»   » 'ಬಿಗ್‌ ಬಾಸ್' ವೇದಿಕೆ ಮೇಲೆ 'ಕನ್ನಡ ಪ್ರೇಮ' ಮೆರೆದ ಸುದೀಪ್

'ಬಿಗ್‌ ಬಾಸ್' ವೇದಿಕೆ ಮೇಲೆ 'ಕನ್ನಡ ಪ್ರೇಮ' ಮೆರೆದ ಸುದೀಪ್

Posted By:
Subscribe to Filmibeat Kannada

'ಬಿಗ್ ಬಾಸ್ ಮನೆಯಲ್ಲಿ ಕನ್ನಡ' - ಈ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಕಳೆದ ಒಂದು ವಾರದಲ್ಲಿ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 'ಕಿರಿಕ್' ಕೀರ್ತಿ ಮತ್ತು 'ಒಳ್ಳೆ ಹುಡುಗ' ಪ್ರಥಮ್ ನಡುವೆ ದೊಡ್ಡ ಯುದ್ಧವೇ ನಡೆದು ಹೋಯ್ತು. ಈಗ ಇಬ್ಬರ ಮಧ್ಯೆ ಕದನ ವಿರಾಮ ಘೋಷಿಸಲಾಗಿದೆ.

ಆದರೆ, ಯಾವುದೇ ಸಮಯದಲ್ಲಿ ಇಬ್ಬರ ಮಧ್ಯೆ ಮತ್ತೆ ಯುದ್ಧ ಶುರು ಆಗುವ ಸಂಭವ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ 'ಕನ್ನಡ ಅಭಿಮಾನ'ದ ಕುರಿತು ಕಿಚ್ಚ ಸುದೀಪ್ ತಮ್ಮ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಮಾತಿಗಿಳಿದರು.

ಆಗ ಪ್ರಥಮ್ ಮತ್ತು ಸುದೀಪ್ ನಡುವೆ ನಡೆದ ಸಂಭಾಷಣೆ ವಿವರ ಇಲ್ಲಿದೆ ಓದಿರಿ....

ಪ್ರಥಮ್ 'ಖಂಡಿಸಿದ್ದು' ಯಾಕೆ?

''ಕೀರ್ತಿ ರವರು ನನ್ನ ಬಳಿ ಬಂದು, 'ನಾನು ನಿಮಗಿಂತ ಅದ್ಭುತವಾಗಿ ಕನ್ನಡ ಮಾತನಾಡಬಲ್ಲೆ' ಅಂದರು. ನನಗಿಂತ ಅದ್ಭುತವಾಗಿ ಕನ್ನಡ ಮಾತನಾಡುವುದು ಯಾಕೆ? ಕನ್ನಡವೇ ಅತ್ಯದ್ಭುತ, ಅತ್ಯಾಕರ್ಷಕ, ಅಮೋಘ. ಹೀಗಾಗಿ ಕನ್ನಡವನ್ನೇ ಮಾತನಾಡಲಿ, ನನಗಿಂತ ಚೆನ್ನಾಗಿ ಮಾತನಾಡುತ್ತೇನೆ ಅಂತ ಯಾಕೆ ಹೇಳ್ಬೇಕು? ಈ ಮಾತು ನನಗೆ ತೀರಾ ವೈಯುಕ್ತಿಕವಾಗಿ ಬೇಸರ ಆಯ್ತು. ಪ್ರಥಮ್ ನ ಬೇಕಾದರೆ ಖಂಡಿಸಲಿ, ಆದ್ರೆ, ಕಂಪೇರ್ ಮಾಡಿ ಮಾತನಾಡುವುದು ತೀರಾ ವೈಯುಕ್ತಿಕ, ವಿಕೃತ ಅಂತ ನನಗೆ ಅನಿಸ್ತು'' ಎಂದರು 'ಒಳ್ಳೆ ಹುಡುಗ' ಪ್ರಥಮ್. [ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಅವರಿಂದ ಮಂಗಾಟ]

'ಕನ್ನಡ ಅಭಿಮಾನ'ದ ಬಗ್ಗೆ ಸುದೀಪ್ ಮಾತು

''ಕನ್ನಡದಲ್ಲಿ ಆದಷ್ಟು ಮಾತನಾಡಲು ಪ್ರಯತ್ನ ಪಡಿ ಅಂತ ಹೇಳುವುದು ಕನ್ನಡದ ಮೇಲಿನ ಅಭಿಮಾನವನ್ನ ಎತ್ತಿ ಹಿಡಿಯಲಿ ಅಂತಲ್ಲ. ಯುದ್ಧಕ್ಕೆ ಇಳಿದ ಹಾಗೆ 'ನಾನಾ, ನೀನಾ' ಎನ್ನುವುದೇ ಕನ್ನಡ ಅಲ್ಲ'' - ಕಿಚ್ಚ ಸುದೀಪ್

ನಾನು ಕನ್ನಡಿಗ ಅಲ್ಲ ಅಂತ ಯಾರಾದರೂ ಹೇಳಲಿ, ನೋಡೋಣ!

''ಕನ್ನಡ ಮಾತನಾಡುತ್ತಾ ಮಾತನಾಡುತ್ತಾ ಮಧ್ಯದಲ್ಲಿ ನಾನೂ ಕೂಡ ಇಂಗ್ಲೀಷ್ ಬಳಸುತ್ತೇನೆ. ಯಾರಾದರೂ ಹೇಳಲಿ ನೋಡೋಣ, ''ನಾನು ಕನ್ನಡಿಗ ಅಲ್ಲ'' ಅಂತ. ಕರ್ನಾಟಕದವರೇ ಎದ್ದು ಬರ್ತಾರೆ, ಮಾತನಾಡಲು ಬೇಕಾದರೆ'' - ಕಿಚ್ಚ ಸುದೀಪ್

'ಬಿಗ್ ಬಾಸ್' ಮನೆಯಲ್ಲಿ ಕನ್ನಡ ಯಾಕೆ ಮಾತನಾಡಬೇಕು?

''ಬಿಗ್ ಬಾಸ್' ಮನೆಯಲ್ಲಿ ಆದಷ್ಟು ಕನ್ನಡ ಮಾತನಾಡಿ ಅಂತ ಯಾಕೆ ಹೇಳ್ತಾರೆ ಅಂದ್ರೆ, ''ನೀವೇನು ಮಾತನಾಡುತ್ತೀರಿ, ಅದು ಜನರಿಗೆ ಅರ್ಥ ಆಗಬೇಕು. ಇಂಗ್ಲೀಷ್ ಇಲ್ಲದೆ ಕನ್ನಡ ಮಾತನಾಡಿ ಎಂಬುದು ನಿಯಮ ಅಲ್ಲ. ಆದ್ರೆ, ನೀವು ಮಾತನಾಡುವ ಭಾಷೆ ಮೇಲೆ ನಿಮಗೆ ಬೀಳುವ ವೋಟ್ಸ್ ಅವಲಂಬಿತ ಆಗಿರುತ್ತೆ ಅನ್ನೋದನ್ನ ಮರೆಯಬೇಡಿ. ಯಾಕಂದ್ರೆ ಬರೀ ಬೆಂಗಳೂರಿನಲ್ಲಿ ಮಾತ್ರ ಜನ ಈ ಶೋ ನೋಡುತ್ತಿಲ್ಲ'' - ಕಿಚ್ಚ ಸುದೀಪ್

ಕರ್ನಾಟಕದಲ್ಲಿ ಹುಟ್ಟಿದ ಪ್ರತಿಯೊಬ್ಬ ಕೂಡ ಕನ್ನಡಿಗನೇ.!

''ಕರ್ನಾಟಕದಲ್ಲಿ ಹುಟ್ಟಿದ ಮೇಲೆ ಪ್ರತಿಯೊಬ್ಬ ಕೂಡ ಕನ್ನಡಿಗನೇ. ಇದನ್ನ ಬೇರೆಯವರಿಂದ ಕೇಳಿ ಕಲಿಯಬೇಕಾಗಿಲ್ಲ'' - ಕಿಚ್ಚ ಸುದೀಪ್

English summary
Bigg Boss Kannada 4, Week 1 : Kiccha Sudeep spoke about 'Kannada Abhimana' during 'Varada Kathe Kicchana Jothe'. Check out the conversation between Sudeep and Pratham.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada