For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್ ವಿತ್ ರಮೇಶ್'ನಲ್ಲಿ ಈ ವಾರ ಇಬ್ಬರು ದಿಗ್ಗಜರು

  By Bharath Kumar
  |

  ಜೀ-ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯಲ್ಲಿ ಈಗಾಗಲೇ ಪ್ರಕಾಶ್ ರೈ, ನವರಸ ನಾಯಕ ಜಗ್ಗೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರನ್ನ ನೋಡಿದ್ದೀರಾ.

  ಇನ್ನು ಹಲವು ಸಾಧಕರು ಈ ಕಾರ್ಯಕ್ರಮಕ್ಕೆ ಬರುವ ಹಾದಿಯಲ್ಲಿದ್ದಾರೆ. ಇಷ್ಟು ದಿನ ಪ್ರತಿವಾರಾಂತ್ಯದಲ್ಲಿ ಒಬ್ಬ ಸಾಧಕರನ್ನ ನೋಡುತ್ತಿದ್ದ ನಿಮಗೆ ಈ ವಾರ ದೊಡ್ಡ ಸರ್ಪ್ರೈಸ್ ಇದೆ. ಅದೇನಪ್ಪಾ ಅಂದ್ರೆ, ಈ ವೀಕೆಂಡ್ ನಲ್ಲಿ ಕನ್ನಡದ ಇಬ್ಬರು ದಿಗ್ಗಜ ಸಾಧಕರು ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಯಾರವರು? ಮುಂದೆ ಓದಿ...

  ಸಾಧಕರ ಸೀಟಿಗೆ ಅತಿಥಿಯಾದ ಭಾರತಿ ವಿಷ್ಣುವರ್ಧನ್!

  ಸಾಧಕರ ಸೀಟಿಗೆ ಅತಿಥಿಯಾದ ಭಾರತಿ ವಿಷ್ಣುವರ್ಧನ್!

  ಕಳೆದ ಎರಡು ಆವೃತ್ತಿಯಿಂದ ಭಾರತಿ ವಿಷ್ಣುವರ್ಧನ್ ಅವರು ಅತಿಥಿಯಾಗಿ ಬರಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೆ, ಎರಡು ಸೀಸನ್ ನಲ್ಲೂ ಬಂದಿರಲಿಲ್ಲ. ಕೊನೆಗೂ ಮೂರನೇ ಆವೃತ್ತಿಯಲ್ಲಿ ಭಾರತಿ ಅವರನ್ನ ಕರೆತರುವಲ್ಲಿ ಜೀ-ಕನ್ನಡ ಯಶಸ್ವಿಯಾಗಿದೆ.

  ವೀಕೆಂಡ್ ಗೆ ಬಂದ್ರು ಜಯಂತ್ ಕಾಯ್ಕಿಣಿ

  ವೀಕೆಂಡ್ ಗೆ ಬಂದ್ರು ಜಯಂತ್ ಕಾಯ್ಕಿಣಿ

  ಸಾಹಿತ್ಯ ಲೋಕದ ದಿಗ್ಗಜ, ಯುವ ಪ್ರತಿಭೆಗಳ ಆಶಾ ಕಿರಣ ಜಯಂತ್ ಕಾಯ್ಕಿಣಿ ಅವರನ್ನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕರೆಯಿಸಬೇಕೆಂಬ ಒತ್ತಾಯ ಪ್ರೇಕ್ಷಕರಲ್ಲಿ ಇತ್ತು. ಕೊನೆಗೂ ಕಾಯ್ಕಿಣಿ ಅವರನ್ನ ಸಾಧಕರ ಕುರ್ಚಿಯಲ್ಲಿ ನೋಡುವ ಅವಕಾಶ ಬಂದಿದೆ.

  ಶನಿವಾರ ಯಾರ ಎಪಿಸೋಡ್!

  ಶನಿವಾರ ಯಾರ ಎಪಿಸೋಡ್!

  ಅಂದ್ಹಾಗೆ, ಈ ವಾರ ಇಬ್ಬರು ಅತಿಥಿಗಳ ಸಾಧನೆಯ ಕಥೆ ಪ್ರಸಾರವಾಗಲಿದ್ದು, ಶನಿವಾರ ರಾತ್ರಿ 9 ಗಂಟೆಗೆ ಭಾರತಿ ವಿಷ್ಣು ವರ್ಧನ್ ಅವರ ಎಪಿಸೋಡ್ ಪ್ರಸಾರವಾಗಲಿದೆ.

  ಭಾನುವಾರ ಕಾಯ್ಕಿಣಿ ಎಪಿಸೋಡ್!

  ಭಾನುವಾರ ಕಾಯ್ಕಿಣಿ ಎಪಿಸೋಡ್!

  ರವಿವಾರ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಸಾಧನೆಯ ಕಥೆ ವೀಕೆಂಡ್ ಟೆಂಟ್ ನಲ್ಲಿ ಅನಾವರಣಗೊಳ್ಳಲಿದೆ. 23ನೇ ತಾರೀಖು ರಾತ್ರಿ 9 ಗಂಟೆಗೆ ಜೀ-ಕನ್ನಡದಲ್ಲಿ ನೋಡುವುದು ಮರೆಯಬೇಡಿ.

  ಈ 'ವೀಕೆಂಡ್'ನಲ್ಲಿ ಡಬಲ್ ಧಮಾಕ

  ಈ 'ವೀಕೆಂಡ್'ನಲ್ಲಿ ಡಬಲ್ ಧಮಾಕ

  ಮೂರನೇ ಆವೃತ್ತಿಯಲ್ಲಿ ಇಬ್ಬರು ಸಾಧಕರ ಎಪಿಸೋಡ್ ಒಂದೇ ವಾರ ಪ್ರಸಾರ ವಾಗುತ್ತಿರುವುದು ಇದೇ ಮೊದಲ. ಹೀಗಾಗಿ, ಈ ವಾರ 'ವೀಕೆಂಡ್ ವಿತ್ ರಮೇಶ್' ತಪ್ಪದೇ ನೋಡಿ ಎಂಜಾಯ್ ಮಾಡಿ.

  English summary
  Kannada Actress Bharathi vishnuvardhan And Indian Poet, Short Stories Author and a Lyricist Jayanth Kaikini Guest For Weekend with ramesh 3 for This Week on 22 And 24th April.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X