»   » 'ಬಿಗ್ ಬಾಸ್' ಮನೆಯಲ್ಲಿ ಒಮ್ಮೆಲೆ 3 ವೈಲ್ಡ್ ಕಾರ್ಡ್ ಎಂಟ್ರಿ.!

'ಬಿಗ್ ಬಾಸ್' ಮನೆಯಲ್ಲಿ ಒಮ್ಮೆಲೆ 3 ವೈಲ್ಡ್ ಕಾರ್ಡ್ ಎಂಟ್ರಿ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 55 ದಿನಗಳು ಕಳೆದ ಬಳಿಕ, 'ವೈಲ್ಡ್ ಕಾರ್ಡ್' ಎಂಟ್ರಿ ಮೂಲಕ ಮೂವರು ಸ್ಪರ್ಧಿಗಳು 'ಬಿಗ್ ಬಾಸ್' ಮನೆ ಗೃಹಪ್ರವೇಶ ಮಾಡಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ 'ತುರ್ತು ಪರಿಸ್ಥಿತಿ' ಜಾರಿಯಲ್ಲಿರುವಾಗಲೇ, ಮೂವರು ಸ್ಪರ್ಧಿಗಳು 'ದೊಡ್ಮನೆ'ಗೆ ಕಾಲಿಟ್ಟಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ನಂಬರ್ 1 - ಸುಕೃತಾ ವಾಗ್ಲೆ

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 'ಲಾರ್ಡ್ ಪ್ರಥಮ್ ಸರ್' ವಿರುದ್ಧ ಮೋಹನ್ ಮತ್ತು ಗ್ಯಾಂಗ್ ದಂಗೆ ಎದ್ದಾಗ, ಸರ್ವಾಧಿಕಾರಿಗೆ ಬೆಂಗಾವಲಾಗಿ ನಿಲ್ಲಲು ಕಮಾಂಡೋ ಆಗಿ ಎಂಟ್ರಿಕೊಟ್ಟವರು ನಟಿ ಸುಕೃತಾ ವಾಗ್ಲೆ. ['ದಂಡನಾಯಕ' ಪ್ರಥಮ್ ವಿರುದ್ಧ ದಂಗೆ ಎದ್ದ ಕೀರ್ತಿ-ಮೋಹನ್ ಗ್ಯಾಂಗ್.!]

ಸುಕೃತಾ ವಾಗ್ಲೆ ಕುರಿತು....

'ಬಹುಪರಾಕ್', 'ಜಟ್ಟ', 'ಕಿರುಗೂರಿನ ಗಯ್ಯಾಳಿಗಳು' ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸುಕೃತಾ ವಾಗ್ಲೆ.

ನಟಿ ಕಾರುಣ್ಯ ರಾಮ್ ಗೆ ಸೆಕೆಂಡ್ ಚಾನ್ಸ್.!

ಕಳೆದ ಎರಡು ವಾರಗಳ ಹಿಂದೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಔಟ್ ಆಗಿದ್ದ ನಟಿ ಕಾರುಣ್ಯ ರಾಮ್ ಗೆ ಸೆಕೆಂಡ್ ಚಾನ್ಸ್ ಲಭಿಸಿದೆ. 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ಮತ್ತೆ 'ಬಿಗ್ ಬಾಸ್' ಮನೆಯೊಳಗೆ ಕಾರುಣ್ಯ ರಾಮ್ ಕಾಲಿಟ್ಟಿದ್ದಾರೆ. ['ಬಿಗ್ ಬಾಸ್' ಮನೆಯ ಆಟದ ರಹಸ್ಯ ತೆರೆದಿಟ್ಟ ಕಾರುಣ್ಯ ರಾಮ್]

ಮೊದಲನೇ ಬಾರಿ ನಾಮಿನೇಟ್ ಆಗಿದ್ದ ಕಾರುಣ್ಯ.!

ಆರು ವಾರಗಳಲ್ಲಿ ಮೊದಲ ಬಾರಿ ನಾಮಿನೇಟ್ ಆಗಿದ್ದ ಕಾರುಣ್ಯ, ಅದೇ ವಾರ ಎಲಿಮಿನೇಟ್ ಆಗ್ಬಿಟ್ಟರು. ಹೀಗಾಗಿ ಸಿಕ್ಕಾಪಟ್ಟೆ ಬೇಸರಗೊಂಡಿದ್ದ ಕಾರುಣ್ಯಗೆ ಎರಡನೇ ಅವಕಾಶ ಲಭಿಸಿದೆ.

ಮೂರನೇ ಸ್ಪರ್ಧಿ ಮಸ್ತಾನ್.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಮಸ್ತಾನ್ ಎಂಬುವರೂ ಕೂಡ ಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದಾರೆ.

ಯಾರೀ ಮಸ್ತಾನ್.?

'ಬಿಗ್ ಬಾಸ್' ಮನೆಯ ಸ್ಪರ್ಧಿಗಳ ಮುಂದೆ ಮಸ್ತಾನ್ ಹೇಳಿಕೊಂಡಿರುವ ಪ್ರಕಾರ, ಆತ ಬೆಂಗಳೂರಿನ ಶಿವಾಜಿನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್.

ಮುಂದೆ ಏನೇನ್ ಕಾದಿದ್ಯೋ.?

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಎಲ್ಲಾ ಎಪಿಸೋಡ್ ಗಳನ್ನೂ ನೋಡಿಕೊಂಡು ಬಂದಿರುವ ಕಾರುಣ್ಯ ರಾಮ್, ಇನ್ಮೇಲೆ ಹೇಗಿರ್ತಾರೋ.. ನಟಿ ಸುಕೃತಾ ವಾಗ್ಲೇ ಗೇಮ್ ಪ್ಲಾನ್ ಏನು.? ಮಸ್ತಾನ್ ಭಾಯ್ ಏನ್ ಮಾಡ್ತಾರೋ..? ನೋಡೋಣ.

English summary
Bigg Boss Kannada 4, Week 8 : Kannada Actress Sukrutha Waghle, Karunya ram and Car Dealer Masthan entered 'Bigg Boss' house as Wild Card Contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada