»   » ಕಿರುತೆರೆಯಲ್ಲಿ 'ಭರ್ಜರಿ' ಸಿನಿಮಾ ನೋಡೋ ಅವಕಾಶ

ಕಿರುತೆರೆಯಲ್ಲಿ 'ಭರ್ಜರಿ' ಸಿನಿಮಾ ನೋಡೋ ಅವಕಾಶ

Posted By:
Subscribe to Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಸೂಪರ್ ಹಿಟ್ ಸಿನಿಮಾ 'ಭರ್ಜರಿ' ಇತ್ತಿಚೆಗಷ್ಟೇ ನೂರು ದಿನಗಳನ್ನ ಪೂರೈಸಿತ್ತು. ಅದರ ಬೆನ್ನಲ್ಲೆ ಈಗ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಔಟ್ ಅಂಡ್ ಔಟ್ ಎಂಟರ್ ಟೈನ್ ಮೆಂಟ್ ಸಿನಿಮಾ ಆಗಿದ್ದ 'ಭರ್ಜರಿ' ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಆಕ್ಷನ್ ಲವ್ ಸ್ಟೋರಿ ಕಥಾ ಹಂದರ ಹೊಂದಿರುವ ಈ ಚಿತ್ರದ ಮೂಲಕ ಧ್ರುವ ಹ್ಯಾಟ್ರಿಕ್ ಜಯ ಬಾರಿಸಿದ್ದರು.

ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ

bharjari movie premiere in television

ಹೌದು, ದಾಖಲೆ ಬೆಲೆಗೆ ಟಿವಿ ಪ್ರಸಾರ ಹಕ್ಕು ಖರೀದಿಸಿರುವ ಸ್ಟಾರ್ ಸುವರ್ಣ ವಾಹಿನಿ 'ಭರ್ಜರಿ' ಚಿತ್ರವನ್ನ ಪ್ರಸಾರ ಮಾಡುತ್ತಿದೆ. ವರ್ಷದ ಮೊದಲ ಹಬ್ಬ ಸಂಕ್ರಾಂತಿ ವಿಶೇಷವಾಗಿ ಭರ್ಜರಿ ಚಿತ್ರವನ್ನ ಮನೆಯಲ್ಲೇ ಕೂತು ನೋಡಬಹುದಾಗಿದೆ.

ವೈರಲ್ ಆಯ್ತು ಧ್ರುವ ಸರ್ಜಾರ 'ಪೊಗರು' ಚಿತ್ರದ ಮಾಸ್ ಡೈಲಾಗ್

ದಿನಾಂಕ ಮತ್ತು ಸಮಯದ ಬಗ್ಗೆ ಮಾಹಿತಿ ಗುಟ್ಟಾಗಿಟ್ಟಿರುವ ವಾಹಿನಿ, ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಪ್ರದರ್ಶನ ಮಾಡುವುದು ಖಚಿತವಾಗಿದೆ. ಇನ್ನು ಈ ಚಿತ್ರವನ್ನ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್, ಹರಿಪ್ರಿಯಾ, ಹಾಗೂ ವೈಶಾಲಿ ದೀಪಕ್ ನಾಯಕಿರಾಗಿ ಅಭಿನಯಿಸಿದ್ದರು. ವಿಶೇಷ ಅಂದ್ರೆ, ಮಾಸ್ತಿಗುಡಿ ಚಿತ್ರದ ದುರಂತದಲ್ಲಿ ನಿಧನರಾಗಿದ್ದ ಅನಿಲ್ ಮತ್ತು ರಾಘವ್ ಉದಯ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

English summary
Action prince dhruva sarja and rachita ram, haripriya starrer Blockbuster movie bharjari to telecast soon in star suvarna TV. the movie directed by chethan kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X