»   » ಪ್ರಥಮ್ ಹಾಗೂ ಕೀರ್ತಿ ನಡುವೆ ಇದ್ದದ್ದು ಸ್ಪರ್ಧೆಯೋ.? ಜಿದ್ದೋ.?

ಪ್ರಥಮ್ ಹಾಗೂ ಕೀರ್ತಿ ನಡುವೆ ಇದ್ದದ್ದು ಸ್ಪರ್ಧೆಯೋ.? ಜಿದ್ದೋ.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಶುರುವಾದ ಮೊದಲ ದಿನದಿಂದಲೂ 'ಕಿರಿಕ್' ಕೀರ್ತಿಗೂ 'ಒಳ್ಳೆ ಹುಡುಗ' ಪ್ರಥಮ್ ಗೂ ಅಷ್ಟಕಷ್ಟೆ. ಪ್ರಥಮ್ ಜೊತೆ ಮೊದಲ ವಾರವೇ ಜಗಳ ಆಡಿಕೊಂಡ್ಮೇಲೆ ಮೈಕ್ ಬಿಸಾಕಿ 'ಹೊರಗೆ ಹೋಗ್ತೀನಿ' ಅಂದಿದ್ದು ಇದೇ ಕೀರ್ತಿ.

ಅಸಲಿಗೆ, ಇವರಿಬ್ಬರಿಗೂ ಕಿತ್ತಾಟ ಆಗ್ತಿದ್ದದ್ದು ಯಾಕೆ.? ಇಬ್ಬರ ನಡುವೆ ಸ್ಪರ್ಧೆ ಇತ್ತೋ, ಜಿದ್ದು ಇತ್ತೋ.? ಎಂಬ ಅನುಮಾನ ಅನೇಕರಿಗೆ ಕಾಡಿತ್ತು. ಅದಕ್ಕೆ ಕ್ಲಾರಿಟಿ ಕೊಡಿಸುವ ಸಲುವಾಗಿ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ಸ್ಟೇಜ್ ಮೇಲೆ ಸುದೀಪ್ ಈ ಪ್ರಶ್ನೆ ತೆಗೆದರು. ಆಗ ಇಬ್ಬರ ಬಾಯಿಂದ ಬಂದ ಮಾತುಗಳು.....

ಸುದೀಪ್ ಕೇಳಿದ ಪ್ರಶ್ನೆ ಏನು.?

''ನೀವು ಒಪ್ಪಿಕೊಳ್ತೀರೋ, ಬಿಡ್ತೀರೋ...ಪ್ರಥಮ್ ಹಾಗೂ ಕೀರ್ತಿ ನಡುವೆ ನೇರ ನೇರ ಸ್ಪರ್ಧೆ, ಮುಖಾಮುಖಿ ನಡೆಯುತ್ತಿದೆ. ಈ ಜಿದ್ದು, ಸ್ಪರ್ಧೆ ಹುಟ್ಟಿಕೊಂಡಿದ್ದು ಯಾವಾಗ್ಲಿಂದ.?'' ಅಂತ ಸುದೀಪ್ ಪ್ರಶ್ನೆ ಕೇಳಿದರು.['ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!]

ಪ್ರಥಮ್ ಕೊಟ್ಟ ಕ್ಲಾರಿಟಿ ಏನು.?

''ಸ್ಪರ್ಧೆ ಇರುವುದು ಸಹಜ. ಜಿದ್ದು ಇಲ್ಲ. ಯಾಕಂದ್ರೆ, ಅವರು ಎರಡನೇ ದಿನ ಒಂದು ಮಾತು ಹೇಳಿದ್ದರು - ''ಪ್ರಥಮ್ ನಾನು ನಿಮಗಿಂತ ಕನ್ನಡವನ್ನ ಅದ್ಭುತವಾಗಿ ಮಾತನಾಡ ಬಲ್ಲೆ'' ಅಂತ. ಕನ್ನಡವೇ ಅದ್ಭುತ ಅನ್ನೋದು ನನ್ನ ಮನಸ್ಸಿನಲ್ಲಿ ಇತ್ತು. ಇಬ್ಬರಲ್ಲೂ ಕನ್ನಡ ಪರ ಪ್ರೀತಿ ಇತ್ತು. ಜಿದ್ದು ಇಲ್ಲ'' ಅಂತ ಪ್ರಥಮ್ ಹೇಳಿದರು.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಕೀರ್ತಿ ಬಾಯಿಂದ ಬಂದ ಮಾತುಗಳೇನು.?

''ಸ್ಪರ್ಧೆ ಈ ಕ್ಷಣದ ವರೆಗೂ ಇದೆ. ಕನ್ನಡಿಗರ ಭಾವನೆಯನ್ನ ಎಲ್ಲಾದರೂ ಇವರು ಎನ್ಕ್ಯಾಚ್ ಮಾಡಿಕೊಳ್ಳುತ್ತಿದ್ದಾರಾ ಅಂತ ಮೊದಲು ಅನಿಸಿತ್ತು. ಆದ್ರೆ, ಅವರು ಆ ರೀತಿ ಅಲ್ಲ ಅಂತ ನನಗೆ ನಂತರ ಅನಿಸಿದ್ದು ನಿಜ. ಪ್ರಥಮ್ ಸಾಧನೆಯನ್ನ ನನ್ನ ಪ್ರಕಾರ ಹಿಂದೆ ಯಾರೂ ಮಾಡಿಲ್ಲ. ಮುಂದೆ ಯಾರೂ ಮಾಡಲ್ಲ. ಅವರು ಒಬ್ಬರೇ, ಅವರಿಗೆ ಅವರೇ ಸಾಟಿ'' ಎಂದರು ಕೀರ್ತಿ ಕುಮಾರ್

ಪ್ರಭಲ ಪ್ರತಿಸ್ಪರ್ಧಿ ಹೌದು.!

''ನನಗೆ ಅತ್ಯಂತ ಟಫ್ ಕಾಂಪಿಟೇಟರ್ ಪ್ರಥಮ್ ಅಂತ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆರಂಭದ ವಾರಗಳಿಂದ ಹಿಡಿದು ಕೊನೆಯ ಎರಡು ವಾರಗಳ ಹಿಂದಿನ ವರೆಗೂ ಪ್ರಥಮ್ ಬಗ್ಗೆ ಅಸಮಾಧಾನ ಇದ್ದದ್ದು ನಿಜ. ಈ ಮನೆ ಆ ಅಸಮಾಧಾನವನ್ನು ಹೋಗಲಾಡಿಸಿದೆ. ಇವತ್ತು ನಾವಿಬ್ಬರು ಅದ್ಭುತ ಗೆಳೆಯರು. ಹೊರಗಡೆಯೂ ನಾವು ಅದನ್ನು ಪ್ರೂವ್ ಮಾಡಿ ತೋರಿಸುತ್ತೇವೆ'' ಎಂದರು ಕೀರ್ತಿ.

English summary
Bigg Boss Kannada 4: 'Olle Huduga' Pratham is a tough competitor says Kirik Keerthi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada