»   » 'ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!

'ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!

Posted By:
Subscribe to Filmibeat Kannada

''ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲವು''.......ಇದು 'ಬಿಗ್ ಬಾಸ್'ನಲ್ಲಿ ಪ್ರಥಮ್ ಅವರ ವೇದವಾಕ್ಯ. ಪ್ರತಿ ಬಾರಿ ಗೆದ್ದಾಗಲೂ, ನಾಮಿನೇಟ್ ಆಗಿ ಸೇಫ್ ಆದಾಗಲೂ ಇದು ಕನ್ನಡಿಗರ ಗೆಲುವು ಎಂದು ಗೆಲುವನ್ನ ಕನ್ನಡಿಗರಿಗೆ ಅರ್ಪಿಸುತ್ತಿದ್ದರು.

ಒಂದು ವೇಳೆ ಪ್ರಥಮ್ ಗೆದ್ದರೇ ಕನ್ನಡಿಗರಿಗಾಗಿ ಏನು ಮಾಡ್ತಾರೆ? 'ಕನ್ನಡಿಗರ ಗೆಲುವು' ಎಂದು ಬರಿ ಮಾತಿನಲ್ಲಿ ಹೇಳದೆ, ಕನ್ನಡಿಗರಿಗಾಗಿ ಏನಾದರೂ ಮಾಡಿ ತೋರಿಸುತ್ತಾರ ಎಂಬ ಚರ್ಚೆ ಸಾಮಾನ್ಯವಾಗಿತ್ತು.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ಆದ್ರೆ, ಒಳ್ಳೆ ಹುಡುಗ ಪ್ರಥಮ್ ಅದನ್ನ ಸಾಬೀತು ಪಡಿಸಿದ್ದಾರೆ. ಹೌದು, 'ಬಿಗ್ ಬಾಸ್'ನಲ್ಲಿ ಗೆದ್ದ 50 ಲಕ್ಷ ರೂಪಾಯಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ನನಗೆ ಬೇಡವೆಂದಿದ್ದಾರೆ. ಹಾಗಾದ್ರೆ, ಪ್ರಥಮ್ ಗೆದ್ದ 50 ಲಕ್ಷವನ್ನ ಏನು ಮಾಡುತ್ತಿದ್ದಾರೆ? ಮುಂದೆ ಓದಿ....

'ಬಿಗ್ ಬಾಸ್' ಗೆದ್ದ 'ಪ್ರಥಮ್'ಗೆ 50 ಲಕ್ಷ!

'ಬಿಗ್ ಬಾಸ್ ಕನ್ನಡ 4'ನೇ ಆವೃತ್ತಿಯ ವಿಜೇತರಾದ ಒಳ್ಳೆ ಹುಡುಗ ಪ್ರಥಮ್ ಗೆ, ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ 50 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು.

ಒಂದೇ ಒಂದು ರೂಪಾಯಿ ಬೇಡವೆಂದ ಪ್ರಥಮ್!

'ಬಿಗ್ ಬಾಸ್'ನಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣದಲ್ಲಿ ಒಂದು ರೂಪಾಯಿ ಹಣ ಕೂಡ ನನಗೆ ಬೇಡವೆಂದು ಪ್ರಥಮ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲೇ ಖಡಕ್ ಆಗಿ ಹೇಳಿದ್ದಾರೆ.['ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!]

50 ಲಕ್ಷವೂ ಸಮಾಜ ಕಲ್ಯಾಣಕ್ಕಾಗಿ ಮೀಸಲು

'ಬಿಗ್ ಬಾಸ್' ಫಿನಾಲೆಯಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣವನ್ನ ರೈತ ಕುಟುಂಬಗಳಿಗೆ, ಹುತಾತ್ಮ ಯೋಧರ ಕುಟುಂಬಕ್ಕೆ, ಬಡ ಜನರಿಗೆ ನೀಡುವುದಾಗಿ 'ಪ್ರಥಮ್' ನಿರ್ಧರಿಸಿದ್ದಾರೆ.

'ಒಳ್ಳೆ ಹುಡುಗನ' 50 ಲಕ್ಷದ ಯೋಜನೆ!

* 5 ಲಕ್ಷ ಟಿ.ನರಸಿಪುರ, ಕೊಳ್ಳೆಗಾಲ ಬಳಿ ಇರುವ ಬಡ ಹೆಣ್ಣು ಮಕ್ಕಳ ಮದುವೆ ಸಹಾಯಕ್ಕೆ.
* 5 ಲಕ್ಷ ಮಹದೇಶ್ವರ ಬೆಟ್ಟದ ಬಳಿ ಇರುವ ಮನೆಗಳಿಗೆ ವಿದ್ಯುತ್ ವ್ಯವಸ್ಥೆಗೆ.
* 20 ಲಕ್ಷ ದೇಶ ಕಾಯೋ ಸೈನಿಕರಿಗೆ ಮೀಸಲು.
* 20 ಲಕ್ಷ ಮೃತಪಟ್ಟ ರೈತರ ಕುಟುಂಬಗಳಿಗೆ ನೀಡಲು ನಿರ್ಧರಿಸಿದ್ದಾರೆ.

ಮಗನಿಗೆ ಸಾಥ್ ಕೊಟ್ಟ ಮಲ್ಲಣ್ಣ!

'ಪ್ರಥಮ್' ಅವರ ಈ ನಿರ್ಧಾರವನ್ನ ತಂದೆ ಮಲ್ಲಣ್ಣ ಅವರು ಸಂಪೂರ್ಣವಾಗಿ ಸ್ವೀಕರಿಸಿದರು. ಮಗನ ಆಶಯ ಹಾಗೂ ತಂದೆಯ ಆಶಯದಂತೆ ಎಲ್ಲ ಹಣವನ್ನ ರೈರಿಗೆ, ಹಳ್ಳಿಗಳ ಉದ್ಧಾರಕ್ಕೆ ಬಳಸುವುದಾಗಿ ವೇದಿಕೆಯಲ್ಲಿ ಹೇಳಿದರು.

English summary
Colors Kannada Channel's Popular Reality Show Bigg Boss Kannada Season Winner Director Pratham Donated His Entire Prize Money 50 Lakh Rupees to Noble cause.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada