For Quick Alerts
  ALLOW NOTIFICATIONS  
  For Daily Alerts

  ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!

  By Harshitha
  |

  'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮ ನಡೆಯುತ್ತಿರುವಾಗಲೇ ಗಾಯಕ ರವಿ ಮುರೂರು ಮೇಲೆ ಕೈ ಮಾಡಿದ್ದಕ್ಕೆ ಹುಚ್ಚ ವೆಂಕಟ್ ಮೇಲೆ ಕಿಚ್ಚ ಸುದೀಪ್ ಹೌಹಾರಿದ್ದರು. ಘಟನೆ ಕುರಿತು ಸಿಡಿಮಿಡಿಗೊಂಡಿದ್ದರು. 'ಹೆಂಗ್ ಕೈ ಎತ್ತಿದ್ರಿ ನೀವು' ಅಂತ ಹುಚ್ಚ ವೆಂಕಟ್ ಗೆ ಲೈಫ್ಟ್ ಅಂಡ್ ರೈಟ್ ಕ್ಲಾಸ್ ತೆಗೆದುಕೊಂಡಿದ್ದರು. ಕೊನೆಗೆ ರವಿ ಮುರೂರು ಕುಟುಂಬಕ್ಕೆ ತಾವೇ ಕ್ಷಮೆ ಕೂಡ ಕೇಳಿದ್ರು.

  ಇಷ್ಟೆಲ್ಲ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇರುವಾಗಲೇ, ಅದೇ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಮತ್ತೊಮ್ಮೆ ಹೋಗಿ, ಹುಚ್ಚ ವೆಂಕಟ್ ಮತ್ತೊಮ್ಮೆ ಹಲ್ಲೆ ನಡೆಸಿ, ಇಡೀ ಕಾರ್ಯಕ್ರಮಕ್ಕೆ ಕೆಟ್ಟ ಹೆಸರು ತಂದುಕೊಟ್ಟಿದ್ದಾರೆ. ['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

  ಹುಚ್ಚ ವೆಂಕಟ್ ರವರ ಈ ದುರ್ವರ್ತನೆಯನ್ನ ಕಣ್ಣಾರೆ ಕಂಡಿರುವ ಕಿಚ್ಚ ಸುದೀಪ್ ಕೆರಳಿದ್ದಾರೆ. ಹುಚ್ಚ ವೆಂಕಟ್ ವಿರುದ್ಧ ಫುಲ್ ಗರಂ ಆಗಿದ್ದಾರೆ.

  ಟ್ವಿಟ್ಟರ್ ನಲ್ಲಿ ಸುದೀಪ್ ಆಕ್ರೋಶ

  ಟ್ವಿಟ್ಟರ್ ನಲ್ಲಿ ಸುದೀಪ್ ಆಕ್ರೋಶ

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಪ್ರಥಮ್ ಮೇಲೆ ಹುಚ್ಚ ವೆಂಕಟ್ ನಡೆಸಿದ ಹಲ್ಲೆ ಕುರಿತು ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ['ಬಿಗ್ ಬಾಸ್' ಮನೆಯಿಂದ ಬಂದ 'ಬ್ಲಾಸ್ಟಿಂಗ್' ನ್ಯೂಸ್: ಇದು ನಿಜವೇ.?]

  ಸುದೀಪ್ ಮಾಡಿರುವ ಟ್ವೀಟ್ ಇದು.!

  ಸುದೀಪ್ ಮಾಡಿರುವ ಟ್ವೀಟ್ ಇದು.!

  ''ಈಗಷ್ಟೇ ಸಂಚಿಕೆ (ಎಪಿಸೋಡ್) ನೋಡಿದೆ. ಹುಚ್ಚ ವೆಂಕಟ್ ರವರ ಈ ವರ್ತನೆ ಅಕ್ಷಮ್ಯ'' ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ. [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

  ಶಿಕ್ಷೆ ಆಗಲೇಬೇಕು

  ಶಿಕ್ಷೆ ಆಗಲೇಬೇಕು

  ''ನಾನು ಈ ಶೋ ನಿರೂಪಣೆ ಮಾಡುತ್ತೇನೆ. ಒಳಗೆ ಹೋಗಿ, ಒಬ್ಬ ಸ್ಪರ್ಧಿ ಮೇಲೆ ಹಲ್ಲೆ ಮಾಡಿ ಹೊರಗೆ ಬರಬಹುದು ಅಂತ ಅವರು (ಹುಚ್ಚ ವೆಂಕಟ್) ಅಂದುಕೊಂಡರೆ, ಅದು ತಪ್ಪು. ಅವರಿಗೆ ಶಿಕ್ಷೆ ಆಗಲೇಬೇಕು'' - ಕಿಚ್ಚ ಸುದೀಪ್. ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

  ಸುದೀಪ್ ಬರೋದು ಡೌಟು.?

  ಸುದೀಪ್ ಬರೋದು ಡೌಟು.?

  ''ನ್ಯಾಯ ಸಿಕ್ಕ ಮೇಲೆ ಮಾತ್ರ 'ಬಿಗ್ ಬಾಸ್' ಶೋ ನಿರೂಪಣೆ ಮಾಡುತ್ತೇನೆ. ಇದು ನನ್ನ ಎಲ್ಲಾ ವೀಕ್ಷಕರಿಗೂ ಹಾಗೂ ಸ್ಪರ್ಧಿಗಳಿಗೂ ನಾನು ಮಾಡುತ್ತಿರುವ ಶಪಥ'' - ಕಿಚ್ಚ ಸುದೀಪ್ [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಹುಚ್ಚ ವೆಂಕಟ್ ತಪ್ಪಲ್ಲ.?

  ಹುಚ್ಚ ವೆಂಕಟ್ ತಪ್ಪಲ್ಲ.?

  ''ಅದು ಹುಚ್ಚ ವೆಂಕಟ್ ರವರ ತಪ್ಪಲ್ಲ. ಕೆಲವರು ಚೀಪ್ ಪಬ್ಲಿಸಿಟಿಗಾಗಿ ಅವರನ್ನು ಕೆರಳಿಸುತ್ತಿದ್ದಾರೆ. ಅವರಿಗೆ ಟ್ರೀಟ್ಮೆಂಟ್ ಅವಶ್ಯಕತೆ ಇದೆ'' ಅಂತ ನಾಗತಿಹಳ್ಳಿ ಚಂದ್ರಶೇಖರ್ ಟ್ವೀಟ್ ಮಾಡಿದ್ದರು.

  ಸುದೀಪ್ ಪ್ರತಿಕ್ರಿಯೆ

  ಸುದೀಪ್ ಪ್ರತಿಕ್ರಿಯೆ

  ನಾಗತಿಹಳ್ಳಿ ಚಂದ್ರಶೇಖರ್ ರವರ ಟ್ವೀಟ್ ಗೆ, ''ಈ ಮಾತು ನಿಮ್ಮಿಂದ ಬರಬಾರದಿತ್ತು. ಕೆಲವು ಪದಗಳು ಕೆಲವರನ್ನ ಕೆರಳಿಸುತ್ತದೆ ನಿಜ. ಆದ್ರೆ, ಎಲ್ಲರೂ ಹಲ್ಲೆ ನಡೆಸುವುದಿಲ್ಲ'' ಅಂತ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

  English summary
  Kannada Actor Kiccha Sudeep has taken his twitter account to react on Huccha Venkat's assault on Pratham. Check out his tweets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X