»   » ಬಿಗ್ ಬಾಸ್ ಮನೆಗೆ ಅಡಿಯಿಡಲಿರುವ ಸೆಲೆಬ್ರಿಟಿಗಳು

ಬಿಗ್ ಬಾಸ್ ಮನೆಗೆ ಅಡಿಯಿಡಲಿರುವ ಸೆಲೆಬ್ರಿಟಿಗಳು

By: ಉದಯರವಿ
Subscribe to Filmibeat Kannada

ಈ ಬಾರಿ 'ಬಿಗ್ ಬಾಸ್ ಸೀಸನ್ 2' ರಿಯಾಲಿಟಿ ಶೋಗೆ ಯಾರೆಲ್ಲಾ ಬರಲಿದ್ದಾರೆ ಎಂಬ ಬಗ್ಗೆ ಹಲವಾರು ಹೆಸರುಗಳು ಕೇಳಿಬರುತ್ತಿವೆ. ಕೆಲವು ತಾರೆಗಳು ತಮ್ಮ ಹೆಸರುಗಳು ಕೇಳಿಬಂದಿದ್ದೇ ತಡ ಬಿಗ್ ಬಾಸ್ ಮನೆಗೆ ತಾವು ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನವರಸನಾಯಕ ಜಗ್ಗೇಶ್, 'ಅಭಿನೇತ್ರಿ' ಪೂಜಾಗಾಂಧಿ, ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ತಾವು ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುತ್ತಿರುವ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ನಿಜಕ್ಕೂ ಈ ಬಾರಿ ಯಾರೆಲ್ಲಾ ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಸುವರ್ಣ ವಾಹಿನಿ ಸಾಕಷ್ಟು ಗೌಪ್ಯತೆಯನ್ನು ಕಾಯ್ದಿರಿಸಿಕೊಂಡಿದೆ. ['ಬಿಗ್ ಬಾಸ್ 2' ಶೋನಲ್ಲಿ ಇವರೆಲ್ಲಾ ಇರ್ತಾರಾ?]

ಇನ್ನು ಶೋನ ನಿರೂಪಕ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಬಗ್ಗೆ ಅಲ್ಪಸ್ವಲ್ಪ ವಿವರಗಳನ್ನು ಕೊಡುತ್ತಿದ್ದಾರೆ. ಲೇಟೆಸ್ಟ್ ಸಮಾಚಾರ ಏನೆಂದರೆ, ಬಿಗ್ ಬಾಸ್ ಫೋಟೋ ಶೂಟ್ ಹಾಗೂ ಪ್ರೊಮೋ ಶೀಘ್ರದಲ್ಲಿ ಆರಂಭವಾಲಿದೆ ಎಂಬುದು. ಸ್ಪರ್ಧಿಗಳನ್ನು ಭೇಟಿಯಾಗಲು ತುದಿಗಾಲಲ್ಲಿ ನಿಂತಿದ್ದೇನೆ ಎಂದಿದ್ದಾರೆ. ಬಿಗ್ ಬಾಸ್ ಇನ್ನೊಂದಿಷ್ಟು ಸಂಭವನೀಯ ಸ್ಪರ್ಧಿಗಳ ವಿವರಗಳು ಇಲ್ಲಿವೆ ನೋಡಿ...

ಬಿಗ್ ಬಾಸ್ ಮನೆಗೆ ಬರ್ತಾರಾ ಶಕೀಲಾ ಆಂಟಿ

ಈ ಬಾರಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಲಿರುವವರಲ್ಲಿ ಪ್ರಮುಖವಾಗಿ ಕೇಳಿಬಂದಿರುವ ಹೆಸರು ಒಂದು ಕಾಲದ ಶಕಲಕ ಬೇಬಿ ಶಕೀಲಾ. ಕನ್ನಡದ 'ಪಾತರಗಿತ್ತಿ' ಚಿತ್ರದ ಮೂಲಕ ಶಕೀಲಾ ಮತ್ತೆ ಕನ್ನಡಕ್ಕೆ ಅಡಿಯಿಡುತ್ತಿರುವುದು ಗೊತ್ತೇ ಇದೆ.

ಬಿಗ್ ಬಾಸ್ ಸ್ಪರ್ಧಿಯಾಗಿ ಸುನಾಮಿ ಕಿಟ್ಟಿ?

ಈಟಿವಿ ಕನ್ನಡ ವಾಹಿನಿಯ 'ಇಂಡಿಯನ್' ರಿಯಾಲಿಟಿ ಶೋನಲ್ಲಿ ಗೆದ್ದಿದ್ದ ಸುನಾಮಿ ಕಿಟ್ಟಿ ಹೆಸರು ಈ ಬಾರಿ ಕೇಳಿಬಂದಿರುವ ಹೆಸರುಗಳಲ್ಲಿ ಪ್ರಮುಖವಾದದ್ದು. ಬಹುಶಃ ಸುನಾಮಿ ಕಿಟ್ಟಿ ಭಾಗವಹಿಸುವ ಚಾನ್ಸಸ್ ಅಲ್ಲಗಳೆಯುವಂತಿಲ್ಲ.

ಜಂಪಿಂಗ್ ಸ್ಟಾರ್ ಹರೀಶ್ ರಾಜ್ ಬರುವ ಸಾಧ್ಯತೆ

'ಗನ್' ಚಿತ್ರದ ಮೂಲಕ ಸಾಕಷ್ಟು ಕಿರಿಕಿರಿ ಮಾಡಿಕೊಂಡಿದ್ದ ನಟ ಹರೀಶ್ ರಾಜ್. ಆ ಚಿತ್ರ ಸೋತು ತೋಪೆದ್ದ ಮೇಲೆ ಸಂತೋಷ್ ಚಿತ್ರಮಂದಿರದ ಮೇಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಬಳಿಕ ಅವರ ಹೆಸರಿಗೆ ಜಂಪಿಂಗ್ ಸ್ಟಾರ್ ಎಂಬ ಅನ್ವರ್ಥಕ ಅಂಟಿಕೊಂಡಿತು.

ಬಿಗ್ ಬಾಸ್ ಮನೆಗೆ ಬರುತ್ತಾರಾ ಸೂಪರ್ ಸ್ಟಾರ್ ಜೆಕೆ?

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಹತ್ತಿರವಾದ ನಟ. ಜೊತೆಗೆ ಸುದೀಪ್ ಅವರ ಚಿತ್ರಗಳ ಖಾಯಂ ನಟ. ಬಿಗ್ ಬಾಸ್ ಮನೆಗೆ ಅಡಿಯಿಟ್ಟರೂ ಅಚ್ಚರಿಯಿಲ್ಲ.

ಸುಮನ್ ರಂಗನಾಥ್ ಬಂದರೂ ಬರಬಹುದು

ಸುಮನ್ ರಂಗನಾಥ್ ಅವರು ಬಿಗ್ ಬಾಸ್ ಮನೆಗೆ ಅಡಿಯಿಟ್ಟರೆ ಚಿಂದಿ ಚಿತ್ರಾನ್ನ ಗ್ಯಾರಂಟಿ. ಏಕೆಂದರೆ ಬುದ್ಧಿವಂತ ಚಿತ್ರದಲ್ಲಿ ಚಿತ್ರಾನ್ನ ಚಿತ್ರಾನ್ನ ಎಂದು ಕುಣಿದಿದ್ದವರಲ್ಲವೆ?

ಇಂತಿ ನಿನ್ನ ಪ್ರೀತಿಯ ಭಾವನಾ ಬರ್ತಾರಾ?

ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ಭಾವನಾ ಅವರನ್ನು ನೋಡುತ್ತಿದ್ದರೆ ಬಿಗ್ ಬಾಸ್ ಮನೆಗೆ ಹೇಳಿಮಾಡಿಸಿದ ಸ್ಪರ್ಧಿ ಎಂಬಂತಿದ್ದಾರೆ. ಅವರು ಅಡಿಯಿಟ್ಟರೆ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಗೆ ಕೊರತೆ ಇರಲ್ಲ.

ಬಿಗ್ ಬಾಸ್ ಗೆ ರಾಮದಾಸರ ಪ್ರೇಮದಾಸಿ?

ಮಾಜಿ ಸಚಿವ ಎಸ್.ಎ. ರಾಮದಾಸ್ ನನಗೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ರಂಪಾಟ ಮಾಡಿಕೊಂಡಿದ್ದ ಪ್ರೇಮಕುಮಾರಿ ಅವರು ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಪ್ರೇಮಾಕುಮಾರಿ ಬಿಗ್ ಬಾಸ್ ಸೀಸನ್ ಗೆ ಅಡಿಯಿಟ್ಟರೆ ಇನ್ನೇನು ಕಾದಿದೆಯೋ ಏನೋ.

'ಹೋಂ ಸ್ಟೇ'ಯಿಂದ ಬಿಗ್ ಬಾಸ್ ಮನೆಗೆ

ಸದ್ಯಕ್ಕೆ ಹೋಂ ಸ್ಟೇ ಚಿತ್ರದಲ್ಲಿ ಅಭಿನಯಿಸಿರುವ ಶ್ರುತಿ ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಅವರು ಎಷ್ಟರ ಮಟ್ಟಿಗೆ ಬಿಗ್ ಬಾಸ್ ಬರುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

English summary
The tentative list of Bigg Boss contestant includes Shakeela, Tsunami Kitty, Harish Raj, Bhavana, Shruti etc,. Kannada Bigg Boss created a buzz last season for its controversial contestants and of course Sudeep, and we recently reported that Sudeep has confirmed to host Bigg Boss 2 as well.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada