»   » 'ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ಮಾಲಾಶ್ರೀ ಆಟೋ ಸವಾರಿ

'ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ಮಾಲಾಶ್ರೀ ಆಟೋ ಸವಾರಿ

Posted By:
Subscribe to Filmibeat Kannada

'ಹೆಣ್ಮಕ್ಳೇ ಸ್ಟ್ರಾಂಗು ಗುರು' ಎಂಬ ಮಾತಿನ ಅರ್ಥವನ್ನು 1989ರಲ್ಲಿ ಕನ್ನಡ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಮಾಲಾಶ್ರೀ ತಮ್ಮ ಚಿತ್ರಗಳ ಮೂಲಕ ಸಾಬೀತು ಪಡಿಸಿದರು. ಅಂತಹ ನಟಿ 'ಕನಸಿನ ರಾಣಿ' ಮಾಲಾಶ್ರೀ ಈ ವಾರ 'ಬೆಂಗಳೂರು ಬೆಣ್ಣೆದೋಸೆ' ಹೋಟೆಲ್ ನ ಅತಿಥಿ.

'ಬೆಂಗಳೂರು ಬೆಣ್ಣೆ ದೋಸೆ' ಕಾರ್ಯಕ್ರಮದ ಪ್ರಾರಂಭದಲ್ಲಿಯೇ ಆಟೋ ಓಡಿಸಿ, 'ಗಂಗಾ' ಸಿನಿಮಾದ ಝಲಕ್ ನೀಡಿದರು ಮಾಲಾಶ್ರೀ. ತಮ್ಮ ಸಿನಿಮಾಗಳಲ್ಲಿ ವಿಲನ್ ಗಳ ಬೆಂಡೆತ್ತಿ ಬ್ರೇಕ್ ಹಾಕುವ ಮಾಲಾಶ್ರೀ, 'ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ಹಿಟ್ಟು ರುಬ್ಬಿ ಎಲ್ಲರನ್ನು ರಂಜಿಸಿದ್ದಾರೆ. [ಡಾ.ರಾಜ್ ಕುಮಾರ್, ಅಂಬರೀಶ್ ಬಗ್ಗೆ ಏನ್ ಹೇಳಿದ್ರು ಗೊತ್ತಾ?]

Bengaluru Benne Dose : Actress Malashri Special Episode

ಜೊತೆಗೆ ''ಕೂಗೋ ಕೋಳಿಗೆ ಖಾರಮಸಾಲೆ..'', ''ಒಳಗೆ ಸೇರಿದರೆ ಗುಂಡು..'', ''ಯಾರಿವಳು ಯಾರಿವಳು..'' ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ. ಮಾಲಾಶ್ರೀ ಸ್ಪೆಷಲ್ 'ಬೆಂಗಳೂರು ಬೆಣ್ಣೆ ದೋಸೆ' ಇದೇ ಅಕ್ಟೋಬರ್ 18 ರಂದು (ಭಾನುವಾರ) ರಾತ್ರಿ 9ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Kannada Actress Malashri has taken part in Suvarna Channel's comedy show 'Bengaluru Benne Dose'. Watch the episode on October 18th 9pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada