For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಬೆಸೆದ ಗಂಟು.. ದುಶ್ಮನ್ ಗಳೇ 'ಜೋಡಿ'ಗಳು.. ಕಿತ್ತಾಟ ಶುರು.?

  By Harshitha
  |

  ಒಂದು ಟೈಮ್ ನಲ್ಲಿ ನಟಿ ಶಾಲಿನಿಗೆ ಪ್ರಥಮ್ ಕಂಡ್ರೆ ಆಗ್ತಿರ್ಲಿಲ್ಲ.
  ಸೀಕ್ರೆಟ್ ರೂಮ್ ನಲ್ಲಿ ಮೋಹನ್ 'ಮನದಾಳ' ಕೇಳಿದ್ಮೇಲಂತೂ, ಶೀತಲ್ ಶೆಟ್ಟಿಗೆ ಮೋಹನ್ ಅಂದ್ರೆ ಆಗಲ್ಲ. ಇನ್ನೂ ನಟ ಮೋಹನ್ ರವರಿಗೂ ಶೀತಲ್ ಶೆಟ್ಟಿ ಆಟಿಟ್ಯೂಡ್ ಇಷ್ಟ ಆಗಲ್ಲ.
  ಸಂಜನಾ ಅಂದ್ರೆ 'ಕಿರಿಕ್' ಕೀರ್ತಿಗೆ ಅಲರ್ಜಿ.
  ನಿರ್ದೇಶಕ ಓಂ ಪ್ರಕಾಶ್ ರಾವ್ ಜೊತೆ ರೇಖಾ ಮಾತನಾಡಿದ್ದಂತೂ ಬೆರಳೆಣಿಕೆಯಷ್ಟು ಬಾರಿ.!

  ಈ 'ದುಶ್ಮನ್'ಗಳೇ ಜೋಡಿ ಆದರೆ..?

  ಈ ಐಡಿಯಾ 'ಬಿಗ್ ಬಾಸ್'ಗೆ ಹೊಳೆದ ಪರಿಣಾಮ ಈ ವಾರ 'ಬಿಗ್ ಬಾಸ್ ಜೋಡಿ' ಎಂಬ ಲಕ್ಷರಿ ಬಜೆಟ್ ಟಾಸ್ಕ್ ನೀಡಲಾಗಿದೆ.

  ಲಕ್ಷುರಿ ಬಜೆಟ್ ಟಾಸ್ಕ್ ಏನು.?

  ಲಕ್ಷುರಿ ಬಜೆಟ್ ಟಾಸ್ಕ್ ಏನು.?

  ಮನೆಯ ಸದಸ್ಯರಿಗೆ ಹೊಂದಾಣಿಕೆ ಮತ್ತು ಸಹಬಾಳ್ವೆ ಅರ್ಥ ಮಾಡಿಸುವ ಸಲುವಾಗಿ ಈ ವಾರ 'ಬಿಗ್ ಬಾಸ್ ಜೋಡಿ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ ಮನೆಯಲ್ಲಿ ಇರುವ ಐದು ಜೋಡಿಗಳಿಗೆ ಚಟುವಟಿಕೆ ನೀಡಲಾಗುವುದು. ಫಲಿತಾಂಶದ ಅನುಸಾರ ಜೋಡಿಗಳಿಗೆ ಗೊಂಬೆಗಳು ಸಿಗಲಿವೆ. ಟಾಸ್ಕ್ ಅಂತ್ಯದಲ್ಲಿ ಯಾವ ಜೋಡಿ ಬಳಿ ಅತಿ ಹೆಚ್ಚು ಗೊಂಬೆಗಳು ಇರುತ್ತದೆಯೋ, ಆ ಜೋಡಿ ವೈಯುಕ್ತಿಕ ಲಕ್ಷುರಿ ಬಜೆಟ್ ಪಾಯಿಂಟ್ ಮತ್ತು ಮುಂದಿನ ವಾರ ಇಮ್ಯೂನಿಟಿ ಪಡೆಯುತ್ತಾರೆ. [ಇವರೆಲ್ಲ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಬಂದಿರುವ ಉದ್ದೇಶ ಏನು ಗೊತ್ತೇ.?]

  ಜೋಡಿ ಆಯ್ಕೆ ಹೇಗೆ.?

  ಜೋಡಿ ಆಯ್ಕೆ ಹೇಗೆ.?

  ಮೊದಲಿಗೆ ಐವರು ಗಂಡಸರಿಗೆ, ಐದು ವಿವಿಧ ಬಣ್ಣಗಳ ದುಪ್ಪಟಗಳನ್ನ 'ಬಿಗ್ ಬಾಸ್' ಕಳುಹಿಸಿದರು. ನಂತರ ಐವರು ಹೆಂಗಸರನ್ನ ಕನ್ಫೆಶನ್ ರೂಮ್ ಒಳಗೆ ಕರೆದು ಚೀಟಿ ಎತ್ತುವಂತೆ 'ಬಿಗ್ ಬಾಸ್' ಆದೇಶಿಸಿದರು. ಚೀಟಿಗಳಲ್ಲಿ ಬಣ್ಣಗಳ ಹೆಸರನ್ನ ಬರೆಯಲಾಗಿತ್ತು. ಆಯಾ ಬಣ್ಣದ ಚೀಟಿ ಎತ್ತಿದವರು 'ಜೋಡಿ'ಗಳಾದರು.

  ಜೋಡಿ ನಂಬರ್ 1

  ಜೋಡಿ ನಂಬರ್ 1

  ಯಾವುದು ಆಗಬಾರದು ಅಂತ ಶಾಲಿನಿ ಅಂದುಕೊಂಡಿದ್ದರೋ, ಅದು ಆಗೇ ಹೋಯ್ತು.! ನಟಿ ಶಾಲಿನಿಗೆ 'ಒಳ್ಳೆ ಹುಡುಗ' ಪ್ರಥಮ್ ಜೋಡಿ ಆದರು. [ಅವರಿಗೆ ಆಗಲ್ಲ, ಇವರು ಹೋಗಲ್ಲ.. ಈ ವಾರವೂ ಪ್ರಥಮ್ ಮಿಸ್ ಇಲ್ಲ.!]

  ಜೋಡಿ ನಂಬರ್ 2

  ಜೋಡಿ ನಂಬರ್ 2

  ಸಂಜನಾ ಅಂದ್ರೆ ತಲೆ ಚಚ್ಚಿಕೊಳ್ಳುವ 'ಕಿರಿಕ್' ಕೀರ್ತಿಗೆ ಈ ವಾರ ಬೇರೆ ದಾರಿಯೇ ಇಲ್ಲ. [ಈ ಬಾರಿ ಎಕ್ಸ್ ಕ್ಯೂಸ್ ಇಲ್ಲ, ಸಂಜನಾ ಶಿಕ್ಷೆ ಅನುಭವಿಸಲೇ ಬೇಕು.!]

  ಜೋಡಿ ನಂಬರ್ 3

  ಜೋಡಿ ನಂಬರ್ 3

  ಮೋಹನ್ ಹಿಂದೆ ಶೀತಲ್, ಶೀತಲ್ ಹಿಂದೆ ಮೋಹನ್...ಈ ವಾರ ಮಾತನಾಡುವ ಹಾಗೇ ಇಲ್ಲ. ಯಾಕಂದ್ರೆ, ಈ ವಾರ ಇಬ್ಬರೂ ದುಪ್ಪಟದಲ್ಲಿ ಬಂಧಿಯಾಗಿರುತ್ತಾರೆ.

  ಜೋಡಿ ನಂಬರ್ 4

  ಜೋಡಿ ನಂಬರ್ 4

  ನಿರ್ದೇಶಕ ಓಂ ಪ್ರಕಾಶ್ ರಾವ್ ಜೊತೆ ನಟಿ ರೇಖಾ ಜೋಡಿ ಆಗಿದ್ದಾರೆ.

  ಜೋಡಿ ನಂಬರ್ 5

  ಜೋಡಿ ನಂಬರ್ 5

  ಬೇರೆ ಎಲ್ಲ ಜೋಡಿಗಳಿಗೆ ಹೋಲಿಸಿದರೆ, ಸ್ವಲ್ಪ ಖುಷಿ ಆಗಿರುವುದು ನಟಿ ಮಾಳವಿಕಾ. ಯಾಕಂದ್ರೆ, ಅವರಿಗೆ ಜೋಡಿಯಾಗಿರುವುದು 'ದತ್ತು ಪುತ್ರ' ನಿರಂಜನ್.

  ಗೆಲ್ಲುವ ಜೋಡಿ ಯಾವುದು.?

  ಗೆಲ್ಲುವ ಜೋಡಿ ಯಾವುದು.?

  ಐವರು ಜೋಡಿಗಳ ಪೈಕಿ, ಗೆಲ್ಲುವವರು ಯಾರು.? ಕಿತ್ತಾಡಿಕೊಳ್ಳುವವರು ಯಾರು.? ಎಂಬುದೇ ಸದ್ಯದ ಕುತೂಹಲ.

  English summary
  Bigg Boss Kannada 4: Week 7: Actress Shalini-Pratham, Keerthi-Sanjana, Malavika Avinash-Niranjan Deshpande, Om Prakash Rao-Rekha, Mohan-Sheethal Shetty pair up for 'Bigg Boss Jodi' task.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X