»   » ಶಾಲಿನಿಯ 'ಕಣ್ಣೀರು ಡ್ರಾಮಾ'ಕ್ಕೆ ವೀಕ್ಷಕರು ಕರಗಿಲ್ಲ, ಕಿರಿಕಿರಿಗೊಂಡವ್ರೆ.!

ಶಾಲಿನಿಯ 'ಕಣ್ಣೀರು ಡ್ರಾಮಾ'ಕ್ಕೆ ವೀಕ್ಷಕರು ಕರಗಿಲ್ಲ, ಕಿರಿಕಿರಿಗೊಂಡವ್ರೆ.!

Posted By:
Subscribe to Filmibeat Kannada

''ಕಣ್ಣೀರು ಸುರಿಸಿ ಸಿಂಪಥಿ ಗಿಟ್ಟಿಸಬಹುದು ಅಂತ ತಿಳ್ಕೊಂಡಿದ್ರೆ ಅದು ನಿಮ್ಮ ಮೂರ್ಖತನ. ಒಬ್ಬ ವ್ಯಕ್ತಿಯನ್ನು ಕೆಟ್ಟವನೆಂದು ಬಿಂಬಿಸಲು ಕಣ್ಣೀರನ್ನು ಅಸ್ತ್ರವಾಗಿ ಬಳಸುವ ಶಾಲಿನಿಯ ನಾಟಕೀಯ ವರ್ತನೆ ಅಸಹ್ಯ''

- 'ಒಳ್ಳೆ ಹುಡುಗ' ಪ್ರಥಮ್ ಜೊತೆ ಟಾಸ್ಕ್ ಮಾಡಲು ಸಾಧ್ಯವಾಗುತ್ತಿಲ್ಲ ಅಂತ ನಟಿ ಶಾಲಿನಿ ಕಣ್ಣೀರು ಸುರಿಸಿದಕ್ಕೆ 'ಬಿಗ್ ಬಾಸ್' ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿರುವ ಪರಿ ಇದು.! ['ಬಿಗ್ ಬಾಸ್' ಕಾರ್ಯಕ್ರಮದ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ]

ವಿನಾಕಾರಣ ಪ್ರಥಮ್ ರವರನ್ನ ಶಾಲಿನಿ ಅಂಡ್ ಗ್ಯಾಂಗ್ ಟಾರ್ಗೆಟ್ ಮಾಡುತ್ತಿರುವುದಕ್ಕೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ರೊಚ್ಚಿಗೆದ್ದಿದ್ದಾರೆ. ಶಾಲಿನಿಯವರ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿ 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿಯೇ ಕೆಲವರು ಕಾಮೆಂಟ್ ಮಾಡಿದ್ದಾರೆ.

ಕಾರಣವೇ ಇಲ್ಲ.!

''ಕಾರಣವೇ ಇಲ್ಲದೇ ಕಣ್ಣೀರು ಸುರಿಸಿ, ಪ್ರಥಮ್ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಪಾಪಾ ಪ್ರಥಮ್. ಶಾಲಿನಿ ರವರನ್ನ ಬಿಗ್ ಬಾಸ್ ವಾರ್ನ್ ಮಾಡಬೇಕು. ಶಾಲಿನಿ ಡ್ರಾಮಾ ಮಾಡುತ್ತಿದ್ದಾರೆ'' ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ['ಮೋಸ' ಮಾಡಿದ 'ಬಿಗ್ ಬಾಸ್' ವಿರುದ್ಧ ವೀಕ್ಷಕರು ಕೆಂಡಾಮಂಡಲ.!]

ನಿಮ್ಮ ಮೂರ್ಖತನ..!

''ಅತ್ತರೆ ಸಿಂಪಥಿ ಸಿಗುತ್ತೆ ಅಂತ ತಿಳ್ಕೊಂಡ್ರೆ, ಅದು ನಿಮ್ಮ ಮೂರ್ಖತನ. ಫೇರ್ ಗೇಮ್ ಆಡಿ. ಎಲ್ಲರೂ ಯಾಕೆ ಪ್ರಥಮ್ ರನ್ನ ಟಾರ್ಗೆಟ್ ಮಾಡುತ್ತೀರಾ?'' ಅಂತ ಪ್ರಶ್ನೆ ಮಾಡುವವರೂ ಇದ್ದಾರೆ.

ನಾಟಕೀಯ ವರ್ತನೆ ಅಸಹ್ಯ.!

'ಒಬ್ಬ ವ್ಯಕ್ತಿಯನ್ನು ಕೆಟ್ಟವನೆಂದು ಬಿಂಬಿಸಲು ಕಣ್ಣೀರನ್ನು ಅಸ್ತ್ರವಾಗಿ ಬಳಸುವ ಶಾಲಿನಿಯ ನಾಟಕೀಯ ವರ್ತನೆ ಅಸಹ್ಯ ಎನಿಸುತ್ತದೆ, ಹಾಗೂ ಈ ಕಾರ್ಯಕ್ರಮ ಪರಿಪೂರ್ಣವಾಗಿ ಪೂರ್ವ ನಿರ್ಧರಿತ ಎಂಬುದನ್ನು ಇಂದಿನ ಚಟುವಟಿಕೆಯ ಮೂಲಕ ನಿರೂಪಿಸಿದೆ'' - ಭರತ್ ಕುಮಾರ್

ಡ್ರಾಮಾ ಶುರು ಮಾಡಿದರು.!

''ಶಾಲಿನಿ ಡ್ರಾಮಾ ಶುರು ಮಾಡಿದರು'' ಅಂತ ಕೆಲವರು ವ್ಯಂಗ್ಯವಾಡಿದ್ದಾರೆ.

ಗ್ರೂಪಿಸಂ ಅಲ್ಲದೇ ಬೇರೇನು.?

''ಪ್ರತಿ ಬಾರಿ ನಿರಂಜನ್/ಕೀರ್ತಿ ಬೇಕು ಅಂತಾರೆ. ಇದಕ್ಕೆ ಗ್ರೂಪಿಸಂ ಎನ್ನಬಾರದು. ಪ್ರಥಮ್ ರನ್ನ ಸಹಿಸಿಕೊಳ್ಳೋಕೆ ಆಗಲ್ವಂತೆ. ಎಲ್ಲರೂ ಎಲ್ಲರನ್ನೂ ಸಹಿಸಿಕೊಳ್ಳಬೇಕು'' ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.

ಶಾಲಿಗೆ ಕಿವಿ ಮಾತು

ನಟಿ ಶಾಲಿನಿಗೆ ಕೆಲವರು ಕಿವಿಮಾತನ್ನೂ ಕೊಟ್ಟಿದ್ದಾರೆ. ಅದೇನು ಅಂತ ನೀವೇ ಓದಿ....

ಪ್ರಥಮ್ ಗೆಲ್ಲಬೇಕು ಅಷ್ಟೆ.!

'ಬಿಗ್ ಬಾಸ್' ಮನೆಯಲ್ಲಿ ಏನೇ ಕಿರಿಕ್ ಮಾಡಿದರೂ, ಪ್ರಥಮ್ ಮೇಲೆ ಕೆಲ ವೀಕ್ಷಕರಿಗೆ ಅಭಿಮಾನ ಇದೆ ಎನ್ನುವುದಕ್ಕೆ ಈ ಕಾಮೆಂಟ್ ಸಾಕ್ಷಿ.

ನಿಮ್ಮ ಅಭಿಪ್ರಾಯ ತಿಳಿಸಿ

ಶಾಲಿನಿ ನಡವಳಿಕೆ, ಪ್ರಥಮ್ ವರ್ತನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

English summary
Bigg Boss Kannada 4 Viewers are unhappy against Kannada Actress Shalini for blaming Pratham for no reason. Check out the viewers reaction here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada