»   » 'ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ' ಅಂತಿದೆ ಬೆಂಕಿಪಟ್ಣ ತಂಡ

'ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ' ಅಂತಿದೆ ಬೆಂಕಿಪಟ್ಣ ತಂಡ

Posted By:
Subscribe to Filmibeat Kannada

ಕಿರುತೆರೆಯ ವೀಕ್ಷಕರಿಗೆ ಮನೋರಂಜನೆಯ ಮಹಾಪೂರವನ್ನೇ ಹರಿಸುವ ಸದಭಿರುಚಿಯ ಕಾರ್ಯಕ್ರಮಗಳನ್ನು ಸುವರ್ಣ ವಾಹಿನಿಯು ಮೊದಲಿನಿಂದಲೂ ವೀಕ್ಷಕರಿಗೆ ಉಣಬಡಿಸುತ್ತಲೇ ಬರುತ್ತಿದೆ. ಈಗ ಅದೇ ಹಾದಿಯಲ್ಲಿ ಮುಂದುವರೆದು ಇತ್ತೀಚೆಗೆ ಪ್ರಾರಂಭಿಸಿದ ಸೆಲೆಬ್ರಿಟಿ ಗೇಮ್ ಶೋ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮ.

ಈ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸೆಲೆಬ್ರಿಟಿ ಗೇಮ್ ಶೋ ನಲ್ಲಿ ಪ್ರತಿ ಸಂಚಿಕೆಯಲ್ಲೂ ವಿವಿಧ ಸೆಲೆಬ್ರಿಟಿಗಳ ಧಮಾಕಾ! ಈ ಮೊದಲು ಬಿಗ್ ಬಾಸ್ ಸೀಸನ್ 2 ಸ್ಪರ್ಧಿಗಳು, ಅಭಿನೇತ್ರಿ ಚಿತ್ರ ತಂಡ, ಬೆಂಗಳೂರು 23 ಚಲನಚಿತ್ರ ತಂಡ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್-3 ಫೈನಲಿಸ್ಟ್ ಗಳು, ಮಿಲನ & ಮಧುಬಾಲ ಧಾರಾವಾಹಿಯ ಕಲಾವಿದರು ಬಂದು ಹೋಗಿದ್ದಾರೆ. [ಗೂಳಿ ಮೇಲೆ ನೋಡಿ 'ರಾಜ ರಾಜೇಂದ್ರ'ನ ಕಸರತ್ತು]

ಕಳೆದ ವಾರ ರಾಜ ರಾಜೇಂದ್ರ ಚಲನಚಿತ್ರ ತಂಡದ ನಾಯಕ ನಟ ಶರಣ್, ಮ್ಯೂಸಿಕ್ ಡೈರೆಕ್ಟರ್ ಅರ್ಜುನ ಜನ್ಯ, ಕುರಿ ಪ್ರತಾಪ್ ಹಾಗೂ ತನ್ಮಯ ಭಾಗವಹಿಸಿದ್ದರು. ಪ್ರತಿ ಸಂಚಿಕೆಯಲ್ಲೂ ವಿವಿಧ ಸೆಲೆಬ್ರಿಟಿಗಳು ಮತ್ತು ಮನೋರಂಜನೆಯ ವೈಖರಿ ಎಲ್ಲವೂ ವಿಭಿನ್ನ. ಈ ಕಾರ್ಯಕ್ರಮದ ವಿಶೇಷ ಎಂದರೆ ಹಾಸ್ಯಭರಿತವಾಗಿರುವ ,ಯಾವುದೇ ಚೌಕಟ್ಟುಗಳು ಇಲ್ಲದ ರಿಯಾಲಿಟಿ ಶೋ ಇದು.

Benki Patna team in Swalpa Adjust Madkolli

ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದ ಈ ಭಾನುವಾರದ (ಫೆಬ್ರವರಿ 8) ಸಂಚಿಕೆಯ ಸೆಲೆಬ್ರಿಟಿಗಳು 'ಬೆಂಕಿ ಪಟ್ಣ' ಸಿನಿಮಾದ ಅರುಣ್ ಸಾಗರ್, ನಾಯಕ ನಟ ಪ್ರತಾಪ್ ನಾರಾಯಣ್, ಖಳ ನಟ ಮಂಜು ಹಾಗೂ ನಿರ್ದೇಶಕ ಟಿ. ದಯಾನಂದ್. ವಿಶೇಷವೆಂದರೆ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದ ನಿರೂಪಕಿ ಈ ಚಿತ್ರದ ನಾಯಕಿ.

ಈ ಸಂಚಿಕೆಯಲ್ಲಿ ಪ್ರಶ್ನೆಗಳು ವಿಭಿನ್ನ ತಕ್ಕಂತೆ ಉತ್ತರಗಳು ಮಾತ್ರು ಮಜಾ ಹುಟ್ಟಿಸುವಂತಿವೆ. ಅರುಣ್ ಸಾಗರ್ ಅಣ್ಣಾವ್ರ ಹಾಗೆ ಮಿಮಿಕ್ರಿ ಮಾಡಿದ್ದಾರೆ. ಆಕಚಕ್ ಸುತ್ತಿನಲ್ಲಿ ಕುತೂಹಲ ಕೆರಳಿಸುವ ಘಟನೆ ಇದೆ. ಕಾಯ್ದು ನೋಡಿ ಎಂಜಾಯ್ ಮಾಡಿ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಂಕಿ ಪೊಟ್ಣ ಚಲನಚಿತ್ರ ತಂಡದ ಅಭಿಪ್ರಾಯದಂತೆ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಎಂಜಾಯ್ ಮಾಡಬಹುದು. ಇಷ್ಟು ದಿನದ ಬಿಜಿ ಶೆಡುಲ್ ಮಧ್ಯೆ ನಮಗೂ ಒಂದು ಮನೋರಂನೆ ದೊರೆಯಿತು. ಈ ಗೇಮ್ ಶೋ ಇತರೆ ಗೇಮ್ ಶೋಗಳಿಗಿಂತ ವಿಭಿನ್ನವೆನಿಸಿದೆ ಏಕೆಂದರೆ ಇದರಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲದ, ಚೌಕಟ್ಟುಗಳಿಲ್ಲದೇ ಆಟ ಆಡಬಹುದು ಕಾರಣ ನಾವೆಲ್ಲರೂ ಎಂಜಾಯ್ ಮಾಡಿ ವೀಕ್ಷಕರಿಗೂ ಎಂಜಾಯ್ ಮೆಂಟ್ ನೀಡಬಹುದು.

ಇದರಲ್ಲಿ ಬಳಸುವ ಪ್ರಾಪರ್ಟಿಗಳು ವಿಭಿನ್ನ, ಎರಡನೇ ಸುತ್ತಿನಲ್ಲಿನ ಗೂಳಿ ಇದು ಸುಂಟರಗಾಳಿಯ ಆಟ ಹಾಗೂ ಗೋಡೆ ತುದಿಯಲ್ಲಿ ನಿಂತು ಉತ್ತರಿಸುವ ಟೆನ್ಷನ್ ಮಜವಾಗಿತ್ತು. ಹೀಗೆ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮ ಸಂಪೂರ್ಣ ಹಾಸ್ಯಮಯವಾದ ಕಾರ್ಯಕ್ರಮ ಎಂದರೆ ಅತಿಶಯೋಕ್ತಿಯಾಗಲಾರದು.

ಹಾರ್ಟ್ ನ ಕೂಲ್ ಆಗಿ ಇಟ್ಕೊಳ್ಳಿ, ಲೈಫ್ ನ ಸಿಂಪಲ್ಲಾಗಿ ಇಟ್ಕೊಳ್ಳಿ ಅನು ಮತ್ತು ಶೈನ್ ಕಿರಿಕ್ ನ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಅಂತಲೇ ಶುರು ಮಾಡೋ ನಮ್ಮ ನಿರೂಪಕರು ಅನುಶ್ರೀ ಮತ್ತು ಶೈನ್ ಶೆಟ್ಟಿಯ ನಗುಮೊಗದ ನಿರೂಪಣೆಯನ್ನು ತಪ್ಪದೇ ವೀಕ್ಷಿಸಲು ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಸುವರ್ಣ ವಾಹಿನಿಯನ್ನು ಟ್ಯೂನ್ ಮಾಡಿ. (ಫಿಲ್ಮಿಬೀಟ್ ಕನ್ನಡ)

English summary
Swalpa Adjust Madkolli game show guest for this week is Benki Potna Team. Arun Sagar, Hero Prathap Narayan, Manju ( Villon ) and Director T. Dayananda have participated. Audience can enjoy the Sunday episode which telecast on February 8 th 2015 9pm in Suvarna TV.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada