»   » 'ನೀರ್ ದೋಸೆ' ವಿಜಯ್ ಪ್ರಸಾದ್ ಜೊತೆ ರಮ್ಯಾ 'ಬೆಣ್ಣೆ ದೋಸೆ'.!

'ನೀರ್ ದೋಸೆ' ವಿಜಯ್ ಪ್ರಸಾದ್ ಜೊತೆ ರಮ್ಯಾ 'ಬೆಣ್ಣೆ ದೋಸೆ'.!

By: ಹರಾ
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು 'ನೀರ್ ದೋಸೆ' ವಿವಾದದ ಬಗ್ಗೆ ನಾವು ನಿಮಗೆ ಇಂಟ್ರೊಡಕ್ಷನ್ ಕೊಡುವ ಅಗತ್ಯವೇ ಇಲ್ಲ.

ಕಳೆದ ಎರಡು ವರ್ಷಗಳಿಂದ ಮೆಗಾ ಸೀರಿಯಲ್ ಮಾದರಿ ದಿನಕ್ಕೊಂದು ಬ್ರೇಕಿಂಗ್ ನ್ಯೂಸ್, ಆಗಾಗ ಫ್ಲ್ಯಾಶ್ ನ್ಯೂಸ್, ವೀಕೆಂಡ್ ನಲ್ಲಿ ರಮ್ಯಾ 'ನೀರ್ ದೋಸೆ' ಹುಯ್ತಾರೋ ಇಲ್ವೋ ಅನ್ನೋ ಸ್ಪೆಷಲ್. ಗಂಟೆಗಟ್ಟಲೆ ಡಿಸ್ಕಷನ್ ಗಳನ್ನ ಟಿವಿ ವಾಹಿನಿಗಳಲ್ಲಿ ನೀವು ನೋಡಿರ್ತೀರಾ.

ನವರಸ ನಾಯಕ ಜಗ್ಗೇಶ್ ಟ್ವೀಟ್ ಪ್ರಹಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬಗೆ ಹರಿಯದ ವಿವಾದ, ಕಡೆಗೆ ಅಂಬಿ ಮನೆ ಅಂಗಳಕ್ಕೆ ಬಂದು ತಲುಪಿದರೂ 'ನೀರ್ ದೋಸೆ' ಬೇಯಲಿಲ್ಲ.! [ಕಗ್ಗಂಟಾಗಿರುವ ರಮ್ಯಾ 'ನೀರ್ ದೋಸೆ' ವಿವಾದ]

ಕಡೆಗೆ ರಮ್ಯಾ ರವರನ್ನ ಪಕ್ಕಕ್ಕೆ ತಳ್ಳಿ, ಅದೇ 'ನೀರ್ ದೋಸೆ'ಗೆ ಮೈಸೂರು ಮಸಾಲೆ ಸೇರಿಸಿ, ಬಿಸಿ ಬಿಸಿ ದೋಸೆ ತಿನ್ನಿಸೋಕೆ ಹರಿಪ್ರಿಯಾ ಬಂದ್ಬಿಟ್ಟಿದ್ದಾರೆ. ಇದೆಲ್ಲಾ ನಿಮಗೂ ಗೊತ್ತಿದೆ.

ಈಗ ನಿಮ್ಮನ್ನ ಇಷ್ಟೆಲ್ಲಾ ರಿವೈಂಡ್ ಮಾಡುವುದಕ್ಕೆ ಕಾರಣ, ಅಂದು ನಿರ್ದೇಶಕ ವಿಜಯ್ ಪ್ರಸಾದ್ ಮೇಲೆ ಮುನಿಸಿಕೊಂಡು 'ನೀರ್ ದೋಸೆ' ಮಾಡಲ್ಲ ಅಂತ್ಹೇಳಿ ಹೋಗಿದ್ದ ರಮ್ಯಾ, ಈಗ ಅದೇ ವಿಜಯ್ ಪ್ರಸಾದ್ ಆಕ್ಷನ್ ಕಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.!! ಇದೇ ಇವತ್ತಿನ ಬ್ರೇಕಿಂಗ್ ನ್ಯೂಸ್.!

ಹೌದಾ....ಅಂತ ಹುಬ್ಬೇರಿಸುವ ಮುನ್ನ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ವಿಜಯ್ ಪ್ರಸಾದ್ ಆಕ್ಷನ್ ಕಟ್ ನಲ್ಲಿ ರಮ್ಯಾ.!

'ನೀರ್ ದೋಸೆ' ಚಿತ್ರದಲ್ಲಿ ರಮ್ಯಾ ರವರ ಗ್ಲಾಮರಸ್ ಫೋಟೋ ಕಾಂಟ್ರವರ್ಸಿ ಆದ ಬಳಿಕ, ''ಡೇಟ್ಸ್ ಕೊಟ್ಟಾಗ ಶೂಟಿಂಗ್ ಮಾಡಲಿಲ್ಲ. ಈಗ ನಾನು ಚುನಾವಣೆಯಲ್ಲಿ ಬಿಜಿ. ಶೂಟಿಂಗ್ ಮಾಡುವುದಕ್ಕೆ ಆಗಲ್ಲ'' ಅಂತ ರಮ್ಯಾ ಹೇಳಿದ್ರು. ಅಂದು ನಿರ್ದೇಶಕ ವಿಜಯ್ ಪ್ರಸಾದ್ ರಿಂದ ಬೇಸರಗೊಂಡಿದ್ದ ರಮ್ಯಾ ಇಂದು ಅವರ ಆಕ್ಷನ್ ಕಟ್ ನಲ್ಲಿ ಮಿಂಚಿದ್ದಾರೆ. ಅದು ಯಾವ ಚಿತ್ರಕ್ಕೆ ಅಂತ ಕೇಳ್ತೀರಾ? ಉತ್ತರ ಹೇಳ್ತೀವಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.....

ಸಿನಿಮಾ ಮಾಡ್ತಿದ್ದಾರಾ ರಮ್ಯಾ?

ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ರಾಜಕಾರಣಿ ಕಮ್ ನಟಿ ರಮ್ಯಾ ಮೇಡಂ ಮಿಂಚಿದ್ದಾರೆ. ಅದು ಸಿನಿಮಾಗಾಗಿ ಅಲ್ಲ.! ಬದಲಾಗಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮದಲ್ಲಿ.

ರಮ್ಯಾ ಹುಟ್ಟುಹಬ್ಬದ ಸ್ಪೆಷಲ್ ಎಪಿಸೋಡ್.!

ನವೆಂಬರ್ 29 ರಂದು ರಮ್ಯಾ ರವರ ಹುಟ್ಟುಹಬ್ಬ. ಇದರ ಪ್ರಯುಕ್ತ 'ಬೆಂಗ್ಳೂರ್ ಬೆಣ್ಣೆ ದೋಸೆ' ಹೋಟೆಲ್ ಗೆ ಬಂದ ರಮ್ಯಾ 'ನೀರ್ ದೋಸೆ' ಬಿಟ್ಟು 'ಬೆಣ್ಣೆ ದೋಸೆ' ಸವಿದಿದ್ದಾರೆ.

'ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ರಮ್ಯಾ ಬರ್ತಡೆ ಸೆಲೆಬ್ರೇಷನ್

ಹುಟ್ಟುಹಬ್ಬ ಬಂತು ಅಂದ್ರೆ, ರಮ್ಯಾ ಇಲ್ಲಿರುವುದೇ ಇಲ್ಲ. ಮಾಧ್ಯಮಗಳ ಕೈಗಂತೂ ಸಿಗುವುದೇ ಇಲ್ಲ. ಕಳೆದ ವರ್ಷ ವಿದೇಶದಲ್ಲಿ ಬರ್ತಡೆ ಆಚರಿಸಿಕೊಂಡಿದ್ದ ರಮ್ಯಾ, ಈ ಬಾರಿ ತಮ್ಮ ಅಭಿಮಾನಿಗಳೊಂದಿಗೆ ಜನ್ಮದಿನವನ್ನ ಆಚರಿಸಿಕೊಳ್ಳಲಿದ್ದಾರೆ. ಈ ವರ್ಷದ ಸ್ಪೆಷಲ್ ಏನಂದ್ರೆ, 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮದಲ್ಲೂ ಕಾಣಿಸಿಕೊಂಡು ಕೇಕ್ ಕತ್ತರಿಸಿ ರಮ್ಯಾ ತಮ್ಮ ಬರ್ತಡೆ ಸೆಲೆಬ್ರೇಟ್ ಮಾಡಿದ್ದಾರೆ.

ಗಿಟಾರ್ ಹಿಡಿದ ರಮ್ಯಾ.!

ರಮ್ಯಾ ಹುಟ್ಟುಹಬ್ಬದ ವಿಶೇಷ ಸಂಚಿಕೆಯಲ್ಲಿ ರಮ್ಯಾ ಗಿಟಾರ್ ಹಿಡಿದು ಹಾಡಿರುವುದು ಸ್ಪೆಷಲ್.

ಕಾಲೆಳೆದ್ರಾ ಅರುಣ್ ಸಾಗರ್?

ನಿರೂಪಕ ಮತ್ತು ನಟ ಅರುಣ್ ಸಾಗರ್ ಅತಿಥಿಗಳ ಕಾಲೆಳೆಯುವುದರಲ್ಲಿ ಫೇಮಸ್. ಸ್ಯಾಂಡಲ್ ವುಡ್ ನಿಂದ ಈಗ ಕೊಂಚ ದೂರ ಉಳಿದಿರುವ ರಮ್ಯಾ ಮೇಡಂ ಕಾಲೆಳೆಯುವುದರಲ್ಲಿ ಅರುಣ್ ಯಶಸ್ವಿಯಾಗುತ್ತಾರಾ ಅಂತ ಸಂಚಿಕೆ ಪ್ರಸಾರವಾಗುವವರೆಗೂ ಕಾದು ನೋಡ್ಬೇಕು.

ಹಳೆಯದ್ದನ್ನೆಲ್ಲಾ ಮರೆತ್ರಾ ರಮ್ಯಾ.?

'ನೀರ್ ದೋಸೆ' ವಿವಾದದಿಂದ ನಿರ್ದೇಶಕ ವಿಜಯ್ ಪ್ರಸಾದ್ ರವರೊಂದಿಗೆ ಕಮಿಟ್ ಆಗಿದ್ದ ಮೂರು ಸಿನಿಮಾಗಳನ್ನ ರಮ್ಯಾ ಕ್ಯಾನ್ಸಲ್ ಮಾಡಿದ್ದರು. ಇದೀಗ ಅದೇ ವಿಜಯ್ ಪ್ರಸಾದ್ ನಿರ್ದೇಶನದ ಶೋ 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮಕ್ಕೆ ಬಂದು ಇಡೀ ಗಾಂಧಿನಗರ ಬಾಯಿ ಮೇಲೆ ಬೆರಳಿಡುವಂತೆ ಮಾಡಿದ್ದಾರೆ ರಮ್ಯಾ.

ಮರಳಿ ಸ್ಯಾಂಡಲ್ ವುಡ್ ಗೆ?

ವಿದೇಶದಿಂದ ವಾಪಸ್ ಆದ ನಂತರ ರಮ್ಯಾ 'ಡ್ಯಾನ್ಸಿಂಗ್ ಸ್ಟಾರ್' ಫೈನಲ್ ಸಂಚಿಕೆಯಲ್ಲಿ ವಿಶೇಷ ತೀರ್ಪುಗಾರರಾಗಿ ಭಾಗವಹಿಸಿದ್ದರು. ಅದಾದ ಬಳಿಕ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇದರ ಅರ್ಥ ಮರಳಿ ಬಣ್ಣ ಹಚ್ಚುವ ಬಗ್ಗೆ ರಮ್ಯಾ ಮನಸ್ಸು ಮಾಡ್ತಿದ್ದಾರಾ? ಒಂದ್ವೇಳೆ ರಮ್ಯಾ ಮನಸ್ಸಲ್ಲಿ ಆ ಯೋಚನೆ ಇದ್ದರೆ, ಅಭಿಮಾನಿಗಳಿಗೆ ಅದಕ್ಕಿಂತ ಗುಡ್ ನ್ಯೂಸ್ ಬೇಕಾ?

ವಿಜಯ್ ಪ್ರಸಾದ್ ಜೊತೆಗೆ ಸಿನಿಮಾ?

'ನೀರ್ ದೋಸೆ' ಸಿನಿಮಾ ಕಥೆ ಮುಗೀತು. ನಿರ್ದೇಶಕ ವಿಜಯ್ ಪ್ರಸಾದ್ ರವರ 'ಬೆಂಗ್ಳೂರ್ ಬೆಣ್ಣೆ ದೋಸೆ' ಶೋಗೆ ರಮ್ಯಾ ಮೇಡಂ ಎಂಟ್ರಿಕೊಟ್ಟಿದ್ದು ಆಯ್ತು. ಅಂದ್ಮೇಲೆ ಹಳೆ ಮನಸ್ತಾಪಕ್ಕೆ ಪೂರ್ಣ ವಿರಾಮ ಬಿದ್ದ ಹಾಗೆ ಲೆಕ್ಕ. ನಿರ್ದೇಶಕ ವಿಜಯ್ ಪ್ರಸಾದ್ ರಿಂದ ಮತ್ತೊಂದು ಉತ್ತಮ ಕಥೆ ಸಿಕ್ಕರೆ, ರಮ್ಯಾ ಮೇಡಂ ಮತ್ತೆ ಕಾಲ್ ಶೀಟ್ ನೀಡ್ತಾರಾ.? ಎಲ್ಲದಕ್ಕೂ ಕಾದು ನೋಡ್ಬೇಕು.!

ರಮ್ಯಾ 'ಬೆಣ್ಣೆ ದೋಸೆ' ತಿನ್ನೋದು ಯಾವಾಗ?

ಇದೇ ಭಾನುವಾರ, ನವೆಂಬರ್ 29 ರಂದು ರಾತ್ರಿ 9 ಗಂಟೆಗೆ 'ರಮ್ಯಾ ಹುಟ್ಟುಹಬ್ಬದ ಸ್ಪೆಷಲ್' 'ಬೆಂಗ್ಳೂರ್ ಬೆಣ್ಣೆ ದೋಸೆ' ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Kannada Actress, Congress Politician, EX MP Ramya has taken part in Suvarna Channel's comedy show 'Bengaluru Benne Dose'. Watch 'Ramya's Birthday Special episode' on November 29th 9pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada