»   » ಬಿಗ್ ಬಾಸ್ 10 ಗೆದ್ದ ನೋಯ್ಡಾದ ರೈತ ಮನ್ವೀರ್ ಗುಜ್ಜಾರ್

ಬಿಗ್ ಬಾಸ್ 10 ಗೆದ್ದ ನೋಯ್ಡಾದ ರೈತ ಮನ್ವೀರ್ ಗುಜ್ಜಾರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಿಯಾಲಿಟಿ ಶೋ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಮತ್ತೊಮ್ಮೆ ಕಲರ್ಸ್ ವಾಹಿನಿಯಲ್ಲಿ ಭರ್ಜರಿ ಯಶಸ್ಸು ಕಂಡಿದೆ.

ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಬಂದ ಬಿಗ್ ಬಾಸ್ 10ರ ವಿಜೇತರಾಗಿ ಜನಸಾಮಾನ್ಯರ ಪ್ರತಿನಿಧಿ ನೋಯ್ಡಾದ ರೈತ ಮನ್ವೀರ್ ಗುಜ್ಜಾರ್ ಅವರು ಆಯ್ಕೆಯಾಗಿದ್ದಾರೆ. ತಾವು ಗೆದ್ದ ಪ್ರಶಸ್ತಿ ಮೊತ್ತದಲ್ಲಿ 20 ಲಕ್ಷ ರುಗಳನ್ನು ಬೀಯಿಂಗ್ ಹ್ಯೂಮನ್ ಸರ್ಕಾರೇತರ ಸಂಸ್ಥೆಗೆ ನೀಡಿದ್ದಾರೆ. [ಈ ಸ್ಪರ್ಧಿಗೆ ಕನ್ನಡ ಬಿಗ್ ಬಾಸ್ ಬಹುಮಾನ ಮೊತ್ತ ಮೀರಿದ ಸಂಭಾವನೆ!]

ಫಿನಾಲೆಗೆ ವಿಜೆ ಬಾನಿ, ಲೋಪಮುದ್ರ, ಮನವೀರ್‌ ಗುರ್ಜರ್, ಮನು ಪಂಜಾಬಿ ತಲುಪಿದ್ದರು. ಈ ನಾಲ್ವರಲ್ಲಿ ಒಬ್ಬರು ಬಿಗ್‌ ಬಾಸ್‌ ನಿಂದ ಸ್ವಇಚ್ಛೆಯಿಂದ ಹೊರಹೋಗಲು ಅವಕಾಶ ನೀಡಲಾಗಿತ್ತು. ಮನು ಪಂಜಾಬಿ ಅವಕಾಶ ಉಪಯೋಗಿಸಿಕೊಂಡು ಮನೆಯಿಂದ ಹೊರನಡೆದರು.

ಮಿಕ್ಕಂತೆ ಸಾರ್ವಜನಿಕ ಮತದಾನದ ಆಧಾರದ ಮೆಲೆ ಮನ್ವೀರ್ ಗುಜ್ಜಾರ್ ಅವರನ್ನು ವಿಜೇತರಾಗಿ ಭಾನುವಾರ ರಾತ್ರಿ ಘೋಷಿಸಲಾಯಿತು.

ಜನ ಸಾಮಾನ್ಯರ ಆಯ್ಕೆಯ ನಾಲ್ಕನೇ ಸ್ಪರ್ಧಿಯಾಗಿ ಮನ್ವೀರ್ ಗುರ್ಜಾರ್ (ಮನೋಜ್ ಕುಮಾರ್ ಬೈಸೋಯಾ) ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು.

ನೋಯ್ಡಾ ಮೂಲದ ಮನ್ವೀರ್

ನೋಯ್ಡಾ ಮೂಲದವರಾಗಿದ್ದು, ಕೃಷಿ, ಹೈನುಗಾರಿಕೆ ವೃತ್ತಿಯಲ್ಲಿದ್ದು, ಜಿಮ್ ನಲ್ಲಿ ಬೆವರಿಳಿಸುವುದೆಂದರೆ ಸಕತ್ ಖುಷಿ. ಕಬಡ್ಡಿ, ಕುಸ್ತಿ ಆಡುವುದು, ನೋಡುವುದು ಇಷ್ಟ. 29 ವರ್ಷದ ಮನ್ವೀರ್ ಗೆ ಗೆಳೆಯರ ಜತೆ ಸುತ್ತಾಟ ನೆಚ್ಚಿನ ಹವ್ಯಾಸ.

ರಾಹುಲ್ ದೇವ್ ಟ್ವೀಟ್

"His humility touched all .. #ManveerGujar winner of #BB10 @ColorsTV @BiggBoss @EndemolShineIND 👏👏👏."

ಕಮಲ್ ಆರ್ ಖಾನ್ ಟ್ವೀಟ್

Manveer Gujjar has won the #BiggBoss10 and this is the way, how i do, whatever I want to do. My way or highway!"

ವಿಂದೂ ದಾರಾ ಸಿಂಗ್

"CONGRATS MANVEER 👍🏼 Well done BANI u played it UR way & won our 💕! #BB10 #BB10GrandFinale @RajCheerfull @BiggBoss @EndemolShineInd."

ಬಾನಿ ಗೆಲ್ಲಲಿಲ್ಲ ಏಕೆ

ಬಿಗ್ ಬಾಸ್ ನವರು ಬಾನಿಗೆ ಸಿಕ್ಕ ಮತಗಳನ್ನು ಮುಚ್ಚಿಡುತ್ತಿದ್ದಾರೆ. ನಿಜಕ್ಕೂ ಬಾನಿಗೆ ಹೆಚ್ಚು ಮತ ಸಿಕ್ಕಿದೆ ಎಂದು ಬಾನಿ ಅಭಿಮಾನಿಗ್ಳು ಆಕ್ಷೇಪಿಸಿದ್ದಾರೆ.


English summary
It is confirmed and the winner has been announced. As we revealed earlier, the Indiawale contestant Manveer Gujjar has won the Bigg Boss 10 trophy. VJ Bani has bagged the second place.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada