For Quick Alerts
  ALLOW NOTIFICATIONS  
  For Daily Alerts

  ಪ್ರಥಮ್ 'ಔಟ್'.. ಸುದೀಪ್ ಚಮಕ್.. ಶಾಲಿನಿ-ಕೀರ್ತಿ ಗಪ್-ಚುಪ್

  By Harshitha
  |

  ಪ್ರಥಮ್ ಅಂದ್ರೆ 'ಬಿಗ್ ಬಾಸ್' ಮನೆಯಲ್ಲಿ ಉರಿದು ಬೀಳುವವರು ಒಬ್ರಾ.. ಇಬ್ರಾ.. 'ಪ್ರಥಮ್ ದುಶ್ಮನ್ ಕಹಾ ಹೇ?' ಎಂಬ ಪ್ರಶ್ನೆ ಕೇಳಿದ್ರೆ ಚಿಕ್ಕ ಮಕ್ಕಳು ಕೂಡ ಉತ್ತರ ಕೊಡ್ತಾರೆ 'ಬಿಗ್ ಬಾಸ್ ಮನೆ ತುಂಬಾ ಹೇ.!' ಅಂತ.

  'ಬಿಗ್ ಬಾಸ್' ಕಾರ್ಯಕ್ರಮದಿಂದ ಪ್ರಥಮ್ ಔಟ್ ಆಗಬೇಕು ಅಂತ ಕೆಲವರು ಮೊದಲನೇ ವಾರದಿಂದ ಕಾಯ್ತಿದ್ದಾರೆ. 'ಕಿರಿಕ್' ಕೀರ್ತಿ, ಶಾಲಿನಿ, ಶೀತಲ್ ಶೆಟ್ಟಿ, ನಿರಂಜನ್ ದೇಶಪಾಂಡೆ ಅಂತೂ ಪದೇ ಪದೇ ಪ್ರಥಮ್ ರನ್ನ ಎಲಿಮಿನೇಷನ್ ಗೆ ನಾಮಿನೇಟ್ ಮಾಡುತ್ತಲೇ ಇದ್ದಾರೆ.

  ಆದ್ರೆ, ಪ್ರಥಮ್ ಹಣೆ ಬರಹ ಚೆನ್ನಾಗಿದೆ. ವೀಕ್ಷಕರ ಬೆಂಬಲ ಸಿಕ್ಕಾಪಟ್ಟೆ ಇರುವುದರಿಂದ ಪ್ರಥಮ್ ಬರೋಬ್ಬರಿ ಏಳು ವಾರಗಳ ಕಾಲ ಸೇಫ್ ಆಗಿದ್ದಾರೆ. ವಿಷ್ಯ ಈಗ ಅದಲ್ಲ. ಪ್ರಥಮ್ ಸೇಫ್ ಅಂತ ಗೊತ್ತಿದ್ದರೂ.. 'ಡಬಲ್ ಎಲಿಮಿನೇಷನ್' ಅಂತ್ಹೇಳಿ ಕಿಚ್ಚ ಸುದೀಪ್ ಕೊಟ್ಟ ಚಮಕ್ ಗೆ ಇತರೆ ಸ್ಪರ್ಧಿಗಳು ಗಪ್ ಚುಪ್ ಆಗ್ಬಿಟ್ರು. ಮುಂದೆ ಓದಿ....

  'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಚಮಕ್

  'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಚಮಕ್

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಏಳನೇ ಶನಿವಾರ ನಡೆದ 'ವಾರದ ಕಥೆ ಕಿಚ್ಚನ ಜೊತೆ' ಪಂಚಾಯತಿಯಲ್ಲಿ ನಟಿ ರೇಖಾ, ಮಾಳವಿಕಾ, ಮೋಹನ್ ರವರನ್ನ ಮೊದಲು ಕಿಚ್ಚ ಸುದೀಪ್ ಸೇಫ್ ಮಾಡಿದರು. [ಅವರಿಗೆ ಆಗಲ್ಲ, ಇವರು ಹೋಗಲ್ಲ.. ಈ ವಾರವೂ ಪ್ರಥಮ್ ಮಿಸ್ ಇಲ್ಲ.!]

  ಸಂಜನಾ, ನಿರಂಜನ್ ಸೇಫ್ ಆದರು

  ಸಂಜನಾ, ನಿರಂಜನ್ ಸೇಫ್ ಆದರು

  ಸಂಜನಾ, ನಿರಂಜನ್, ಪ್ರಥಮ್ ಮತ್ತು ಓಂ ಪ್ರಕಾಶ್ ರಾವ್ ಇನ್ನೂ ಡೇಂಜರ್ ಝೋನ್ ನಲ್ಲಿ ಇರುವಾಗ ಡಬಲ್ ಎಲಿಮಿನೇಷನ್ ಹುಳ ಬಿಟ್ಟು ಸಂಜನಾ ಮತ್ತು ನಿರಂಜನ್ ರವರನ್ನ ಸೇಫ್ ಮಾಡಿದರು. [ಕಿಚ್ಚ ಸುದೀಪ್ ಮುಂದೆ ಅಳಲು ತೋಡಿಕೊಂಡ 'ಪ್ರಕೃತಿ ವಿಕೋಪ' ಪ್ರಥಮ್.!]

  ಸುದೀಪ್ ಕೊಟ್ಟ ಚಮಕ್

  ಸುದೀಪ್ ಕೊಟ್ಟ ಚಮಕ್

  ''ಪ್ರಥಮ್ ಅವರೇ.. ನೀವು ಇಲ್ಲಿಯವರೆಗೂ ಚೆನ್ನಾಗಿ ಆಡಿದ್ದೀರಾ. ಎಲ್ಲರನ್ನೂ ಚೆನ್ನಾಗಿ ನಗಿಸಿದ್ದೀರಾ.. ಖುಷಿ ಪಡಿಸಿದ್ದೀರಾ.. ಆ ವಿಚಾರಕ್ಕೆ ನಾನು ಕಂಗ್ರ್ಯಾಕ್ಟ್ಸ್ ಹೇಳುತ್ತೇನೆ. ಕೆಲವೊಮ್ಮೆ ನಾವು ಅಂದುಕೊಳ್ಳೋದು ಒಂದು, ಆಗೋದು ಇನ್ನೊಂದು. ಓಂ ಪ್ರಕಾಶ್ ರಾವ್ ಅವರು ಎಲಿಮಿನೇಟ್ ಆಗಿದ್ದಾರೆ. ಜೊತೆಯಲ್ಲಿ....'' ಅಂತ ಸುದೀಪ್ ಚಮಕ್ ಕೊಟ್ಟರು.

  ಶಾಕ್ ಆದ ಪ್ರಥಮ್

  ಶಾಕ್ ಆದ ಪ್ರಥಮ್

  ಡಬಲ್ ಎಲಿಮಿನೇಷನ್ ಇರಬಹುದು ಅಂದ್ಕೊಂಡು, ''ಜೊತೆಯಲ್ಲಿ ಅಂದಾಗ...ನಾನು ಕೂಡ ಎಲಿಮಿನೇಟ್ ಆಗಿದ್ದೀನಿ ಅಂತ ಅಂದ್ಕೊಂಡೆ. ಎಲ್ಲರಿಗೂ ಬೇಸರ ಆಗಿದ್ರೆ ಕ್ಷಮೆ ಕೇಳೋಣ ಅಂತ ಮನಸ್ಸಿಗೆ ಬಂತು'' ಅಂತ ಪ್ರಥಮ್ ಮಾತನಾಡಲು ಆರಂಭಿಸಿದರು. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ ]

  ಎಲ್ಲರ ಪ್ರೀತಿ ಸಿಕ್ಕಿದೆ

  ಎಲ್ಲರ ಪ್ರೀತಿ ಸಿಕ್ಕಿದೆ

  ''ಹುಟ್ಟಿದಾಗಿನಿಂದಲೂ ಕಷ್ಟ ಪಟ್ಟಿದ್ದೀನಿ. 10 ವರ್ಷಗಳ ಕಾಲ ನಾನು ನನ್ನ ತಂದೆ-ತಾಯಿ ಜೊತೆ ಇರ್ಲಿಲ್ಲ. 49 ದಿನ ಎಲ್ಲರೂ ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ. ಸ್ವಲ್ಪ ಖುಷಿ ನನ್ನ ಜೀವನದಲ್ಲಿ ಇತ್ತು ಅಂದ್ರೆ ಅದು ಇವರೆಲ್ಲರ ಪ್ರೀತಿಯಿಂದ'' ಅಂತ ಪ್ರಥಮ್ ಭಾವುಕರಾಗಿ ಮಾತನಾಡಿದರು. ['ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಗೆ ಉಳಿಗಾಲ ಇಲ್ಲ.!]

  ಪ್ರಥಮ್ ರನ್ನ ಸೇಫ್ ಮಾಡಿದ ಕಿಚ್ಚ

  ಪ್ರಥಮ್ ರನ್ನ ಸೇಫ್ ಮಾಡಿದ ಕಿಚ್ಚ

  ''ಇಲ್ಲಿಯವರೆಗೂ ನೀವು ಏನು ವ್ಯಕ್ತ ಪಡಿಸಿದ್ರಿ, ಅದು ಹಾಗೇ ಇರಲಿ. ಯಾಕಂದ್ರೆ ಈ ವಾರ ಡಬಲ್ ಎಲಿಮಿನೇಷನ್ ಇಲ್ಲ. ಯು ಆರ್ ಸೇಫ್'' ಎಂದುಬಿಟ್ಟರು ಸುದೀಪ್

  ಪ್ರಥಮ್ ಫುಲ್ ಖುಷ್

  ಪ್ರಥಮ್ ಫುಲ್ ಖುಷ್

  ''ಹೌದಾ...'' ಅಂತ ಕಣ್ಣು ಬಾಯಿಬಿಟ್ಕೊಂಡು ಪ್ರಥಮ್ ಫುಲ್ ಖುಷ್ ಆಗ್ಬಿಟ್ರು. ಜೊತೆಗೆ ಧನ್ಯವಾದಗಳನ್ನೂ ಅರ್ಪಿಸಿದರು.

  ಮನೆಯ ಇತರೆ ಸದಸ್ಯರ ರಿಯಾಕ್ಷನ್.!

  ಮನೆಯ ಇತರೆ ಸದಸ್ಯರ ರಿಯಾಕ್ಷನ್.!

  'ಪ್ರಥಮ್ ಔಟ್' ಅಂತ ಮೊದಲು ಅಂದ್ಕೊಂಡು ನಂತರ 'ಪ್ರಥಮ್ ಸೇಫ್' ಅಂತ ಗೊತ್ತಾದ್ಮೇಲೆ 'ಬಿಗ್ ಬಾಸ್' ಮನೆ ಸದಸ್ಯರ ರಿಯಾಕ್ಷನ್ ಹೇಗಿತ್ತು ಅಂತ ನೀವೇ ನೋಡ್ಬಿಡಿ....

  English summary
  Bigg Boss Kannada 4, Week 7 : Kannada Actress Shalini, Keerthi Kumar and others were literally frustrated after knowing that Kannada Director Pratham is still in the game.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X