»   » ಆ.6ಕ್ಕೆ ಜೀ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ 'ಬ್ಯೂಟಿಫುಲ್ ಮನಸ್ಸುಗಳು'

ಆ.6ಕ್ಕೆ ಜೀ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ 'ಬ್ಯೂಟಿಫುಲ್ ಮನಸ್ಸುಗಳು'

Posted By:
Subscribe to Filmibeat Kannada

'ಲೂಸಿಯ' ಜೋಡಿ ಸತೀಶ್ ನೀನಾಸಂ ಮತ್ತು ಶ್ರುತಿ ಹರಿಹರನ್ ಅಭಿನಯದ ಬ್ಯೂಟಿಫುಲ್ ಸಿನಿಮಾ 'ಬ್ಯೂಟಿಫುಲ್ ಮನಸ್ಸುಗಳು' ಆಗಸ್ಟ್ 6 (ಭಾನುವಾರ) ಕ್ಕೆ ಪ್ರಪ್ರಥಮ ಬಾರಿಗೆ ಜೀ ಕನ್ನಡ ವಾಹಿನಿಯಲ್ಲಿ ಸಂಜೆ 6 ಕ್ಕೆ ಪ್ರಸಾರವಾಗಲಿದೆ.

ವಿಮರ್ಶೆ: 'ಬ್ಯೂಟಿಫುಲ್ ಮನಸ್ಸುಗಳು' ಪ್ರಸ್ತುತ ಸಮಾಜಕ್ಕೆ ಕನ್ನಡಿ

ಪ್ರಸ್ತುತ ಸಮಾಜದಲ್ಲಿ ಅದ್ಭುತವಾದ ಸುಂದರ ಮನಸ್ಸುಗಳು ತುಂಬಾ ಇವೆ. ಆದರೆ ಇವೆಲ್ಲಾ ಸಣ್ಣ ಸಣ್ಣ ಮಿಸ್‌ಟೇಕ್‌ ಗಳಿಂದ ಒಡೆದು ಹೋಗುತ್ತಿವೆ. ಇದಕ್ಕೆ ಕಾರಣ ಸಮಾಜದ ವ್ಯವಸ್ಥೆ. ಒಡೆದ ಮನಸ್ಸುಗಳು ಮತ್ತೆ ಒಂದಾಗುವಷ್ಟರಲ್ಲಿ ಎಷ್ಟೋ ಅನಾಹುತಗಳು ಆಗಿಬಿಡಬಹುದು. ಇದಕ್ಕೆ ಮುಖ್ಯ ಕಾರಣ ಜ್ಞಾನಿಗಳು ಸಹ ಅಜ್ಞಾನಿಗಳಂತೆ ಅಲೋಚಿಸದೆ ನಡೆದುಕೊಳ್ಳುವ ಗುಣ ಎಂಬ ಸಾರಾಂಶವನ್ನು ಹೇಳುವ ಅತ್ಯುತ್ತಮ ಕಥೆಯನ್ನು 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ಹೊಂದಿದೆ.

'Beautiful Manassugalu' premiere in Zee Kannada tv on August 6th

ಜನವರಿ 20 ರಂದು ಬಿಡುಗಡೆ ಆದ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ಸಿನಿಪ್ರಿಯರಿಂದ ಮಾತ್ರವಲ್ಲದೇ ವಿಮರ್ಶಕರಿಂದಲೂ ಉತ್ತಮ ರೆಸ್ಪಾನ್ಸ್ ಪಡೆಯಿತು. ಅಲ್ಲದೇ ಅಮೆರಿಕ ಮತ್ತು ಇತರೆ ಕೆಲವು ದೇಶಗಳಲ್ಲು ಚಿತ್ರ ಪ್ರದರ್ಶನ ಕಂಡಿತ್ತು. ಜಯತೀರ್ಥ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರಕ್ಕೆ ಬಿಜೆ ಭರತ್ ರವರು ಸಂಗೀತ ನೀಡಿದ್ದರು. ಸತೀಶ್ ನೀನಾಸಂ ಮತ್ತು ಶ್ರುತಿ ಹರಿಹರನ್ ಹೊರತು ಪಡಿಸಿ ಉಳಿದಂತೆ ಅಚ್ಚುತ್ ಕುಮಾರ್, ತಬಲ ನಾಣಿ, ಸಂದೀಪ್, ಪ್ರಶಾಂತ್ ಸಿದ್ದಿ ಮತ್ತು ಇತರರು ಅಭಿನಯಿಸಿದ್ದಾರೆ.

ಬ್ಯೂಟಿಫುಲ್ ಆದ 'ಬ್ಯೂಟಿಫುಲ್ ಮನಸ್ಸುಗಳು' ಗೆ ವಿಮರ್ಶಕರ ಕಾಮೆಂಟ್‌ಗಳಿವು...

ಚಿತ್ರದಲ್ಲಿಯ 'ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೆ ಚಂದ.. ಮಾರ್ಕೆಟ್ ರೋಡಲ್ಲಿ ಬಾಸ್ಕೆಟ್ ಹಿಡ್ಕೊಂಡು ನಮ್ ಹುಡುಗಿ ನಡೆಯೋದೆ ಅಂದ' ಎಂಬ ಹಾಡು ಸಖತ್ ಹಿಟ್ ಆಗಿತ್ತು.

'ಬ್ಯೂಟಿಫುಲ್ ಮನಸ್ಸುಗಳನ್ನು' ಥಿಯೇಟರ್‌ನಲ್ಲಿ ನೋಡಲು ಮಿಸ್ ಮಾಡಿಕೊಂಡವರು, ಆಗಸ್ಟ್ 6 ಭಾನುವಾರದಂದು ಸಂಜೆ 6 ಕ್ಕೆ ಜೀ ಕನ್ನಡ ಟ್ಯೂನ್ ಮಾಡಲು ಮರೆಯದಿರಿ.

English summary
Sathish Neenasam and Sruthi Hariharan starrer 'Beautiful Manassugalu' Kannada movie premiere in Zee Kannada tv on August 6th at 6PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada