»   » 'ಬಿಗ್ ಬಾಸ್- 5' ಸ್ಫರ್ಧಿ ಸಿಹಿ ಕಹಿ ಚಂದ್ರು ವಿರುದ್ದ ಪ್ರತಿಭಟನೆ

'ಬಿಗ್ ಬಾಸ್- 5' ಸ್ಫರ್ಧಿ ಸಿಹಿ ಕಹಿ ಚಂದ್ರು ವಿರುದ್ದ ಪ್ರತಿಭಟನೆ

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಸಿಹಿ ಕಹಿ ಚಂದ್ರು ವಿರುದ್ಧ ಬೋವಿ ಜನಾಂಗದವರ ಸ್ಟ್ರೈಕ್

'ಬಿಗ್ ಬಾಸ್ ಸೀಸನ್' ಕಾರ್ಯಕ್ರಮ ಈಗ ಒಂದು ವಿವಾದಕ್ಕೆ ಕಾರಣವಾಗಿದೆ. ಈ ಬಾರಿಯ 'ಬಿಗ್ ಬಾಸ್' ಸ್ಫರ್ಧಿಗಳಲ್ಲಿ ಒಬ್ಬರಾದ ಸಿಹಿ ಕಹಿ ಚಂದ್ರು ವಿರುದ್ಧ ಇದೀಗ ಭೋವಿ ಜನಾಂಗದವರು ಪ್ರತಿಭಟನೆಗೆ ಇಳಿದಿದ್ದಾರೆ.

ಕಳೆದ ವಾರ ಪ್ರಸಾರವಾದ ಬಿಗ್ ಬಾಸ್ ಸಂಚಿಕೆಯಲ್ಲಿ ಸಿಹಿ ಕಹಿ ಚಂದ್ರು ತಮ್ಮ ಸಹ ಸ್ಪರ್ಧಿ ದಿವಾಕರ್ ರವರಿಗೆ 'ವಡ್ಡ' ಎಂಬ ಪದ ಬಳಸಿದ್ದಾರೆ. ಆದರೆ ಅಡುಗೆ ಮನೆಯಲ್ಲಿ ದಿವಾಕರ್ ಮತ್ತು ಚಂದ್ರು ನಡುವೆ ನೆಡೆದ ಈ ಸಂಭಾಷಣೆಯಿಂದ ಇದೀಗ ಅಖಿಲ ಕರ್ನಾಟಕ (ಭೋವಿ) ವಡ್ಡರ ಯುವ ವೇದಿಕೆ ಕಾರ್ಯಕರ್ತರು ಕೋಪಗೊಂಡಿದ್ದಾರೆ. ಅಲ್ಲದೆ 'ಬಿಗ್ ಬಾಸ್' ಕಾರ್ಯಕ್ರಮ ನಡೆಯುತ್ತಿರುವ ಇನ್ನೋವೇಟಿವ್ ಫಿಲಂ ಸಿಟಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

Bhowi community people protests against Sihi Kahi Chandru

ಭೋವಿ ಜನಾಂಗದವರ ವಿರುದ್ಧ ಸಿಹಿಕಹಿ ಚಂದ್ರು ಅವಹೇಳನಕಾರಿಯಾಗಿ ಮಾತನಾಡಿದ್ದು, ಬಿಗ್ ಬಾಸ್ ಮನೆಯಲ್ಲಿ ಈ ಸಂಬಂಧ ಕೂಡಲೇ ಸಿಹಿಕಹಿ ಚಂದ್ರು ಕ್ಷಮೆ ಕೇಳಬೇಕು. ಇಲ್ಲವಾದರೆ ಸಿಹಿಕಹಿ ಚಂದ್ರು ವಿರುದ್ದ ಜಾತಿ ನಿಂದನೆ ದೂರು ದಾಖಲಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಕಲರ್ಸ್ ಕನ್ನಡ ಚಾನಲ್ ನ ಬಿಗ್ ಬಾಸ್ ಶೋ ಮತ್ತು ಸಿಹಿಕಹಿ ಚಂದ್ರು ವಿರುದ್ದ ಘೋಷಣೆ ಕೂಗಿದ್ದಾರೆ.

English summary
Bhowi community people protested against Big Boss - 5 contestant Sihi Kahi Chandru at Innovative Film City.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X