For Quick Alerts
  ALLOW NOTIFICATIONS  
  For Daily Alerts

  'ಬೆಣ್ಣೆ ದೋಸೆ' ತಿಂದ್ರಾ, ನಮ್ ಹುಚ್ಚ ವೆಂಕಟ್!

  By Suneetha
  |

  "ನಾನು ಯಾರು?, ನನ್ನ ಏಜ್ ಏನು?, ನಾನೇ ರಿಯಲ್ ಹೀರೋ, ಹೆಣ್ಣುಮಕ್ಕಳನ್ನು ಪೂಜಿಸುತ್ತೇನೆ, ಬ್ಯಾನ್ ಆಗ್ಬೇಕ್, ನನ್ ಎಕ್ಕಡನ್ ತಂದು, ನನ್ ಮಗಂದು, ಅನ್ನೋ ಡೈಲಾಗ್ ಅನ್ನು ನೀವು ಇತ್ತೀಚೆಗಂತೂ ಕಾಮನ್ ಆಗಿ ಕೇಳೇ ಇರ್ತೀರಾ ಅಲ್ವಾ?.

  ಹೌದು ಇದು ಖಂಡಿತಾ ಅವರದೇ ಡೈಲಾಗ್. ಸದ್ಯಕ್ಕೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಹುಚ್ಚ ವೆಂಕಟ್ ಅವರು ಇದೀಗ ತಮ್ಮದೇ ಆದ ಡೈಲಾಗ್ ಮೂಲಕ ಎಲ್ಲೆಡೆ ಕಿಂಗ್ ಆಗಿದ್ದಾರೆ.

  ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರತಿಭೆಯನ್ನು ವೀಕ್ಷಕರಿಗೆ ತೋರಿಸುತ್ತಿರುವ ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲು 'ಬೆಂಗಳೂರು ಬೆಣ್ಣೆ ದೋಸೆ' ಕಾಮಿಡಿ ಶೋ ನಲ್ಲಿ ಭಾಗವಹಿಸಿದ್ದರು.['ಬೆಣ್ಣೆ ದೋಸೆ'ಯಲ್ಲಿ ಡಿಸ್ಕವರಿ ಮಾಡೋಕೆ ಹೊರಟ 'ವಾಸ್ಕೋಡಿಗಾಮ']

  ಇದೀಗ ಹುಚ್ಚ ವೆಂಕಟ್ ಅವರು ಅತಿಥಿಯಾಗಿ ಭಾಗವಹಿಸಿದ್ದ, 'ಬೆಂಗಳೂರು ಬೆಣ್ಣೆ ದೋಸೆ' ಕಾರ್ಯಕ್ರಮದ, ಈ ವಾರದ ವಿಶೇಷ ಸಂಚಿಕೆ ಸುವರ್ಣ ವಾಹಿನಿಯಲ್ಲಿ ಭಾನುವಾರ ಪ್ರಸಾರವಾಗಲಿದೆ.

  Bengaluru Benne Dose: Huccha Venkat Special Episode

  ಇನ್ನು ವಿಭಿನ್ನವಾಗಿ 'ಬೆಂಗಳೂರು ಬೆಣ್ಣೆ ದೋಸೆ' ಕಾರ್ಯಕ್ರಮದ ವೇದಿಕೆಗೆ ಬಂದ ಹುಚ್ಚ ವೆಂಕಟ್ ಅವರು ಕಾಲಿಟ್ಟಿದ್ದೇ ತಡ ನಟ ಅರುಣ್ ಸಾಗರ್ ಅವರ ಕಾಲು ಎಳೆಯಲು ಶುರು ಹಚ್ಚಿಕೊಂಡು ತಮ್ಮ ಮಾತಿನ ಚಾಟಿಯ ಜೊತೆಗೆ ಡೈಲಾಗ್ ಹೊಡೆದು ಅರುಣ್ ಸಾಗರ್ ಅವರು ಸುಸ್ತಾಗುವಂತೆ ಮಾಡಿದ್ದಾರೆ.['ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ಮಾಲಾಶ್ರೀ ಆಟೋ ಸವಾರಿ]

  ಹಿರಿಯ ನಟಿ ಕಲ್ಪನಾ ತರ ನಟನೆ ಮಾಡಲು ಹೋದ ನಟಿ ನೀತು ಅವರಿಗೂ ಏಕ್ ದಂ ಮಾತಿನ ಮಳೆ ಸುರಿಸಿ ನೀತು ಅವರು ವೆಂಕಟ್ ಅವರ ಕಾಲು ಹಿಡಿಯವಂತೆ ಮಾಡಿದ್ದಾರೆ.

  ಜೊತೆಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ ಎಂದು ಹೇಳಿಕೊಂಡಿರುವ ಡೈಲಾಗ್ ಕಿಂಗ್ ಹುಚ್ಚಾ ವೆಂಕಟ್ ಅವರು ಅವರೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.[ಬೆಣ್ಣೆ ದೋಸೆ ತಿಂದು ಗಳಗಳನೆ ಅತ್ತ 'ಬುಲ್ ಬುಲ್' ರಚಿತಾ]

  ಸದಾ ಹಾಡು ಹಾಡುತ್ತಾ, ಹಾಡುಗಳು ಅಂದ್ರೆ ಪ್ರಾಣ ಬಿಡುವ ಹುಚ್ಚಾ ವೆಂಕಟ್ ಅವರು ತಮ್ಮ ಅಟ್ಟರ್ ಪ್ಲಾಪ್ ಚಿತ್ರ 'ಪೊರ್ಕಿ ಹುಚ್ಚಾ ವೆಂಕಟ್' ಚಿತ್ರದ ಹಾಡನ್ನು ಹಾಡಿ ವೀಕ್ಷಕರ ಮನರಂಜಿಸಿದ್ದಾರೆ.

  ಜೊತೆಗೆ ತಮ್ಮ ಫ್ಯಾಮಿಲಿಯ ಬಗ್ಗೆ ಹೇಳಿಕೊಂಡ ಹುಚ್ಚ ವೆಂಕಟ್ ಅವರು ಕ್ಷಣಕಾಲ ಭಾವೋದ್ವೇಗಕ್ಕೆ ಒಳಗಾದರು. ಇಡೀ ಕಾರ್ಯಕ್ರಮದ ತುಂಬಾ ಮನೋರಂಜನೆಯ ಹೊಳೆ ಹರಿಸಿದರೆ, ಮತ್ತೊಂದೆಡೆ ಸ್ತ್ರೀಯರಿಗೆ ಸಲ್ಲಿಸಬೇಕಾದ ಗೌರವದ ಬಗ್ಗೆ ಪಾಠ ಹೇಳಿಕೊಟ್ಟಿದ್ದಾರೆ.

  ಒಟ್ನಲ್ಲಿ ಈ ವಾರದ 'ಬೆಣ್ಣೆದೋಸೆ' ವಿಭಿನ್ನ ಟೇಸ್ಟ್ ಕೊಡಲಿದ್ದು, ಅರುಣನ ಸಾಗರದಲ್ಲಿ ವೆಂಕಟ್ ನ ಹುಚ್ಚಾಟ ನೋಡಲು ನೀವು 'ಬೆಂಗಳೂರು ಬೆಣ್ಣೆ ದೋಸೆ' ಮಿಸ್ ಮಾಡ್ಬೇಡಿ ನೋಡಿ ಇದೇ ಭಾನುವಾರ (ನವೆಂಬರ್ 8) ರಾತ್ರಿ 9 ಘಂಟೆಗೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಮಾತ್ರ.

  English summary
  Kannada Actor Huccha Venkat has taken part in Suvarna Channel's comedy show 'Bengaluru Benne Dose'. Watch the episode on November 8th 9pm.
  Wednesday, November 4, 2015, 14:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X