»   » 'ವೀಕ್ಷಕರ ತಲೆಮೇಲೆ ಹೊಡೆದು, ಶಟಪ್ ಅಂತೀನಿ' ಅಂತ ಶಾಲಿನಿ ಹೇಳಿದ್ಯಾಕೆ?

'ವೀಕ್ಷಕರ ತಲೆಮೇಲೆ ಹೊಡೆದು, ಶಟಪ್ ಅಂತೀನಿ' ಅಂತ ಶಾಲಿನಿ ಹೇಳಿದ್ಯಾಕೆ?

Posted By: ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಸಿಬ್ಬಂದಿ
Subscribe to Filmibeat Kannada

ನ್ಯೂಸ್ ಆಂಕರ್ ಶೀತಲ್ ಶೆಟ್ಟಿ, ನಟಿ ರೇಖಾ ಜೊತೆ ಕುಳಿತು ಹರಟೆ ಹೊಡೆಯುವಾಗ ನಟಿ ಶಾಲಿನಿ ಒಂದು ಹೇಳಿಕೆ ನೀಡಿದ್ದರು. ಅದು ಏನಪ್ಪಾ ಅಂದ್ರೆ...

''ನಾನೇನಾದರೂ ಆಚೆ ಹೋದರೆ, ಯಾರಾದರೂ ಏನಾದರೂ ಕೆಟ್ಟದಾಗಿ ಮಾತನಾಡಿದ್ರೆ, ಬಕ್ ಅಂತ ತಲೆಮೇಲೆ ಹೊಡೆದು, ಶಟ್ ಅಪ್... ನಿಮಗೇನು ಗೊತ್ತು ನಾವಿಲ್ಲಿ ಕಷ್ಟ ಪಡ್ತಿರೋದು ಅಂತೀನಿ'' ಅಂತ ಹೇಳಿದ್ದರು.

BBK4: Shalini clarifies her statement on 'Hitting Viewers'

ಸಣ್ಣ ಸಣ್ಣ ವಿಷಯಗಳನ್ನೂ ಸೂಕ್ಷವಾಗಿ ಗಮನಿಸುವ ವೀಕ್ಷಕರಿಗೆ, 'ಬಿಗ್ ಬಾಸ್' ಸ್ಪರ್ಧಿಗಳ ಕಷ್ಟ ಗೊತ್ತಾಗದೇ ಇರುತ್ತಾ? ಸ್ಪರ್ಧಿಗಳ ವ್ಯಕ್ತಿತ್ವವನ್ನು ಅಳೆದು ತೂಗಿ ವೋಟ್ ಮಾಡುವ ವೀಕ್ಷಕರ ಬಗ್ಗೆ ಶಾಲಿನಿ ಹಗುರವಾಗಿ ಮಾತನಾಡಿದ್ರಾ? ಡೌಟ್ ಯಾಕೆ... ಕ್ಲಿಯರ್ ಮಾಡಿಕೊಳ್ಳಬೇಕು ಅಂತ ಈ ವಿಚಾರದ ಕುರಿತು ಪತ್ರಕರ್ತೆ ಹರ್ಷಿತಾ ಪ್ರಶ್ನೆ ಕೇಳಿದರು.[ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]

BBK4: Shalini clarifies her statement on 'Hitting Viewers'

ಅದಕ್ಕೆ ನಟಿ ಶಾಲಿನಿ ಕೊಟ್ಟ ಉತ್ತರ - ''ಅವತ್ತು ಮನೆಯಲ್ಲಿ ದಿನಸಿ ವಿಚಾರಕ್ಕೆ ತುಂಬಾ ಚೇಂಜಸ್ ಆಗಿತ್ತು ಅನ್ಸುತ್ತೆ. ಮನೆಯಲ್ಲಿ ಎಷ್ಟು ಕಷ್ಟ ಪಡ್ತಾರೆ ಅಂತ ವೀಕ್ಷಕರಾಗಿ ಕುತ್ಕೊಂಡು ಹಿಂದಿನ ಆವೃತ್ತಿಗಳನ್ನು ನೋಡಿದಾಗ ನನಗೆ ಅರ್ಥ ಆಗಿರಲಿಲ್ಲ. ಎಲ್ಲರೂ ಆರಾಮಾಗಿ ಇದ್ದಾರೆ ಅಂತ ನಾನೇ ವೀಕ್ಷಕರಾಗಿ ಎಷ್ಟೋ ಬಾರಿ ಮಾತನಾಡಿಕೊಂಡಿದ್ದೆ. ಆದರೆ ಶೃತಿ ಅವರು ಬಂದಾಗ ಅವರ ಕಷ್ಟಗಳನ್ನೂ ಹೇಳಿದ್ರು. ಆದರೆ ನಮಗೆ ಅದು ಗೊತ್ತಾಗಿರಲಿಲ್ಲ. ಆಡಿಯನ್ಸ್ ಗೆ ಅದು ರೀಚ್ ಆಗಲ್ಲ ಅಂತ ಮನಸ್ಸಿನಲ್ಲಿ ಇಟ್ಕೊಂಡು ಈ ಮಾತು ಹೇಳಿದ್ದೆ ಅಷ್ಟೇ. ತಮಾಷೆಯಾಗಿ..''['ಬಿಗ್ ಬಾಸ್' ಮನೆಯಲ್ಲಿ ಫಿಲ್ಮಿಬೀಟ್ ಕನ್ನಡ ಪ್ರತಿನಿಧಿ ಹರ್ಷಿತಾ!]

English summary
Bigg Boss Kannada 4: Day 105, Kannada Actress Shalini clarifies her statement on 'Hitting Viewers' during the Press meet inside Bigg Boss House.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X