»   » ಜಗನ್ ಬಂಡವಾಳ ಸಿಹಿ ಕಹಿ ಚಂದ್ರು ಮುಂದೆ ಬಟಾ ಬಯಲು.!

ಜಗನ್ ಬಂಡವಾಳ ಸಿಹಿ ಕಹಿ ಚಂದ್ರು ಮುಂದೆ ಬಟಾ ಬಯಲು.!

Posted By:
Subscribe to Filmibeat Kannada
ಜಗನ್ ಬಂಡವಾಳ ಸಿಹಿ ಕಹಿ ಚಂದ್ರು ಮುಂದೆ ಬಟಾ ಬಯಲು | Filmibeat Kannada

ಸಿಹಿ ಕಹಿ ಚಂದ್ರು, ಜಗನ್ನಾಥ್ ಚಂದ್ರಶೇಖರ್, ಅನುಪಮಾ ಗೌಡ, ಆಶಿತಾ, ಜೆಕೆ... ಇವರೆಲ್ಲರೂ 'ಬಿಗ್ ಬಾಸ್' ಮನೆಗೆ ಕಾಲಿಟ್ಟ ದಿನದಿಂದಲೂ ಒಟ್ಟಾಗಿ ಇದ್ದಾರೆ. ಯಾವುದೇ ಜಗಳ ಆದರೂ, ಒಬ್ಬರ ಪರ ಮತ್ತೊಬ್ಬರು ನಿಲ್ಲುತ್ತಾರೆ.

ಐಸ್ ಕ್ರೀಮ್ ಹಾಗೂ ಬಿಸ್ಕತ್ತುಗಳಿಗೆ ಗಲಾಟೆ ಆದಾಗ ಸಿಹಿ ಕಹಿ ಚಂದ್ರು ಪರ ದನಿ ಎತ್ತಿದವರು ಜಗನ್ನಾಥ್. ಆದ್ರೆ, ಅದೇ ಜಗನ್ನಾಥ್... ಸಿಹಿ ಕಹಿ ಚಂದ್ರು ಅವರ ಬೆನ್ನ ಹಿಂದೆ ಅದೇ ಐಸ್ ಕ್ರೀಮ್ ವಿಷಯಕ್ಕೆ ಬೇಸರ ವ್ಯಕ್ತಪಡಿಸಿದ್ದರು.

ಐಸ್ ಕ್ರೀಮ್, ಬಿಸ್ಕತ್ತುಗಳಿಗಾಗಿ 'ಬಿಗ್ ಬಾಸ್' ಮನೆಯಲ್ಲಿ ನಡೆದಿದೆ ಮಹಾಯುದ್ಧ.!

ಒಂದ್ಕಡೆ ಎಲ್ಲರಿಗೂ ತಿಂಡಿ ಕಡಿಮೆ ಕೊಡುವ ಸಿಹಿ ಕಹಿ ಚಂದ್ರು, ಮರೆವಿನ ಕಾರಣದಿಂದಾಗಿ ಗ್ಯಾಸ್ ಆಫ್ ಮಾಡದೇ ಅಡುಗೆ ಅನಿಲ ಪೂರೈಕೆ ಸ್ಥಗಿತಕ್ಕೂ ಕಾರಣರಾಗಿದ್ದವರು.

ಇಷ್ಟೆಲ್ಲ ಆದರೂ ತಮ್ಮ ಪರ ಜಗನ್ನಾಥ್ ಇದ್ದಾರೆ ಎಂಬ ಭಾವನೆ ಸಿಹಿ ಕಹಿ ಚಂದ್ರು ರವರಲ್ಲಿ ಇತ್ತು. ಆದ್ರೀಗ, ಆ ಭಾವನೆ ಬದಲಾಗಿದೆ. ಅಕ್ಕ-ಪಕ್ಕದಲ್ಲಿ ಇರುವವರೇ ಬೆನ್ನ ಹಿಂದೆ ಯಾವ ರೀತಿ ಮಾತನಾಡುತ್ತಾರೆ ಎಂಬ ಸತ್ಯ ದರ್ಶನ ಸಿಹಿ ಕಹಿ ಚಂದ್ರು ರವರಿಗೆ ಆಗಿದೆ. ಮುಂದೆ ಓದಿರಿ....

'ಬಿಗ್ ಬಾಸ್' ಕೊಟ್ಟಿದ್ದ ಟಾಸ್ಕ್ ಏನು.?

ಆಧುನಿಕ ನಗರದ ಜನ ಜೀವನದ ಶೈಲಿಯನ್ನ ಪರಿಚಯಿಸುವ ಸಲುವಾಗಿ 'ಬಿಗ್ ಬಾಸ್ ನಗರ' ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದರು. ಇದರ ಅನುಸಾರ ಮನೆಯ ವಿವಿಧ ಜಾಗಗಳಿಗೆ ವಿವಿಧ ಹೆಸರು ನೀಡಲಾಗಿತ್ತು. ಅದರಂತೆ ಕನ್ಫೆಶನ್ ಕೋಣೆಗೆ 'ಕಪಾಲಿ ಚಿತ್ರಮಂದಿರ' ಅಂತ ಹೆಸರು ಇಡಲಾಗಿತ್ತು.

ಇನ್ಮುಂದೆ 'ಬಿಗ್ ಬಾಸ್' ಮನೆಯಲ್ಲಿ ಸಿಹಿ ಕಹಿ ಚಂದ್ರು ಅಡುಗೆ ಮಾಡಲ್ವಂತೆ.!

ಕಪಾಲಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ

'ಚಿತ್ರ ಪ್ರದರ್ಶನ' ಎಂದ ಕೂಡಲೆ 'ಬಿಗ್ ಬಾಸ್' ಮನೆಯಲ್ಲಿ ಮನರಂಜನೆಗೆ ಅವಕಾಶ ನೀಡಲಾಗಿದೆ ಎಂದುಕೊಳ್ಳಬೇಡಿ. ಕನ್ಫೆಶನ್ ರೂಮ್ ಅರ್ಥಾತ್ ಕಪಾಲಿ ಚಿತ್ರಮಂದಿರದಲ್ಲಿ 'ಬಿಗ್ ಬಾಸ್' ಮನೆಯಲ್ಲಿರುವವರ ನಿಜ ಬಣ್ಣ ಬಯಲು ಮಾಡಲಾಗುತ್ತಿತ್ತು.

ನಿಯಮದ ವಿರುದ್ಧ ಹೋದ ಸಿಹಿ ಕಹಿ ಚಂದ್ರು ಎಡವಿದ್ದು ಎಲ್ಲಿ.?

ಮೊದಲು ಚಿತ್ರ ವೀಕ್ಷಿಸಿದವರು ಸಿಹಿ ಕಹಿ ಚಂದ್ರು

ಕಪಾಲಿ ಚಿತ್ರಮಂದಿರದಲ್ಲಿ ಮೊದಲು ಒಳಗೆ ಹೋದವರು ಸಿಹಿ ಕಹಿ ಚಂದ್ರು. ಅಲ್ಲಿ ಮುಂಗಡ ಹಣ ಪಾವತಿ ಮಾಡಿ, ಸಿಹಿ ಕಹಿ ಚಂದ್ರು ಚಿತ್ರ ವೀಕ್ಷಿಸಿದರು.

ವಾರವಿಡೀ ಗಳಿಸಿದ್ದನ್ನ ಒಂದೇ ನಿಮಿಷದಲ್ಲಿ ಹಾಳು ಮಾಡಿದ ಚಂದ್ರು, ಅನು.!

ಒಳಗೆ ಏನಾಯ್ತು.?

'ಬಿಗ್ ಬಾಸ್' ಮನೆಯೊಳಗೆ ಇಲ್ಲಿಯವರೆಗೂ ಯಾರೆಲ್ಲ ಸಿಹಿ ಕಹಿ ಚಂದ್ರು ಬೆನ್ನ ಹಿಂದೆ ಕೆಟ್ಟದಾಗಿ ಕಾಮೆಂಟ್ ಮಾತನಾಡಿದ್ದಾರೋ, ಆ ಎಲ್ಲ ವಿಡಿಯೋ ಕ್ಲಿಪ್ ಗಳನ್ನ 'ಬಿಗ್ ಬಾಸ್', ಸಿಹಿ ಕಹಿ ಚಂದ್ರುಗೆ ತೋರಿಸಿದರು.

ಸಿಹಿ ಕಹಿ ಚಂದ್ರು ಮರೆತ ಗುಟ್ಟು, ಕಿಚ್ಚ ಸುದೀಪ್ ಮುಂದೆ ರಟ್ಟು.!

ರಿಯಾಝ್ ಮಾತನಾಡಿದ್ದು...

ಬೂಟ್ ಟಾಸ್ಕ್ ನಲ್ಲಿ ರಿಯಾಝ್ ಹಾಗೂ ಸಿಹಿ ಕಹಿ ಚಂದ್ರು ನಡುವೆ ಭಿನ್ನಾಭಿಪ್ರಾಯ ಮೂಡಿದ ಮೇಲೆ ಕ್ಯಾಮರಾ ಮುಂದೆ ರಿಯಾಝ್ ಆಡಿದ ಮಾತುಗಳು 'ಕಪಾಲಿ ಚಿತ್ರಮಂದಿರ'ದಲ್ಲಿ ಪ್ಲೇ ಆಯ್ತು.

ಸಿಹಿ ಕಹಿ ಚಂದ್ರು ಹೊರ ಹೋದರೆ, ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಹೇಳ್ದಂಗೆ ಕೇಳ್ತಾರೆ.!

ಜಗನ್ ಬಂಡವಾಳ ಬಯಲು

ಗ್ಯಾಸ್ ಆಫ್ ಆದಾಗ ಸಿಹಿ ಕಹಿ ಚಂದ್ರು ಬಗ್ಗೆ ಜಗನ್ ಬೇಸರ ಗೊಂಡಿದ್ದು, ಸಿಹಿ ಕಹಿ ಚಂದ್ರು ಬಗ್ಗೆ ಜೆಕೆ ಹಾಗೂ ಜಗನ್ ಮಾತನಾಡಿಕೊಂಡಿದ್ದು, ಐಸ್ ಕ್ರೀಮ್ ವಿಚಾರದ ಬಗ್ಗೆ ಸಿಹಿ ಕಹಿ ಚಂದ್ರು ಬಗ್ಗೆ ಆಶಿತಾ ಬಳಿ ಜಗನ್ ಅಸಮಾಧಾನ ವ್ಯಕ್ತಪಡಿಸಿದ್ದನ್ನೆಲ್ಲ ಸಿಹಿ ಕಹಿ ಚಂದ್ರು ಕಣ್ತುಂಬಿಕೊಂಡರು.

ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ.!

ಅಡುಗೆ ಮನೆ ಕಿತ್ತಾಟ

''ಚಂದ್ರು ಹೋದರೆ, ಬೇರೆಯವರು ಹೇಳಿದ ಹಾಗೆ ಕೇಳುತ್ತಾರೆ. ಚಂದ್ರು ಇರುವವರೆಗೂ ಕಿಚನ್ ಮರೆತು ಬಿಡಿ'' ಎಂದು ಜಯಶ್ರೀನಿವಾಸನ್, ಸಮೀರಾಚಾರ್ಯ ಅವರಿಗೆ ಹೇಳಿದ ಕ್ಲಿಪ್ ನ ಸಿಹಿ ಕಹಿ ಚಂದ್ರು ವೀಕ್ಷಿಸಿದರು.

ಕ್ಯಾಪ್ಟನ್ ರೇಸ್ ನಿಂದ ಹೊರಬಂದಾಗ...

'ಬೇಕು ಅಂತಲೇ ಕ್ಯಾಪ್ಟನ್ ಟಾಸ್ಕ್ ನಲ್ಲಿ ತಪ್ಪು ಉತ್ತರಗಳನ್ನು ಕೊಟ್ಟೆ'' ಎಂದು ಸಿಹಿ ಕಹಿ ಚಂದ್ರು ಹೇಳಿದ್ಮೇಲೆ, ನಿವೇದಿತಾ ಬೇಜಾರಾಗಿ ಬೇರೆಯವರ ಬಳಿ ಕಾಮೆಂಟ್ ಮಾಡಿದ್ದನ್ನೂ ಸಿಹಿ ಕಹಿ ಚಂದ್ರು ನೋಡಿದರು.

ಬೇಕು ಅಂತಲೇ ಸೋತರಂತೆ ಚಂದ್ರು.! ಕ್ಯಾಪ್ಟನ್ ನಿವೇದಿತಾಗೆ ಮುನಿಸು.!

ಇಷ್ಟೆಲ್ಲ ನೋಡಿದ್ಮೇಲೆ....

ಇಷ್ಟೆಲ್ಲ ನೋಡಿದ್ಮೇಲೆ, ''ನನ್ನ ಜೊತೆ ಇದ್ದವರೇ ಹೀಗೆಲ್ಲ ಮಾತನಾಡುತ್ತಿದ್ದಾಗ, ನನಗೆ ನಗು ಅಂದ್ರೆ ನಗು. ಆ ಸಿನಿಮಾ ನೋಡಿದ್ರೆ, ಒಂಥರಾ ಆಗುತ್ತೆ. ನಿಂತಿರುವ ಕಾಲು ನಡುಗುತ್ತೆ. ಮಹಾನ್ ಮೂರ್ಖ ನಾನು. ನೀವು ಎಂಥ ಮೂರ್ಖ ಅಂತ ನನಗೆ ಚೆನ್ನಾಗಿ ತೋರಿಸಿದರು'' ಎಂದು ಸಿಹಿ ಕಹಿ ಚಂದ್ರು ಹೇಳಿದರು.

English summary
Bigg Boss Kannada 5: Week 7: Sihi Kahi Chandru watched all negative comments made by his fellow housemates

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada