»   » ಈ ಸ್ಪರ್ಧಿಗೆ ಕನ್ನಡ ಬಿಗ್ ಬಾಸ್ ಬಹುಮಾನ ಮೊತ್ತ ಮೀರಿದ ಸಂಭಾವನೆ!

ಈ ಸ್ಪರ್ಧಿಗೆ ಕನ್ನಡ ಬಿಗ್ ಬಾಸ್ ಬಹುಮಾನ ಮೊತ್ತ ಮೀರಿದ ಸಂಭಾವನೆ!

Posted By:
Subscribe to Filmibeat Kannada

ಕನ್ನಡ, ಬೆಂಗಾಲಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಡೆದುಕೊಂಡು ಬಂದಿದೆ. ಆದರೆ, ಬಹುಮಾನದ ಮೊತ್ತ ಮಾತ್ರ ಹೆಚ್ಚಿನ ಮಟ್ಟದಲ್ಲಿ ಏರಿಕೆ ಕಂಡಿಲ್ಲ. ಆದರೆ, ಈ ಬಾರಿಯ ಬಿಗ್ ಬಾಸ್ 10ರ ಸ್ಪರ್ಧಿಗೆ ಸಿಕ್ಕಿರುವ ಸಂಭಾವನೆ ಮೊತ್ತ ಕೇಳಿದರೆ ಹೌಹಾರುವಂತಿದೆ. ಬಿಗ್ ಬಾಸ್ ಕನ್ನಡ 4ರ ವಿಜೇತರಿಗೆ ಸಿಗುವ ಮೊತ್ತ ಡಬ್ಬಲ್ ಅಮೌಂಟ್ ಹಿಂದಿ ಬಿಗ್ ಬಾಸ್ ನ ಸ್ಪರ್ಧಿಯೊಬ್ಬರಿಗೆ ಸಿಗಲಿದೆ.

Bigg Boss 10: Karan Mehra Paid 1 Crore To Be On The Show!

ಹಿಂದಿ ಬಿಗ್ ಬಾಸ್ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇದೆ ಬಿಡಿ, ಕನ್ನಡ ಬಿಗ್ ಬಾಸ್ ಗೆ ಟಿಆರ್ ಪಿ ಬರುವುದು ವೀಕೆಂಡ್ ನಲ್ಲಿ ಮಾತ್ರ ಎಂಬ ಮಾತು ಒಪ್ಪಬಹುದಾದರೂ ಬಿಗ್ ಬಾಸ್ ತನ್ನ ಸ್ಪರ್ಧಿಗಳಿಗೆ ನೀಡುವ ಆಫರ್ ಬಗ್ಗೆ ಕುತೂಹಲ ಮೂಡಿಸುತ್ತದೆ. ['ಆಂಟಿ' ಜೊತೆ ಮಲಗಿದ್ದ ಬಿಗ್ ಬಾಸ್ ಸ್ಪರ್ಧಿ!]

Bigg Boss 10: Karan Mehra Paid 1 Crore To Be On The Show!

ಬಿಗ್ ಬಾಸ್ 10ರ ಲ್ಲಿ ಸ್ಪರ್ಧಿಯಾಗಿರುವ ಕಿರುತೆರೆ ನಟ ಕರಣ್ ಮೆಹ್ರಾ ಅವರಿಗೆ ಬರೋಬ್ಬರಿ 1 ಕೋಟಿ ರು ಸಿಗಲಿದೆ ಎಂಬ ಸುದ್ದಿ ಬಂದಿದೆ. 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೇ' ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ ಕರಣ್ ಅವರ ಒಪ್ಪಿಗೆ ಪಡೆಯಲು ಕಲರ್ಸ್ ವಾಹಿನಿ ಅನೇಕ ಬಾರಿ ಅವರ ಮನೆ ಕದ ತಟ್ಟಬೇಕಾಯಿತಂತೆ.[ಸ್ಪರ್ಧಿಗಳಿಗೆ 'ಬಿಗ್' ಮೊತ್ತದ ಸಂಭಾವನೆ]

Bigg Boss 10: Karan Mehra Paid 1 Crore To Be On The Show!

ಮೊದ ಮೊದಲು ಬಿಗ್ ಬಾಸ್ ಮನೆ ಆಫರ್ ಒಪ್ಪದ ಕರಣ್ ಕೊನೆಗೂ ಭಾರಿ ಮೊತ್ತದ ಸಂಭಾವನೆ ಸಿಗುವ ಭರವಸೆ ಸಿಕ್ಕ ಮೇಲೆ ಮನೆ ಪ್ರವೇಶಿಸಿದ್ದಾರೆ. ಈ ಬಾರಿ ಜನಪ್ರಿಯ ಸೆಲೆಬ್ರಿಟಿಗಳಿಗೆ ಭಾರಿ ಮೊತ್ತ ನೀಡಿ ಶೋಗೆ ಕರೆಸಿಕೊಳ್ಳುವುದು ಇದೇ ಮೊದಲಲ್ಲ. ಈ ಹಿಂದೆ ಬಿಗ್ ಬಾಸ್ 8 ರಲ್ಲಿ ಕರೀಷ್ಮಾ ತನ್ನಾಗೆ ವಾರಕ್ಕೆ 8 ಲಕ್ಷ ರು ನೀಡಲಾಗುತ್ತಿತ್ತು. ಕಳೆದ ಸೀಸನ್ ನ ಲಕ್ಕಿ ಸ್ಪರ್ಧಿ ನಟಿ ರಿಮಿ ಸೇನ್ ಗೆ ಸರಿ ಸುಮಾರು 2 ಕೋಟಿ ರು ನೀಡಲಾಗಿತ್ತು ಎಂಬ ಸುದ್ದಿ ಇತ್ತು.

English summary
Bigg Boss has always got in celebrities that are famous for any reason, into the house. Karan Mehra, the famous Naitik from Yeh Rishta Kya Kehlata Hai, is in the 10th season of the show and if sources are to believed Karan has been paid 1 Crore to be on the show.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X