»   » 'ಬಿಗ್ ಬಾಸ್' ತರ್ಲೆಗಳಿಗೆ 'ಸುದೀಪ್' ಕೊಟ್ರು 'ಛೋಟಾ ಬಾಸ್' ಪ್ರಶಸ್ತಿ!

'ಬಿಗ್ ಬಾಸ್' ತರ್ಲೆಗಳಿಗೆ 'ಸುದೀಪ್' ಕೊಟ್ರು 'ಛೋಟಾ ಬಾಸ್' ಪ್ರಶಸ್ತಿ!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ಟ್ರೋಫಿಗೆ ಮುತ್ತಿಟ್ಟು ಖುಷಿಯಲ್ಲಿ ಒಳ್ಳೆ ಹುಡುಗ 'ಪ್ರಥಮ್' ಸಂಭ್ರಮಿಸಿದ್ರೆ, ಮತ್ತೊಂದೆಡೆ ಮನೆಯ ಸದಸ್ಯರು 'ಛೋಟಾ ಬಾಸ್ ಅವಾರ್ಡ್'ಗಳನ್ನ ಪಡೆದು ಖುಷಿಪಟ್ಟರು.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ಈ ಬಾರಿಯ 'ಛೋಟಾ ಬಾಸ್ ಅವಾರ್ಡ್'ನಲ್ಲಿ ಒಟ್ಟು ಆರು ಪ್ರಶಸ್ತಿಗಳಿದ್ದು, ವಿಭಿನ್ನವಾದ ವಿಭಾಗಗಳನ್ನ ಮಾಡಲಾಗಿತ್ತು.

ಯಾವಾಗಲೂ ನಿದ್ದೆ ಮಾಡುತ್ತಿದ್ದವರಿಗೆ, ಸದಾ ಜಗಳ ಮಾಡುತ್ತಿದ್ದವರಿಗೆ, ನಿರಂತವಾಗಿ ಕನ್ನಡಿ ನೋಡುತ್ತಿದ್ದವರಿಗೆ, ಅತ್ಯದ್ಭುತವಾಗಿ ಡ್ಯಾನ್ಸ್ ಮಾಡಿದವರಿಗೆ ಕಿಚ್ಚ ಸುದೀಪ್ ಟ್ರೋಫಿ ನೀಡಿದರು. ಯಾರಿಗೆ ಯಾವ ಅವಾರ್ಡ್ ಸಿಕ್ತು ಎಂಬ ಡಿಟೇಲ್ಸ್ ಇಲ್ಲಿದೆ ನೋಡಿ...

ಪಂಚಿಂಗ್ ಸ್ಟಾರ್‌ ಅವಾರ್ಡ್

ಪ್ರಥಮ್, ಶಾಲಿನಿ, ಶೀತಲ್ ಶೆಟ್ಟಿ ಅವರು 'ಛೋಟಾ ಬಾಸ್‌ನ ಪಂಚಿಂಗ್ ಸ್ಟಾರ್‌ ಅವಾರ್ಡ್' ವಿಭಾಗದಲ್ಲಿ ನಾಮಿನೇಟ್ ಆಗಿದ್ದರು. ಆದ್ರೆ, ಸೀಸನ್ 4ರ ಛೋಟಾ ಬಾಸ್‌ನ ಪಂಚಿಂಗ್ ಸ್ಟಾರ್‌ ಅವಾರ್ಡ್ ಶೀತಲ್ ಶೆಟ್ಟಿ ಪಡೆದುಕೊಂಡ್ರು.['ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!]

ಕನ್ನಡಿಯ ಕಂದ ಅವಾರ್ಡ್

'ಕನ್ನಡಿಯ ಕಂದ ಅವಾರ್ಡ್' ರೇಸ್ ನಲ್ಲಿ ಭುವನ್, ಮೋಹನ್, ಸಂಜನಾ, ಕಾರುಣ್ಯ ರಾಮ್ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಸಂಜನಾ ಈ ಅವಾರ್ಡ್ ಗೆ ಮುತ್ತಿಟ್ಟರು.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಮಲಗೋ ಮಂಜುನಾಥ ಅವಾರ್ಡ್

'ಬಿಗ್‌ಬಾಸ್‌' ಮನೆಯಲ್ಲಿ ಅತೀ ಹೆಚ್ಚು ಬಾರಿ 'ಎದ್ದೇಳು ಮಂಜುನಾಥ' ಹಾಡು ಹಾಕಿಸಿಕೊಂಡಿದ್ದ ಪ್ರಥಮ್ ಗೆ ಮಲಗೋ ಮಂಜುನಾಥ ಅವಾರ್ಡ್ ಸಿಕ್ಕಿತು. ಈ ಅವಾರ್ಡ್ ಗಾಗಿ ಸಂಜನಾ, ಮಾಳವಿಕಾ, ರೇಖಾ, ಶೀತಲ್, ಅವರು ಪ್ರಶಸ್ತಿ ಸಾಲಿನಲ್ಲಿ ಇದ್ದರು.

ಛೋಟಾ ಡೈರೆಕ್ಟರ್ ಅವಾರ್ಡ್

ಬಿಗ್ ಬಾಸ್ ಮನೆಯ ನಿಯಮಗಳನ್ನ ನಿರ್ದೇಶನ ಮಾಡುತ್ತಿದ್ದ ಸದಸ್ಯರಿಗಾಗಿ ಛೋಟಾ ಡೈರೆಕ್ಟರ್ ಅವಾರ್ಡ್ ನೀಡಲಾಯಿತು. ಈ ಪ್ರಶಸ್ತಿ ಆರ್ ಜೆ ನಿರಂಜನ್ ಗೆ ಲಭಿಸಿತು. ಕೀರ್ತಿ, ಪ್ರಥಮ್, ಮೋಹನ್, ಶಾಲಿನಿ, ನಾಮೀನೆಟ್ ಆಗಿದ್ದರು.

ಲೌಡ್ ಸ್ವೀಕರ್ ಅವಾರ್ಡ್

'ಬಿಗ್ ಬಾಸ್' ಮನೆಯಲ್ಲಿ ತುಂಬಾ ಸೀಕ್ರೆಟ್ ಆಗಿ ಮಾತನಾಡಿದವರಿಗೆ ಲೌಡ್ ಸ್ವೀಕರ್ ಅವಾರ್ಡ್ ನೀಡಲಾಯಿತು. ಈ ಪ್ರಶಸ್ತಿ ಭುವನ್ ಗೆ ಸಿಕ್ತು.

ಡ್ಯಾನ್ಸಿಂಗ್ ಸ್ಟಾರ್‌ ಅವಾರ್ಡ್

ಡ್ಯಾನ್ಸಿಂಗ್ ಸ್ಟಾರ್‌ ಅವಾರ್ಡ್ ನ್ನು ಓಂ ಪ್ರಕಾಶ್‌ ಹಾಗೂ ಮೋಹನ್‌ ಅವರು ಹಂಚಿಕೊಂಡ್ರು.

English summary
Kiccha Sudeep Gives Chota Boss Award For Bigg Boss Kannada 4 Contestants. Like A 'Chota Boss Punching star', 'Chota Boss Kannadaiya Kanda', 'Malgo manjunatha', 'Chota Director'....

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X