ಎಲ್ಲರ ಮುಂದೆ ಔಟ್ ಆಗಿ ಸೀಕ್ರೆಟ್ ರೂಮ್ ಗೆ ತೆರಳಿದ ಶ್ರೀಶಾಂತ್.!

'ಬಿಗ್ ಬಾಸ್-12' ರಿಯಾಲಿಟಿ ಶೋನಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಕಳೆದ ವಾರ ಸ್ಪರ್ಧಿಗಳ ಮುಂದೆ 'ಭಜನೆಗಳ ಸಾಮ್ರಾಟ' ಅನೂಪ್ ಜಲೋಟರನ್ನ ಎಲಿಮಿನೇಟ್ ಮಾಡಿ, ಬಳಿಕ ಗುಟ್ಟಾಗಿ ಅವರನ್ನ ಸೀಕ್ರೆಟ್ ರೂಮ್ ಗೆ 'ಬಿಗ್ ಬಾಸ್' ಕಳುಹಿಸಿದರು.

ಇದೀಗ ಮಿಡ್ ವೀಕ್ ಎಲಿಮಿನೇಷನ್ ಮಾಡಿ, ಶ್ರೀಶಾಂತ್ ಗೂ ಸೀಕ್ರೆಟ್ ರೂಮ್ ದಾರಿ ತೋರಿಸಿದ್ದಾರೆ 'ಬಿಗ್ ಬಾಸ್'.

ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಗೆ ಕಾಲಿಟ್ಟಾಗಿನಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ''ನಾನು ಮನೆಗೆ ಹೋಗುವೆ'' ಎಂದು ಕ್ರಿಕೆಟರ್ ಶ್ರೀಶಾಂತ್ ಕಣ್ಣೀರು ಹಾಕುತ್ತಿದ್ದರು.

'ಬಿಗ್ ಬಾಸ್' ಕೊಡುವ ಟಾಸ್ಕ್ ಗಳಲ್ಲಿ ಸರಿಯಾಗಿ ಪಾಲ್ಗೊಳ್ಳದೇ ಸ್ವಯಂ ಜೈಲು ಪಾಲಾಗಿದ್ದರು. ಈಗ ಆಟಕ್ಕೆ ತಿರುವು ಕೊಟ್ಟಿರುವ 'ಬಿಗ್ ಬಾಸ್' ಶ್ರೀಶಾಂತ್ ರನ್ನೂ ಸೀಕ್ರೆಟ್ ರೂಮ್ ನಲ್ಲಿ ಇರಿಸಿದ್ದಾರೆ. ಮುಂದೆ ಓದಿರಿ...

ಸೀಕ್ರೆಟ್ ರೂಮ್ ನಲ್ಲಿ ಶ್ರೀಶಾಂತ್-ಅನೂಪ್

ಸೀಕ್ರೆಟ್ ರೂಮ್ ನಲ್ಲಿ ಶ್ರೀಶಾಂತ್-ಅನೂಪ್

ಸದ್ಯ ಸೀಕ್ರೆಟ್ ರೂಮ್ ನಲ್ಲಿ ಶ್ರೀಶಾಂತ್ ಹಾಗೂ ಅನೂಪ್ ಜಲೋಟ ಬಂಧಿಯಾಗಿದ್ದಾರೆ. 'ಬಿಗ್ ಬಾಸ್' ಮನೆಯೊಳಗೆ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನೂ ಇಬ್ಬರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಶ್ರೀಶಾಂತ್ ಗೆ ಶಾಕ್

ಶ್ರೀಶಾಂತ್ ಗೆ ಶಾಕ್

''ಯಾರು ಔಟ್ ಆಗಬೇಕು.?'' ಎಂದು 'ಬಿಗ್ ಬಾಸ್' ಕೇಳಿದಾಗ, ಶ್ರೀಶಾಂತ್ ಹೆಸರನ್ನು ದೀಪಿಕಾ ಹೇಳಿದರು. ಹಾಗ್ನೋಡಿದ್ರೆ, ಶ್ರೀಶಾಂತ್ ಗೆ 'ಬಿಗ್ ಬಾಸ್' ಮನೆಯಲ್ಲಿ ಅತಿ ಹೆಚ್ಚು ಆಪ್ತವಾಗಿ ಇದ್ದವರು ದೀಪಿಕಾ. ಹೀಗಿರುವಾಗ, ದೀಪಿಕಾ ಬಾಯಲ್ಲಿ ತಮ್ಮ ಹೆಸರನ್ನು ಕೇಳಿ ಶ್ರೀಶಾಂತ್ ಶಾಕ್ ಆದರು.

ಗೇಮ್ ಪ್ಲಾನ್ ಚೇಂಜ್

ಗೇಮ್ ಪ್ಲಾನ್ ಚೇಂಜ್

ಶ್ರೀಶಾಂತ್ ಹೊರಗೆ ಬಂದ್ಮೇಲೆ, 'ಬಿಗ್ ಬಾಸ್' ಮನೆಯಲ್ಲಿ ಗೇಮ್ ಪ್ಲಾನ್ ಚೇಂಜ್ ಆಗಿದೆ. ಸೆಲೆಬ್ರಿಟಿಗಳ ಪೈಕಿ ಒಬ್ಬರು ಕಮ್ಮಿ ಆಗಿರುವುದರಿಂದ ಸೆಲೆಬ್ರಿಟಿಗಳಿಗೆ ನಡುಕ ಶುರುವಾಗಿದೆ.

ಯಾರು ಔಟ್ ಆಗಬಹುದು.?

ಯಾರು ಔಟ್ ಆಗಬಹುದು.?

ಅಸಲಿಗೆ ಈ ವಾರದ ಎಲಿಮಿನೇಷನ್ ಇನ್ನೂ ಮುಗಿದಿಲ್ಲ. ನೇಹಾ ಪೆಂಡ್ಸೆ, ಕರಣ್ವೀರ್ ಬೋಹ್ರಾ ಹಾಗೂ ಶ್ರೀಶಾಂತ್ ಇನ್ನೂ ಡೇಂಜರ್ ಝೋನ್ ನಲ್ಲಿದ್ದಾರೆ. ಈ ಮೂವರ ಪೈಕಿ ಈ ವಾರಾಂತ್ಯದಲ್ಲಿ ಯಾರು ಔಟ್ ಆಗ್ತಾರೋ, ನೋಡಬೇಕು.

More from Filmibeat

English summary
Salman Khan's Bigg Boss 12: Sreeshant in secret room along with Anup Jalota.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X