»   » 'ಬಿಗ್ ಬಾಸ್' ಗೆದ್ದ ಮೇಲೆ ಪ್ರಥಮ್ ಗೆ ಸಿಗುತ್ತಿರುವ ಗೌರವ ಇದು.!

'ಬಿಗ್ ಬಾಸ್' ಗೆದ್ದ ಮೇಲೆ ಪ್ರಥಮ್ ಗೆ ಸಿಗುತ್ತಿರುವ ಗೌರವ ಇದು.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 'ಒಳ್ಳೆ ಹುಡುಗ' ಪ್ರಥಮ್ ವಿಜೇತರಾಗಿದ್ದು ಕೆಲವರಿಗೆ ಇಷ್ಟ ಆಗದೇ ಇರಬಹುದು. ನಟಿ ರೇಖಾ ಅಥವಾ 'ಕಿರಿಕ್' ಕೀರ್ತಿ ಗೆಲ್ಲಬೇಕಿತ್ತು ಅಂತ ಕೆಲವರು ವಾದಿಸಬಹುದು. ಯಾರು ಏನೇ ಬಾಯ್ಬಾಯ್ ಬಡ್ಕೊಂಡ್ರೂ... ಪ್ರಥಮ್ ಹಲವರ ಮನ ಗೆದ್ದಿರುವುದು ಮಾತ್ರ ಖಂಡಿತ ಸುಳ್ಳಲ್ಲ.['ಮಜಾ ಟಾಕೀಸ್'ನಲ್ಲಿ ಲಾರ್ಡ್ ಪ್ರಥಮ್ ರವರ 13 ಲವ್ ಸ್ಟೋರಿ ಬಹಿರಂಗ.!]

ಪ್ರಥಮ್ ಗಾಗಿ ಜನ ಕರೆನ್ಸಿ ಹಾಕಿಸಿಕೊಂಡು, ಲೆಕ್ಕವಿಲ್ಲದಷ್ಟು ಬಾರಿ ವೋಟ್ ಮಾಡಿದ್ದಾರೆ ಅನ್ನೋದನ್ನ ತಳ್ಳಿಹಾಕುವಂತೆಯೇ ಇಲ್ಲ.! ಸಾಕ್ಷಿ ಬೇಕು ಅಂದ್ರೆ, ಸಂಪೂರ್ಣ ಮಾಹಿತಿ ಓದಿರಿ....

ಪ್ರಥಮ್ ಬಳಿ ಇರುವ ಸಾಕ್ಷಿ ಇದು

''ತಮಗಾಗಿ ಜನ ನಿಜಕ್ಕೂ ವೋಟ್ ಮಾಡಿದ್ದಾರೆ'' ಎಂಬುದರ ಕುರಿತು ಸ್ವತಃ ಪ್ರಥಮ್ ಫೇಸ್ ಬುಕ್ ನಲ್ಲಿ ಒಂದು ಘಟನೆ ವಿವರಿಸಿದ್ದಾರೆ.['ಬಿಗ್ ಬಾಸ್' ಗೆದ್ದ ಪ್ರಥಮ್: ವೀಕ್ಷಕರ ಸಂಭ್ರಮಕ್ಕೆ ಪಾರವೇ ಇಲ್ಲ.!]

ನಿನ್ನೆ ನಡೆದ ಘಟನೆ ಇದು

ರಿಷಿಕಾ ಜೊತೆ ಲಾಂಗ್ ಡ್ರೈವ್ ಹೊರಡುವಾಗ, ಕಾರ್ ರಿವರ್ಸ್ ತೆಗೆದುಕೊಳ್ಳಬೇಕಾದರೆ, ಹಿಂದೆ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಸ್ವಲ್ಪ ತಾಗಿತಂತೆ. ಆಗ 'ಸಾರಿ' ಕೇಳೋಕೆ ಪ್ರಥಮ್ ಕೆಳಗೆ ಇಳಿದಿದ್ದಾರೆ. ಪ್ರಥಮ್ ರವರನ್ನ ನೋಡುತ್ತಿದ್ದಂತೆಯೇ, ಆ ದ್ವಿಚಕ್ರ ವಾಹನದವರು ''ಸರ್... ನೀವಾ... ನನ್ನ ಹೆಂಡತಿಗೆ ನೀವು ಅಂದ್ರೆ ಬಹಳ ಇಷ್ಟ. 500 ರೂಪಾಯಿ ಕರೆನ್ಸಿ ಹಾಕಿಸಿ ವೋಟ್ ಮಾಡವ್ಳೆ... ನೀವು ಸೂಪರ್ ಸರ್'' ಅಂತ ಹೇಳಿ ಒಂದು ಸೆಲ್ಫಿ ತೆಗೆಸಿಕೊಂಡರಂತೆ.['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]

'ಒಳ್ಳೆ ಹುಡುಗ'ನ ಬಗ್ಗೆ ಪ್ರೀತಿ

ಪ್ರಥಮ್ ಬಗ್ಗೆ 'ಬಿಗ್ ಬಾಸ್' ಮನೆಯೊಳಗಿದ್ದವರಿಗೆ ಏನೇ ಪ್ರಾಬ್ಲಂ ಇರಬಹುದು. ಆದ್ರೆ, ನೋಡುತ್ತಿದ್ದ ಜನರಿಗೆ ಮಾತ್ರ ಪ್ರಥಮ್ ಮೇಲೆ ಪ್ರೀತಿ ಬೆಳೆದಿತ್ತು ಅನ್ನೋದಕ್ಕೆ ಈ ಘಟನೆ ಸಾಕ್ಷಿ.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಪ್ರಥಮ್ ಬರೆದುಕೊಂಡಿರೋದನ್ನ ನೋಡಿ....

ಈ ಘಟನೆ ಕುರಿತು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಥಮ್ ಬರೆದುಕೊಂಡಿರುವುದನ್ನ ಒಮ್ಮೆ ಓದಿ...

English summary
Bigg Boss Kannada 4 Winner Pratham took is Facebook Page to express his happiness about his Fan Following.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada