For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಪ್ರಸಾರ ಸಮಯ ಬದಲಾಗುತ್ತಿದೆ.!

  By Bharath Kumar
  |

  'ಬಿಗ್ ಬಾಸ್' ಹಿಂದಿ 12ನೇ ಆವೃತ್ತಿಗೆ ದಿನಗಣನೆ ಶುರುವಾಗಿದ್ದು, ಸೆಪ್ಟಂಬರ್ 16 ರಿಂದ 'ಬಿಗ್ ಬಾಸ್' ಶೋ ಪ್ರಸಾರವಾಗಲಿದೆ. ಈ ಬಾರಿ ಬಿಗ್ ಬಾಸ್ ನಲ್ಲಿ 'ವಿಚಿತ್ರ ಜೋಡಿ'ಗಳು ನಿಮಗೆ ಮನರಂಜನೆ ನೀಡಲಿದ್ದಾರೆ.

  ಗಂಡ-ಹೆಂಡತಿ, ಅತ್ತೆ-ಸೊಸೆ, ಮಾವ-ಅಳಿಯ, ಮಾಲಿಕ-ಕಾರ್ಮಿಕ, ನಿರ್ದೇಶಕ-ನಟಿ... ಹೀಗೆ 'ವಿಚಿತ್ರ ಜೋಡಿ'ಗಳು ಈ ಬಾರಿಯ 'ಬಿಗ್ ಬಾಸ್' ಹೈಲೈಟ್. ಎಂದಿನಂತೆ ಈ ಬಾರಿಯೂ ವಾರಾಂತ್ಯದಲ್ಲಿ ಸಲ್ಮಾನ್ ಖಾನ್ ನ್ಯಾಯ-ಪಂಚಾಯತಿ ನಡೆಸಲಿದ್ದಾರೆ.

  ಪೋರ್ನ್ ಸ್ಟಾರ್ ಮತ್ತು ಆತನ ಗೆಳತಿಗೆ ಅತಿ ಹೆಚ್ಚು ಸಂಭಾವನೆ ಕೊಡ್ತಿರೋ ಬಿಗ್ ಬಾಸ್.!

  ಇದೀಗ, ಬಿಗ್ ಬಾಸ್ ಪ್ರಸಾರದ ಸಮಯದಲ್ಲಿ ಬದಲಾವಣೆ ತರುವ ಸುಳಿವು ಸಿಕ್ಕಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಬಿಗ್ ಬಾಸ್ ರಾತ್ರಿ 10.30ಕ್ಕೆ ಪ್ರಸಾರವಾಗುತ್ತಿತ್ತು. ಆದ್ರೆ, ಈ ಆವೃತ್ತಿ ಇನ್ನು ಬೇಗನೇ ಮೂಡಿ ಬರಲಿದೆ ಎನ್ನಲಾಗಿದೆ.

  ಸೆಪ್ಟೆಂಬರ್ 16 ರಿಂದ 'ಬಿಗ್ ಬಾಸ್-12' ಶುರು: ವಿಚಿತ್ರ ಜೋಡಿ ನೋಡಲು ರೆಡಿ ಆಗಿ..

  ಸದ್ಯದ ಮಾಹಿತಿ ಪ್ರಕಾರ 12ನೇ ಆವೃತ್ತಿಯ ಬಿಗ್ ಬಾಸ್ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಸಾಧ್ಯತೆ ಇದೆಯಂತೆ. ಹೀಗಾಗಿ, 9 ಮತ್ತು 9.30 ಕ್ಕೆ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳು ಬೇರೆ ಸಮಯಕ್ಕೆ ಶಿಫ್ಟ ಆಗಲಿದೆ.

  'ಬಿಗ್ ಬಾಸ್'ಗೆ ಬರಲು ಈ ನಟಿಗೆ ಇಷ್ಟೊಂದು ದುಡ್ಡು ಕೊಡಬೇಕಾ.?

  ಇದಕ್ಕೆ ನಿಖರವಾದ ಕಾರಣವೇನು ಎಂಬುದು ಬಹಿರಂಗವಾಗಿಲ್ಲವಾದರೂ, ಪ್ರೈಮ್ ಟೈಂನಲ್ಲಿ ಅತಿ ಹೆಚ್ಚು ವೀಕ್ಷಕರನ್ನ ಸೆಳೆಯುವ ಉದ್ದೇಶದಿಂದ ಈ ಬದಲಾವಣೆಗೆ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.

  English summary
  This season of the biggest Reality show on Indian Television Bigg Boss12 to be telecast at 9 PM on all days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X