»   » 'ಬಿಗ್ ಬಾಸ್' ನಿರ್ಣಯದಿಂದ ಮತ್ತೆ ವೀಕ್ಷಕರು ಬೇಸರ

'ಬಿಗ್ ಬಾಸ್' ನಿರ್ಣಯದಿಂದ ಮತ್ತೆ ವೀಕ್ಷಕರು ಬೇಸರ

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಪತ್ರಕರ್ತ ರವಿ ಬೆಳಗೆರೆ ಪುತ್ರಿ ಹಾಗೂ ಕನ್ನಡ ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾ ಬೆಳಗೆರೆ ಔಟ್ ಆದರು.

'ಬಿಗ್ ಬಾಸ್' ಮನೆಯಲ್ಲಿ ಇದುವರೆಗೂ ಯಾವುದೇ ವಿವಾದಗಳಿಗೆ ಗುರಿಯಾಗದೆ, ಯಾರೊಂದಿಗೂ ಜಗಳವಾಡದೆ ಸೇಫ್ ಗೇಮ್ ಆಡಿದ್ದ ಭಾವನಾ ಬೆಳಗೆರೆ ಹೊರಬಿದ್ದಿರುವ ಬಗ್ಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾವನಾ ಬೆಳಗೆರೆ ಬದಲು 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ಬಿಲ್ಡಪ್ ತೆಗೆದುಕೊಳ್ಳುತ್ತಿರುವ 'ಚಿ.ಸೌ.ಸಾವಿತ್ರಿ' ಧಾರಾವಾಹಿ ಖ್ಯಾತಿಯ ಗೌತಮಿ ಗೌಡ ಔಟ್ ಆಗ್ಬೇಕಿತ್ತು ಅನ್ನೋದು ವೀಕ್ಷಕರ ಅಭಿಲಾಷೆ. ['ಬಿಗ್ ಬಾಸ್-3' ಕಾರ್ಯಕ್ರಮದ ಕುರಿತು ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಕೆಲವೇ ವಾರಗಳ ಹಿಂದೆಯಷ್ಟೇ 'ಬಿಗ್ ಬಾಸ್' ಮನೆಗೆ ಕಾಲಿಟ್ಟ ಗೌತಮಿ ಗೌಡ ಅರ್ಹ ಸ್ಪರ್ಧಿ ಅಲ್ಲವೇ ಅಲ್ಲ. ಹೀಗಾಗಿ ಗೌತಮಿಯನ್ನ ಉಳಿಸಿಕೊಂಡು ಭಾವನಾ ಬೆಳಗೆರೆಯನ್ನ ಹೊರಗಟ್ಟಿದ್ದಕ್ಕೆ 'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರು ಬೇಸರ ಹೊರ ಹಾಕಿದ್ದಾರೆ. ಮುಂದೆ ಓದಿ.....

ಅರ್ಹ ಸ್ಪರ್ಧಿ ಅಲ್ಲ!

ಗೌತಮಿ ಗೌಡ ಸೇಫ್ ಆಗಿದ್ದಾದರೂ ಯಾವ ಖುಷಿಗೆ ಅಂತ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.! ಅಂದ್ಹಾಗೆ, ಈ ಕಾಮೆಂಟ್ ಗೆ ಸಿಕ್ಕಿರುವ ಲೈಕ್ಸ್ ಎಷ್ಟು ಅಂತ ಒಮ್ಮೆ ನೋಡಿ....

ಗೌತಮಿ ವಯಸ್ಸೆಷ್ಟು?

ವೀಕ್ಷಕರು ಎಷ್ಟು ಸೂಕ್ಷ್ಮವಾಗಿ ಕಾರ್ಯಕ್ರಮವನ್ನ ಗಮನಿಸುತ್ತಾರೆ ಅನ್ನೋದಕ್ಕೆ ಈ ಕಾಮೆಂಟ್ ಸಾಕ್ಷಿ.

ಬಿಲ್ಡಪ್ ರಾಣಿ!

ಮಾಡಿರುವುದು ಒಂದು ಸೀರಿಯಲ್. ಅದಕ್ಕೆ ಗೌತಮಿ ಸಿಕ್ಕಾಪಟ್ಟೆ ಬಿಲ್ಡಪ್ ತೆಗೆದುಕೊಳ್ಳುತ್ತಾರೆ ಅಂತ ವೀಕ್ಷಕರು ಮೂಗು ಮುರಿಯುತ್ತಿದ್ದಾರೆ.

ಮುಂದಿನ ವಾರ ಎಲಿಮಿನೇಟ್ ಆಗ್ಬೇಕ್!

ಗೌತಮಿ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ವೀಕ್ಷಕರು ಮುಂದಿನ ವಾರ ಎಲಿಮಿನೇಟ್ ಆಗ್ಬೇಕು ಅಂತ ಆಗ್ರಹಿಸುತ್ತಿದ್ದಾರೆ.

ಭಾವನಾ ಸೂಪರ್

ಭಾವನಾ ಬೆಳಗೆರೆ ಬಗ್ಗೆ ವೀಕ್ಷಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿರುವುದು ಹೀಗೆ...

ಅಯ್ಯಪ್ಪ-ಗೌತಮಿ ನೋಡೋಕೆ ಆಗ್ತಿಲ್ಲ!

ಅಯ್ಯಪ್ಪ ಮತ್ತು ಗೌತಮಿ ನಡವಳಿಕೆ ವೀಕ್ಷಕರಿಗೆ ಕಿರಿಕಿರಿ ತಂದಿದೆ.

ಔಟ್ ಮಾಡಿ....

ಈ ವಾರದ ನಾಮಿನೇಷನ್ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಅಷ್ಟು ಬೇಗ ಗೌತಮಿ ರವರನ್ನ ಔಟ್ ಮಾಡಿ ಅಂತ ವೀಕ್ಷಕರು ಪಟ್ಟು ಹಿಡಿದಿದ್ದಾರೆ.

ಕೃತಿಕಾ ಬೆಟರ್.!

ಬಿಲ್ಡಪ್ ರಾಣಿ ಗೌತಮಿ ಗೌಡಗೆ ಹೋಲಿಸಿದರೆ, ಡವ್ ರಾಣಿ ಕೃತಿಕಾ ಎಷ್ಟೋ ವಾಸಿ ಎನ್ನುವವರೂ ಇದ್ದಾರೆ ಅಂದ್ರೆ ಊಹಿಸಿ.!

ಎಷ್ಟೊಂದು ಬಿಲ್ಡಪ್!

ಗೌತಮಿ ತಗೊಳೋ ಬಿಲ್ಡಪ್ ವೀಕ್ಷಕರಿಗೆ ಎಷ್ಟು ಕಿರಿಕಿರಿ ತಂದಿದೆ ಎನ್ನುವುದಕ್ಕೆ ಇದೇ ಉತ್ತಮ ಉದಾಹರಣೆ.

ಪೂಜಾ ಗಾಂಧಿ 'ವಜ್ರ' ಅಂತೆ.!

ವೀಕ್ಷಕರಿಗೆ ನಟಿ ಪೂಜಾ ಗಾಂಧಿ ಮೇಲೆ ಉತ್ತಮ ಅಭಿಪ್ರಾಯ ಇದೆ.

ಯಾರೂ ವೋಟ್ ಮಾಡ್ಬೇಡಿ!

ಗೌತಮಿಗೆ ಯಾರೂ ವೋಟ್ ಮಾಡ್ಬೇಡಿ ಅಂತ ಈಗ್ಲಿಂದ್ಲೇ ಅಭಿಯಾನ ಶುರುವಾಗಿದೆ.

'ಬಿಗ್ ಬಾಸ್' ನೋಡೋದು ಯಾವಾಗ

ಗೌತಮಿ ಔಟ್ ಆದ್ಮೇಲೆ 'ಬಿಗ್ ಬಾಸ್' ನೋಡೋಕೆ ಶುರು ಮಾಡ್ತೀವಿ ಅಂತಾವ್ರೆ ವೀಕ್ಷಕರು.

ಸುದೀಪ್ ಗೆ ಕೈ ಮುಗಿಯುತ್ತೇವೆ!

ಗೌತಮಿಯನ್ನ ಔಟ್ ಮಾಡಿ ಅಂತ ಕಿಚ್ಚ ಸುದೀಪ್ ಗೆ ವೀಕ್ಷಕರು ಕೇಳಿಕೊಂಡಿರುವುದು ಹೀಗೆ...

ನಿಮ್ಮ ಅಭಿಪ್ರಾಯ ಏನು?

'ಬಿಗ್ ಬಾಸ್' ಮನೆಯಿಂದ ಭಾವನಾ ಬೆಳಗೆರೆ ಔಟ್ ಆಗಿದ್ದು ಮತ್ತು ಗೌತಮಿ ಗೌಡ ಉಳಿದುಕೊಂಡಿದ್ದು ನಿಮಗೆ ಸರಿ ಅನಿಸ್ತಾ? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Bigg Boss Kannada 3 Viewers are unhappy over the decision of Journalist Bhavana Belagere's eviction and Actress Gowthami Gowda being safe in Bigg Boss house. Check out the viewers reaction here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada