»   » ಜೂ. 22ರಿಂದ ಕನ್ನಡ ಬಿಗ್ ಬಾಸ್ 2 ಹೌದು ಸ್ವಾಮಿ

ಜೂ. 22ರಿಂದ ಕನ್ನಡ ಬಿಗ್ ಬಾಸ್ 2 ಹೌದು ಸ್ವಾಮಿ

Posted By:
Subscribe to Filmibeat Kannada

ಕನ್ನಡದ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ ಎಂದು ಕರೆಸಿಕೊಂಡಿದ್ದ 'ಬಿಗ್ ಬಾಸ್' ಎರಡನೇ ಆವೃತ್ತಿ ಇದೇ ಜೂನ್ ತಿಂಗಳಿಂದ ಆರಂಭವಾಗುತ್ತಿದೆ. ಈ ಬಾರಿಯೂ ಈ ಕಾರ್ಯಕ್ರಮ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವುದು ವಿಶೇಷ.

ಮೊದಲ ಆವೃತ್ತಿ ಈಟಿವಿ ಕನ್ನಡದಲ್ಲಿ ಮೂಡಿಬಂದಿತ್ತು, ಈ ಬಾರಿ 24 ಕ್ಯಾರೆಟ್ ಮನರಂಜನಾ ವಾಹಿನಿ ಸುವರ್ಣದಲ್ಲಿ ಮೂಡಿಬರುತ್ತಿದೆ. ಮೊದಲ ಆವೃತ್ತಿಯಲ್ಲಿ ಸುದೀಪ್ ಅವರ ನಿರೂಪಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಗೊತ್ತೇ ಇದೆ. [ಬಿಗ್ ಬಾಸ್ ಮನೆಗೆ ಅಡಿಯಿಡಲಿರುವ ಸೆಲೆಬ್ರಿಟಿಗಳು]

Sudeep

ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುತ್ತಿರುವ ಬಗ್ಗೆ ಸ್ವತಃ ಸುದೀಪ್ ಅವರು ವಿವರ ನೀಡಿದ್ದು, "ಜೂ.22ರಿಂದ ಬಿಗ್ ಬಾಸ್ 2 ಆರಂಭವಾಗಲಿದೆ" ಎಂದಿದ್ದಾರೆ. 'ಬಿಗ್ ಬಾಸ್' ಪ್ರೊಮೋ ಚಿತ್ರೀಕರಣ ಸೋಮವಾರ (ಜೂ.2) ಬೆಂಗಳೂರಿನಲ್ಲಿ ನಡೆಯಲಿದೆ. ಈ ಬಾರಿ ಯಾರೆಲ್ಲಾ ಸೆಲೆಬ್ರಿಟಿಗಳು ಶೋನಲ್ಲಿ ಇರುತ್ತಾರೆ ಎಂಬ ಊಹಾಪೋಹಗಳಿಗೆ ಶೀಘ್ರದಲ್ಲೇ ತೆರೆಬೀಳಲಿದೆ.

'ಮಾಣಿಕ್ಯ' ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸಲ್ಲೂ ಭರ್ಜರಿ ಬೆಳೆ ತೆಗೆಯಿತು. ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಯಿತು 'ಮಾಣಿಕ್ಯ'. ಅದಾದ ಬಳಿಕ ಸುದೀಪ್ ಅವರು ತಮ್ಮ ಪುತ್ರಿ ಸಾನ್ವಿ ಜೊತೆಗೆ ರಜಾದಿನಗಳನ್ನು ಕಳೆಯಲು ಮಲೇಷ್ಯಾಗೆ ಹಾರಿದ್ದರು.

ಇದೀಗ ಅವರು ಬೆಂಗಳೂರಿಗೆ ಮರಳಿದ್ದು, ಇನ್ನು ಅವರು 'ಬಿಗ್ ಬಾಸ್' ಶೋನಲ್ಲಿ ಬಿಜಿಯಾಗಲಿದ್ದಾರೆ. ಮೊದಲ ಆವೃತ್ತಿಯಲ್ಲಿ "ವಾರದ ಕಥೆ ಕಿಚ್ಚನ ಜೊತೆ"ಯಲ್ಲಿ ಅವರು ಎಲ್ಲಾ ಸ್ಪರ್ಧಿಗಳೊಂದಿಗೆ ತಮಾಷೆಯಾಗಿ ಕಾಲೆಳೆಯುತ್ತಾ ನಡೆಸಿಕೊಡುತ್ತಿದ್ದದ್ದು ಎಲ್ಲರಿಗೂ ಮೆಚ್ಚುಗೆಯಾಗಿತ್ತು.

ಈ ಬಾರಿ ಹೊಸ ಸ್ಪರ್ಧಿಗಳು, ಹೊಸ ಚಾನಲ್, ಹೊಸ ತಂಡ...ನಿಜಕ್ಕೂ ಈ ಬಾರಿ ಏನೆಲ್ಲಾ ವಿಶೇಷಗಳಿರುತ್ತವೆ ಎಂಬ ಬಗ್ಗೆ ಕಿರುತೆರೆ ವೀಕ್ಷಕರಲ್ಲಿ ಬಹಳಷ್ಟು ಕುತೂಹಲವಿದೆ. ಈ ಬಾರಿ ಯಾರೆಲ್ಲಾ ಹೊಸ ಮುಖಗಳಿರುತ್ತಾರೋ, ಏನೆಲ್ಲಾ ಸ್ಪರ್ಧೆಗಳಿರುತ್ತವೋ ಎಂಬ ಕಾತುರ ಕುತೂಹಲಗಳು ಮನೆಮಾಡಿವೆ. (ಏಜೆನ್ಸೀಸ್)

English summary
Kannada's one and only reality show Bigg Boss 2 starts from 22nd June, the date has been revealed by none other than Kichcha Sudeepa, the show's host.
Please Wait while comments are loading...