For Quick Alerts
  ALLOW NOTIFICATIONS  
  For Daily Alerts

  ಪ್ರಥಮ್ ರನ್ನ ಅಂದು ಬೈಯುತ್ತಿದ್ದವರೇ, ಇಂದು ಕೊಂಡಾಡುತ್ತಿದ್ದಾರೆ !

  By Bharath Kumar
  |

  'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಅಂದರೇ ಎಲ್ಲರಿಗೂ ಕಿರಿ ಕಿರಿ. ಪ್ರಥಮ್ ಏನೇ ಮಾಡಿದರೂ ಅದನ್ನ ಮನೆಯವರು ಯಾರೂ ಸಹಿಸಿಕೊಳ್ಳಲ್ಲ. ಇದುವರೆಗೂ ಸಹಿಸಿಕೊಂಡಿಲ್ಲ.

  ಪ್ರಥಮ್ ಮುಂದೆ ಕಾಲೆಳೆದವರು, ಹಿಂದೆ ಬಾಯಿಗೆ ಬಂದ ಹಾಗೆ ಮಾತನಾಡಿಕೊಂಡಿದ್ದರು. ಚಿಕ್ಕ ಚಿಕ್ಕ ವಿಷ್ಯಗಳಿಗೆ ದೊಡ್ಡ ದೊಡ್ಡ ಗಲಾಟೆಯನ್ನೇ ಮಾಡಿದ್ದರು.[ಪ್ರಥಮ್ ಇಮ್ಯೂನಿಟಿ ಪಡೆಯಲು 'ಬಿಗ್ ಬಾಸ್' ನೀಡಿದ ವಿಚಿತ್ರ ಸವಾಲು]

  ಈ ವಿಚಾರದಲ್ಲಿ ನಿರಂಜನ್ ಹಾಗೂ ಕೀರ್ತಿ ಎಲ್ಲರಿಗಿಂತ ಒಂದು ಕೈ ಮೇಲೆ. ಪ್ರಥಮ್ ಮಾಡಿದ ಪ್ರತಿಯೊಂದು ಕೆಲಸವನ್ನ ತೆಗಳುತ್ತಾ, ಪ್ರಥಮ್ ವಿರುದ್ದ ಮಾತನಾಡುತ್ತಾ ಬಂದಿದ್ದಾರೆ. ಆದ್ರೆ, ಪ್ರಥಮ್ ಸರ್ವಾಧಿಕಾರಿ ಆಡಳಿತವನ್ನ ನೋಡಿದ್ಮೇಲೆ ನಿರಂಜನ್ ಹಾಗೂ ಕೀರ್ತಿಯ ಮನಸ್ಥಿತಿ ಬದಲಾಗಿದೆ. ಪ್ರಥಮ್ ರನ್ನ ಅಂದು ಬೈಯುತ್ತಿದ್ದ ಇವರಿಬ್ಬರೇ, ಇಂದು ಕೊಂಡಾಡುತ್ತಿದ್ದಾರೆ !

  ಪ್ರಥಮ್ ಆಡಳಿತವನ್ನ ಮೆಚ್ಚಿದ ಮನೆಯವರು

  ಪ್ರಥಮ್ ಆಡಳಿತವನ್ನ ಮೆಚ್ಚಿದ ಮನೆಯವರು

  ಪ್ರಥಮ್ ಅವರ ಸರ್ವಾಧಿಕಾರಿ ಆಡಳಿತವನ್ನ ಬಿಗ್ ಬಾಸ್ ಮನೆಯ ಸದಸ್ಯರು ಮೆಚ್ಚಿಕೊಂಡಿದ್ದಾರೆ. ಪ್ರಥಮ್ ಸ್ವಭಾವ ಏನೇ ಆಗಿದ್ರೂ, ಆಡಳಿತದ ವಿಚಾರದಲ್ಲಿ ಮಾತ್ರ ಸೂಪರ್ ಎನ್ನುತ್ತಿದ್ದಾರೆ. ಈ ವಿಚಾರವಾಗಿ ನಿರಂಜನ್, ಕೀರ್ತಿ, ಮೋಹನ್ ಹಾಗೂ ಭುವನ್ ಚರ್ಚೆ ಮಾಡಿದ್ದು ಹೀಗೆ....[ಕಮಾಂಡೋ ಶಾಲಿನಿಗೆ 'ಲಾರ್ಡ್' ಪ್ರಥಮ್ ಕೊಟ್ಟ ಕಠೋರ ಶಿಕ್ಷೆ]

  'ಡಿಕ್ಟೇಟರ್' ಪಾತ್ರಕ್ಕೆ ಪ್ರಥಮ್ ಸರಿಯಾದ ಆಯ್ಕೆ

  'ಡಿಕ್ಟೇಟರ್' ಪಾತ್ರಕ್ಕೆ ಪ್ರಥಮ್ ಸರಿಯಾದ ಆಯ್ಕೆ

  ಕೀರ್ತಿ - ನಿಜವಾಗಲೂ ಟಿಪಿಕಲ್ ಸರ್ವಾಧಿಕಾರಿಗಳು ಹೀಗೆ ಮಾಡೋದು.
  ನಿರಂಜನ್ - ಹೌದಾ?
  ಕೀರ್ತಿ - ಏನೇನೋ ತಪ್ಪುಗಳನ್ನು ಕಂಡು ಹಿಡಿಯುವುದು.
  ನಿರಂಜನ್ - ಅದಕ್ಕೆ! ಲಾರ್ಡ್ ಪ್ರಥಮ್ ಸರ್ ನ ಕರೆಕ್ಟ್ ಆಗಿ ಕೂರಿಸಿದ್ದಾರೆ.[ಪ್ರಥಮ್ ಗೆ 'ಸರ್ವಾಧಿಕಾರ': 'ಬಿಗ್ ಬಾಸ್'ನ ಹೊಗಳಿ ಅಟ್ಟಕ್ಕೆ ಏರಿಸಿದ ವೀಕ್ಷಕರು.!]

  ಪ್ರಥಮ್ ಆಡಳಿತದಂತೆ, ಬೇರೆ ಯಾರು ಮಾಡುತ್ತಿರಲಿಲ್ಲ

  ಪ್ರಥಮ್ ಆಡಳಿತದಂತೆ, ಬೇರೆ ಯಾರು ಮಾಡುತ್ತಿರಲಿಲ್ಲ

  ಕೀರ್ತಿ - ಬಟ್, ನಿಭಾಯಿಸುತ್ತಿರುವ ರೀತಿ ಮಾತ್ರ ಅಲ್ಟಿಮೇಟ್ . ಅಲ್ಟಿಮೇಟ್ ಅಗಿ ನಿಭಾಯಿಸುತ್ತಿದ್ದಾನೆ. ಬೇರೆ ಯಾರಿಗೂ ಸಾಧ್ಯ ಆಗ್ತಿರ್ಲಿಲ್ಲ ಈ ತರಹ ರೋಲ್ ಕ್ಯಾರಿ ಮಾಡೋಕೆ.
  ನಿರಂಜನ್ - ಹೌದು, ಯಾರಿಗೂ ಆಗ್ತಿರ್ಲಿಲ್ಲ.
  ಭುವನ್ - ಮಾಡಬಹುದಾಗಿತ್ತು, ಆದ್ರೆ ಸೆಂಟಿಮೆಂಟ್ ಅಡ್ಡ ಬರುತ್ತೆ
  ಕೀರ್ತಿ - ಮಾಡಬಹುದಾಗಿತ್ತು. ಆದ್ರೆ ಆಗಲ್ಲ ಕಣೋ... ಕಷ್ಟ ಇದೆ ಹಿಂಗೆಲ್ಲ[ಪ್ರಥಮ್ ಗೆ 'ಸರ್ವಾಧಿಕಾರ': 'ಬಿಗ್ ಬಾಸ್'ನ ಹೊಗಳಿ ಅಟ್ಟಕ್ಕೆ ಏರಿಸಿದ ವೀಕ್ಷಕರು.!]

  ಪ್ರಥಮ್ ಸರ್ವಾಧಿಕಾರಿ ಆಡಳಿತ ಚೆನ್ನಾಗಿದೆ

  ಪ್ರಥಮ್ ಸರ್ವಾಧಿಕಾರಿ ಆಡಳಿತ ಚೆನ್ನಾಗಿದೆ

  ನಿರಂಜನ್ - ಏನ್ ಗೊತ್ತಾ? ಅವನು ಇರೋದೇ ಹಂಗೆ
  ಕೀರ್ತಿ - ಅವನ ಕ್ಯಾರೆಕ್ಟರ್ ಹಾಗೇನೇ...
  ಭುವನ್ - ಇಲ್ಲ, ನನ್ನ ಪ್ರಕಾರ ಅವನು ತುಂಬಾ ಸಾಫ್ಟ್ ಆಗಿದ್ದಾನೆ ಅಂತ ಅನಿಸ್ತು.
  ಕೀರ್ತಿ - ಇರಬಹುದು
  ನಿರಂಜನ್ - ಬಟ್ ತುಂಬಾ ಚೆನ್ನಾಗಿ ಮಾಡುತ್ತಿದ್ದಾನೆ.[ಪ್ರಥಮ್ ಈಗ 'ಸರ್ವಾಧಿಕಾರಿ': 'ಬಿಗ್ ಬಾಸ್' ಮನೆ ಸದಸ್ಯರಿಗೆ ಉರಿ ಉರಿ]

  ಆಗಿನ ಪ್ರಥಮ್ - ಈಗಿನ ಪ್ರಥಮ್

  ಆಗಿನ ಪ್ರಥಮ್ - ಈಗಿನ ಪ್ರಥಮ್

  50 ದಿನಗಳಿಂದ ನೋಡಿದ್ದ ಪ್ರಥಮ್ ಅವರನ್ನ ಯಾರು ಒಪ್ಪಿಕೊಂಡಿರಲಿಲ್ಲ. ಆದ್ರೆ, ಈಗ ಪ್ರಥಮ್ ಆಡಳಿತವನ್ನ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಈ ವಾರ ಪೂರ್ತಿ ಪ್ರಥಮ್ ಸರ್ವಾಧಿಕಾರವಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತೆ ಅಂತ ಕಾದು ನೋಡಬೇಕಿದೆ.['ದಂಡನಾಯಕ' ಪ್ರಥಮ್: ಈ ವಾರ ಪೂರಾ 'ದಂಡಂ ದಶಗುಣಂ']

  English summary
  Bigg Boss Kannada 4, Week 8 : Keerthi and Niranjan Deshpande praised Pratham for his Dictatorship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X