್ಲಿ 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿಯೇ ಕಾಮೆಂಟ್ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಮೂವ್ ಮೆಂಟ್ ಇದೆ.!

ಯಾರು ಏನೇ ಕಾಮೆಂಟ್ ಮಾಡಿದರೂ, ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕನ್ನಡಿಯಲ್ಲಿ 'ಏನೋ ಮೂವ್ ಮೆಂಟ್' ಆದ ಹಾಗೆ ಕಾಣಿಸಿಕೊಳ್ಳುವುದು ಮಾತ್ರ ಪಕ್ಕಾ.

ಮೊದಲು ಎಲ್ಲರೂ ಆಟವಾಡಿದ್ದರು.!

ಇದೇ ಬಾತ್ ರೂಮ್ ನಲ್ಲಿ 'ಗೆಜ್ಜೆ ಶಬ್ಧ' ಮಾಡಿ ಈ ಹಿಂದೆ (ಮೊದಲ ವಾರ) ನಟಿ ಕಾರುಣ್ಯ ರಾಮ್ ಮತ್ತು ಸಂಜನಾಗೆ 'ಬಿಗ್ ಬಾಸ್' ಮನೆಯ ಇತರೆ ಸದಸ್ಯರು ಆಟವಾಡಿಸಿದ್ದರು. ಈಗ ಈ ಘಟನೆ ನಡೆದಿದೆ. ಇದು ಮತ್ತೊಂದು ಆಟವೇ.?

ಇವತ್ತು ಸತ್ಯ ಬಯಲು.!

ಅಷ್ಟಕ್ಕೂ, ಇದೆಲ್ಲ ಗಿಮಿಕ್ಕೋ...ಇಲ್ಲ ಹೊಸ ಆಟವೋ...ಅಥವಾ 'ಬಿಗ್ ಬಾಸ್' ಮನೆಯಲ್ಲಿ ನಿಜವಾಗ್ಲೂ 'ದೆವ್ವ' ಇದೆಯೋ ಎಂಬ ಸತ್ಯ ಇವತ್ತು ರಾತ್ರಿ 9 ಗಂಟೆಗೆ ಬಯಲಾಗಲಿದೆ. ಯಾವುದಕ್ಕೂ ಇಂದಿನ 'ಬಿಗ್ ಬಾಸ್ ಕನ್ನಡ-4' ಸಂಚಿಕೆ ಮಿಸ್ ಮಾಡಬೇಡಿ.

ಒಮ್ಮೆ ವಿಡಿಯೋ ನೋಡಿ....

ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ 'ದೆವ್ವ'ದ ವಿಡಿಯೋ ಇಲ್ಲಿದೆ ನೋಡಿ...ಈ ಲಿಂಕ್ ಕ್ಲಿಕ್ ಮಾಡಿ....

ಇನ್ನೊಂದು ವಿಡಿಯೋ....

ಎಡಿಟ್ ಆಗದೇ ಇರುವ ಮತ್ತೊಂದು 'ದೆವ್ವ'ದ ವಿಡಿಯೋ ಇಲ್ಲಿದೆ. ಈ ಲಿಂಕ್ ಕ್ಲಿಕ್ ಮಾಡಿ....

English summary
Bigg Boss Kannada 4: Kannada Actress Karunya Ram and Sanjana have witnessed supernatural presence in Bigg Boss Kannada House.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada