For Quick Alerts
  ALLOW NOTIFICATIONS  
  For Daily Alerts

  BBK9: ಬಿಗ್‌ಬಾಸ್ ಮನೆಯಿಂದ ದಿವ್ಯಾ ಉರುಡುಗ ಹೊರಕ್ಕೆ!?

  |

  ಬಿಗ್‌ಬಾಸ್ ಕನ್ನಡ ಸೀಸನ್ 09 ರ ಗ್ರ್ಯಾಂಡ್ ಫಿನಾಲೆ ಆರಂಭವಾಗಿದ್ದು, ಕಾರ್ಯಕ್ರಮದ ಪ್ರೋಮೋ ಈಗಾಗಲೇ ಹೊರಬಿದ್ದಿದೆ. ಕಾರ್ಯಕ್ರಮವು 7:30 ರಿಂದ ಪ್ರಸಾರವಾಗಲಿದೆ.

  ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಅವರುಗಳು ಬಿಗ್‌ಬಾಸ್ ಕನ್ನಡ ಸೀಸನ್ 09 ರ ಕೊನೆಯ ಹಂತವನ್ನು ತಲುಪಿದ್ದು ಇವರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ.

  ಕಾರ್ಯಕ್ರಮದ ಚಿತ್ರೀಕರಣ ಬಹುತೇಕ ಮುಗಿದಿದೆ ಎಂದೇ ಹೇಳಲಾಗುತ್ತಿದ್ದು, ಕೆಲವು ಮೂಲಗಳ ಪ್ರಕಾರ, ಫಿನಾಲೆಯಲ್ಲಿ ಎಲಿಮಿನೇಟ್ ಆದ ಮೊದಲ ದಿವ್ಯಾ ಉರುಡುಗ.

  ದಿವ್ಯಾ ಉರುಡುಗ ಅವರು ಫಿನಾಲೆಯಲ್ಲಿ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಬಿಗ್‌ಬಾಸ್‌ ಸೀಸನ್ 09 ರ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವವರು ಈ ವಿಷಯ ಹಂಚಿಕೊಂಡಿದ್ದಾರೆಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಸಹ.

  ದಿವ್ಯಾ ಉರುಡುಗ ಈ ಹಿಂದಿನ ಎಂಟನೇ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಅಲ್ಲಿಯೂ ಅವರು ಕೊನೆಯ ವರೆಗೂ ಚೆನ್ನಾಗಿ ಆಡಿದ್ದರು. ಆದರೆ ಟ್ರೋಫಿ ಗೆಲ್ಲಲು ವಿಫಲವಾಗಿದ್ದರು. ಈ ಬಾರಿಯೂ ಸಹ ಚೆನ್ನಾಗಿ ಆಡಿದ್ದ ದಿವ್ಯಾ ಉರುಡುಗ ಗೆಲ್ಲಲು ವಿಫಲವಾಗಿದ್ದಾರೆ.

  ಈ ಸೀಸನ್‌ನ ಆರಂಭದಿಂದಲೂ ದಿವ್ಯಾ ಜಾಣತನದಿಂದ ಗೇಮ್‌ಗಳನ್ನು ಆಡುತ್ತಾ ಬಂದಿದ್ದರು. ಟಾಸ್ಕ್‌ ಆಗಿರಲಿ, ಮನೆಯವರೊಟ್ಟಿಗೆ ಮಾತನಾಡುವಾಗ, ವ್ಯವರಿಸುವಾಗ ಎಲ್ಲದರಲ್ಲೂ ದಿವ್ಯಾ ಜಾಣತನ ಪ್ರದರ್ಶಿಸಿದ್ದರು. ಕಳೆದ ಸೀಸನ್‌ಗಿಂತಲೂ ಚೆನ್ನಾಗಿಯೇ ದಿವ್ಯಾ ಆಡಿದ್ದರಾದರೂ ಯಾಕೋ ಜನ ದಿವ್ಯಾಗೆ ಓಟು ಮಾಡಿದಂತಿಲ್ಲ.

  ದಿವ್ಯಾ ಎಲಿಮಿನೇಟ್ ಆದರೆ ಆಟದಲ್ಲಿ ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಅಷ್ಟೆ ಆಟಕ್ಕೆ ಉಳಿದಿದ್ದಾರೆ.

  English summary
  BBK9: experienced contestant Divya Uruduga out from Bigg Boss Kannada season 09 finale.
  Friday, December 30, 2022, 17:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X