For Quick Alerts
  ALLOW NOTIFICATIONS  
  For Daily Alerts

  ದುರುದ್ದೇಶ ಇಟ್ಕೊಂಡೇ 'ಬಿಗ್ ಬಾಸ್' ಮನೆಗೆ ಹುಚ್ಚ ವೆಂಕಟ್ ಹೋಗಿದ್ದು.!

  By Harshitha
  |

  'ಬಿಗ್ ಬಾಸ್' ಮನೆಯಲ್ಲಿ ನಿನ್ನೆ ನಡೆದ ಘಟನೆ ಅಚಾನಕ್ಕಾಗಿ ಆಗಿದ್ದಲ್ಲ. ಪ್ರಥಮ್ ಪ್ರವೋಕ್ ಮಾಡಿದ್ದಕ್ಕೆ ಹುಚ್ಚ ವೆಂಕಟ್ ಹೊಡೆದಿದ್ದಲ್ಲ. 'ಪ್ರಥಮ್ ಗೆ ಬಿಸಿ ಬಿಸಿ ಕಜ್ಜಾಯ ಕೊಡಲೇಬೇಕು' ಅಂತ ಮೊದಲೇ ಪ್ಲಾನ್ ಮಾಡಿಕೊಂಡು 'ಬಿಗ್ ಬಾಸ್' ಮನೆಗೆ ಹುಚ್ಚ ವೆಂಕಟ್ ಕಾಲಿಟ್ಟಿದ್ದಾರೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಇದನ್ನ ನಾವು ಹೇಳ್ತಿಲ್ಲ ಸ್ವಾಮಿ. ಸ್ವತಃ ಹುಚ್ಚ ವೆಂಕಟ್ ಅವರೇ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಹೇಳಿಕೆ ನೀಡಿದ್ದಾರೆ.!

  ಹೋಗುವ ಮುನ್ನ ಷರತ್ತು ವಿಧಿಸಿದ್ದರು.!

  ಹೋಗುವ ಮುನ್ನ ಷರತ್ತು ವಿಧಿಸಿದ್ದರು.!

  'ಹುಚ್ಚ ವೆಂಕಟ್ ಮೊದಲೇ ದೊಡ್ಡ ಎಡವಟ್ಟು, ಒಳಗೆ ಬಿಟ್ಟರೆ ಮತ್ತೊಂದು ಅವಾಂತರ ಮಾಡುವುದು ಗ್ಯಾರೆಂಟಿ' ಅಂತ ಕಲರ್ಸ್ ಕನ್ನಡ ವಾಹಿನಿಯವರಿಗೆ ಗೊತ್ತಿತ್ತು. ಹೀಗಾಗಿ, ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಹುಚ್ಚ ವೆಂಕಟ್ ಹೋಗುವ ಮುನ್ನ ಕೆಲವು ಷರತ್ತುಗಳನ್ನು ವಿಧಿಸಿದ್ದರು. ಜೊತೆಗೆ ಯಾವುದಕ್ಕೂ ಸೇಫ್ಟಿಗೆ ಇರಲಿ ಅಂತ ಹುಚ್ಚ ವೆಂಕಟ್ ಹಿಂದೆ ಗಾರ್ಡ್ ಗಳನ್ನು 'ಬಿಗ್ ಬಾಸ್' ಕಳುಹಿಸಿಕೊಟ್ಟಿದ್ದರು. ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

  ಏನು ಆ ಷರತ್ತುಗಳು.?

  ಏನು ಆ ಷರತ್ತುಗಳು.?

  ''ಯಾರ ಮೇಲೂ ಕೈ ಎತ್ತಬಾರದು'' ಎಂಬ ಷರತ್ತನ್ನ 'ಬಿಗ್ ಬಾಸ್' ಹುಚ್ಚ ವೆಂಕಟ್ ಗೆ ವಿಧಿಸಿದ್ದರು. ಹೀಗಿದ್ದರೂ, ಪ್ರಥಮ್ ಮೇಲೆ ಹುಚ್ಚ ವೆಂಕಟ್ ಹಲ್ಲೆ ನಡೆಸಿದ್ದಾರೆ. ['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

  ಹೊರಗೆ ಬಂದ ಮೇಲೆ ಹುಚ್ಚ ವೆಂಕಟ್ ಕಾಮೆಂಟ್.!

  ಹೊರಗೆ ಬಂದ ಮೇಲೆ ಹುಚ್ಚ ವೆಂಕಟ್ ಕಾಮೆಂಟ್.!

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಹಲ್ಲೆ ನಡೆಸಿ ಬಂದ ಮೇಲೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಹುಚ್ಚ ವೆಂಕಟ್, ಇಡೀ ಘಟನೆ ಕುರಿತು ವಿವರಣೆ ನೀಡಿದರು. [ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!]

  ಹುಚ್ಚ ವೆಂಕಟ್ ಪ್ಲಾನ್ ಮಾಡಿದ್ದರು.!

  ಹುಚ್ಚ ವೆಂಕಟ್ ಪ್ಲಾನ್ ಮಾಡಿದ್ದರು.!

  ''ಮೂರು ಗಂಟೆಗಳ ಕಾಲ ಅತಿಥಿಯಾಗಿ ಭಾಗವಹಿಸಲು 'ಬಿಗ್ ಬಾಸ್' ಆಹ್ವಾನಿಸಿದ್ದರು. ಅದಕ್ಕೂ ಮೊದಲು ನನಗೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಯಾರ ಮೇಲೂ ಕೈ ಎತ್ತಬಾರದೆಂದು ಸೂಚಿಸಿದ್ದರು. ಅಲ್ಲಿ ನಾನು ಸುಳ್ಳು ಹೇಳಿದ್ದೆ. ಪ್ರಥಮ್ ಗೆ ಹೊಡೆಯಲೇಬೇಕು ಎಂಬ ಉದ್ದೇಶ ನನ್ನದಾಗಿತ್ತು'' ಎಂದು ಸುವರ್ಣ ನ್ಯೂಸ್ ವಾಹಿನಿಗೆ ಹುಚ್ಚ ವೆಂಕಟ್ ಹೇಳಿದರು.

  ಪ್ರಥಮ್ ಮೇಲೆ ಕೋಪ ಇತ್ತು

  ಪ್ರಥಮ್ ಮೇಲೆ ಕೋಪ ಇತ್ತು

  ''ಪ್ರಥಮ್ ಗೆ ಕರ್ನಾಟಕದ ಬಾವುಟ ಅಂದ್ರೆ ಏನು ಅಂತ ಗೊತ್ತಿಲ್ಲ. ಆತ ಹುಡುಗಿಯರ ಕೆಂಪು ಸ್ಕರ್ಟ್ ಧರಿಸಿ, ಹಳದಿ ಬಣ್ಣದ ಶರ್ಟ್ ಹಾಕಿ, ಅದನ್ನು ಕರ್ನಾಟಕದ ಬಾವುಟ ಎಂದಿದ್ದ. ಆತನಿಗೆ ಬಾವುಟದ ಮಹತ್ವ ಗೊತ್ತಿಲ್ಲ. ಹೀಗಾಗಿ ನನಗೆ ಆತನ ಮೇಲೆ ಕೋಪ ಇತ್ತು'' - ಹುಚ್ಚ ವೆಂಕಟ್

  ಪ್ರಥಮ್ ಆವಾಜ್ ಹಾಕಿದ

  ಪ್ರಥಮ್ ಆವಾಜ್ ಹಾಕಿದ

  ''ನನ್ನನ್ನ ನೋಡಿದರೂ ನೋಡದಂತಿರಬೇಕು ಎಂಬ ಟಾಸ್ಕ್ ನ 'ಬಿಗ್ ಬಾಸ್' ಕೊಟ್ಟಿದ್ದರು. ಈ ವೇಳೆ ನಾನು ಸಂಜನಾ ಅವರಿಗೆ ನೀನು ಇಂತಹ ಬಟ್ಟೆ ಧರಿಸಬೇಡಿ ಎಂದು ತಿಳಿಸಿದೆ. ವೀಕ್ಷಕರಿಗೆ ಕೆಟ್ಟ ಸಂದೇಶ ಹೋಗುತ್ತದೆ. ಇದೇ ವಿಚಾರವಾಗಿ ಕಾರುಣ್ಯ ಅವರಿಗೂ ಬೈದಿದ್ದೆ. ಈ ಸಂದರ್ಭದಲ್ಲಿ ನನ್ನ ಮೇಲಿನ ಕೋಪದಿಂದ ಪ್ರಥಮ್ ಮನೆಯಲ್ಲಿರುವ ಹುಡುಗಿಯರಿಗೆ ಆವಾಜ್ ಹಾಕಿದ'' - ಹುಚ್ಚ ವೆಂಕಟ್

  ಪ್ರಥಮ್ ರೇಗಿಸಿದ

  ಪ್ರಥಮ್ ರೇಗಿಸಿದ

  ''ಇನ್ನೂ ನಿರಂಜನ್ ವಿಚಾರವಾಗಿಯೂ ಅವಶ್ಯಕತೆ ಇಲ್ಲದ ಮಾತುಗಳನ್ನಾಡಿದ್ದ. ಇಷ್ಟೇ ಅಲ್ಲದೇ ಒಂದು ಹಾಡು ಹಾಡುವ ಮೂಲಕ ನನ್ನನ್ನೂ ರೇಗಿಸಿದ. ಹೀಗಾಗಿ ನಾನು ಅವನ ಮೇಲೆ ರೇಗಾಡಿ ಹೊಡೆದೆ'' - ಹುಚ್ಚ ವೆಂಕಟ್

  English summary
  YouTube Star Huccha Venkat has reacted to Suvarna News Channel after hitting Pratham in Bigg Boss Kannada 4 reality show. Read the article to know Huccha Venkat's reaction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X