»   »  ಭುವನ್ ಗೆ ಎಲಿಮಿನೇಷನ್ ಬಿಸಿ ಮುಟ್ಟಿಸಿದ ಕಿಚ್ಚ: ಕಣ್ಣೀರಿಟ್ಟ ಸಂಜನಾ

ಭುವನ್ ಗೆ ಎಲಿಮಿನೇಷನ್ ಬಿಸಿ ಮುಟ್ಟಿಸಿದ ಕಿಚ್ಚ: ಕಣ್ಣೀರಿಟ್ಟ ಸಂಜನಾ

Posted By:
Subscribe to Filmibeat Kannada

'ನಿರೀಕ್ಷೆ ಮಾಡದೇ ಇರೋದನ್ನ ಈ ವಾರ ನಿರೀಕ್ಷೆ ಮಾಡಿ' ಅಂತ ಕಳೆದ ವಾರ ಕಿಚ್ಚ ಸುದೀಪ್ ಹೇಳಿ ಹೋದ್ಮೇಲೆ 'ಬಿಗ್ ಬಾಸ್' ಮನೆಯಲ್ಲಿ 'No Tolerance' ಘೋಷಣೆ ಆಯ್ತು. ನಿಯಮ ಉಲ್ಲಂಘಿಸಿದಕ್ಕೆ ಸ್ಪರ್ಧಿಗಳಿಗೆ ಶಿಕ್ಷೆ ಕೂಡ ಸಿಕ್ತು. ಸಾಲದಕ್ಕೆ ಮಧ್ಯ ರಾತ್ರಿ ನಟಿ ಕಾರುಣ್ಯ ರಾಮ್ ಔಟ್ ಆದರು.['ಬಿಗ್ ಬಾಸ್' ಮನೆಯಿಂದ ಹೊರಬಿದ್ದ ನಟಿ ಸಂಜನಾ!]

ಇಷ್ಟೆಲ್ಲ ಆದ್ಮೇಲೆ ವಾರದ ಕಿಚ್ಚಿನ ಕಥೆಯನ್ನಿಟ್ಟುಕೊಂಡು ಪಂಚಾಯತಿ ನಡೆಸಲು ಸುದೀಪ್ ಎಂಟ್ರಿಕೊಟ್ಟರು. 'Expect the Unexpected' ಅಂತ ಹೇಳುತ್ತಲೇ ಡಬಲ್ ಎಲಿಮಿನೇಷನ್ ಬಗ್ಗೆ ಸುಳಿವು ನೀಡಿದರು.

'ಮಹಾನ್ ನಿರ್ದೇಶಕರು' ಮತ್ತು 'ಸಹ ನಿರ್ದೇಶಕರ' ಅಭಿಪ್ರಾಯ

'ಈ ವಾರ ಸಿಂಗಲ್ ಎಲಿಮಿನೇಷನ್ ಇದ್ಯೋ, ಡಬಲ್ ಎಲಿಮಿನೇಷನ್ ಇದ್ಯೋ' ಅಂತ 'ಬಿಗ್ ಬಾಸ್' ಮನೆಯ ಡೈರೆಕ್ಟರ್ ಕೀರ್ತಿ ಮತ್ತು ಸಹ ನಿರ್ದೇಶಕಿ ಶಾಲಿನಿಗೆ ಸುದೀಪ್ ಕೇಳಿದರು. ಇಬ್ಬರು 'ಸಿಂಗಲ್ ಎಲಿಮಿನೇಷನ್' ಎಂದರು.

ಟ್ವಿಸ್ಟ್ ಕೊಟ್ಟ ಕಿಚ್ಚ

ಡೇಂಜರ್ ಝೋನ್ ನಲ್ಲಿ ಇದ್ದ ನಟಿ ಶಾಲಿನಿ, ಪ್ರಥಮ್, ಮೋಹನ್ ಮತ್ತು ಶೀತಲ್ ಶೆಟ್ಟಿ ರವರನ್ನ ಸೇಫ್ ಮಾಡಿದ ಬಳಿಕ 'ಡಬಲ್ ಎಲಿಮಿನೇಷನ್ ಇದೆ' ಅಂತ್ಹೇಳಿ ಕಿಚ್ಚ ಸುದೀಪ್ ಹೊಸ ಟ್ವಿಸ್ಟ್ ಕೊಟ್ಟರು.

ಸುದೀಪ್ ಏನಂದರು?

''ಮಾಳವಿಕಾ, ಸಂಜನಾ, ಭುವನ್... ಈ ಮೂವರಲ್ಲಿ ಒಬ್ಬರನ್ನು ನಾನು ಸೇಫ್ ಮಾಡುತ್ತೇನೆ. ಇಬ್ಬರು ಇಲ್ಲಿಂದ ಹೊರಡಬೇಕಾಗುತ್ತದೆ'' ಅಂತ ಸುದೀಪ್ ಹೇಳುತ್ತಿದ್ದಂತೆಯೇ ಎಲ್ಲರಿಗೂ ಶಾಕ್ ಆಯ್ತು.

ಏನನ್ನ ಮಿಸ್ ಮಾಡಿಕೊಳ್ಳುತ್ತೀರಾ.?

ಸೇಫ್ ಆಗುವ ಸ್ಪರ್ಧಿ ಯಾರು ಅಂತ ಘೋಷಣೆ ಮಾಡುವ ಮುನ್ನ ''ಏನನ್ನ ಮಿಸ್ ಮಾಡಿಕೊಳ್ಳುತ್ತೀರಾ.?'' ಅಂತ ಮೂವರನ್ನೂ ಸುದೀಪ್ ಕೇಳಿದರು. ಅದಕ್ಕೆ ಭುವನ್, ''ಇಲ್ಲಿ ಬಂದು ಬೇರೆ ಬೇರೆ ವ್ಯಕ್ತಿತ್ವ ಇರುವ ಜನರನ್ನು ಮೀಟ್ ಮಾಡಿ, ಅವರ ಜೊತೆ ಕಾಲ ಕಳೆದದ್ದು ತುಂಬಾ ಖುಷಿ ಕೊಟ್ಟಿದೆ. ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ'' ಅಂತ ಹೇಳಿದರು. ಹಾಗೇ, ''ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ'' ಅಂತ ಸಂಜನಾ ಹೇಳಿದ್ರೆ, ಮಾಳವಿಕಾ ''ಇಲ್ಲಿ ಕಳೆದ ಪ್ರತಿ ಕ್ಷಣವನ್ನೂ ಮಿಸ್ ಮಾಡಿಕೊಳ್ಳುತ್ತೇನೆ'' ಎಂದರು.

ಮಾಳವಿಕಾ ಸೇಫ್ ಆದರು.!

ಮಾಳವಿಕಾ ಸೇಫ್ ಅಂತ ಸುದೀಪ್ ಘೋಷಿಸಿದರು. ಆಗ 'ಬೆಸ್ಟ್ ಫ್ರೆಂಡ್ಸ್' ಸಂಜನಾ ಮತ್ತು ಭುವನ್ 'ಬಿಗ್ ಬಾಸ್' ಮನೆಯಿಂದ ಹೊರಬರಲು ತಯಾರಾದರು.[ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ!]

ಸಂಜನಾಗೆ ಖುಷಿ ಆಯ್ತಂತೆ.!

''ನಾನು ಆಸೆ ಪಡುತ್ತಿದ್ದೆ, ನ್ಯೂ ಇಯರ್ ಗೆ ನಾನು ಆಚೆ ಇರಬೇಕು ಅಂತ. ಇಷ್ಟು ವಾರ ನಾನು ಪೂರ್ತಿಯಾಗಿ ಬ್ಯಾಗ್ ಪ್ಯಾಕ್ ಮಾಡುತ್ತಿರಲಿಲ್ಲ. ಇವತ್ತು ಮಾಡಿದ್ದೆ. ನನಗೆ ಅನಿಸಿತ್ತು ಹೋಗ್ತೀನಿ ಅಂತ. ನಾನು ಹೋಗುತ್ತಿರುವುದರ ಬಗ್ಗೆ ನನಗೆ ಸ್ವಲ್ಪ ಕೂಡ ಬೇಸರ ಇಲ್ಲ'' ಎಂದರು ಸಂಜನಾ.

ಕಣ್ಣೀರಿಟ್ಟ ಸಂಜನಾ

''ನನ್ನಿಂದ ಭುವನ್ ಕೂಡ ಔಟ್ ಆಗಿದ್ದಾನೆ ಅಂತ ನನಗೆ ಅನಿಸ್ತಿದೆ. ನಾನು ಮಾಡಿದ ಸಣ್ಣ ಮಿಸ್ಟೇಕ್ ನಿಂದ ಹೀಗಾಯ್ತು. ಅವನು ತೋರಿಸಿದ ಕೇರ್ ಅವನಿಗೆ ಮುಳ್ಳಾಗ್ಬಿಡ್ತಾ ಅಂತ ಅನಿಸ್ತಿದೆ'' ಅಂತ ಕಣ್ಣೀರಿಟ್ಟು ಭುವನ್ ಬಳಿ ಸಂಜನಾ ಕ್ಷಮೆ ಕೇಳಿದರು.

ಭುವನ್ ಹೇಳಿದ್ದೇನು.?

''ಎಷ್ಟು ದಿನ ಇರ್ತೀನೋ, ಅಷ್ಟು ದಿನ ಖುಷಿ ಆಗಿರ್ಬೇಕು ಅಂತ ಅಂದುಕೊಂಡಿದ್ದೆ. ಇಲ್ಲಿಯವರೆಗೂ ನಾನು ನಾನಾಗಿದ್ದೀನಿ. ಅದರ ಬಗ್ಗೆ ಖುಷಿ ಇದೆ'' ಎಂದರು ಭುವನ್.

ತಪ್ಪು ಆಗಿದ್ದೆಲ್ಲಿ.?

''ಏನು ಮಾಡಿದ್ದರೆ ಉಳಿದುಕೊಳ್ಳುತ್ತಿದ್ದೆ ಅಂತ ನಿಮಗೆ ಅನಿಸುತ್ತೆ'' ಅಂತ ಸುದೀಪ್ ಪ್ರಶ್ನೆ ಕೇಳಿದ್ದಕ್ಕೆ ಭುವನ್ ಉತ್ತರ ಕೊಟ್ಟಿದ್ದು ಹೀಗೆ - ''ಸಂಜನಾ ತಪ್ಪು ಮಾಡಿದರೂ ಅದಕ್ಕೆ ಸಪೋರ್ಟ್ ಮಾಡುತ್ತಿದ್ದೆ ಅಂತ ಕೆಲವರಿಗೆ ಅನಿಸಿರಬಹುದು. ಅದನ್ನ ಕರೆಕ್ಟ್ ಮಾಡಿಕೊಳ್ಳಬಹುದಿತ್ತು''

ಭುವನ್ ಗೆ 'ಥ್ಯಾಂಕ್ಸ್' ಮತ್ತು 'ಸಾರಿ' ಹೇಳಿದ ಸಂಜನಾ

ಯಾರಾದರೂ ಒಬ್ಬರಿಗೆ ಥ್ಯಾಂಕ್ಯು ಹೇಳಿ, ಒಬ್ಬರಿಗೆ ಸಾರಿ ಹೇಳಿ ಅಂತ ಸುದೀಪ್ ಹೇಳಿದ್ದಕ್ಕೆ ಸಂಜನಾ ಎರಡನ್ನೂ ಭುವನ್ ಗೆ ಹೇಳಿದರು.

ಎಲ್ಲರನ್ನೂ ಕ್ಷಮೆ ಕೇಳಿದ ಭುವನ್

ಕೀರ್ತಿ ಮತ್ತು ಮೋಹನ್ ಗೆ ಥ್ಯಾಂಕ್ಸ್ ಹೇಳಿ, ಎಲ್ಲರಿಗೂ ಕ್ಷಮೆ ಕೇಳಿದರು ಭುವನ್.

ಸೇಫ್ ಆದ ಭುವನ್

ಇಷ್ಟೆಲ್ಲ ಆದ್ಮೇಲೆ 'ಭುವನ್ ಯು ಆರ್ ಸೇಫ್' ಅಂತ ಸುದೀಪ್ ಅನೌನ್ಸ್ ಮಾಡಿದರು.

ಸಂಜನಾ ಮೊಗದಲ್ಲಿ ಮಂದಹಾಸ

ಭುವನ್ ಸೇಫ್ ಆದ್ಮೇಲೆ ಸಂಜನಾ ಮೊಗದಲ್ಲಿ ಮಂದಹಾಸ ಮೂಡಿತು.[ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಗೆ ಕ್ಲೈಮ್ಯಾಕ್ಸ್ ಕೊಡದ ಕಿಚ್ಚ!]

ಇಷ್ಟೆಲ್ಲ ಮಾಡಿದ್ಯಾಕೆ.?

''ಈ ಕೊನೆಯ ಕೆಲ ಕ್ಷಣಗಳು 'ಬಿಗ್ ಬಾಸ್' ಮನೆಯ ಒಳಗಡೆ ಇರಬೇಕಾದದ್ದು ಎಷ್ಟು ಮುಖ್ಯ ಅಂತ ನಿಮಗೆ ತಿಳಿಸಿರಬಹುದು. ಕಳೆದ ವಾರ ಒಂದು ಮಾತನಾಡಿದೆ. ಈ ವಾರ ಮತ್ತೊಂದು ಮಾತನಾಡಿದೆ. ಎರಡನ್ನೂ ನೆನಪಲ್ಲಿ ಇಟ್ಟುಕೊಳ್ಳಿ'' ಅಂತ ಭುವನ್ ಗೆ ಸುದೀಪ್ ಕಿವಿಮಾತನ್ನ ಹೇಳಿದರು.

English summary
Bigg Boss Kannada 4 Week 11 : Only Sanjana is out of the game and not Bhuvan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada