»   » ಪ್ರಥಮ್ ಈಗ 'ಸರ್ವಾಧಿಕಾರಿ': 'ಬಿಗ್ ಬಾಸ್' ಮನೆ ಸದಸ್ಯರಿಗೆ ಉರಿ ಉರಿ

ಪ್ರಥಮ್ ಈಗ 'ಸರ್ವಾಧಿಕಾರಿ': 'ಬಿಗ್ ಬಾಸ್' ಮನೆ ಸದಸ್ಯರಿಗೆ ಉರಿ ಉರಿ

Posted By:
Subscribe to Filmibeat Kannada

ಯಾವುದು ಆಗಬಾರದು ಅಂತ 'ಬಿಗ್ ಬಾಸ್' ಮನೆಯ ಸದಸ್ಯರು ಇಷ್ಟು ದಿನ ಅವಾಯ್ಡ್ ಮಾಡಿದ್ರೋ, ಅದು ಈ ವಾರ ಆಗೇ ಹೋಯ್ತು.!

ಹೇಗಾದರೂ ಮಾಡಿ ಪ್ರಥಮ್ ನ ಔಟ್ ಮಾಡಬೇಕು ಅಂತ ಮೊದಲ ವಾರದಿಂದ್ಲೂ 'ಬಿಗ್ ಬಾಸ್' ಮನೆಯ ಕೆಲ ಸದಸ್ಯರು ಟಾರ್ಗೆಟ್ ಮಾಡುತ್ತಲೇ ಇದ್ರು. ಆದ್ರೆ, ವೀಕ್ಷಕರ ಕೃಪೆಯಿಂದ ಪ್ರಥಮ್ ಗೆ 'ಗೇಟ್ ಪಾಸ್' ಸಿಗ್ಲಿಲ್ಲ. [ಪ್ರಥಮ್ 'ಔಟ್'.. ಸುದೀಪ್ ಚಮಕ್.. ಶಾಲಿನಿ-ಕೀರ್ತಿ ಗಪ್-ಚುಪ್]

ಯಾವುದೇ ಕಾರಣಕ್ಕೂ ಪ್ರಥಮ್ ಕ್ಯಾಪ್ಟನ್ ಕೂಡ ಆಗಬಾರ್ದು ಅಂತ ಕಳೆದ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲೂ ಅವರನ್ನ ಇತರೆ ಸ್ಪರ್ಧಿಗಳು ಹೊರಗಿಟ್ಟಿದ್ದರು. ಇದನ್ನೆಲ್ಲ ಗಮನಿಸಿರುವ 'ಬಿಗ್ ಬಾಸ್' ಪ್ರಥಮ್ ಗೆ 'ಸರ್ವಾಧಿಕಾರಿ' ಆಗುವ ಸುವರ್ಣಾವಕಾಶ ನೀಡಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ 'ತುರ್ತು ಪರಿಸ್ಥಿತಿ'

ಕಳೆದ ವಾರ ಕ್ಯಾಪ್ಟೆನ್ಸಿ ಟಾಸ್ಕ್ ನಿಂದ ಪ್ರಥಮ್ ಹಾಗೂ ಮಾಳವಿಕಾ ರವರನ್ನ ಹೊರಗೆ ಇಡಲಾಗಿತ್ತು. ಇಬ್ಬರ ಬಗ್ಗೆ ಮನೆ ಸದಸ್ಯರಿಗಿರುವ ಅಭಿಪ್ರಾಯ ಬದಲಾಯಿಸಿಕೊಳ್ಳಬಹುದು ಹಾಗೂ ಮನೆಯ ವಾತಾವರಣ ಬದಲಾಗಬಹುದು ಎಂಬ ಉದ್ದೇಶದಿಂದ 'ಬಿಗ್ ಬಾಸ್' ಈ ವಾರ ಮನೆಯಲ್ಲಿ 'ತುರ್ತು ಪರಿಸ್ಥಿತಿ' ಘೋಷಣೆ ಮಾಡಿದ್ದಾರೆ. ತಮಗೆ ಇಷ್ಟವಿಲ್ಲದವರ ನಾಯಕತ್ವದಲ್ಲಿಯೇ ಇರುವ ಸವಾಲನ್ನು 'ಬಿಗ್ ಬಾಸ್' ಮನೆಯ ಸದಸ್ಯರಿಗೆ ನೀಡಿದ್ದಾರೆ. ['ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಪ್ರಥಮ್ 'ಇತಿಹಾಸ' ಪುರುಷ.!]

ಶಾಲಿನಿ ಗಲಿಬಿಲಿ

'ಎಮರ್ಜೆನ್ಸಿ' ಅಂತ 'ಬಿಗ್ ಬಾಸ್' ಘೋಷಿಸಿದ ಕೂಡಲೆ ''ಎಮೆರ್ಜೆನ್ಸಿ ಅಂದ್ರೆ ಏನಾಗುತ್ತೆ ಮನೆಯಲ್ಲಿ'' ಅಂತ ನಟಿ ಶಾಲಿನಿ ಗಲಿಬಿಲಿಗೊಂಡರು. [ಸತತ ಎಂಟನೇ ಬಾರಿ ಪುಟ್ಟೇಗೌಡ ಅಲಿಯಾಸ್ ಪ್ರಥಮ್ ಟಾರ್ಗೆಟ್.!]

ಮಾಳವಿಕಾ ಕೊಟ್ಟ ಉತ್ತರ

''ಸಿಕ್ಕಾಪಟ್ಟೆ ಡಿಸಿಪ್ಲಿನ್ ಬರುತ್ತದೆ. ಎಲ್ಲರ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ. ಪ್ರಜಾಪ್ರಭುತ್ವ ಇರಲ್ಲ'' ಅಂತ ಎಮರ್ಜೆನ್ಸಿ ಬಗ್ಗೆ ಮಾಳವಿಕಾ ಅವಿನಾಶ್ ವಿವರಿಸಿದರು.

ಪ್ರಥಮ್ ಡಿಕ್ಟೇಟರ್ ಆದ್ರೆ...

''ಪ್ರಥಮ್ ಡಿಕ್ಟೇಟರ್ ಆಗಿ ಬಂದ್ರೆ ಏನು ಮಾಡೋದು'' ಅಂತ 'ಬಿಗ್ ಬಾಸ್' ಮನೆ ಸದಸ್ಯರು ಗಾಬರಿಗೊಂಡರು. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಕೀರ್ತಿ ಪ್ರತಿಕ್ರಿಯೆ

''ಪ್ರಥಮ್ ಗೆ ಫುಲ್ ಪವರ್ ಕೊಟ್ಟು, ನಿನ್ನ ಕಳಗೆ ಇಬ್ಬರನ್ನು ತಗೋ ಅಂದ್ರೆ ಗ್ಯಾರೆಂಟಿ ನನ್ನ, ನಿನ್ನ (ನಿರಂಜನ್) ತಗೊಳ್ತಾನೆ'' ಅಂತ ಭವಿಷ್ಯ ನುಡಿಯುತ್ತಿದ್ರು.

ನಾವು ಸತ್ತ ಹಾಗೆ.!

''ಎಲ್ಲಾ ಬಿಟ್ಬುಟ್ಟು ಇವನ್ನ ಕರೆದುಬಿಟ್ಟರಲ್ಲಾ ಪಾ....ಎಲ್ಲಾ ಅವನಿಗೆ ಕೊಟ್ಟುಬಿಟ್ರೆ ನಾವು ಸತ್ವಿ...ಅವನಿಗೆ ಲಿಮಿಟ್ಸ್ ಬೇರೆ ಗೊತ್ತಿಲ್ಲ'' ಅಂತ ಮೋಹನ್ ತಲೆ ಚಚ್ಚಿಕೊಳ್ತಿದ್ರು. [BBK4: ಯಾವ್ದು ಆಗ್ಬಾರ್ದು ಅಂದುಕೊಂಡ್ರೋ, ಈ ವಾರ ಅದೇ ಆಗ್ತಿದೆ.!]

ನನಗೆ ಹಬ್ಬ.!

''ಪ್ರಥಮ್ ಡಿಕ್ಟೇಟರ್ ಆದ್ರೆ, ನನಗೆ ಹಬ್ಬ ಇರುತ್ತೆ. ಬೆಳಗ್ಗೆ ಬೇರೆ ಅವನನ್ನ ಚೆನ್ನಾಗಿ ಹಾಕೊಂಡು ರುಬ್ಬುಟ್ಟಿದ್ದೆ'' ಅಂತ ನಿರಂಜನ್ ಹೇಳ್ತಿದ್ರು. ['ದಂಡನಾಯಕ' ಪ್ರಥಮ್: ಈ ವಾರ ಪೂರಾ 'ದಂಡಂ ದಶಗುಣಂ']

ಶಾಲಿನಿಗೆ ಶಾಕ್.!

ಗಾರ್ಡನ್ ಏರಿಯಾದಲ್ಲಿ 'ಸರ್ವಾಧಿಕಾರಿ' ಪ್ರಥಮ್ ಪೋಸ್ಟರ್ ಮತ್ತು ಕಟೌಟ್ ಗಳನ್ನ ನೋಡಿ ನಟಿ ಶಾಲಿನಿ, ''ವಾಟ್ ದ... ಯು ಶುಡ್ ಸೀ ದಿಸ್'' ಅಂತ ಕೂಗಿಕೊಳ್ತಿದ್ರು..

ಅಪಹಾಸ್ಯ ಮಾಡಿದರು

'ಸರ್ವಾಧಿಕಾರಿ' ಪ್ರಥಮ್ ಕಟೌಟ್ ಮತ್ತು ಪೋಸ್ಟರ್ ಗಳನ್ನ ನೋಡಿ ಕೆಲವರು ಅಪಹಾಸ್ಯ ಮಾಡಿಕೊಂಡು ನಗ್ತಿದ್ರು.

ನಿರಂಜನ್ ಗೆ ಉರಿ.!

'ಸರ್ವಾಧಿಕಾರಿ' ಪ್ರಥಮ್ ಕಟೌಟ್ ಮತ್ತು ಪೋಸ್ಟರ್ ಗಳನ್ನ ನೋಡಿ ''ಓ ಮೈ ಗಾಡ್... ಇದುವರೆಗೂ ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಈ ತರಹ ಮೈಲೇಜ್ ಸಿಕ್ಕಿಲ್ಲ'' ಅಂತ ಹೇಳ್ತಿದ್ರು.

ಶಾಲಿನಿ ರಿಯಾಕ್ಷನ್

ಪ್ರಥಮ್ 'ದಂಡನಾಯಕ'ನ ಅವತಾರದಲ್ಲಿ ಎಂಟ್ರಿಕೊಟ್ಟ ಮೇಲೆ ಶಾಲಿನಿ ರಿಯಾಕ್ಷನ್ ಹೇಗಿತ್ತು ಅಂತ ನೀವೇ ನೋಡಿ...

ಭುವನ್ ಗೆ ಕಿಡಿ ಕಿಡಿ.!

ಅಡುಗೆ ಮನೆಯೊಳಗೆ ಪರ್ಮಿಷನ್ ಇಲ್ಲದೇ ಹೋಗಬಾರದು ಅಂತ 'ಸರ್ವಾಧಿಕಾರಿ' ಪ್ರಥಮ್ ಹೇಳಿದ್ದಕ್ಕೆ ಭುವನ್ ಸಿಡಿಮಿಡಿಗೊಂಡರು.

ಕೀರ್ತಿ ತಲೆಯಲ್ಲಿ ಪ್ಲಾನ್ ರೆಡಿ ಆಗ್ತಿದೆ

ಶಿಕ್ಷೆಗೆ ಗುರಿಯಾಗಬಹುದು ಎಂಬ ಕಾರಣಕ್ಕೆ ''ನಾವು ಇನ್ಮೇಲೆ ಪ್ರಥಮ್ ಬಗ್ಗೆ ಮಾತನಾಡಿಕೊಳ್ಳುವುದೇ ಬೇಡ'' ಅಂತ ಕೀರ್ತಿ ಕುಮಾರ್ ಪ್ಲಾನ್ ರೆಡಿ ಮಾಡ್ತಿದ್ರು.

ಝಿಂದಾಬಾದ್ ಕೂಗಲೇ ಬೇಕು.!

ಒಳಗೊಳಗೆ ಸಿಟ್ಟು ಇದ್ದರೂ, ''ನ್ಯಾಯ ಅಂದ್ರೆ ಪ್ರಥಮ್ ಸರ್, ಪ್ರಥಮ್ ಸರ್ ಅಂದ್ರೆ ನ್ಯಾಯ.. ಪ್ರಥಮ್ ಸರ್ ಗೆ ಝಿಂದಾಬಾದ್'' ಅಂತ ಪ್ರಥಮ್ ಕಟೌಟ್ ಮುಂದೆ ಮಂಡಿಯೂರಿ ಕುಳಿತು ಎಲ್ಲರೂ ಜೈಕಾರ ಹಾಕಿದರು.

English summary
Bigg Boss Kannada 4, Week 8 : Kannada Director Pratham turns 'Dictator' in 'Emergency' task given by 'Bigg Boss'. Read the article to know Contestants reaction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada