»   » ಬಿಗ್ ಬಾಸ್ : ನಿಂದನೆ ತಾಳಲಾರದೆ ಮಾತ್ರೆ ನುಂಗಿದ್ನೆ ಜುಬೈರ್

ಬಿಗ್ ಬಾಸ್ : ನಿಂದನೆ ತಾಳಲಾರದೆ ಮಾತ್ರೆ ನುಂಗಿದ್ನೆ ಜುಬೈರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಿಗ್ ಬಾಸ್ 11ನೇ ಆವೃತ್ತಿ ಆರಂಭವಾಗಿ ಒಂದು ವಾರ ಕಳೆದಿದೆಯಷ್ಟೇ, ನಿರೂಪಕ ಸಲ್ಮಾನ್ ಪಿತ್ತ ನೆತ್ತಿಗೇರುವಂತೆ ಮಾಡುವಲ್ಲಿ ಸ್ಪರ್ಧಿಗಳು ಯಶಸ್ವಿಯಾಗಿದ್ದಾರೆ. ಕೆಟ್ಟ ಪದ ಬಳಕೆ ಮಾಡಿದ ಸ್ಪರ್ಧಿ ಕಿಕ್ ಔಟ್, ಮಹಿಳಾ ಸ್ಪರ್ಧಿಗಳ ಆಟಾಟೋಪ, ನಿಂದನೆಗೆ ನೊಂದು ನಿದ್ದೆ ಮಾತ್ರೆ ಸೇವಿಸಿದ ಸ್ಪರ್ಧಿ ಎಲ್ಲವೂ ಮೊದಲ ವಾರದ ಮುಖ್ಯಾಂಶಗಳು.

ಬಿಗ್ ಬಾಸ್ 10 ಗೆದ್ದ ನೋಯ್ಡಾದ ರೈತ ಮನ್ವೀರ್ ಗುಜ್ಜಾರ್

ಬಿಗ್ ಬಾಸ್ ಮನೆಯಲ್ಲಿ ಎಂದಿನಂತೆ ಕಿತ್ತಾಟ, ಜಗಳ, ಬೈಯ್ದಾಟ, ತು ತು ಮೇ ಮೇ ಕಾಮನ್ ಆಗಿದ್ದರೂ ಈ ಬಾರಿ ಯಾಕೋ ತುಸು ಓವರ್ ಎನಿಸುವಷ್ಟರ ಮಟ್ಟಿಗೆ ಸ್ಪರ್ಧಿಗಳು ರೇಜಿಗೆ ಹುಟ್ಟಿಸಿದ್ದಾರೆ.

Bigg Boss 11: Know why Zubair Khan was rushed to hospital

ಸ್ಪರ್ಧಿಗಳಾದ ಶಿಲ್ಪಾ ಶಿಂಧೆ, ಅರ್ಶಿ ಖಾನ್, ಜ್ಯೋತಿ ಕುಮಾರ್, ಬಂದ್ಗಿ ಕರ್ಲಾ ಮತ್ತು ಜುಬೈರ್ ಖಾನ್ ಪೈಕಿ ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು.ಶಿಲ್ಪಾ ಶಿಂಧೆ ಎಲಿಮಿನೇಟ್ ಆಗುತ್ತಾಳೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ, ಎಲಿಮಿನೇಟ್ ಆಗಿದ್ದು ಪ್ರಿಯಾಂಕ್ ಶರ್ಮಾ, ಈ ನಡುವೆ 'ಡೌವ್ ರಾಜ' ಜುಬೈರ್ ಆಸ್ಪತ್ರೆ ಸೇರಿದ್ದಾನೆ.

ವಾರಾಂತ್ಯದ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ರಿಂದ ಪದೇ ಪದೇ ಬೈಯಿಸಿಕೊಂಡ ಜುಬೈರ್ (ಡಾನ್ ದಾವೂದ್ ಇಬ್ರಾಹಿಂ ಸೋದರಿಯ ಅಳಿಯ ಎಂದು ಕೊಚ್ಚಿಕೊಂಡಿದ್ದ) ಗಪ್ ಚುಪ್ ಆಗಿದ್ದಲ್ಲದೆ ನಂತರ ಅವಮಾನ ತಾಳಲಾರದೆ ನಿದ್ದೆ ಮಾತ್ರೆ ಸೇವಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈಗ ಸುಧಾರಿಸಿಕೊಳ್ಳುತ್ತಿದ್ದಾನೆ.

ಈ ನಡುವೆ ವಿಕಾಸ್ ಮತ್ತು ಆಕಾಶ್ ನಡುವೆ ಹೊತ್ತಿಕೊಂಡಿದ್ದ ಬೆಂಕಿಗೆ ತುಪ್ಪ ಸುರಿದ ಕಾರಣಕ್ಕೆ ಪ್ರಿಯಾಂಕ್ ಬೆಲೆ ತೆರಬೇಕಾಯಿತು. ಪ್ರಿಯಾಂಕ್ ಶರ್ಮಾ ಮೊದಲ ವಾರವೇ ಎಲಿಮಿನೇಟ್ ಆಗಿದ್ದು,ಶಿಲ್ಪಾ ಶಿಂಧೆ ಬಚಾವಾಗಿದ್ದಾಳೆ.

English summary
According to reports, Zubair Khan could not handle insult by Salman Khan on national television and consumed some pills in frustration, due to which he was rushed to the nearest hospital. Zubair is currently under medical supervision and is undergoing treatment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada