»   » ಕೆಂಡಕಾರಿದವರಿಗೆ ತಿರುಗು ಬಾಣ ಬಿಟ್ಟ ಬಿಗ್ ಬಾಸ್ 'ದಯಾಳ್' .!

ಕೆಂಡಕಾರಿದವರಿಗೆ ತಿರುಗು ಬಾಣ ಬಿಟ್ಟ ಬಿಗ್ ಬಾಸ್ 'ದಯಾಳ್' .!

Posted By:
Subscribe to Filmibeat Kannada

ದಯಾಳ್ ಪದ್ಮನಾಭನ್ ಬಿಗ್ ಬಾಸ್ ನಿಂದ ಹೊರ ಬಂದ್ರೆ ಸಾಕು ಅಂತ ಒಂದಿಷ್ಟು ಜನರು ಕಾಯ್ತಾ ಇದ್ರು. ಇನ್ನು ಕೆಲ ಜನರು 'ದಯಾಳ್' ಸ್ಟ್ರೈಟ್ ಫಾರ್ವರ್ಡ್ ಅಲ್ಲಿರುವ ಸ್ಟಾರ್ ಗಳಿಗೆ ಸರಿಯಾಗಿ ಪಾಠ ಕಲಿಸ್ತಿದ್ದಾರೆ ಅಂತ ಮಾತನಾಡ್ತಿದ್ದರು.

ಇದೀಗ,'ಬಿಗ್ ಬಾಸ್' ನಿಂದ ಹೊರಬಂದ ದಯಾಳ್ ರನ್ನ ಹೇಗೆ ಸ್ವೀಕರಿಸಿದ್ದಾರೆ ಅಂತ ತಾವೇ ಹೇಳಿಕೊಂಡಿದ್ದಾರೆ. ಒಂದ್ಕಡೆ ಅಭಿಮಾನಿಗಳು ಹೆಚ್ಚಾಗಿದ್ರೆ, ಇನ್ನೊಂದ್ಕಡೆ ವಿರೋಧಿಗಳು ಹೆಚ್ಚಾಗಿದ್ದಾರಂತೆ. ಈ ಮಾತನ್ನ ಖುದ್ದು 'ದಯಾಳ್' ಅವರೇ ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ.

ದಯಾಳ್ ಬಿಗ್ ಬಾಸ್ ನಿಂದ ಹೊರಬಂದು ಎರಡು ವಾರ ಕಳೆದಿದ್ದು ಫೇಸ್ ಬುಕ್ ನಲ್ಲಿ ಬರುವ ನೆಗೆಟಿವ್ ಕಾಮೆಂಟ್ಸ್ ಗಳಿಗೆ 'ದಯಾಳ್' ಉತ್ತರಿಸುತ್ತಿಲ್ವಂತೆ. ಆದ್ರೆ ಒಂದು ಕಾಮೆಂಟ್ ಮಾತ್ರ ದಯಾಳರನ್ನ ಕೆಂಡಮಂಡಲವಾಗುವಂತೆ ಮಾಡಿದೆ. ಯಾವುದು ಆ ಕಾಮೆಂಟ್, ಕಾಮೆಂಟ್ ಮಾಡಿದವರು ಯಾರು? ಮುಂದೆ ಓದಿ.

ದುಷ್ಟರಿಂದ ದೂರವಿರುವ 'ದಯಾಳ್'

ದಯಾಳ್ 'ಬಿಗ್ ಬಾಸ್' ನಲ್ಲಿ ಇದ್ದ ರೀತಿ ಕೆಲವರಿಗೆ ಇಷ್ಟವಾಗಿದೆ. ಇನ್ನೂ ಕೆಲವರಿಗೆ ಇರುಸು ಮುರಿಸು ತಂದಿದೆ. ಸಾಕಷ್ಟು ಜನರು ಫೇಸ್ ಬುಕ್ ಮೂಲಕ 'ದಯಾಳ್' ರಿಗೆ ತಮ್ಮ ಅಭಿಪ್ರಾಯಗಳನ್ನ ತಿಳಿಸಿದ್ದಾರೆ. ಪಾಸಿಟಿವ್ ಕಾಮೆಂಟ್ ಗಳನ್ನ ಸ್ವೀಕರಿಸಿ ನೆಗೆಟಿವ್ ಕಾಮೆಂಟ್ ಗಳನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ದಯಾಳ್.

ಸಂದರ್ಶನ: ಸಿಹಿಕಹಿ ಚಂದ್ರು ಡಬಲ್ ಗೇಮ್ ಆಡ್ತಿದ್ದಾರೆ ಎಂದ ದಯಾಳ್.!

ಮೈಸೂರು ಹುಡುಗನ ಕಮೆಂಟ್ ಗೆ 'ದಯಾಳ್' ಕಿಡಿ

'ದಯಾಳ್' ಫೇಸ್ ಬುಕ್ ನಲ್ಲಿ ಮೈಸೂರು ಮೂಲಕ ಯುವಕನೊಬ್ಬ ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ. ಅದನ್ನ ನೋಡಿರುವ ದಯಾಳ್ ತಮ್ಮ ಸಿನಿಮಾ ಡೈಲಾಗ್ ಸ್ಟೈಲ್ ನಲ್ಲೇ ಆತನಿಗೆ ತಿರುಗೇಟು ನೀಡಿದ್ದಾರೆ.

ಅಚ್ಚರಿ.! 'ಬಿಗ್ ಬಾಸ್' ಮನೆಯಿಂದ ಮೊದಲ ಸೆಲೆಬ್ರಿಟಿ ಔಟ್.!

ಚಿಕ್ಕ ಮಕ್ಕಳೇ ಅಭಿಮಾನಿಗಳು

'ಗಾಳಿಪಟ' ಸಿನಿಮಾದಲ್ಲಿ ದಯಾಳ್ ಅವರ ಡ್ಯ್ರಾಕುಲ ಪಾತ್ರವನ್ನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಮೆಚ್ಚಿಕೊಂಡಿದ್ದರು. ಅದೇ ರೀತಿಯಲ್ಲಿ ಬಿಗ್ ಬಾಸ್ ನಿಂದ ಬಂದ ನಂತರವೂ ಸಣ್ಣ ಮಕ್ಕಳು ದಯಾಳ್ ಅವರ ಅಭಿಮಾನಿಯಾಗಿದ್ದಾರಂತೆ.

ಫ್ಯಾಮಿಲಿ ಜೊತೆ ಸಮಯ

'ಬಿಗ್ ಬಾಸ್' ನಿಂದ ಬಂದ ನಂತರ ಮತ್ತಷ್ಟು ಜನರಿಗೆ ದಯಾಳ್ ಹತ್ತಿರವಾಗಿದ್ದಾರೆ. ಜನರ ಪ್ರೀತಿ ಅಭಿಮಾನವನ್ನ ಗಳಿಸಿದ್ದಾರೆ. ಪಾಸಿಟಿವ್ ಆಗಿ ಬರ್ತಿರುವ ಅಭಿಪ್ರಾಯಗಳಿಂದ ಖುಷಿಯಾಗಿದ್ದಾರೆ. ನೆಗೆಟಿವ್ ಕಾಮೆಂಟ್ಸ್ ಗಳಿಗೆ ಗೋಲಿ ಮಾರೋ ಅಂತ ಫ್ಯಾಮಿಲಿ ಜೊತೆ ಸಮಯ ಕಳಿಯುತ್ತಿದ್ದಾರೆ.

ಸಮೀರಾಚಾರ್ಯಗೆ ಸೂಪರ್ ಅಧಿಕಾರ ಕೊಟ್ಟ ದಯಾಳ್: ಏನ್ ಆಶ್ಚರ್ಯ.!

English summary
dayal padmanabhan receive positive and negative comments on facebook for bigg boss performance . ಫೇಸ್ ಬುಕ್ ನಲ್ಲಿ ಬರುವ ಕೆಟ್ಟ ಕಾಮೆಂಟ್ ಗಳಿಗೆ ಕೋಪಗೊಂಡ ದಯಾಳ್ ಪದ್ಮನಾಭನ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada