»   » 'ದಂಡನಾಯಕ' ಪ್ರಥಮ್ ವಿರುದ್ಧ ದಂಗೆ ಎದ್ದ ಕೀರ್ತಿ-ಮೋಹನ್ ಗ್ಯಾಂಗ್.!

'ದಂಡನಾಯಕ' ಪ್ರಥಮ್ ವಿರುದ್ಧ ದಂಗೆ ಎದ್ದ ಕೀರ್ತಿ-ಮೋಹನ್ ಗ್ಯಾಂಗ್.!

Posted By:
Subscribe to Filmibeat Kannada

ಕಡೆಗೂ 'ಬಿಗ್ ಬಾಸ್' ಮನೆಯಲ್ಲಿ 'ಲಾರ್ಡ್ ಪ್ರಥಮ್ ಸರ್' ವಿರುದ್ಧ ಸದಸ್ಯರು ದಂಗೆ ಎದ್ದರು. 'ಸರ್ವಾಧಿಕಾರಿ' ಕಟೌಟ್ ಗಳಿಗೆ ಮಣ್ಣು ಮೆತ್ತಿ, ಧಿಕ್ಕಾರ ಕೂಗಿ, ಅರಮನೆಗೆ ನುಗ್ಗಿ ಪಟಾಕಿ ಸಿಡಿಸುವ ಮೂಲಕ 'ತುರ್ತು ಪರಿಸ್ಥಿತಿ'ಯನ್ನು ತೆರವು ಗೊಳಿಸಿದರು.

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 56ನೇ ದಿನ ಏನೇನಾಯ್ತು ಎಂಬುದರ ರೌಂಡಪ್ ಇಲ್ಲಿದೆ ಓದಿರಿ....

ಬೆಳಗ್ಗೆ ಪ್ಲಾನ್ ಆಗ್ತಿತ್ತು.!

'ಲಾರ್ಡ್ ಪ್ರಥಮ್ ಸರ್' ಆಡಳಿತ ವ್ಯವಸ್ಥೆ ವಿರುದ್ಧ ತಿರುಗಿ ಬೀಳಲು ಕೀರ್ತಿ ಕುಮಾರ್, ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆ ಪ್ಲಾನ್ ಮಾಡ್ತಿದ್ರು. ಆಗ ದಂಗೆ ಏಳುವ ಐಡಿಯಾ ಕೊಟ್ಟವರು ಮೋಹನ್. ['ದಂಡನಾಯಕ' ಪ್ರಥಮ್: ಈ ವಾರ ಪೂರಾ 'ದಂಡಂ ದಶಗುಣಂ']

'ಲಾರ್ಡ್ ಪ್ರಥಮ್ ಸರ್' ಕಿವಿಗೆ ಬಿತ್ತು

'ದಂಗೆ ಏಳು ಸಾಧ್ಯತೆ ಇದೆ' ಅಂತ ಹಾನರಬಲ್ ಮೇಡಂ ಮಾಳವಿಕಾ, 'ಲಾರ್ಡ್ ಪ್ರಥಮ್ ಸರ್'ಗೆ ಸುಳಿವು ಕೊಟ್ಟರು. ದಂಗೆ ಎದ್ದು ಶಿಸ್ತು ಉಲ್ಲಂಘನೆ ಆಗಬಾರದು ಎಂಬ ಕಾರಣಕ್ಕೆ ಪಂಚಾಯತಿ ನಡೆಸಲು ಸರ್ವಾಧಿಕಾರಿ ಮುಂದಾದರು. [ಪ್ರಥಮ್ 'ಸರ್ವಾಧಿಕಾರ'ವನ್ನ ಧಿಕ್ಕರಿಸಿದ ಮೋಹನ್]

ತಮಾಷೆ ಎಂದ ನಿರಂಜನ್.!

''ಪ್ರಪಂಚದಲ್ಲಿಯೇ ಅತ್ಯದ್ಭುತ ಲಾರ್ಡ್ ನೀವು. ದಂಗೆ ಏಳುವ ಬಗ್ಗೆ ತಮಾಷೆ ಮಾಡ್ತಿದ್ವಿ ಅಷ್ಟೇ. ಹಾನರಬಲ್ ಮೇಡಂ ತಪ್ಪಾಗಿ ಭಾವಿಸಿದ್ರು. ಎಂತಹ ಸನ್ನಿವೇಶ ಬಂದರೂ ಹಾಗೆ ಮಾಡಲ್ಲ'' ಅಂತ ನಿರಂಜನ್ ಹೇಳಿದರು. ನಿರಂಜನ್ ಮಾತಿಗೆ ಶೀತಲ್ ಬೆಂಬಲಿಸಿದರು. [ಪ್ರಥಮ್ ಈಗ 'ಸರ್ವಾಧಿಕಾರಿ': 'ಬಿಗ್ ಬಾಸ್' ಮನೆ ಸದಸ್ಯರಿಗೆ ಉರಿ ಉರಿ]

ಉಲ್ಟಾ ಹೊಡೆದ ಕೀರ್ತಿ

'ದಂಗೆ ಏಳಲ್ಲ. ಅದು ತಮಾಷೆ ಮಾತ್ರ' ಅಂತ ಹೇಳಿದಕ್ಕೆ ನಿರಂಜನ್ ಗೆ ಬಹುಮಾನ ಸಿಕ್ತು. ಹೀಗಾಗಿ, 'ನಿರಂಜನ್ ಸುಳ್ಳು ಹೇಳ್ತಿದ್ದಾರೆ. ದಂಗೆ ಏಳುವ ಪ್ಲಾನ್ ಕೊಟ್ಟಿದ್ದೇ ನಿರಂಜನ್' ಅಂತ ಕೀರ್ತಿ ಉಲ್ಟಾ ಹೊಡೆದರು. ಅಲ್ಲಿಗೆ ನಿರಂಜನ್ ಗೆ ಸಿಕ್ಕ ಬಹುಮಾನ ಕೂಡ ಮುಟ್ಟುಗೋಲಾಯ್ತು.

ಮೋಹನ್ ಗೆ 'ಬಿಗ್ ಬಾಸ್' ನೀಡಿದ ಅವಕಾಶ

'ಲಾರ್ಡ್ ಪ್ರಥಮ್ ಸರ್' ಆಡಳಿತದ ವಿರುದ್ಧ ದಂಗೆ ಏಳಲು ಮೋಹನ್ ಗೆ 'ಬಿಗ್ ಬಾಸ್' ಅವಕಾಶ ನೀಡಿದರು. ಮೋಹನ್ ಗೆ ಕೀರ್ತಿ, ಭುವನ್ ಮತ್ತು ಶೀತಲ್ ಶೆಟ್ಟಿ ಸಾಥ್ ಕೊಟ್ಟರು.

ಗ್ಯಾಪ್ ನಲ್ಲಿ ಮೂರು ವೈಲ್ಡ್ ಕಾರ್ಡ್ ಎಂಟ್ರಿ

'ಲಾರ್ಡ್ ಪ್ರಥಮ್ ಸರ್'ಗೆ ಬೆಂಗಾವಲಾಗಿರಲು ನಟಿ ಸುಕೃತಾ ವಾಗ್ಲೆ ಮತ್ತು ಕಾರುಣ್ಯ ರಾಮ್ 'ಕಮಾಂಡೋ' ಅವತಾರದಲ್ಲಿ ಎಂಟ್ರಿಕೊಟ್ಟರು. ಇನ್ನೂ 'ತುರ್ತು ಪರಿಸ್ಥಿತಿ' ಅಂತ್ಯಗೊಳಿಸಲು 'ಕಲರ್ ಬಾಂಬ್' ಹಿಡಿದು 'ಮಸ್ತಾನ್' ಎಂಬುವರು 'ಬಿಗ್ ಬಾಸ್' ಮನೆಗೆ ಕಾಲಿಟ್ಟರು.

'ತುರ್ತು ಪರಿಸ್ಥಿತಿ' ತೆರವು

ಸರ್ವಾಧಿಕಾರಿ 'ಲಾರ್ಡ್ ಪ್ರಥಮ್ ಸರ್' ರವರ ಅರಮನೆಯೊಳಗೆ ಮೋಹನ್ ತಂಡ ಪ್ರವೇಶ ಮಾಡಿ, ಪಟಾಕಿ ಸಿಡಿಸಿ ತುರ್ತು ಪರಿಸ್ಥಿತಿ ತೆರವು ಗೊಳಿಸಿದರು. ಅಲ್ಲಿಗೆ 'ಲಾರ್ಡ್ ಪ್ರಥಮ್ ಸರ್' ಆಳ್ವಿಕೆ ಕೊನೆಗೊಳ್ತು.

English summary
Bigg Boss Kannada 4, Week 8 : Dictator Pratham's tyranny ended as Mohan and team revolted against Lord Pratham's establishment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada