»   » ಬಿಗ್ ಬಾಸ್ ನಿವೇದಿತಾ ಗೌಡ ಮದುವೆ ಆಗುವುದು ಇವರನ್ನೇ !

ಬಿಗ್ ಬಾಸ್ ನಿವೇದಿತಾ ಗೌಡ ಮದುವೆ ಆಗುವುದು ಇವರನ್ನೇ !

Posted By:
Subscribe to Filmibeat Kannada

ಬಿಗ್ ಬಾಸ್ ನಿಂದ ಹೊರಬಂದ ನಂತರ ನಿವೇದಿತಾ ಗೌಡ ಕರ್ನಾಟಕದ ಬೇಬಿ ಡಾಲ್ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಈ ಹುಡುಗಿ ಏನು ಈ ತರಹ ಕನ್ನಡ ಮಾತನಾಡುತ್ತಾಳೆ ಅಂತ ಮೂಗು ಮುರಿಯುತ್ತಿದ್ದವರೆಲ್ಲರೂ ದಿನ ಕಳೆದಂತೆ ನಿವೇದಿತಾ ಗೌಡ ಅಭಿಮಾನಿ ಆದರು.

ಸಾಮಾನ್ಯ ಜನರು ಮಾತ್ರವಲ್ಲದೆ ಚಿತ್ರರಂಗದ ಸ್ಟಾರ್ ಗಳು ಹಾಗೂ ಅವರ ಕುಟುಂಬಸ್ಥರು ಕೂಡ ನಿವೇದಿತಾ ಅವರ ಮುಗ್ಧತೆಗೆ ಮಾರು ಹೋದರು. ಅಷ್ಟರ ಮಟ್ಟಿಗೆ ನಿವೇದಿತಾ ಗೌಡ ತಮ್ಮ ಆಟದ ಮೂಲಕ ಎಲ್ಲರನ್ನೂ ಇಂಪ್ರೆಸ್ ಮಾಡಿದರು.

ಕಾಮನ್ ಮ್ಯಾನ್-ಸೆಲೆಬ್ರಿಟಿ ಭೇದಭಾವಕ್ಕೆ ತೆರೆ ಎಳೆದ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ

ಬಿಗ್ ಬಾಸ್ ಮನೆಯಿಂದ ಬಂದ ನಂತರ ಮೈಸೂರಿನ ತಮ್ಮ ಮನೆ ಸೇರಿಕೊಂಡಿರುವ ನಿವೇದಿತಾ ಗೌಡ ಹಾಗೂ ಚಂದನ್ ಅವರ ಸ್ನೇಹದ ಬಗ್ಗೆ ಎಲ್ಲೆಡೆ ಟಾಕ್ ಶುರುವಾಗಿದೆ. ಫೇಮಸ್ ಆದ ನಂತರ ನಿವೇದಿತಾ ಅವರಿಗೆ ಲವ್ ಪ್ರಪೋಸಲ್ ಗಳು ಬರುವುದಕ್ಕೆ ಹೆಚ್ಚಾಗಿದೆಯಂತೆ. ಆದರೆ ನಿವೇದಿತಾ ಮಾತ್ರ ನಾನು ಮದುವೆ ಆಗುವುದು ಇವರನ್ನೇ ಎಂದಿದ್ದಾರೆ. ಹಾಗಾದ್ರೆ ನಿವೇದಿತಾ ಮದುವೆ ಆಗುವ ಹುಡುಗ ಯಾರು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ

ಬೇಬಿ ಡಾಲ್ ಅಂದರೆ ಅಚ್ಚು-ಮೆಚ್ಚು

ಬಿಗ್ ಬಾಸ್ ನಲ್ಲಿ ತಮ್ಮ ಮಾತಿನ ಶೈಲಿ ಹಾಗೂ ಮುಗ್ದತೆಯಿಂದ ಎಲ್ಲರ ಮನಸ್ಸನ್ನ ಗೆದ್ದಿದ್ದ ನಿವೇದಿತಾ ಗೌಡ ಈಗ ಕರ್ನಾಟಕದ ಬೇಬಿ ಡಾಲ್. ನಿವೇದಿತಾ ಅವರನ್ನ ಎಲ್ಲರೂ ಬೊಂಬೆ ಅಂತಾನೇ ಕರೆಯೋದಕ್ಕೆ ಶುರು ಮಾಡಿದ್ದಾರಂತೆ.

ಹೆಚ್ಚಾದರು ಪ್ರೇಮಿಗಳು

ನಿವೇದಿತಾ ಅವರಿಗೆ ಈಗ ಲವ್ ಪ್ರಪೋಸಲ್ ಬರಲು ಹೆಚ್ಚಾಗಿದ್ಯಂತೆ. ತಮ್ಮ ಬಳಿ ಪ್ರೇಮ ನಿವೇದನೆ ಮಾಡಿದವರಿಗೆ ನಿರಾಸೆ ಮಾಡದೆ ಧನ್ಯವಾದ ತಿಳಿಸುತ್ತಾರಂತೆ ನಿವೇದಿತಾ ಗೌಡ.

ಇವರನ್ನೇ ನಿವೇದಿತಾ ಮದುವೆ ಆಗುವುದು

ನಿವೇದಿತಾ ಗೌಡ ಯಾರನ್ನ ಮದುವೆ ಆಗುತ್ತಾರೆ ಎನ್ನುವ ವಿಚಾರದ ಬಗ್ಗೆ ಈಗಾಗಲೇ ಚರ್ಚೆಗಳು ಶುರು ಆಗಿದೆ. ಸಂದರ್ಶನ ಒಂದರಲ್ಲಿ ಚಂದನ್ ಶೆಟ್ಟಿ ಅವರಿಂದ ಲವ್ ಪ್ರಪೋಸಲ್ ಬಂದರೆ ಏನು ಮಾಡುತ್ತೀರ ? ಎನ್ನುವ ಪ್ರಶ್ನೆಗೆ ನಿವೇದಿತಾ ಉತ್ತರಿಸಿದ್ದಾರೆ. ನಾನು ಅಪ್ಪ-ಅಮ್ಮ ನೋಡಿದ ಹುಡುಗನನ್ನೆ ಮದುವೆ ಆಗುವುದು. ನನಗಿನ್ನೂ ಚಿಕ್ಕ ವಯಸ್ಸು ಸದ್ಯ ಓದಿನ ಬಗ್ಗೆ ಗಮನ ಎಂದು ಉತ್ತರಿಸಿದ್ದಾರೆ.

ಪರೀಕ್ಷೆಗಳಿಗೆ ತಯಾರಿ

ಬಿಗ್ ಬಾಸ್ ನಿಂದ ಹೊರಗೆ ಬಂದಿರುವ ನಿವೇದಿತಾ ಗೌಡ ಸದ್ಯ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಾರಂತೆ. ವಿದ್ಯಾಭ್ಯಾಸ ಮುಗಿಸಿದ ನಂತರ ರಿಯಾಲಿಟಿ ಶೋ ಹಾಗೂ ಅಭಿನಯದ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

English summary
Kannada Big Boss contestant Nivedita Gowda has spoken about her marriage. Now Nivedita Gowda is preparing for her exams.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada